H16 News
Logo

By Rakshita | Published on October 23, 2025

Image Not Found
Health / October 23, 2025

ದೇಹದ ಅಧಿಕ ತೂಕ ಇಳಿಸಿಕೊಂಡರೂ ಜೀವಿತಾವಧಿ ಕಡಿಮೆಯಾಗುತ್ತೆ

ಅತಿಯಾದ ಆಹಾರ ಕ್ರಮವನ್ನು ಅನುಸರಿಸುವ ಮೂಲಕ ದೇಹದ ಅಧಿಕ ತೂಕ ಇಳಿಸಿಕೊಳ್ಳುವುದು ಅಪಾಯಕಾರಿಯಾಗಿದೆ. ಮನಸ್ಸಿಗೆ ಬಂದಂತೆ ತ್ವರಿತ ತೂಕ ನಷ್ಟ ಮಾಡುವುದು ಸಾವಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಪ್ರಸ್ತುತ ಅಧಿಕ ತೂಕ ಹಾಗೂ ಬೊಜ್ಜು ಪ್ರಮುಖ ಸಮಸ್ಯೆಗಳಾಗಿವೆ. ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಕಾಯಿಲೆ, ಬಂಜೆತನ ಮತ್ತು ಕ್ಯಾನ್ಸರ್ನಂತಹ ಕಾಯಿಲೆಗಳು ಬರಲು ಕಾರಣವಾಗಬಹುದು. ಇದರಿಂದ ಆರೋಗ್ಯಕರ ದೇಹದ ತೂಕ ಕಾಯ್ದುಕೊಳ್ಳಬೇಕಾಗುತ್ತದೆ. ತೂಕ ಇಳಿಸಿಕೊಳ್ಳಲು ಆಹಾರ ತಜ್ಞರು ಮತ್ತು ಜಿಮ್ ತರಬೇತುದಾರರ ಸಲಹೆ ಪಡೆಯುವುದು ಸಾಮಾನ್ಯವಾಗಿದೆ. ಹಾಗೆ ಯುವತಿಯರು ಸ್ಲಿಮ್ ಆಗಿ ಕಾಣಲು ಆಹಾರ ಸೇವನೆ ಸಹ ಕಡಿಮೆ ಮಾಡುತ್ತಾರೆ. ಕೆಲವರು ತಮ್ಮ ನೆಚ್ಚಿನ ಆಹಾರಗಳನ್ನು ತಿನ್ನಲು ಹಿಂದೇಟು ಹಾಕುತ್ತಾರೆ. ಆದರೂ ಡೆನ್ಮಾರ್ಕ್ನಲ್ಲಿ ನಡೆದ ಇತ್ತೀಚಿನ ಅಧ್ಯಯನವು ಅಧಿಕ ತೂಕ ಹೊಂದಿರುವುದು ಮಾತ್ರವಲ್ಲದೆ ಕಡಿಮೆ ತೂಕ ಹೊಂದಿರುವುದು ಸಹ ಅಪಾಯಕಾರಿ ಎಂದು ಸಂಶೋಧನೆಯಿಂದ ದೃಢಪಡಿಸಿದೆ. ಇಂದಿನ ಜೀವನ ಶೈಲಿಯಲ್ಲಿ ಸ್ವಲ್ಪ ತೂಕ ಹೆಚ್ಚಾದರೆ ಅನೇಕರು ಜಿಮ್ ಹಾಗೂ ಆಹಾರ ತಜ್ಞರ ಕಡೆಗೆ ಧಾವಿಸುತ್ತಾರೆ. ಆದರೆ, ಈ ಒತ್ತಡದಿಂದ ಅವರು ಅಧಿಕ ತೂಕ ಕಳೆದುಕೊಳ್ಳುತ್ತಾರೆಯೇ ಎಂದು ಗಮನಹರಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಹೆಚ್ಚು ತೂಕ ಇಳಿಸಿಕೊಳ್ಳುವುದು ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಇಂಥಹ ಸಮಯದಲ್ಲಿ ಹೆಚ್ಚು ತೂಕ ಇಳಿಸುವುದರಿಂದ ಯಾವೆಲ್ಲಾ ಸಮಸ್ಯೆಗಳು ಉಂಟಾಗಬಹುದು ಎಂದು ತಿಳಿಯೋಣ. ಹಳೆಯ ಲೆಕ್ಕಾಚಾರವೇನು?: ಕೆಲವು ಯುರೋಪಿಯನ್ನರು 200 ವರ್ಷಗಳ ಹಿಂದೆ ಈಗ ಅನುಸರಿಸುತ್ತಿರುವ BMI ಅನ್ನು ಅಧ್ಯಯನ ಮಾಡಿ ಲೆಕ್ಕ ಹಾಕಿದರು. ಇದು ಆಹಾರ ಪದ್ಧತಿ, ಜೀವನಶೈಲಿ, ಹೊಟ್ಟೆಯಲ್ಲಿ ಕೊಬ್ಬಿನ ವಿತರಣೆ ಮತ್ತು ಜನಾಂಗೀಯ ವ್ಯತ್ಯಾಸಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ವಾಸ್ತವವಾಗಿ ತಜ್ಞರು ಹೇಳುವಂತೆ ಹೊಟ್ಟೆಯಲ್ಲಿ ಹಾಗೂ ಅಂಗಗಳ ಸುತ್ತಲೂ ಸಂಗ್ರಹವಾದ ಕೊಬ್ಬು ಚಯಾಪಚಯ ಕ್ರಿಯೆಯನ್ನು ಅಡ್ಡಿಪಡಿಸುವ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಈ ಕ್ರಮದಲ್ಲಿ 35ರ BMI ಮತ್ತು ಬೊಜ್ಜು ಹೊಂದಿರುವ ಜನರು, ಅದೇ BMI ಮತ್ತು ಸೊಂಟ, ಪೃಷ್ಠ ಮತ್ತು ತೊಡೆಗಳಲ್ಲಿ ಕೊಬ್ಬು ಹೊಂದಿರುವವರಿಗೆ ಹೋಲಿಸಿದರೆ, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳ ಅಪಾಯವನ್ನು ಕಡಿಮೆ ಹೊಂದಿರುತ್ತಾರೆ. BMI ಮಾತ್ರವಲ್ಲದೆ, ಕೊಬ್ಬಿನ ವಿತರಣೆ ಹಾಗೂ ಮಧುಮೇಹದಂತಹ ಇತರ ಕಾಯಿಲೆಗಳನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕು ಎಂದು ಸಂಶೋಧಕರು ತಿಳಿಸುತ್ತಾರೆ. ತೂಕ & ಆರೋಗ್ಯದ ನಡುವಿನ ಸಂಬಂಧ: ದೇಹದ ತೂಕ ಮತ್ತು ಆರೋಗ್ಯದ ನಡುವಿನ ಸಂಬಂಧವು ಅತ್ಯಂತ ಸಂಕೀರ್ಣವಾಗಿದೆ. ಸಾಮಾನ್ಯವಾಗಿ 18.5 ಮತ್ತು 24.9ರ ನಡುವಿನ BMI ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. 18.5 ಕ್ಕಿಂತ ಕಡಿಮೆ BMI ಅನ್ನು ಕಡಿಮೆ ತೂಕವೆಂದು ಪರಿಗಣಿಸಲಾಗುತ್ತದೆ. 25 ಹಾಗೂ 29.9ರ ನಡುವಿನ BMI ಅನ್ನು ಅಧಿಕ ತೂಕವೆಂದು ಪರಿಗಣಿಸಲಾಗುತ್ತದೆ. ಬೇರೆ ಯಾವುದೇ ಸಮಸ್ಯೆಗಳಿಲ್ಲದಿದ್ದರೆ, ಅಧಿಕ ತೂಕವು ಸಾವಿನ ಅಪಾಯ ಉಂಟು ಮಾಡುವುದಿಲ್ಲ ಎಂದು ತೀರ್ಮಾನಿಸಲಾಗಿದೆ. ಸಾಮಾನ್ಯವಾಗಿ ದೇಹದಲ್ಲಿ ಕೊಬ್ಬು ಇರುವುದು ಒಳ್ಳೆಯದು ಹಾಗೂ ಇದು ಅನಾರೋಗ್ಯದಿಂದ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಸಾಕಷ್ಟು ಕೊಬ್ಬಿನ ಶೇಖರಣೆ ಇರುವ ಜನರು ಕಿಮೊಥೆರಪಿಯ ಅಡ್ಡಪರಿಣಾಮಗಳನ್ನು ಉತ್ತಮವಾಗಿ ಸಹಿಸಿಕೊಳ್ಳುತ್ತಾರೆ. ನೀವು ಅನಾರೋಗ್ಯ, ಗಾಯ ಅಥವಾ ಒತ್ತಡದಲ್ಲಿದ್ದಾಗ ಕೊಬ್ಬು ಮತ್ತು ಸ್ನಾಯುಗಳು ತುರ್ತು ಶಕ್ತಿಯನ್ನು ಒದಗಿಸುತ್ತವೆ. ಹೆಚ್ಚು ತೂಕ ಇಳಿಸಿಕೊಂಡ ಜನರಲ್ಲಿ ಇದರ ಕೊರತೆಯಿರುವುದು ಕಂಡು ಬರುತ್ತದೆ. 18.5ಕ್ಕಿಂತ ಕಡಿಮೆ BMI ಇರುವವರು ಅಕಾಲಿಕವಾಗಿ ಸಾಯುವ ಸಾಧ್ಯತೆ ಮೂರು ಪಟ್ಟು ಹೆಚ್ಚು ಎಂದು ದೃಢಪಡಿಸಲಾಗಿದೆ. ಡೆನ್ಮಾರ್ಕ್ನಲ್ಲಿ 85,000 ಜನರ ಮೇಲೆ ನಡೆಸಿದ ಅಧ್ಯಯನವು 18.5 ಮತ್ತು 19.9 ರ ನಡುವಿನ BMI ಇರುವವರು ಸಹ ಅಪಾಯದಲ್ಲಿದ್ದಾರೆ ಎಂದು ವರದಿ ಮಾಡಿದೆ. ಕ್ಲೀವ್ಲ್ಯಾಂಡ್ ಕ್ಲಿನಿಕ್ ಅಧ್ಯಯನವು, 6 ರಿಂದ 12 ತಿಂಗಳ ಅವಧಿಯಲ್ಲಿ ದೇಹದ ತೂಕದ 5 ಪ್ರತಿಶತಕ್ಕಿಂತ ಹೆಚ್ಚು ಅಥವಾ 10 ಪೌಂಡ್ಗಳಷ್ಟು ತೂಕ ನಷ್ಟವು ಕಳವಳಕ್ಕೆ ಕಾರಣವಾಗಿದೆ ಎಂದು ವಿವರಿಸುತ್ತದೆ. ಓದುಗರಿಗೆ ವಿಶೇಷ ಸೂಚನೆ: ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇನ್ನಷ್ಟು ಓದಿರಿ : ತೆಲುಗು ರಾಜಕಾರಣಿಯಾದ ಶಿವಣ್ಣ: 'ಗುಮ್ಮಡಿ ನರಸಯ್ಯ' ಚಿತ್ರ
Sponsored Ads
image computer academy
image computer academy
image computer academy
image computer academy
LANDSCAPING IN CAD
LANDSCAPING IN CAD
HSRNEWS
HSRNEWS

Related News

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy