<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

Engineer Attacked: ಡೇಟಿಂಗ್ ಆ್ಯಪ್ ಸ್ನೇಹಿತನಿಂದ ಮೋಸ, ಇಬ್ಬರ ಬಂಧನ

Engineer Attacked: ಡೇಟಿಂಗ್ ಆ್ಯಪ್ ಸ್ನೇಹಿತನಿಂದ ಮೋಸ, ಇಬ್ಬರ ಬಂಧನ
Summary: An engineer who went to meet a friend he met through a dating app was attacked and extorted, and two people have been arrested by the police in connection with the incident.

belagavi news:

27 ವರ್ಷದ ಸಿವಿಲ್ ಇಂಜಿನಿಯರ್ ಯುವಕನೊಬ್ಬ ನೀಡಿದ ದೂರಿನನ್ವಯ ಪ್ರಕರಣ ದಾಖನಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಡೇಟಿಂಗ್ ಆ್ಯಪ್ ನಲ್ಲಿ ಪರಿಚಯವಾಗಿದ್ದ ಯುವಕನನ್ನು ಭೇಟಿಯಾಗಲು ಕರೆಸಿಕೊಂಡ ಮತ್ತೊಬ್ಬ ಯುವಕ ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹಣ ಸುಲಿಗೆ ಮಾಡಿದ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

27 ವರ್ಷದ ಸಿವಿಲ್ ಇಂಜಿನಿಯರ್ ಯುವಕನೊಬ್ಬ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

Sponsored

ಮೂರು ವರ್ಷಗಳಿಂದ ಡೇಟಿಂಗ್ ಆ್ಯಪ್ ಬಳಸುತ್ತಿದ್ದ ದೂರುದಾರರಿಗೆ ಆರೋಪಿ ಯುವಕ ಪರಿಚಯವಾಗಿದ್ದ, ನಂತರ ಇಬ್ಬರು ಪರಸ್ಪರ ನಂಬರ ವಿನಿಮಯ ಮಾಡಿಕೊಂಡಿದ್ದರು. ಮೇ 1 ರಂದು ದೂರುದಾರರನ್ನು ಯಲಹಂಕ ವ್ಯಾಪ್ತಿಯ ಪಾಲನಹಳ್ಳಿ ಗೇಟ್ ಬಳಿ ಭೇಟಿಯಾಗುವಂತೆ ಆರೋಪಿಗಳು ತಿಳಿಸಿದ್ದರು. ಅದರಂತೆ ದೂರುದಾರ ಯುವಕ ಸ್ಥಳಕ್ಕೆ ತೆರಳಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈತನನ್ನು ಕಾರಿನಲ್ಲಿ ಕರೆದೊಯ್ದಿದ್ದ ಆರೋಪಿಗಳು ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಬಳಿಕ ಮೊಬೈಲ್ ಕಿತ್ತುಕೊಂಡು ಪಾಸ್ವರ್ಡ್ ಹೇಳುವಂತೆ ಒತ್ತಾಯಿಸಿದ್ದಾರೆ. ಹೇಳದಿದ್ದಾಗ ದೂರುದಾರರ ತೊಡೆಗೆ 4 - 5 ಬಾರಿ ಚಾಕುವಿನಿಂದ ಇರಿದು, ಬಲವಂತವಾಗಿ 16,000 ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ನಂತರ ದೂರುದಾರರನ್ನು ನಿರ್ಜನ್ ಪ್ರದೇಶದಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಬಳಿಕ ಸಂತ್ರಸ್ತ ತನ್ನ ಮತ್ತು ಸ್ನೇಹಿತನಿಗೆ ಕರೆ ಮಾಡಿ ಸಹಾಯ ಪಡೆದಿದ್ದು, ಆತನ ನೆರವಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಂತರ ಅವರು ಪೊಲೀಸ್ ಠಾಣೆಗೆ ದೂರು ನೀಡಿದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

ಘಟನೆ ಸಂಭಂದ ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇನ್ನಿಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

Sponsored

ಆರೋಪಿಗಳು ಈ ಹಿಂದೆಯೂ ಇದೆ ಡೇಟಿಂಗ್ ಆ್ಯಪ್ ಮೂಲಕ 8ಕ್ಕೂ ಹೆಚ್ಚು ಜನರಿಗೆ ಸುಲಿಗೆ ಮಾಡಿರುವ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read also: 400 ವರ್ಷಗಳ ಹಳೆ ಕಥೆಗೆ ಜೀವ: ಮದನಿಕ ರೂಪದಲ್ಲಿ ರಾಗಿಣಿ ದ್ವಿವೇದಿ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online