belagavi news:
ಮದನಿಕ ಎಂಬ ವಿಭಿನ್ನ ಶೀರ್ಷಿಕೆಯೊಂದಿಗೆ ಸ್ಯಾಂಡಲ್ವುಡ್ ನಲ್ಲಿ ಗಮನ ಸೆಳೆಯುತ್ತಿರುವ ಸಿನಿಮಾ ಇದೀಗ ವಿಚಾರ ಹಂತದಲ್ಲಿ ಮುಂದುವರೆದಿದೆ. ಒಳ್ಳೆಯ ಕಂಟೆಂಟ್ನೊಂದಿಗೆ ನಿರ್ದೇಶಕ ಬಿ.ಎಸ್.ಸಂಜಯ್ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ರಾಗಿಣಿ ದ್ವಿವೇದಿ ಅಭಿನಯಿಸುತ್ತಿದ್ದು, ಇತ್ತೀಚಿಗೆ ಚಿತ್ರದ ಕ್ಲಿಪ್ಸ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಚಿತ್ರಕ್ಕೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ತಂಡ ತಿಳಿಸಿದೆ.
ನಿರ್ದೇಶಕ ಬಿ ಎಸ್ ಸಂಜಯ್ ಮಾತನಾಡಿ, ಈ ಕಥೆ ರೂಪಿಸುವ ವೇಳೆ ಅನೇಕ ಘಟನೆಗಳು ನಡೆದವು ಎಂದು ಹೇಳಿದ್ದಾರೆ."ಉತ್ತಮವಾಗಿ ಕಥೆಯನ್ನು ರೂಪಿಸಿದ್ದೇನೆ. ನನ್ನ ಪತ್ನಿಗೆ ಹಾಗೂ ಕುಮಾರಸ್ವಾಮಿ ಅವರಿಗೆ ಕಥೆ ಹೇಳಿದ್ದೆ. ಅವರು ಸಿನಿಮಾ ನೋಡಲು ಒಪ್ಪಿಗೆ ನೀಡಿದರು"ಎಂದು ತಿಳಿಸಿದ್ದಾರೆ. ಚಿತ್ರದಲ್ಲಿ ಒಟ್ಟು 10 ಹಾಡುಗಳಿದ್ದು, ಅದರಲ್ಲಿ ಕ್ಲಾಸಿಕ್ ಹಾಡುಗಳು ಸೇರಿವೆ.' ಮದನಿಕ'ಅಂದರೆ ಸುಮಾರು 400 ವರ್ಷಗಳ ಹಳೆಯ ಕಥೆಯನ್ನು ಆಧರಿಸಿರುವ ಚಿತ್ರವಾಗಿದ್ದು, ರಾಗಿಣಿ ದ್ವಿವೇದಿ ಅವರು ಮದನಿಕ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಮದನಿಕ ಚಿತ್ರದ ಕುರಿತು ಮಾತನಾಡಿದ ವಿಕ್ಟರಿ ವಾಸು ಅವರು, ಚಿತ್ರದ ಶೀರ್ಷಿಕೆ ಆಕರ್ಷಕವಾಗಿದ್ದು,"ಮದನಿಕ ಎಂದರೆ ಸುಂದರ ಹುಡುಗಿ ಎಂಬ ಅರ್ಥ ಬರುತ್ತದೆ"ಎಂದು ಹೇಳಿದರು. ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಅವರು ಆ ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದು ಅವರು ಪ್ರಶಂಸಿಸಿದರು. ನಿರ್ದೇಶಕ ಬಿಎಸ್ ಸಂಜಯ್ ಅವರೊಂದಿಗೆ ತಮ್ಮದು ಸುಮಾರು 20 ವರ್ಷಗಳ ದೀರ್ಘ ಸಂಬಂಧವಿದೆ ಎಂದು ಹೇಳಿದ ವಾಸು, ಈ ಬಾರಿ ಇಬ್ಬರು ಸೇರಿ ಈ ಚಿತ್ರವನ್ನು ರೂಪಿಸಿದ್ದಾರೆ ಎಂದರು. ಕೊನೆಯಲ್ಲಿ ಅವರು ಪ್ರೇಕ್ಷಕರಿಗೆ ಮನವಿ ಮಾಡಿದ್ದು,"ನಮ್ಮ ಸಿನಿಮಾ ನೋಡಿ ಪ್ರೋತ್ಸಾಹಿಸಿ, ಚಿತ್ರವನ್ನು ಯಶಸ್ವಿಯಾಗಿಸಿ"ಎಂದು ಹೇಳಿಕೊಂಡರು.
ಮದನಿಕ ಚಿತ್ರವನ್ನು ಎಸ್ ಪಿ ಆರ್ ಪ್ರೊಡಕ್ಷನ್ ಹಾಗೂ ಸಖಾರ್ಥ್ ಲಿಟಲ್ ಡಿಜಿಟಲ್ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಚಿತ್ರವನ್ನು ನಿರ್ಮಾಣ ಮಾಡಿರುವವರು ಸುಜಾತ ಲಕ್ಷ್ಮಿ ಮತ್ತು ಕುಮಾರಸ್ವಾಮಿ ಎಂದು ತಿಳಿದುಬಂದಿದೆ. ಚಿತ್ರದಲ್ಲಿ ಧರ್ಮ ಕೀರ್ತಿರಾಜ್, ಹರೀಶ್ ರಾಜ್, ಅಶ್ವಿನ್ ಮತ್ತು ರಾಜ್ವಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಸಂಗೀತ ನಿರ್ದೇಶನವನ್ನು ಕಲಾಂ ಕೇರಳ ಮಾಡಿದ್ದಾರೆ. ಛಾಯಾಗ್ರಹಣವನ್ನು ಆರ್ ಗಿರಿ ನಿರ್ವಹಿಸಿದ್ದಾರೆ. ಸಾಸ ದೃಶ್ಯಗಳನ್ನು ತ್ರಿಲ್ಲರ್ ಮಂಜು ಮತ್ತು ಕೌರವೆ ವೆಂಕಟೇಶ್ ರೂಪಿಸಿದ್ದಾರೆ. ಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ನೀತಿನಲ್ಲಿ ಅಂತಿಮಹಂತದ ಕೆಲಸಗಳಲ್ಲಿ ತೊಡಗಿಕೊಂಡಿದೆ.
ಮದನಿಕ ಚಿತ್ರದ ಕುರಿತು ನಾಯಕಿ ರಾಗಿಣಿ ದ್ವಿವೇದಿ ಮಾತನಾಡಿ, ಚಿತ್ರ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲ ನಿರ್ಮಾಣವಾಗಿದೆ ಎಂದು ಹೇಳಿದರು."ಇವು ಕೇವಲ ಆರಂಭ ಮಾತ್ರ. ನಾವು ನೋಡಿರುವುದು ಕ್ಲಿಪ್ಸ್ ಆಫ್ ಮದನಿಕ ಅಷ್ಟೇ. ಆದರೆ ಅದರ ಹಿಂದೆ ದೊಡ್ಡ ಕಥೆ ಮತ್ತು ಅದ್ಭುತ ನಟನೆ ಇದೆ. ಆರು ಎರಡುವರೆ ವರ್ಷಗಳ ಪಯಣ ಇದು. ಇಂದಿನ ದಿನಗಳಲ್ಲಿ ತಂತ್ರಜ್ಞಾನ, ಮೇಕಿಂಗ್, ಮ್ಯೂಸಿಕ್ ಎಲ್ಲವೂ ಬದಲಾಗಿದೆ. ಆದರೆ ಭಾವನೆಗಳು ಮಾತ್ರ ಬದಲಾಗಿಲ್ಲ. ಈ ಚಿತ್ರದಲ್ಲಿ ಮಿಕ್ಸ್ಡ ಶೈಲಿ ಇದೆ. ಅದ್ಭುತ ಆಕ್ಷನ್ ಸೀಕ್ವೆನ್ಸ್ ಗಳು ಹಾಗೂ ಸಂಗೀತವು ಇದೆ. ಇಂತಹ ಸಿನಿಮಾ ಬಹಳ ವರ್ಷಗಳಿಂದ ಬಂದಿಲ್ಲ"ಎಂದು ಅವರು ಹೇಳಿದ್ದಾರೆ.
ಚಿತ್ರದ ಸಂಗೀತ ನಿರ್ದೇಶಕ ಕಲಾಂ ಕೇರಳ ಮಾತನಾಡಿ, ಈ ಸಿನಿಮಾ ತಮ್ಮ ವೃತ್ತಿಜೀವನದಲ್ಲೇ ಅತ್ಯುತ್ತಮ ಸಂಗೀತ ಕೆಲಸ ಎಂದು ಹೇಳಿದ್ದಾರೆ."ಈ ಮೊದಲು ಮೂರು ಸಿನಿಮಾಗಳನ್ನು ಮಾಡಿದ್ದೇನೆ. ಬಿಎಸ್ ಸಂಜಯ್ ನನಗೆ ಉತ್ತಮ ಅವಕಾಶ ನೀಡಿದರು. ಆರಂಭದಲ್ಲಿ ಜನರಲ್ ಮ್ಯೂಸಿಕ್ ಮಾಡುವ ಯೋಚನೆ ಇತ್ತು. ಆದರೆ ನಿರ್ದೇಶಕರು ಕ್ಲಾಸಿಕ್ ಮ್ಯೂಸಿಕ್ ಇರಲಿ ಎಂದು ಹೇಳಿದ ಕಾರಣ ಅದನ್ನು ಸೇರಿಸಿದ್ದೇನೆ"ಎಂದು ಅವರು ತಿಳಿಸಿದ್ದಾರೆ.
Also Read: