<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

ಫಿಫಾ ವಿಶ್ವಕಪ್ 2026 : 92 ವರ್ಷಗಳ ಬಳಿಕ ಮೊದಲ ಗೆಲುವಿನ ಇತಿಹಾಸ

ಫಿಫಾ ವಿಶ್ವಕಪ್ 2026 : 92 ವರ್ಷಗಳ ಬಳಿಕ ಮೊದಲ ಗೆಲುವಿನ ಇತಿಹಾಸ
Summary: Egypt team recorded its first win in the World Cup after a long wait of 92 years. With this victory, the team achieved a historic achievement by topping Group 'G'. Egypt, who performed brilliantly in the match, defeated the opposing team and made a strong start to their campaign.

belagavi news :

ವ್ಯಾಂಕೋವರ್ : ಮಹಮ್ಮದ್ ಸಲಾಹ್ ನಾಯಕತ್ವದ ಈಜಿಪ್ಟ್ ತಂಡವು 2026ರ ಫಿಫಾ ವಿಶ್ವಕಪ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 3 -1 ಅಂತರದ ಭರ್ಜರಿ ಜಯ ಸಾಧಿಸಿ ಇತಿಹಾಸ ನಿರ್ಮಿಸಿದೆ. ಈ ಗೆಲುವಿನೊಂದಿಗೆ ಈಜಿಪ್ಟ್ 1934 ರಲ್ಲಿ ವಿಶ್ವಕಪ್ ಪ್ರವೇಶಿಸಿದ ನಂತರ 33,628 ದಿನಗಳು (92 ವರ್ಷ) ಕಾಯುತ್ತಿದ್ದ ತನ್ನ ಮೊದಲ ವಿಶ್ವಕಪ್ ಜಯವನ್ನು ದಾಖಲಿಸಿದೆ.

ಈ ಜಯದೊಂದಿಗೆ ಈಜಿಪ್ಟ್ ಗ್ರೂಪ್ 'ಜಿ' ಯಲ್ಲಿ ಅಗ್ರಸ್ಥಾನ ಪಡೆದು ನಾಕ್ಔಟ್ ಹಂತಕ್ಕೆ ಪ್ರವೇಶಿಸುವ ತನ್ನ ಭರವಸೆಯನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.

ಪಂದ್ಯದ ಆರಂಭದಲ್ಲಿ ನ್ಯೂಜಿಲ್ಯಾಂಡ್ 15ನೇ ನಿಮಿಷದಲ್ಲಿ ಫಿನ್ ಸೆರ್ಮನ್ ಅವರ ಗೋಲಿನಿಂದ ಮುನ್ನಡೆ ಪಡೆದುಕೊಂಡಿತು. ಆದರೆ ದ್ವಿತೀಯಾರ್ಧದಲ್ಲಿ ಈಜಿಪ್ಟ್ ತನ್ನ ಅದ್ಭುತ ಪುನರಾಗಮನ ಮಾಡಿತು. 52ನೇ ನಿಮಿಷದಲ್ಲಿ ಮುಸ್ತಫಾ ಜಿಕೊ ಗೋಲು ಗಳಿಸಿ ಸಮಬಲ ಸಾಧಿಸಿದರು.

Sponsored

ಅದಾದ ನಂತರ 62ನೇ ನಿಮಿಷದಲ್ಲಿ ನಾಯಕ ಮೊಹಮ್ಮದ್ ಸಲಾಹ್, ಜಿಕೊ ಜೊತೆಗಿನ ಉತ್ತಮ ಸಂವಹನದ ಮೂಲಕ ಭರ್ಜರಿ ಗೋಲು ಬಾರಿಸಿ ಈಜಿಪ್ಟ್ ಗೆ ಮುನ್ನಡೆ ನೀಡಿದರು. ಅಂತಿಮವಾಗಿ 82ನೇ ನಿಮಿಷದಲ್ಲಿ ಟ್ರೆಜೆಗುಟ್ ಮತ್ತೊಂದು ಗೋಲು ದಾಖಲಿಸಿ ಈಜಿಪ್ಟ್ ನ ಜಯವನ್ನು ಖಚಿತಪಡಿಸಿದ್ದರು.

ಈ ಜಯದೊಂದಿಗೆ ಈಜಿ 92 ವರ್ಷಗಳ ವಿಶ್ವಕಪ್ ನಿರೀಕ್ಷೆಗೆ ಅಂತ್ಯ ಹಾಡಿ ಐತಿಹಾಸಿಕ ಕ್ಷಣವನ್ನು ದಾಖಲಿಸಿದೆ.

ಗೆಲುವಿನ ಹೀರೋ ಸಲಾಹ್ ಮೈದಾನದಿಂದ ನಿರ್ಗಮಿಸಿದಾಗ,ಇಡೀ ಕ್ರೀಡಾಂಗಣ ಎದ್ದು ನಿಂತು ಅವರಿಗೆ ಚಪ್ಪಾಳೆ ತಟ್ಟಿದ್ದು ಅಭಿಮಾನಿಗಳ ಮೆಚ್ಚುಗೆಗೆ ಸಾಕ್ಷಿಯಾಯಿತು. ವರ್ಷಗಳಿಂದ ವಿಶ್ವ ಕಪ್ ಗೆಲುವಿಗಾಗಿ ಕಾಯುತ್ತಿದ್ದ ಈಜಿಪ್ಟ್ ಅಭಿಮಾನಿಗಳಿಗೆ ಈ ಜಯ ವಿಶೇಷ ಸಂತೋಷ ತಂದಿದೆ. ಇದೇ ವೇಳೆ ಮುಸ್ತಫಾ ಜಿಕೊ ಕೂಡ ಒಂದು ಗೋಲು ಮತ್ತು ಒಂದು ಅಸಿಸ್ಟ್ ನೀಡುವ ಮೂಲಕ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು.

ಐತಿಹಾಸಿಕ ಜಯದ ನಂತರ ಪ್ರತಿಕ್ರಿಯಿಸಿದ ಸಲಾಹ್, "ಇದು ನಂಬಲಸಾಧ್ಯ. ಇದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಇದು ಎಲ್ಲಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯ ಶ್ರಮದ ಫಲ. ನಾವು ಈ ಟೂರ್ನಿಯಲ್ಲಿ ಮುಂದುವರೆದು ನೌಕೌಟ್ ಹಂತ ತಲುಪುವ ವಿಶ್ವಾಸವಿದೆ. ಈ ಗೆಲುವು ಈಜಿಪ್ಟ್ ಫುಟ್ಬಾಲ್ ಇತಿಹಾಸದಲ್ಲಿ ಅತ್ಯಂತ ಮಹತ್ವದ ಕ್ಷಣಗಳಲ್ಲಿ ಒಂದಾಗಿ ಉಳಿಯುತ್ತದೆ," ಎಂದು ಸಂತಸ ವ್ಯಕ್ತಪಡಿಸಿದರು.

Sponsored

ನ್ಯೂಜಿಲ್ಯಾಂಡ್ ನ ನಾಕ್ ಔಟ್ ಭರವಸೆ ಜೀವಂತ:

ಸೋಲಿನ ಹೊರತಾಗಿಯೂ ನ್ಯೂಜಿಲ್ಯಾಂಡ್ ತಂಡದ ಕೋಚ್ ಡ್ಯಾರೆನ್ ಬಾಜೆಲಿ ನಾಕ್ ಔಟ್ ಹಂತದ ಭರವಸೆಯನ್ನು ಕಳೆದುಕೊಂಡಿಲ್ಲ. ಪಂದ್ಯ ನಂತರ ಮಾತನಾಡಿದ ಅವರು, "ಇದು ನಿರಾಶದಾಯಕ ಫಲಿತಾಂಶ. ಮೊದಲರ್ಧದಲ್ಲಿ ನಾವು ಉತ್ತಮವಾಗಿ ಆಡಿದ್ದೇವೆ ಮತ್ತು ಹಲವು ಅವಕಾಶಗಳನ್ನು ಸೂಚಿಸಿದ್ದೇವೆ. ಆದರೆ ದ್ವಿತಿಯಾರ್ಧದಲ್ಲಿ ಈಜಿಪ್ಟ್ ಆಟದ ವೇಗವನ್ನು ಹೆಚ್ಚಿಸಿತು, ನಾವು ಅದಕ್ಕೆ ಸರಿಯಾಗಿ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಆದರೂ ನಾವು ಇನ್ನೂ ಇತಿಹಾಸ ನಿರ್ಮಿಸಲು ಒಂದು ಪಂದ್ಯ ದೂರದಲ್ಲಿದ್ದೇವೆ. ಈ ಬೆಲ್ಜಿಯಂ ವಿರುದ್ಧ ಗೆಲ್ಲಬೇಕು," ಎಂದು ಹೇಳಿದ್ದಾರೆ.

ಈಜಿಪ್ಟ್ ಗೆ ಮುಂದಿನ ಸವಾಲು: ಈ ಗೆಲುವಿನೊಂದಿಗೆ ಈಜಿಪ್ಟ್ ಗ್ರೂಪ್ 'ಜಿ' ಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಆದರೆ ನಾಕ್ಔಟ್ ಹಂತ ಪ್ರವೇಶ ಇನ್ನು ಖಚಿತವಾಗಿಲ್ಲ. ಮುಂದಿನ ಪಂದ್ಯದಲ್ಲಿ ಈಜಿಪ್ಟ್ ಸಿಯಾಟಲ್ ನಲ್ಲಿ ಇರಾನ್ ವಿರುದ್ಧ ಕಣಕ್ಕಿಳಿಯಲಿದೆ.ಮುಂದಿನ ಹಂತಕ್ಕೆ ಮುನ್ನಡೆಯಲು ಈ ಪಂದ್ಯದಲ್ಲಿ ಕನಿಷ್ಠ ಸಾಧಿಸುವ ಅಗತ್ಯವಿದೆ.

ಇನ್ನೊಂದೆಡೆ, ಇರಾನ್ ಮತ್ತು ಬೆಲ್ಜಿಯಂತಲಾ ಎರಡು ಅಂಕಗಳೊಂದಿಗೆ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದು,ನ್ಯೂಜಿಲೆಂಡ್ ಒಂದು ಅಂಕದೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

Sponsored

Also Read:

ಮಳೆಯ ಕೊರತೆಯಿಂದ ಉತ್ತರ ಕರ್ನಾಟಕದಲ್ಲಿ ಬಿಕ್ಕಟ್ಟು: ರೈತರ ಬದುಕು ಕಂಗಾಲು

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online