<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಭೂಕಂಪನದ ಭೀತಿ ಉತ್ತರಕಾಶಿ: ಜನರು ಭಯದಿಂದ ಮನೆಗಳಿಂದ ಹೊರಬಂದರು

ಭೂಕಂಪನದ ಭೀತಿ ಉತ್ತರಕಾಶಿ: ಜನರು ಭಯದಿಂದ ಮನೆಗಳಿಂದ ಹೊರಬಂದರು
Summary: An earthquake was felt in Uttarkashi, causing panic among the people due to the aftershocks. Many people ran out of their homes in fear. An atmosphere of anxiety prevailed for some time, and more information about the intensity of the earthquake is awaited. Officials are investigating whether any damage has been caused.

Belagavi news:

ಉತ್ತರಕಾಶಿ (ಉತ್ತರಾಖಂಡ) : ಉತ್ತರಕಾಶಿ ಜಿಲ್ಲಾ ಕೇಂದ್ರದಲ್ಲಿ ತಡರಾತ್ರಿ ಲಘು ಭೂಕಂಪನ ಸಂಭವಿಸಿದ್ದು , ಜನರಲ್ಲಿ ಕ್ಷಣಕಾಲ ಭಯದ ವಾತಾವರಣ ನಿರ್ಮಾಣವಾಗಿದೆ.

ಮನೆಗಳಿಂದ ಹೊರಗೆ ಓಡೋಡಿ ಬಂದ ಜನ: ರಾತ್ರಿ ವೇಳೆ ಇದ್ದಕ್ಕಿದ್ದಂತೆ ಭೂಮಿ ಕಂಪಿಸಿದ ಕಾರಣ ಅನೇಕ ನಿವಾಸಿಗಳು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಆದರೆ ಭೂಕಂಪನದ ತೀವ್ರತೆ ಕಡಿಮೆ ಇದ್ದುದರಿಂದ ಯಾವುದೇ ಜೀವ ಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ವರದಿಗಳು ಬಂದಿಲ್ಲ.

ಜಿಲ್ಲಾ ಕೇಂದ್ರದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದ್ದ ಕಂಪನದ ಕೇಂದ್ರ ಬಿಂದು: ವಿಕರಿಸಿದ್ದ ಮಾಹಿತಿಯ ಪ್ರಕಾರ, ಭೂಕಂಪವು ರಿಕ್ಟರ್ ಮಾಪಕದಲ್ಲಿ 2.4 ತೀವ್ರತೆಯಲ್ಲಿ ದಾಖಲಾಗಿದೆ. ಇದರ ಕೇಂದ್ರ ಬಿಂದು ಉತ್ತರಕಾಶಿ, ಜಿಲ್ಲಾ ಕೇಂದ್ರದಿಂದ ಸುಮಾರು ನಾಲ್ಕು ಕಿಲೋಮೀಟರ್ ಈಶಾನ್ಯ ದಿಕ್ಕಿನಲ್ಲಿ, ಭೂಮಿ 5 ಕಿ.ಮೀ ಆಳದಲ್ಲಿ ಇತ್ತು ಎಂದು ತಿಳಿದು ಬಂದಿದೆ. ಜಿಲ್ಲಾ ಕೇಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ.

ಜಿಲ್ಲಾಡಳಿತದಿಂದ ಜಿಲ್ಲಾಧ್ಯಂತ ತೀವ್ರ ಕಟ್ಟೆಚರ:

ಭೂಕಂಪನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ವಿಪತ್ತು ನಿರ್ವಹಣಾ ಇಲಾಖೆ ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಿದೆ. ಜಿಲ್ಲಾ ವಿಪತ್ತು ಅಧಿಕಾರಿ ಶಾರ್ದುಲ್ ಗುಸೇನ್ ಅವರು ತಡರಾತ್ರಿ ಜಿಲ್ಲೆಯಾದ್ಯಂತ ಭೂಕಂಪನದ ಅನುಭವವಾಗಿದೆ ಎಂದು ದೃಢಪಡಿಸಿದ್ದಾರೆ.

ಇಲ್ಲಿಯವರೆಗೆ ಯಾವುದೇ ಪ್ರದೇಶದಿಂದ ಹಾನಿಯ ವರದಿಗಳು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ಸಂಬಂಧಪಟ್ಟ ಇಲಾಖೆಗಳು ನಿರಂತರವಾಗಿ ಗಮನಿಸುತ್ತಿದ್ದು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭೂಕಂಪನದ ನಂತರ ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣ ಪ್ರತಿ ಕ್ರಿಯಿಸಲು ತಂಡಗಳನ್ನು ಸಿದ್ಧ ಸ್ಥಿತಿಯಲ್ಲಿ ಇರಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಭೂಕಂಪನದ ಸೂಕ್ಷ್ಮ ವಲಯದಲ್ಲಿರುವ ಹಿಮಾಲಯ: ಉತ್ತರಕಾಶಿ ಜಿಲ್ಲೆ ಭೂಕಂಪನ ಸೂಕ್ಷ್ಮ ವಲಯದೊಳಗೆ ಬರುತ್ತದೆ. ಹಿಮಾಲಯ ಪ್ರದೇಶದಲ್ಲಿನ ಭೂವೈಜ್ಞಾನಿಕ ಚಟುವಟಿಕೆಯಿಂದಾಗಿ ನಿಯತಕಾಲಿತವಾಗಿ ಲಘು ಭೂಕಂಪನಗಳು ಸಂಭವಿಸುತ್ತಲೆ ಇರುತ್ತವೆ. ಭೂಮಿಯೋಳಗೆ ಸಂಗ್ರಹವಾದ ಶಕ್ತಿಯನ್ನು ಬಿಡುಗಡೆ ಮಾಡಲು ಸಣ್ಣ ಭೂಕಂಪನಗಳು ಹೆಚ್ಚಾಗಿ ಸಹಾಯ ಮಾಡುತ್ತವೆ ಎಂದು ತಜ್ಞರು ಹೇಳುತ್ತಾರೆ.

ಜಾಗರೂಕತೆಯೇ ಈಗ ನಿರ್ಣಾಯಕ: ಭೂಕಂಪನ ಸೂಕ್ಷ್ಮ ಪ್ರದೇಶಗಳಲ್ಲಿ ಜಾಗರೂಕತೆ ಅತಂತ್ಯ ಮುಖ್ಯವಾಗಿದೆ. ಇಂತಹ ಪ್ರದೇಶಗಳಲ್ಲಿ ಎಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ನಿರ್ಣಾಯಕವಾಗಿದೆ. ತಡರಾತ್ರಿ ಸಂಭವಿಸಿದ ಭೂಕಂಪದಿಂದ ನಿವಾಸಿಗಳಲ್ಲಿ ಕ್ಷಣ ಕಾಲ ಭಯದ ವಾತಾವರಣ ನಿರ್ಮಾಣವಾದರೂ, ಕಂಪನವು ಸೌಮ್ಯವಾಗಿರು ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂಬುದು ಸಮಾಧಾನಕರ ವಿಷಯವಾಗಿದೆ.

ವದಂತಿಗಳಿಗೆ ಕಿವಿಕೊಡದಂತೆ ಜಿಲ್ಲಾಡಳಿತದಿಂದ ಮನವಿ: ವದಂತಿಗಳನ್ನು ಹರಡುವುದನ್ನು ತಡೆಯಲು ಮತ್ತು ತುರ್ತು ಸಂದರ್ಭದಲ್ಲಿ ಆಡಳಿತ ಅಥವಾ ವಿಪತ್ತು ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಲು ಆಡಳಿತವು ಸಾರ್ವಜನಿಕರಲ್ಲಿ ಮನವಿ ಮಾಡಿದೆ.

Also Read:

ಆನೇಕಲ್ ಭೀಕರ ಘಟನೆ: ಕೆರೆಯಂಗಳದಲ್ಲಿ ಮಹಿಳೆಯ ತಲೆಬುರಡೆ, ಮೂಳೆಗಳು ಪತ್ತೆ ಪ್ರಕರಣ!

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online