<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಅಸ್ಸಾಂನಲ್ಲಿ ಭೀಕರ ವಿಮಾನ ಅಪಘಾತ : ಜೋರ್ಹತ್ ನಲ್ಲಿ ವಾಯುಪಡೆ ವಿಮಾನ ಪತನ

ಅಸ್ಸಾಂನಲ್ಲಿ ಭೀಕರ ವಿಮಾನ ಅಪಘಾತ :  ಜೋರ್ಹತ್ ನಲ್ಲಿ ವಾಯುಪಡೆ ವಿಮಾನ ಪತನ
Summary: A horrific tragedy has occurred in Assam's Jorhat as an Air Force plane crashed. Five crew members were killed in the incident, while the co-pilot was reported to have escaped. Rescue operations are ongoing.

Belagavi news:

ಭಾರತೀಯ ವಾಯುಪಡೆ (IAF) AN - 32 ಸಾರಿಗೆ ವಿಮಾನ ಅಸ್ಸಾಂನ ಜೋರ್ಹತ್ ವಾಯುನೆಲೆಯಲ್ಲಿ ಪತನಗೊಂಡು ಭೀಕರ ದುರಂತ ಸಂಭವಿಸಿದೆ. ಈ ಅಪಘಾತದಲ್ಲಿ ಐವರು ವಾಯುಪಡೆ ಸಿಬ್ಬಂದಿ ದುರ್ಮರಣ ಹೊಂದಿದ್ದಾರೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ.

Jorhat Air Force Station ಪ್ರದೇಶದಲ್ಲಿ ನಡೆದ ಈ ಘಟನೆ ವೇಳೆ ರಷ್ಯಾ ನಿರ್ಮಿತ AN - 32 ವಿಮಾನವು ತಾಂತ್ರಿಕ ದೋಷ ಅಥವಾ ಹವಾಮಾನ ವೈಪರಿತ್ಯದ ಕಾರಣದಿಂದ ಪತನಗೊಂಡಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದು ಬಂದಿದೆ. ಈ ವಿಮಾನವನ್ನು ದೀರ್ಘಕಾಲದಿಂದ ಸರಕು ಮತ್ತು ಸಿಬ್ಬಂದಿ ಸಾಗಣೆಗೆ ಬಳಸಲಾಗುತ್ತಿತ್ತು.

ವಾಯುಪಡೆಯ ಅಧಿಕೃತ ಹೇಳಿಕೆಯ ಪ್ರಕಾರ, ಅಪಘಾತದಲ್ಲಿ ಐವರು ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಹ-ಪೈಲೆಟ್ ಅದೃಷ್ಟಾವಶಾತ್ ಬದುಕುಳಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಬಗ್ಗೆ ಭಾರತೀಯ ವಾಯುಪಡೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ತಾಂತ್ರಿಕ ಮತ್ತು ಕಾರ್ಯಾಚರಣ ತಂಡಗಳು ಪರಿಶೀಲನೆ ನಡೆಸುತ್ತಿವೆ.

ಈ ದುರಂತವು ವಾಯುಪಡೆಯ ಕಾರ್ಯಾಚರಣೆ ವಲಯದಲ್ಲಿ ಆಘಾತ ಮೂಡಿಸಿದ್ದು, ದೇಶಾದ್ಯಂತ ಶೋಕ ವ್ಯಕ್ತವಾಗಿದೆ.

ಅಸ್ಸಾಂ ಜೋರ್ಹತ್ AN - 32 ವಿಮಾನ ದುರಂತ: 'ಕೋರ್ಟ್ ಆಫ್ ಎನ್ಕ್ವಯರಿ'ಗೆ ಆದೇಶ:

ಭಾರತೀಯ ವಾಯುಪಡೆ AN -32 ಸಾರಿಗೆ ವಿಮಾನ ಪತನಗೊಂಡ ಭೀಕರ ದುರಂತದ ಬಗ್ಗೆ ನಿಖರ ಕಾರಣ ಪತ್ತೆಹಚ್ಚಲು 'ಕೋರ್ಟ್ ಆಫ್ ಎನ್ಕ್ವೈರಿ' ಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೋರ್ಹತ್ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ ಸುಮಾರು 10 ಗಂಟೆಗೆ ವೇಳೆಗೆ ಹರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಐಎಎಫ್ ಮಾಹಿತಿ ನೀಡಿದೆ. ಅಪಘಾತದ ನಂತರ ಸ್ಥಳದಲ್ಲಿ ರಕ್ಷಣಾ ಹಾಗೂ ಅಪಘಾತ ನಿರ್ವಹಣಾ ಸಿಬ್ಬಂದಿ ತಕ್ಷಣವೇ ಧಾವಿಸಿದ್ದು, ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ.

ವಿಮಾನವು ಟೇಕ್ ಆಫ್ ಸಮಯದಲ್ಲೊ ಅಥವಾ ಲ್ಯಾಂಡಿಂಗ್ ಮಾಡಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಶಂಕಿಸಲಾಗುತ್ತಿದೆ. ಪತನದ ತಕ್ಷಣವೇ ವಿಮಾನದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಇಂಧನ ಟ್ಯಾಂಕ್ ತೋಟಗೊಂಡ ಪರಿಣಾಮ ವಿಮಾನದ ಬಹುತೇಕ ಭಾಗ ಸುಟ್ಟು ಭಸ್ಮವಾಗಿದೆ ಎಂದು ವರದಿಯಾಗಿದೆ.

ಈ ಭೀಕರ ದುರಂತದಲ್ಲಿ ಐಎಎಫ್ ಐದು ಮಂದಿ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಸ್ಕ್ವಾಡ್ರನ್ ಲೀಡರ್ ಪ್ರಶಾಂತ್ ಸಿಂಗ್, ಫ್ಲೈಟ್ ಲೆಫ್ಟಿನೆಂಟ್ ಶುಭಂ ಕುಮಾರ್, ಸರ್ಜೆಂಟ್ ಜಿತೇಂದ್ರ ಶರ್ಮಾ, ಅಗ್ನಿವೀರವಾಯು ಖೇಮಾರಾಮ್ ಕುಮಾವತ್ ಮತ್ತು ದಾನಿಶ್ ಆಲಂ ಎಂದು ಗುರುತಿಸಲಾಗಿದೆ.

ಸಹ ಪೈಲೆಟ್ ಹಾಗೂ ಕೆಲ ಸಿಬ್ಬಂದಿ ಕೂಡ ಇದ್ದರು, ಹೆಚ್ಚಿದ ಕಾರಣ ಉಳಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸುವೆ. ಭಾರತೀಯ ವಾಯುಪಡೆ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಈ ದುಃಖದ ಸಮಯದಲ್ಲಿ ಅವರೊಂದಿಗೆ ದೃಢವಾಗಿ ನಿಲ್ಲುವುದಾಗಿ ತಿಳಿಸಿದೆ.

ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ತಾಂತ್ರಿಕ ಹಾಗೂ ಕಾರ್ಯಾಚರಣೆ ತಜ್ಞರ ತಂಡಗಳು ಮುಂದಿನ ತನಿಕೆ ನಡೆಸಲಿವೇ ಎಂದು ಐಎಎಫ್ ಸ್ಪಷ್ಟಪಡಿಸಿದೆ.

ಜೋರ್ಹತ್ AN -32 ವಿಮಾನ ದುರಂತ: ಬೆಂಕಿ, ಹೋಗಿ ದೃಶ್ಯಗಳು ವೈರಲ್:

ಅಸ್ಸಾಂನ ಜೋರ್ಹತ್ ವಾಯು ನೆಲೆಯಲ್ಲಿ ಸಂಭವಿಸಿದ ಭಾರತೀಯ ವಾಯು ಪಡೆ AN - 32 ವಿಮಾನ ಪತನದ ನಂತರದ ಪರಿಸ್ಥಿತಿಯನ್ನು ತೋರಿಸುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಅಪಘಾತದ ಸ್ಥಳದಿಂದ ದಟ್ಟವಾದ ಹೊಗೆ ಮೇಲೆಳುತ್ತಿರುವ ದೃಶ್ಯಗಳು ಕಾಣಿಸಿಕೊಂಡಿದ್ದು, ರಕ್ಷಣಾ ತಂಡಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ, ತುರ್ತುಕಾರ್ಯಚರಣೆಯನ್ನು ಆರಂಭಿಸಿವೆ.

ಜೋರ್ಹತ್ ವಿಮಾನ ನಿಲ್ದಾಣದಲ್ಲಿ ನಡೆದ ಈ ದುರಂತದಲ್ಲಿ ವಿಮಾನ ನೆಲಕ್ಕೆ ಅಪ್ಪಳಿಸಿದ ತಕ್ಷಣವೇ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಇಂದಿನ ಟ್ಯಾಂಕ್ ಸ್ಫೋಟದಿಂದ ಪರಿಸ್ಥಿತಿ ತೀವ್ರಗೊಂಡಿದೆ ಎಂದು ವರದಿಗಳು ತಿಳಿಸಿವೆ. ಘಟನೆಯ ನಂತರ ಕೆಲವೇ ನಿಮಿಷಗಳಲ್ಲಿ ವಿಮಾನದ ಬಹುತೇಕ ಭಾಗ ಸುಟ್ಟು ಭಸ್ಮವಾಗಿದೆ.

AN - 32 ಎಂಬುದು ಸೋವಿಯತ್ ಒಕ್ಕೂಟದ ಕಾಲದ ಅವಳಿ - ಎಂಜಿನ್ ಹೊಂದಿರುವ ಟರ್ಬೋಪ್ರಾಪ್ ಸಾರಿಗೆ ವಿಮಾನವಾಗಿದ್ದು, 1980 ರ ದಶಕದಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿತು. ಕಠಿಣ ಭೂಪ್ರದೇಶ ಹಾಗೂ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲೂ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾದ ಈ ವಿಮಾನವನ್ನು ಸೈನಿಕರು, ಸರಕು ಮತ್ತು ಮಿಲಿಟರಿ ಉಪಕರಣಗಳ ಸಾಗಣಿಗೆ ವ್ಯಾಪಕವಾಗಿ ಬಳಸಲಾಗುತ್ತಿದೆ.

ಈ ವಿಮಾನವು ಸುಮಾರು 40 ರಿಂದ 50 ಪ್ರಯಾಣಿಕರನ್ನು ಅಥವಾ 7.5 ಟನ್ ಸರಕನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

IAF ಫ್ಲಿಟ್ ಮತ್ತು ಆಧುನಿಕರಣ:

ಭಾರತೀಯ ವಾಯುಪಡೆಯು ಪ್ರಸ್ತುತ ಸುಮಾರು 105 AN-32 ವಿಮಾನಗಳ ಫ್ಲೀಟ್ ಅನ್ನು ನಿರ್ವಹಿಸುತ್ತಿದ್ದು, ಅವುಗಳಲ್ಲಿ ಹಲವನ್ನು ಈಗಾಗಲೇ ಆಧುನಿಕರಿಸಲಾಗಿದೆ. ಸುಮಾರು 35 ವಿಮಾನಗಳನ್ನು ಉಕ್ರೇನ್ ಮೂಲದ 'ಉಕ್ರ್ ಸ್ಪೆಟ್ಸ್ ಎಕ್ಸ್ಪೋರ್ಟ್' ಸಂಸ್ಥೆಯ ಮೂಲಕ ಮೇಲ್ದರ್ಜೆಗೆ ಏರಿಸಲಾಗಿದ್ದು, ಉಳಿದ ವಿಮಾನಗಳ ಆಧುನಿಕರಣ ಕಾರ್ಯವನ್ನು ಭಾರತದಲ್ಲಿ ಸ್ವದೇಶಿಯಾಗಿ ಕೈಗೊಳ್ಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ AN -32ವಿಮಾನವು ವಾಯುಪಡೆಯ ಪ್ರಮುಖ ಸಾರಿಗೆ ಘಟಕಗಳಲ್ಲಿ ಒಂದಾಗಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದೆ. ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರೆದಿದ್ದು, ರಕ್ಷಣಾ ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

Also Read:

ಹೊಸ ತಿರುಗು: ಗೃಹ ಇಲಾಖೆ ಆದೇಶ : ಪ್ರಣೀತ್ ಮೋರೆಗೆ ಎದುರಾಯಿತು ಹೊಸ ಸಂಕಷ್ಟ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online