Balagavi News:
ಢಾಕಾ (ಬಾಂಗ್ಲಾದೇಶ): ಅಮೇರಿಕಾ ಅಧ್ಯಕ್ಷ Donald Trump ಅವರ ವಿಶಿಷ್ಟ ಹೇರ್ ಸ್ಟೈಲ್ ನ್ನು ಹೋಲುವ ಹೊಂಬಣ್ಣದ ಕೂದಲಿನಿಂದ ಪ್ರಸಿದ್ಧಿಯಾಗಿದ್ದ ಅಪರೂಪದ ಆಲ್ಬನೋ (ಬಿಳಿ) ಎಮ್ಮೆ ಈದ್ ಉಲ್ ಅಜ್ಹಾ ಹಬ್ಬದ ಬಲಿಯಿಂದ ಕೊನೆ ಕ್ಷಣದಲ್ಲಿ ಪಾರಾಗಿದೆ.
'ಡೊನಾಲ್ಡ್ ಟ್ರಂಪ್' ಎಂದು ಸ್ಥಳೀಯವಾಗಿ ಕರೆಯಲ್ಪಡುತ್ತಿದ್ದ ಈ 700 ಕೆಜಿ ತೂಕದ ಅಪರೂಪದ ಎಮ್ಮೆಯನ್ನು ಈದ್ ಹಬ್ಬದ ಅಂಗವಾಗಿ ಬಲಿಕೊಡಲು ಸಿದ್ಧತೆ ನಡೆಸಲಾಗಿತ್ತು. ಆದರೆ ಬಲಿಗೆ ಕೆಲವೇ ಗಂಟೆಗಳ ಮೊದಲು ಸರ್ಕಾರದ ಸೂಚನೆ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಪಶು ಸಂಗೋಪನ ಇಲಾಖೆ ಅಧಿಕಾರಿಗಳು ಹೆಮ್ಮೆಯನ್ನು ರಕ್ಷಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಈ ವಿಶೇಷ ಎಮ್ಮಿ ಅಪರೂಪದ ಆಲ್ಬಿನೋ ಜಾತಿಗೆ ಸೇರಿದ್ದು, ಇನ್ನೂ ಕಿರಿಯ ವಯಸ್ಸಿನದ್ದಾಗಿದೆ. ಹೀಗಾಗಿ ಅದರ ಸಂರಕ್ಷಣೆ ಅಗತ್ಯವೆಂದು ನಿರ್ಧರಿಸಿ ದಾಖಲಾದ ರಾಷ್ಟ್ರೀಯ ಮೃಗಾಲಯಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ.
ಎಮ್ಮೆಯ ಆರೈಕೆಗೆ ಪ್ರತ್ಯೇಕ ಶಡ್ ಹಾಗೂ ಕೇರ್ ಟೇಕರ್ ವೈವಸ್ಥೆ ಮಾಡಲಾಗಿದ್ದು. ಮುಂದಿನ ದಿನಗಳಲ್ಲಿ ಇದನ್ನು ವಿಶೇಷ ಸಂರಕ್ಷಿತ ಪ್ರಾಣಿಯಾಗಿ ನೋಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಆರೋಪದ ಎಂಎ ಮತ್ತು ಅದರ ರಕ್ಷಣೆಯ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು. ಪ್ರಾಣಿ ಪ್ರಮಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಈದ್ ಉಲ್ ಅಜ್ಹಾ ಹಬ್ಬದ ಬದಿಯಿಂದ ಪಾರಾದ ಅಪರೂಪದ ಆಲ್ಬಿನೋ ಎಮ್ಮೆ 'ಡೊನಾಲ್ಡ್ ಟ್ರಂಪ್' ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸರ್ಕಾರದ ಆದೇಶದ ಮೇರೆಗೆ ಎಮ್ಮೆಯನ್ನು ರಾಷ್ಟ್ರೀಯ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದ್ದು. ಅದರ ಮಾಲೀಕರಿಗೆ ಪರ್ಯಾಯವಾಗಿ ಮತ್ತೊಂದು ಎಮ್ಮೆ, ಹಸು ಅಥವಾ ಗೂಳಿಯನ್ನು ನೀಡುವುದಾಗಿ ಭರವಸೆ ನೀಡಲಾಗಿದೆ.
ಎಮ್ಮೆಯ ಮಾಲೀಕ ಮೊನಿರುಝ್ ಜಮಾನ್ ಮಾತನಾಡಿ, "ಈ ವಿಷಯ ಎಮ್ಮೆಯನ್ನು ಸಂರಕ್ಷಿಸಲು ಸರ್ಕಾರ ನಿರ್ಧರಿಸಿದೆ ಎಂದು ಪೊಲೀಸರು ತಿಳಿಸಿದರು. ಯಾವುದೇ ವಿವಾದ ಬೇಡವೆಂದು ಅದನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದೇವೆ. ಮೂರು ದಿನಗಳ ಹಿಂದಷ್ಟೇ ಈ ಹೆಮ್ಮೆಯನ್ನು ಖರೀದಿಸಿದ್ದೆ" ಎಂದು ಹೇಳಿದ್ದಾರೆ.
ಈ ಎಮ್ಮೆಯ ಮಾಜಿ ಮಾಲೀಕರ ಪ್ರಕಾರ, ಅಮೆರಿಕದ ಮಾಜಿ ಅಧ್ಯಕ್ಷ Donald Trump ಅವರ ವಿಶಿಷ್ಟ ಹೊಂಬಣ್ಣದ ಕೂದಲನ್ನು ಹೋಲುವ ರೋಮಗಳನ್ನು ಹೊಂದಿದ್ದ ಕಾರಣ ಇದಕ್ಕೆ 'ಡುನಾಲ್ಡ್ ಟ್ರಂಪ್ ' ಎಂದು ಹೆಸರು ಇಡಲಾಗಿತ್ತು. "ನನ್ನ ಸಹೋದರನೇ ಈ ಹೆಸರನ್ನು ಇಟ್ಟಿದ್ದ. ಕೆಲವೇ ದಿನಗಳ ಹಿಂದೆ ಇದನ್ನು ಮಾರಾಟ ಮಾಡಿದ್ದೆ" ಎಂದು ಅವರು ತಿಳಿಸಿದ್ದಾರೆ.
ವಿಶಿಷ್ಟ ರೂಪ ಹಾಗೂ ಅಪರೂಪದ ಆಲ್ಬಿನೋ ಜಾತಿಗೆ ಸೇರಿದ ಈಯಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನಪ್ರಿಯುತೆ ಪಡೆದಿತ್ತು. ಅದರ ವಿಡಿಯೋಗಳು ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ವೈರಲ್ ಆಗಿದ್ದವು. ಜನರು ಕೊಳ ಇದನ್ನು 'ಡೊನಾಲ್ಡ್ ಟ್ರಂಪ್' ಎಂದೆ ಕರೆಯುತ್ತಿದ್ದರು.
ಎಮ್ಮೆಗೆ ವಿಶೇಷ ಆರೈಕೆ ನೀಡಲಾಗುತ್ತಿತ್ತು. ದಿನಕ್ಕೆ ನಾಲ್ಕು ಬಾರಿ ಸ್ನಾನ ಮಾಡಿಸುವುದು. ವಿಶೇಷ ಆಹಾರ ನೀಡುವುದು ಸೇರಿದಂತೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿತ್ತು.
ಪಶು ಸಂಗೋಪನಾಧಿಕಾರಿಗಳ ಪ್ರಕಾರ, ಆಲ್ಬಿನೋ (ಬಿಳಿ) ಎಮ್ಮೆಗಳು ಅತ್ಯಂತ ಅಪರೂಪವಾಗಿದ್ದು. ಸಾಮಾನ್ಯವಾಗಿ ಕಪ್ಪು ಬಣ್ಣದ ಎಮ್ಮೆ ಗಳೇ ಹೆಚ್ಚಾಗಿ ಕಂಡುಬರುತ್ತವೆ. ಬಾಂಗ್ಲಾದೇಶದಲ್ಲಿ ಈದ್ ಹಬ್ಬದ ಸಂದರ್ಭದಲ್ಲಿ ಮೇಕೆ, ಕುರಿ, ಹಸು ಮತ್ತು ಎಮ್ಮೆ ಸೇರಿದಂತೆ ಸುಮಾರು 1.2 ಕೋಟಿಗೊಬ್ಬ ಹೆಚ್ಚು ಪ್ರಾಣಿಗಳನ್ನು ಬಲಿ ಕೊಡಲಾಗುತ್ತದೆ ಎಂದು ಅಂದಾಜಿಸಲಾಗಿದೆ.
Also Read:
ಇರಾನ್ ಅಮೆರಿಕ ಸಭೆ ಅಪೂರ್ವ ಅಂತ್ಯ? ಒಪ್ಪಂದಕ್ಕೆ ಅಮೆರಿಕ ನಿರಾಕರಣೆ, ಇಂಧನ ದರ ಏರಿಕೆ ಭೀತಿ