<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಡೊನಾಲ್ಡ್ ಟ್ರಂಪ್ ಅಚ್ಚರಿಯ ಹೇಳಿಕೆ

ಡೊನಾಲ್ಡ್ ಟ್ರಂಪ್ ಅಚ್ಚರಿಯ ಹೇಳಿಕೆ
Summary: An old statement made by former US President Donald Trump has now gone viral on social media. Sharing his personal life experience, Trump spoke about Britain's King Charles and said that he was jealous of the respect and admiration his mother had for him.

belagavi news:

ಬ್ರಿಟನ್ ರಾಜ ದಂಪತಿ ಅಮೆರಿಕ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಶ್ವೇತಭವನದಲ್ಲಿ ಭವ್ಯಔತಣಕೂಟವನ್ನು ಆಯೋಜಿಸಲಾಯಿತ್ತು. ಈ ವಿಶೇಷ ಸಂದರ್ಭದಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಿಂಗ್ ಚಾರ್ಲ್ಸ್ 3 ಕುರಿತು ಮಾತನಾಡಿ ಗಮನ ಸೆಳೆದರು.

ವಾಷಿಂಗ್ಟನ್: ಬ್ರಿಟನ್ ರಾಜಕುಮಾರ 3ನೇ ಚಾರ್ಲ್ಸ್ ಬಗ್ಗೆ ನಮ್ಮ ಅಮ್ಮನಿಗೆ ಅಪಾರ ಪ್ರೀತಿ ಇತ್ತು. ಇದರಿಂದ ನನಗೆ ಅವರ ಬಗ್ಗೆ ಅಸೂಯೆ ಹುಟ್ಟಿದ್ದು ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದರು.

ಬ್ರಿಟನ್ ರಾಜ ದಂಪತಿಯ ಅಧಿಕೃತ ಅಮೆರಿಕ ಪ್ರವಾಸದ ಅಂಗವಾಗಿ ಶ್ವೇತಭವನದಲ್ಲಿ ಭವ್ಯಔತಣಕೂಟವನ್ನು ಆಯೋಜಿಸಲಾಯಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಿಂಗ್ ಚಾರ್ಲ್ಸ್ III ಬಗ್ಗೆ ಪ್ರಶಂಸಾಪೂರಿತವಾಗಿ ಮಾತನಾಡಿದರು."ಇದು ಒಂದು ಅದ್ಭುತ ಬ್ರಿಟಿಷ ದಿನ. ಈ ದಿನಕ್ಕಾಗಿ ಧನ್ಯವಾದಗಳು. ಬ್ರಿಟಿಷ ನಿಯೋಗದ ಸದಸ್ಯರು, ಸ್ನೇಹಿತರು, ಸೇವಾ ಸದಸ್ಯರು ಹಾಗೂ ವಿಶೇಷ ಅತಿಥಿಗಳಿಗೆ ಶ್ವೇತ ಭವನಕ್ಕೆ ಹೃತ್ಪೂರ್ವಕ ಸ್ವಾಗತ. ನಿಮ್ಮನ್ನು ಇಲ್ಲಿ ಆತಿಥ್ಯ ವಹಿಸೋದು ನನಗೆ ಅತ್ಯಂತ ಸಂತೋಷ ತಂದಿದೆ,"ಎಂದು ಟ್ರಂಪ್ ಹೇಳಿದರು.

Sponsored

ಅವರು ಮುಂದುವರಿಸಿ,"ಕಳೆದ ಸೆಪ್ಟೆಂಬರ್ ನಲ್ಲಿ ವಿಂಡ್ಸರ್ ಕೋಟೆಗೆ ನಮ್ಮ ಭೇಟಿ ವೇಳೆ, ಮೇಲಾನಿಯಾ ಮತ್ತು ನಾನು ನಿಮ್ಮ ಮಹಾರಾಜರು ತೋರಿದ ಅದ್ಭುತ ಗೌರವವನ್ನು ಎಂದಿಗೂ ಮರೆಯುವುದಿಲ್ಲ. ಈಗ ನಿಮ್ಮನ್ನು ಆತಿಥ್ಯ ಹೊಯಿಸುವ ಅವಕಾಶ ನಮಗೆ ದೊರೆತಿರುವುದು ಸಂತಸದ ವಿಷಯ," ಎಂದು ತಿಳಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ತಮ್ಮ ಕುಟುಂಬದ ನೆನಪುಗಳನ್ನು ಹಂಚಿಕೊಳ್ಳುತ್ತಾ ಭಾವುಕವಾಗಿ ಮಾತನಾಡಿದರು. "ನನ್ನ ತಾಯಿ ಮೀರಿ ಮ್ಯಾಕ್ಲಿಯೋಡ ಸ್ಕಾಟ್ಲೆಂಡ್ ನ ಸ್ಟೋರ್ನೋವೇ , ಹೈಬ್ರೈಡ್ಸ್ ಪ್ರದೇಶದವರು. ಅದು ಶ್ರೇಷ್ಠ ಯೋಧರಿಗೆ ಹೆಸರುವಾಸಿಯಾದ ಸ್ಥಳ. ಅವರು ಕೇವಲ 19ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ಬಂದು, ನಮ್ಮ ತಂದೆಯನ್ನು ವಿವಾಹವಾದರೂ. ಇಬ್ಬರು ಸುಮಾರು 63 ವರ್ಷಗಳ ದಾಂಪತ್ಯ ಜೀವನ ನಡೆಸಿದರು,"ಎಂದು ಟ್ರಂಪ್ ತಿಳಿಸಿದ್ದಾರೆ. ನಮ್ಮ ತಾಯಿಯ ಬ್ರಿಟನ್ ರಾಜ ಕುಟುಂಬದ ಮೇಲೆ ಇದ್ದ ಅಭಿಮಾನವನ್ನು ನೆನಪಿಸಿಕೊಂಡ ಅವರು," ನನ್ನ ತಾಯಿಗೆ ಕಿಂಗ್ ಚಾರ್ಲ್ಸ್ ಮೇಲೆ ಅಪಾರ ಪ್ರೀತಿ ಇತ್ತು. ರಾಣಿ ಎಲಿಜಬೆತ್ ಅವರ ಮೇಲು ವಿಶೇಷ ಗೌರವ ಹೊಂದಿದರು.

ರಾಣಿ ಸಂಬಂಧಿತ ಯಾವುದೇ ಕಾರ್ಯಕ್ರಮ ಇದ್ದರೂ ಅವರು ಟಿವಿ ಮುಂದೆ ಕುಳಿತು ನೋಡುತ್ತಿದ್ದರು,"ಎಂದು ಹೇಳಿದರು. ಆ ಸಮಯದಲ್ಲಿ ಅವರು ', ಚಾರ್ಲ್ಸ್ ಎಷ್ಟು ಸುಂದರವಾಗಿದ್ದಾರೆ ನೋಡಿ' ಎಂದು ಕೇಳುತ್ತಿದ್ದರು. ಆಗ ಚಾರ್ಲ್ಸ್ ಯುವಕರಾಗಿದ್ದು ತುಂಬಾ ಆಕರ್ಷಕರಾಗಿದ್ದರು. ಇದರಿಂದ ನನ್ನ ತಾಯಿಗೆ ಅವರ ಮೇಲೆ ವಿಶೇಷ ಮೆಚ್ಚುಗೆ ಇತ್ತು,"ಎಂದು ಟ್ರಂಪ್ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು.

ಬ್ರಿಟನ್ ಇಲ್ಲದಿದ್ದರೆ, ಅಮೆರಿಕನ್ನರು ಫ್ರೆಂಚ್ ಮಾತನಾಡುತ್ತಿದ್ದರು: ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಿಟನ್ ರಾಜ ಕುಮಾರ್ ಮೂರನೇ ಚಾರ್ಲ್ಸ್, ಬ್ರಿಟನ್ ಇಲ್ಲದಿದ್ದರೆ , ಅಮೆರಿಕನ್ನರು ಫ್ರೆಂಚ್ ಮಾತನಾಡುತ್ತಿರಬೇಕಿತ್ತು ಎನ್ನುವ ಮೂಲಕ ಈ ಹಿಂದೆ ಟ್ರಂಪ್ ನೀಡಿದ ಹೇಳಿಕೆ ಟಾಂಗ್ ಕೊಟ್ಟರು.

Sponsored

ಎರಡನೇ ಮಹಾಯುದ್ಧದ ನಂತರ ಯುರೋಪಿಯನ್ ಮಿತ್ರ ರಾಷ್ಟ್ರಗಳಿಗೆ ಅಮೆರಿಕದ ರಕ್ಷಣಾ ಬೆಂಬಲ ಅತ್ಯಂತ ಮಹತ್ವದ್ದಾಗಿತ್ತು. ಈ ಹಿನ್ನೆಲೆ ಅಮೆರಿಕದ ಪಾತ್ರವನ್ನು ಒತ್ತಿ ಹೇಳುವ ವೇಳೆ ಡೊನಾಲ್ಡ್ ಟ್ರಂಪ್ ಈ ಹಿಂದೆ " ಅಮೆರಿಕ ಇರದೆ ಇಲ್ಲದಿದ್ದರೆ ಯುರೋಪಿನ ದೇಶಗಳು ಜರ್ಮನ್ ಮಾತನಾಡುತ್ತಿದ್ದವು"ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಕಿಂಗ್ ಚಾರ್ಲ್ಸ್ III ವ್ಯಂಗ್ಯವಾಗಿ, "ನಾವು ಇಲ್ಲದಿದ್ದರೆ ನೀವು. ಫ್ರೆಂಚ್ ಮಾತನಾಡುತ್ತಿದ್ದೀರಿ ಎಂದು ನಾನು ಧೈರ್ಯದಿಂದ ಹೇಳುತ್ತೇನೆ"ಎಂದು ಹೇಳಿದರೆಂದು ತಿಳಿದುಬಂದಿದೆ.

Also Read:

ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ : ನಾಯಕತ್ವ ಗಟ್ಟಿ ಮಾಡಿಕೊಳ್ಳಲು ಹೊಸ ರಣತಂತ್ರ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online