BELAGAVI NEWS :
ಖ್ಯಾತ ಸ್ಟ್ಯಾಂಡ್ ಅಪ್ ಕಮಿಡಿಯನ್ ಪ್ರಣೀತ್ ಮೋರೆ ಇದೀಗ ಬಾರಿ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಅವರ ಹಾಸ್ಯ ಕಾರ್ಯಕ್ರಮಗಳಲ್ಲಿ ಅಶ್ಲೀಲ ಮತ್ತು ವಿಕೃತ ವಿಷಯಗಳನ್ನು ಬಳಸಲಾಗಿದೆ ಎಂಬ ಆರೋಪಗಳು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಕೆಲವು ವಿಡಿಯೋ ಕ್ಲಿಪ್ ಗಳು ಸಾರ್ವಜನಿಕರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿವೆ.
ವಿಶೇಷವಾಗಿ, ಮೃತ ದೇಹದ ಖಾಸಗಿ ಭಾಗಗಳ ಕುರಿತು ವೈದ್ಯರೊಬ್ಬರ ಹೆಸರನ್ನು ಉಲ್ಲೇಖಿಸಿ ಮಾತನಾಡಿರುವ ಹೇಳಿಕೆ ಹಾಗೂ ಬಿರಿಯಾನಿಗೆ ಸಂಬಂಧಿಸಿದ ಕಥನಗಳು ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ವಿಷಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಹಲವರು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ವಿವಾದ ಗಂಭೀರ ಸ್ವರೂಪ ಪಡೆದ ಹಿನ್ನೆಲೆ, ಗೃಹ ಇಲಾಖೆ ಪ್ರಕಾರದ ಕುರಿತು ತನಿಕೆಗೆ ಆದೇಶಿಸಿದೆ ಎನ್ನಲಾಗಿದೆ. ಇದರ ಜೊತೆಗೆ ಮಹಿಳಾ ಆಯೋಗವು ನೋಟಿಸ್ ಜಾರಿ ಮಾಡಿರುವುದಾಗಿ ವರದಿಯಾಗಿದೆ. ಈ ಬೆಳವಣಿಗೆಗಳ ನಡುವೆ ಪ್ರಣೀತ ಮೋರೆ ಕಾನೂನು ಸಂಕಷ್ಟವನ್ನು ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಒಂದೆಡೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಸಾರ್ವಜನಿಕ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯ ಕುರಿತು ಪ್ರಶ್ನೆಗಳು ಎದ್ದಿವೆ. ಪ್ರಣೀತ್ ಮೋರೆ ವಿರುದ್ಧದ ಈ ವಿವಾದ ಈಗ ರಾಜ್ಯಾದ್ಯಂತ ಗಮನ ಸೆಳೆದಿದ್ದು, ತನಿಖೆಯ ಫಲಿತಾಂಶದತ್ತ ಎಲ್ಲರ ಕಣ್ಣು ನೆಟ್ಟಿದೆ.
ವೈರಲ್ ಆಗಿರುವ ವಿಡಿಯೋಗಳಲ್ಲಿ ಕೆಇಎಂ ಆಸ್ಪತ್ರೆಯ ಮಹಿಳಾ ವೈದ್ಯರೊಬ್ಬರು ಮೃತ ದೇಹದ ಖಾಸಗಿ ಭಾಗಗಳ ಬಗ್ಗೆ ನೇರವಾಗಿ ನೀಡಿರುವ ಆಘಾತಕಾರಿ ಹೇಳಿಕೆ ಸಾರ್ವಜನಿಕರ ಆಕ್ರೋಶಕ ಕಾರಣವಾಗಿದೆ. ಇದರೊಂದಿಗೆ ಬಿರಿಯಾನಿಯ ಕಥೆಯು ಅಷ್ಟೇ ಆಘಾತಕಾರಿಯಾಗಿದ್ದು, ಇವೆಲ್ಲವೂ ಹಾಸ್ಯದ ಹೆಸರಿನಲ್ಲಿ ನಡೆಯುತ್ತಿರುವ ವಿಕೃತಿ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಧ್ಯ ಈ ವಿವಾದಾತ್ಮಕ ಹೇಳಿಕೆ ನೀಡಿದ ಮಹಿಳಾ ವೈದ್ಯರ ವಿರೋಧವು ಕ್ರಮ ಕೈಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಸ್ಟ್ಯಾಂಡ್ ಅಪ್ ಕಾಮಿಡಿಯನ್ ಪ್ರಣೀತ್ ಮೋರೆ ವಿರುದ್ಧದ ವಿವಾದದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಬೆಳವಣಿಗೆಯನ್ನು ಮಹಾರಾಷ್ಟ್ರ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣಕ್ಕೆ ಹೊಸ ತಿರುಗು ಸಿಕ್ಕಿದೆ. ಗೃಹ ಇಲಾಖೆಯ ರಾಜ್ಯ ಸಚಿವರ ಮಾಹಿತಿ ಪ್ರಕಾರ, ಪ್ರಣೀತ್ ಮೋರೆ ಅವರು ಯೂಟ್ಯೂಬ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಇತ್ತೀಚಿನ ಎರಡು ವಿಡಿಯೋಗಳಷ್ಟೇ ಅಲ್ಲ, ಅವರ ಹಿಂದಿನ ಎಲ್ಲಾ ವಿಡಿಯೋಗಳ ವಿಷಯವನ್ನು ಸೈಬರ್ ಪೋಲೀಸರು ಪರಿಶೀಲನೆಗೆ ಒಳಪಡಿಸಲಿದ್ದಾರೆ.
ಈ ನಿರ್ಧಾರವು ಪ್ರಣೀತ್ ಮೋರೆ ಅವರಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದ್ದು, ತನಿಕೆಯ ವ್ಯಾಪ್ತಿ ಮತ್ತಷ್ಟು ವಿಸ್ತರಿಸಿದೆ. ಅವರ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಗೂ ವಿಕೃತ ವಿಷಯಗಳಿವೆ ಎಂಬ ಆರೋಪಗಳ ಹಿನ್ನೆಲೆ, ಈಗ ಅಧಿಕಾರಿಗಳು ಸಂಪೂರ್ಣ ಡಿಜಿಟಲ್ ಚಟುವಟಿಕೆಗಳ ಮೇಲು ನಿಗಾ ವಹಿಸಿದ್ದಾರೆ.
ಇದಕ್ಕೂ ಮುನ್ನ ಮಹಿಳಾ ಆಯೋಗವು ಪ್ರಣೀತ್ ಮೋರೆಯವರಿಗೆ ನೋಟಿಸ್ ಜಾರಿ ಮಾಡಿದ್ದು, ಆರೋಪಿಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ಕೇಳಿದೆ. ಮತ್ತೊಂದೆಡೆ ಸೈಬರ್ ಸೇಲ್ ಕೂಡ ಪ್ರತ್ಯೇಕ ತನಿಖೆ ಆರಂಭಿಸಿರುವುದಾಗಿ ವರದಿಯಾಗಿದೆ. ಈ ಬೆಳವಣಿಗೆಗಳು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಇಂಥ ಅಶ್ಲೀಲ ಮತ್ತು ವಿವಾದಾತ್ಮಕ ಕಾರ್ಯಕ್ರಮಗಳನ್ನು ಸಮಾಜದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಆಗ್ರಹವೂ ಬಲವಾಗಿ ಕೇಳಿ ಬರುತಿದೆ. ಇನ್ನೊಂದೆಡೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಹಾಸ್ಯದ ಮಿತಿಗಳ ಕುರಿತು ಚರ್ಚೆಗಳು ಕೂಡ ಜೋರಾಗಿದೆ.
ಪ್ರಣೀತ್ ಮೋರೆ ವಿರುದ್ಧದ ಈ ವಿವಾದ ಮುಂದಿನ ದಿನಗಳಲ್ಲಿ ಯಾವ ಹೊಸ ತಿರುಗು ಪಡೆಯಲಿದೆ? ಸೈಬರ್ ಪೋಲೀಸರ ತನಿಕೆಯಲ್ಲಿ ಏನು ಬಹಿರಂಗವಾಗಲಿದೆ? ಮಹಿಳಾ ಆಯೋಗದ ಮುಂದಿನ ಕ್ರಮವೇನು? ಎಂಬ ಪ್ರಶ್ನೆಗಳು ಈಗ ಸಾಮಾಜಿಕ ವಲಯದಲ್ಲಿ ಕುತೂಹಲ ಮೂಡಿಸಿವೆ. ಈ ಪ್ರಕಾರದ ಪ್ರತಿಯೊಂದು ಬೆಳವಣಿಗೆಯು ಈಗ ಬಾರಿ ಗಮನ ಸೆಳೆಯುತ್ತಿದೆ.
ಈ ಬಾರಿ ಪ್ರಕರಣವನ್ನು ಮಹಾರಾಷ್ಟ್ರ ಗೃಹಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ನೇರವಾಗಿ ತನಿಖೆಗೆ ಆದೇಶಿಸಿರುವುದು ದೊಡ್ಡ ಬೆಳವಣಿಗೆಯಾಗಿ ಕಾಣಲಾಗಿದೆ. ಕೇವಲ ಸಾಮಾಜಿಕ ಜಾಲತಾಣಗಳ ಟೀಕೆ ಅಥವಾ ಸಾರ್ವಜನಿಕ ಆಕ್ರೋಶಕ್ಕೆ ಸೀಮಿತವಾಗದೆ, ಇದೀಗ ಸರ್ಕಾರಿ ಮಟ್ಟದಲ್ಲೇ ಪರಿಶೀಲನೆ ಆರಂಭವಾಗಿರುವುದರಿಂದ ಪ್ರಕರಣದ ಮಹತ್ವ ಹೆಚ್ಚಾಗಿದೆ. ಸೈಬರ್ ಪೊಲೀಸರು ಪ್ರಣೀತ್ ಮೋರೆ ಅವರ ಇತ್ತೀಚಿನ ವಿಡಿಯೋಗಳ ಜೊತೆಗೆ ಹಳೆ ವಿಡಿಯೋಗಳನ್ನು ಪರಿಶೀಲನೆಗೆ ಒಳಪಡಿಸಿರುವುದಾಗಿ ತಿಳಿದು ಬಂದಿದೆ. ಮಹಿಳಾ ಆಯೋಗದ ನೋಟಿಸ್, ಸೈಬರ್ ಸೇಲ್ ತನಿಖೆ ಹಾಗೂ ಗೃಹ ಇಲಾಖೆಯ ಹಸ್ತಕ್ಷೇಪದಿಂದ ಪ್ರಣೀತ್ ಮೋರೆ ಅವರ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಗಿದೆ.
ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ, ಪ್ರಣೀತ್ ಮೋರೆ ಅವರು ಕಾನೂನು ಸವಾಲುಗಳನ್ನು ಎದುರಿಸುವ ಸಾಧ್ಯತೆ ಹೆಚ್ಚಾಗಿದೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಜೋರಾಗಿದೆ. ತನಿಖೆಯ ಅಂತಿಮ ವರದಿ ಮತ್ತು ಅಧಿಕಾರಿಗಳ ಮುಂದಿನ ಕ್ರಮಗಳು ಈ ಪ್ರಕರಣದ ಭವಿಷ್ಯವನ್ನು ನಿರ್ಧರಿಸಲಿದೆ.
ಸದ್ಯಕ್ಕೆ ಈ ವಿವಾದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಹಾಸ್ಯದ ಮಿತಿಗಳು, ಅಭಿವ್ಯಕ್ತಿ ಸ್ವತಂತ್ರ ಮತ್ತು ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಪ್ರಣೀತ್ ಮೋರೆ ವಿರುದ್ಧದ ಈ ಪ್ರಕರಣ ಮುಂದಿನ ದಿನಗಳಲ್ಲಿ ಇನ್ನಷ್ಟು ಮಹತ್ವದ ತಿರುಗು ಪಡೆಯುವ ಸಾಧ್ಯತೆ ಇದೆ.
Also Read:
ಸಂಪೂರ್ಣ ಜವಾಬ್ದಾರಿ ನೀಡಿದರೆ ಉತ್ತಮ ಫಲಿತಾಂಶ ಸಾಧ್ಯ: ಖಾತೆ ಗೊಂದಲ ಕುರಿತು ಕೃಷ್ಣ ಬೈರೇಗೌಡ ಪ್ರತಿಕ್ರಿಯೆ