belagavi news :
ನಟ ಪ್ರಜ್ವಲ್ ದೇವರಾಜ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಕರಾವಳಿ ಸಿನಿಮಾ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಆದರೆ ಬಿಡುಗಡೆಗು ಮುನ್ನವೇ ಸಿನಿಮಾ ಆರೋಪ - ಪ್ರತ್ಯಾರೋಪಗಳು ಮತ್ತು ವಿವಿಧ ಚರ್ಚೆಗಳ ನಡುವೆ ಸಿಲುಕಿದೆ.
ಸಂಭಾವನೆ ವಿಚಾರಕ್ಕೆ ಸಂಬಂಧಿಸಿದಂತೆ ನಾಯಕ ನಟ ಪ್ರಜ್ವಲ್ ದೇವರಾಜ್ ಮತ್ತು ಚಿತ್ರದ ನಿರ್ದೇಶಕ ನಿರ್ಮಾಪಕ ಗುರುದತ್ ಗಾಣಿಗ ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನಲಾಗಿದ್ದು,ಈ ಬೆಳವಣಿಗೆ ಪೊಲೀಸ್ ಠಾಣೆವರೆಗೂ ತಲುಪಿದೆ. ಈ ಕುರಿತು ಗುರುದತ್ ಗಾಣಿಗ ಅವರು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿ ತಮ್ಮ ಸ್ಪಷ್ಟನೆ ನೀಡಿದ್ದಾರೆ.
ಇದರ ಬೆನ್ನಲ್ಲೇ ಚಿತ್ರರಂಗದ ಹಲವು ಗಣ್ಯರು ಪ್ರಜ್ವಲ್ ದೇವರಾಜ್ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ವಿಚಾರವಾಗಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಜನಪ್ರಿಯ ನಟಿ ಮೇಘನಾ ರಾಜ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಪ್ರಜ್ವಲ್ ದೇವರಾಜ್ ಅವರಿಗೆ ಬೆಂಬಲ ಸೂಚಿಸಿದ್ದಾರೆ, "ಪ್ರಜ್ವಲ್ ದೇವರಾಜ್, ನಾವು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ" ಎಂದು ಅವರು ಹೇಳಿದ್ದಾರೆ.
ವಿಡಿಯೋದಲ್ಲಿ ಮಾತನಾಡಿರುವ ಮೇಘನಾ ರಾಜ್, "ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಮೇಘನಾ ರಾಜ್. ನಾನು ಇಂದು ಓರ್ವ ಅದ್ಭುತ ವ್ಯಕ್ತಿಯ ಬಗ್ಗೆ ಮಾತನಾಡಲು ಈ ವಿಡಿಯೋ ಮಾಡುತ್ತಿದ್ದೇನೆ. ನನ್ನ ಬಾಲ್ಯದ ಸ್ನೇಹಿತ, ನನ್ನ ಜೀವನದ ಅದ್ಭುತ ಗೆಳೆಯ ಪ್ರಜ್ವಲ್ ದೇವರಾಜ್" ಎಂದು ಹೇಳುವ ಮೂಲಕ ತಮ್ಮ ಮಾತು ಆರಂಭಿಸಿದ್ದಾರೆ.
ಪ್ರಜ್ವಲ್ ದೇವರಾಜ್ ಅವರ ವ್ಯಕ್ತಿತ್ವ, ಸ್ನೇಹ ಮತ್ತು ವೃತ್ತಿಪರತೆಯ ಬಗ್ಗೆ ಮಾತನಾಡಿರುವ ಮೇಘನಾ ರಾಜ್ ಅವರ ಈ ಪ್ರಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. 'ಕರಾವಳಿ' ಸಿನಿಮಾದ ಸುತ್ತಮುತ್ತಲಿನ ಬೆಳವಣಿಗೆಗಳು ಮುಂದುವರೆದಿದ್ದು, ಚಿತ್ರತಂಡದ ಮುಂದಿನ ನಡೆ ಕುತೂಹಲ ಮೂಡಿಸಿದೆ.
'ಕರಾವಳಿ' ವಿವಾದದ ನಡುವೆ ಪ್ರಜ್ವಲ್ ದೇವರಾಜ್ ಪರ ಮೇಘನಾ ರಾಜ್ ಬೆಂಬಲ; "ಇಷ್ಟು ವರ್ಷ ಇಲ್ಲದ ಕಪ್ಪು ಚುಕ್ಕೆ ಈಗ್ಯಾಕೆ?"
'ಕರಾವಳಿ' ಸಿನಿಮಾ ವಿವಾದದ ನಡುವೆ ನಟ ಪ್ರಜ್ವಲ್ ದೇವರಾಜ್ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ನಟ ಮೇಘನಾ ರಾಜ್, ತಮ್ಮ ಬಾಲ್ಯದ ಸ್ನೇಹಿತನಾಗಿ ತಮ್ಮ ಸಹ ನಟನಾಗಿ ಪ್ರಜ್ವಲ್ ಅವರ ವ್ಯಕ್ತಿತ್ವ ಹಾಗೂ ವೃತ್ತಿಪರತೆಯ ಬಗ್ಗೆ ಮಾತನಾಡಿದ್ದಾರೆ.
ಮೇಘನಾ ರಾಜ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಪ್ರಜ್ವಲ್ ದೇವರಾಜ್ ಅವರನ್ನು ತಾವು ಹಲವು ವರ್ಷಗಳಿಂದ ಬಲ್ಲವರಾಗಿದ್ದು, ಅವರಲ್ಲಿ ಯಾವಾಗಲೂ ಕಂಡಿದ್ದು ಪ್ರಾಮಾಣಿಕತೆ, ಶಿಸ್ತು ಮತ್ತು ಜಂಟಲ್ ಮ್ಯಾನ್ ಗುಣ ಎಂದು ಹೇಳಿದ್ದಾರೆ. ಯಾವುದೇ ವಿವಾದಗಳಿಗೆ ತಲೆ ಹಾಕದೆ, ಅಗತ್ಯವಿದ್ದವರಿಗೆಸಹಾಯ ಮಾಡುವ ಸ್ವಭಾವ ಪ್ರಜ್ವಲ್ ಅವರದ್ದು ಎಂದು ಅವರು ತಿಳಿಸಿದ್ದಾರೆ.
ವೃತ್ತಿಪರವಾಗಿ ಪ್ರಜ್ವಲ್ ದೇವರಾಜ್ ಅವರೊಂದಿಗೆ ಎರಡು ಸಿನಿಮಾಗಳಲ್ಲಿ ಕೆಲಸ ಮಾಡಿರುವುದಾಗಿ ಹೇಳಿದ ಮೇಘನಾ ರಾಜ್, ಎರಡು ಸಿನಿಮಾಗಳ ಸಂದರ್ಭದಲ್ಲಿ ಅವರ ಸಮರ್ಪಣೆ, ಶಿಸ್ತು ಮತ್ತು ಸಿನಿಮಾದ ಮೇಲಿನ ಬದ್ಧತೆಯನ್ನು ಹತ್ತಿರದಿಂದ ನೋಡಿರುವುದಾಗಿ ಹೇಳಿದ್ದಾರೆ. ಸಿನಿಮಾ ಕುಟುಂಬದಿಂದ ಬಂದಿರುವ ಪ್ರಜ್ವಲ್, ಚಿತ್ರರಂಗದ ಕಷ್ಟಗಳನ್ನು ಅರಿತಿರುವ ವ್ಯಕ್ತಿ ಎಂದು ಅವರು ವಿವರಿಸಿದ್ದಾರೆ.
"ಪ್ರಜ್ವಲ್ ಅವರನ್ನು ಕೆಲವರು ಈಗ ನೋಡಿರಬಹುದು. ಆದರೆ ನಾನು ಅವರನ್ನು ಹಲವು ವರ್ಷಗಳಿಂದ ವೈಯಕ್ತಿಕವಾಗಿ ಮತ್ತು ವೃತ್ತಿ ಪರವಾಗಿ ನೋಡುತ್ತಾ ಬಂದಿದ್ದೇವೆ. ಇಷ್ಟು ವರ್ಷ ಇಲ್ಲದ ಒಂದು ಕಪ್ಪು ಚುಕ್ಕೆ ಈಗ ಏಕೆ ಬರಬೇಕು ಎಂಬ ಪ್ರಶ್ನೆ ನಮ್ಮೆಲ್ಲರನ್ನು ಕಾಡುತ್ತದೆ" ಎಂದು ಮೇಘನಾ ರಾಜ್ ಹೇಳಿದ್ದಾರೆ.
ಪ್ರಜ್ವಲ್ ದೇವರಾಜ್ ಅವರ ಅಭಿಮಾನಿಗಳಲ್ಲಿ ಮನವಿ ಮಾಡಿರುವ ಅವರು, ನಟನ ಸಿನಿಮಾ ಪಯಣ ಮತ್ತು ಸಾಧನೆಗಳನ್ನು ಗಮನದಲ್ಲಿಟ್ಟುಕೊಂಡು ಅವರ ಮೇಲೆ ನಂಬಿಕೆ ಇಡುವಂತೆ ಕೇಳಿಕೊಂಡಿದ್ದಾರೆ.
'ಕರಾವಳಿ' ವಿವಾದಕ್ಕೆ ಗುರುದತ್ ಗಾಣಿಗ ಸ್ಪಷ್ಟನೆ; ಸಂಭಾವನೆ ವಿಚಾರದಲ್ಲಿ ಚಿತ್ರತಂಡದ ಪ್ರತಿಕ್ರಿಯೆ
ನಟ ಪ್ರಜ್ವಲ್ ದೇವರಾಜ್ ಅಭಿನಯದ ಬಹು ನಿರೀಕ್ಷಿತ 'ಕರಾವಳಿ' ಸಿನಿಮಾದ ಸುತ್ತಲಿನ ವಿವಾದಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಗುರುದತ್ ಗಾಣಿಗ ಅವರು ಮಾಧ್ಯಮ ಪ್ರಕಟಣೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಡೆದ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ಅವರು, ನಿರ್ಮಾಣ ಸಂಸ್ಥೆಯ ಅನುಮತಿ ಇಲ್ಲದೆ ಕಾರ್ಯಕ್ರಮಕ್ಕೆ ಪ್ರವೇಶಿಸಿ ಅಡ್ಡಿಪಡಿಸಲು ಪ್ರಯತ್ನಿಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
"ಪ್ರಜ್ವಲ್ ದೇವರಾಜ್ ಅವರಿಗೆ ನೀಡಬೇಕಿದ್ದ ಬಾಕಿ ಹಣವನ್ನು ಘಟನೆ ನಡೆದ ಮರುದಿನವೇ ಅಧಿಕೃತವಾಗಿ ಪಾವತಿಸಲಾಗಿದೆ" ಎಂದು ಗುರುದತ್ ಗಾಣಿಗ ಸ್ಪಷ್ಟಪಡಿಸಿದ್ದಾರೆ. ಚಿತ್ರದ ಕುರಿತು ಉಂಟಾಗಿರುವ ಗೊಂದಲಗಳಿಗೆ ಸ್ಪಷ್ಟನೆ ನೀಡುವ ಉದ್ದೇಶದಿಂದ ಈ ಹೇಳಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ 'ಕರಾವಳಿ' ವಿವಾದ
'ಕರಾವಳಿ' ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ಗಲಾಟೆ ನಡೆಸಿದ ಆರೋಪ ಮತ್ತು ನಿರ್ದೇಶಕರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಗುರುದತ್ ಗಾಣಿಗ ಫಿಲ್ಮ್ಸನ ಕಾರ್ಯನಿರ್ವಾಹಕರು ನೀಡಿದ ದೂರಿನ ಆಧಾರದ ಮೇಲೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ,ದಿಲೀಪ್,ಅವಿನಾಶ್ ಮತ್ತು ನಂದನ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ಕುರಿತು ತನಿಖೆ ಮುಂದುವರೆದಿದೆ.
ಸಂಭಾವನೆ ವಿಚಾರದ ಬಗ್ಗೆ ಪ್ರಜ್ವಲ್ ದೇವರಾಜ್ ಹೇಳಿಕೆ
ಇತ್ತೀಚಿಗೆ ಮಾಧ್ಯಮ ಒಂದಕ್ಕೆ ಪ್ರತಿಕ್ರಿಯಿಸಿದ್ದ ಚಿತ್ರದ ನಾಯಕ ನಟ ಪ್ರಜ್ವಲ್ ದೇವರಾಜ್, ತಮ್ಮ ಸಂಭಾವನೆ ವಿಚಾರವಾಗಿ ಸ್ಪಷ್ಟನೆ ನೀಡಿದ್ದರು, "ನನಗೆ ಸಂಪೂರ್ಣ ಸಂಭಾವನೆ ಬಂದಿಲ್ಲ. ಸಂಭಾವನೆ ಬಿಟ್ಟು ಸಿನಿಮಾ ಮಾಡಿ ಕೊಡುವಷ್ಟು ದೊಡ್ಡ ಮಟ್ಟಕ್ಕೆ ನಾನು ಬೆಳೆದಿಲ್ಲ. ಇದೊಂದು ಕಾರಣ ಹೊರತುಪಡಿಸಿ ಬೇರೆ ಯಾವುದೇ ವಯಕ್ತಿಕ ಕಾರಣ ಇಲ್ಲ" ಎಂದು ಅವರು ಹೇಳಿದ್ದರು.
ಕನ್ನಡ ಚಿತ್ರರಂಗದಲ್ಲಿ ಕುತೂಹಲ ಮೂಡಿಸಿರುವ 'ಕರಾವಳಿ' ಸಿನಿಮಾ ಕರಾವಳಿಯ ಹೆಮ್ಮೆಯ ಕ್ರೀಡೆ ಕಂಬಳದ ಹಿನ್ನೆಲೆಯನ್ನು ಹೊಂದಿದ್ದು, ಇದೇ ಜುಲೈ 24ರಂದು ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ಬಿಡುಗಡೆಗು ಮುನ್ನ ಉಂಟಾಗಿರುವ ವಿವಾದ ಮತ್ತು ಬೆಳವಣಿಗೆಗಳು ಸದ್ಯ ಚರ್ಚೆಯಲ್ಲಿವೆ.