Belagavi News :
ಮುಖ್ಯಾಂಶಗಳು;
ಮಗುವಿನ ಫೋಟೋ ಜೊತೆ ಹೊಸ ಚಿತ್ರದ ಪ್ರಚಾರ
ಡಾಲಿ ಧನಂಜಯ್ ಅವರ ' ಮದರ್ ಪ್ರಾಮಿಸ್' ಶರ್ಟ್ ಸ್ಟೈಲ್ ಸಖತ್ ವೈರಲ್
ಮಗುವಿನ ಆಗಮನದಿಂದ ಧನಂಜಯ್ - ಧನ್ಯಾ ಬದುಕಿನಲ್ಲಿ ಡಬಲ್ ಸಂಭ್ರಮ
ಸ್ಯಾಂಡಲ್ ವುಡ್ ನಟ ' ಡಾಲಿ' ಧನಂಜಯ್ ತಂದೆಯಾದ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಮುದ್ದಾದ ಗಂಡು ಮಗುವಿನ ಮೊದಲ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಒಂದೇ ಪೋಸ್ಟ್ ಮೂಲಕ ಕುಟುಂಬದ ಸಂತಸ ಹಾಗೂ ತಮ್ಮ ಹೊಸ ಚಿತ್ರದ ಪ್ರಚಾರಕ್ಕೂ ಚಾಲನೆ ನೀಡಿದ್ದಾರೆ.
2025ರ ಫೆಬ್ರವರಿಯಲ್ಲಿ ಧನ್ಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಡಾಲಿ ಧನಂಜಯ್ ಅವರ ಮನೆಗೆ ಇದೀಗ ಹೊಸ ಅತಿಥಿಯ ಆಗಮನವಾಗಿದೆ. ಮಗುವಿನೊಂದಿಗೆ ಹಂಚಿಕೊಂಡಿರುವ ಫೋಟೋದಲ್ಲಿ ಅವರು ಧರಿಸಿರುವ 'ಮದರ್ ಪ್ರಾಮಿಸ್ ' ಎಂಬ ಬರಹವಿರುವ ಶರ್ಟ್ ಎಲ್ಲರ ಗಮನ ಸೆಳೆಯುತ್ತಿದೆ.
ತಮ್ಮ ಮುಂಬರುವ ಚಿತ್ರದ ಶೀರ್ಷಿಕೆಯನ್ನು ಈ ರೀತಿಯಲ್ಲಿ ಪ್ರಚಾರ ಮಾಡುವ ಮೂಲಕ ಡಾಲಿ ಧನಂಜಯ್ ವಿಭಿನ್ನ ಶೈಲಿಯಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ತಂದೆಯಾದ ಸಂಭ್ರಮದ ಜೊತೆಗೆ ಹೊಸ ಸಿನಿಮಾ ಕುರಿತ ಕುತೂಹಲವನ್ನು ಈ ಪೋಸ್ಟ್ ಹೆಚ್ಚಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದೆ.
ಸ್ಯಾಂಡಲ್ ವುಡ್ ನ ಜನಪ್ರಿಯ ನಟ ಡಾಲಿ ಧನಂಜಯ್ ತಂದೆಯಾದ ಸಂಭ್ರಮದಲ್ಲಿದ್ದಾರೆ. ಅವರ ಪತ್ನಿ ಧನ್ಯಾ ಗಂಡು ಮಗುವಿನ ಜನ್ಮ ನೀಡಿದ್ದು, ಇದೀಗ ಧನಂಜಯ್ ತಮ್ಮ ಮುದ್ದಾದ ಮಗುವಿನ ಮೊದಲ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಗುವನ್ನು ಮುದ್ದಾಗಿ ಮಲಗಿಸಿ ಆಡಿಸುತ್ತಿರುವ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಜೀವನವನ್ನು ಈ ಸಂತಸದ ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಈ ಪೋಸ್ಟ್ ನಲ್ಲಿ ಧನಂಜಯ್ ಧರಿಸಿರುವ ಕಪ್ಪು ಬಣ್ಣದ ಶರ್ಟ್ ವಿಶೇಷ ಗಮನ ಸೆಳೆದಿದೆ. ಅದರ ಮೇಲೆ ' ಮದರ್ ಪ್ರಾಮಿಸ್' ಎಂದು ಬರೆಯಲಾಗಿದ್ದು, ತಮ್ಮ ಮುಂಬರುವ ಚಿತ್ರದ ಪ್ರಚಾರವನ್ನು ಇದೇ ಮೂಲಕ ವಿಭಿನ್ನವಾಗಿ ಮಾಡಿದ್ದಾರೆ. ಮಗುವಿನ ಆಗಮನದ ಖುಷಿಯ ಜೊತೆಗೆ ಹೊಸ ಸಿನಿಮಾದ ಪ್ರಚಾರವನ್ನು ಒಂದೇ ಪೋಸ್ಟ್ ನಲ್ಲಿ ಸೃಜನಾತ್ಮಕವಾಗಿ ಜೋಡಿಸಿದ್ದಾರೆ.
ಡಾಲಿ ಧನಂಜಯ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಿತ್ರರಂಗದ ಗಣ್ಯರು, ಸ್ನೇಹಿತರು ಹಾಗೂ ಸಾವಿರಾರು ಅಭಿಮಾನಿಗಳು ಶುಭಾಶಯಗಳು ಮಹಾಪೂರ ಹರಿಸುತ್ತಿದ್ದಾರೆ.
ನಟ ಡಾಲಿ ಧನಂಜಯ್ ಹಾಗೂ ಧನ್ಯಾ ಅವರ ವಿವಾಹ ಕಳೆದ ಫೆಬ್ರವರಿಯಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಈ ಮದುವೆಗೆ ಸ್ಯಾಂಡಲ್ ವುಡ್ ನ ಹಲವು ನಟ - ನಟಿಯರು, ರಾಜಕೀಯ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಸಾಕ್ಷಿಯಾಗಿದ್ದರು. ದೀರ್ಘಕಾಲದ ಪರಿಚಯದ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದು ಈ ಜೋಡಿಯ ಬದುಕಿಗೆ ಇದೀಗ ಗಂಡು ಮಗುವಿನ ಆಗಮನವಾಗಿದ್ದು, ಕುಟುಂಬದ ಸಂತೋಷವನ್ನು ಮತ್ತಷ್ಟು ಹೆಚ್ಚಿಸಿದೆ.
ಇದರ ನಡುವೆಯೇ ಧನಂಜಯ್ ಅಭಿನಯದ ಬಹುನಿರೀಕ್ಷಿತ " ಮದರ್ ಪ್ರಾಮಿಸ್ " ಸಿನಿಮಾ ಜುಲೈ 10 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಾಮಿಡಿ - ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಧನಂಜಯ್ ಅವರೇ ನಿರ್ಮಿಸಿದ್ದು, ಪೂರ್ಣಚಂದ್ರ ಮೈಸೂರು ನಿರ್ದೇಶನ ಮಾಡಿದ್ದಾರೆ.
ಚಿತ್ರದಲ್ಲಿ ಬೆಂಗಳೂರಿನ ಜೂಜುಕೋರನೊಬ್ಬ ಪ್ರಭಾವಿ ಗ್ಯಾಂಗ್ ಸ್ಟರ್ ಗಳು ಹಾಗೂ ಕಳ್ಳಸಾಗಣೆದಾರರಿಂದ ತಪ್ಪಿಸಿಕೊಳ್ಳುವ ರೋಚಕ ಕಥೆಯನ್ನು ಹೇಳಲಾಗಿದೆ. ಧನಂಜಯ್ " ರಾಸಿ" ಪಾತ್ರದಲ್ಲಿ ನಟಿಸಿದ್ದು, ಪೂರ್ಣಚಂದ್ರ ಮೈಸೂರು, ಗೀತಾ, ವಿನಯಾ ಪ್ರಸಾದ್, ಗುರುದತ್ ಹಾಗೂ ನಾಗಭೂಷಣ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತಂದೆಯಾದ ಖುಷಿಯ ನಡುವೆಯೇ ' ಮದರ್ ಪ್ರಾಮಿಸ್ ' ಚಿತ್ರದ ಪ್ರಚಾರಕ್ಕೂ ಚಾಲನೆ ನೀಡಿರುವ ಧನಂಜಯ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.