H16 News
Logo

By Rakshita | Published on November 5, 2025

Image Not Found
Education / November 5, 2025

ಎಸ್ಎಸ್ಎಲ್ ಸಿ, ಪಿಯುಸಿ ಪರೀಕ್ಷೆ 1 ಮತ್ತು 2ರ ಅಂತಿಮ ವೇಳಾಪಟ್ಟಿ ಪ್ರಕಟ

ಎಸ್ಎಸ್ಎಲ್ಸಿ ಪರೀಕ್ಷೆ ಮಾರ್ಚ್ 18ರಿಂದ ಮತ್ತು ಪಿಯುಸಿ ಪರೀಕ್ಷೆ 1 ಮಾರ್ಚ್ 28ರಿಂದ ಆರಂಭವಾಗಲಿದೆ.

ಬೆಂಗಳೂರು: 2025-26ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು ಪರೀಕ್ಷೆ 2ರ ಅಂತಿಮ ವೇಳಾಪಟ್ಟಿಯನ್ನು ಇಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. 2026ರ ಮಾರ್ಚ್ 18ರಿಂದ ಏಪ್ರಿಲ್ 2ರ ವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ 1ರ ಪರೀಕ್ಷೆಗಳು ನಡೆಯಲಿವೆ. ಪಿಯುಸಿ ಪರೀಕ್ಷೆ 1ರ ಪರೀಕ್ಷೆ 2026ರ ಮಾರ್ಚ್ 28ರಿಂದ ಮಾರ್ಚ್ 17ರ ವರೆಗೆ ನಡೆಯಲಿದೆ. ಪರೀಕ್ಷೆ 2ರ ಪರೀಕ್ಷೆ ಏಪ್ರಿಲ್ 25ರಿಂದ ಮೇ 9ರ ವರೆಗೆ ನಡೆಯಲಿದೆ. ಎಸ್ಎಸ್ಎಲ್ಸಿ ಪರೀಕ್ಷೆಯ ವೇಳಾಪಟ್ಟಿ ಹೀಗಿದೆ: ಮಾರ್ಚ್ 18: ಪ್ರಥಮ ಭಾಷೆ ಮಾರ್ಚ್ 23: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ ಮಾರ್ಚ್ 25: ದ್ವಿತೀಯ ಭಾಷೆ ಮಾರ್ಚ್ 28: ಗಣಿತ ಮಾರ್ಚ್ 30: ತೃತೀಯ ಭಾಷೆ/ಎನ್ಎಸ್ಕ್ಯೂಎಫ್ ವಿಷಯಗಳು ಏಪ್ರಿಲ್ 1: ಜಿಟಿಎಸ್ ವಿಷಯಗಳು ಏಪ್ರಿಲ್ 2: ಸಮಾಜ ವಿಜ್ಞಾನ ದ್ವಿತೀಯ ಪಿಯುಸಿ ಪರೀಕ್ಷೆ 1ರ ವೇಳಾಪಟ್ಟಿ ಹೀಗಿದೆ: ಫೆಬ್ರವರಿ 28: ಕನ್ನಡ, ಅರೇಬಿಕ್ ಮಾರ್ಚ್ 2: ಭೂಗೋಳಶಾಸ್ತ್ರ, ಅಂಕಿಅಂಶಗಳು, ಮನೋವಿಜ್ಞಾನ ಮಾರ್ಚ್ 3: ಇಂಗ್ಲೀಷ್ ಮಾರ್ಚ್ 4: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಮಾರ್ಚ್ 5: ಇತಿಹಾಸ, ಗೃಹ ವಿಜ್ಞಾನ ಮಾರ್ಚ್ 6: ಭೌತಶಾಸ್ತ್ರ ಮಾರ್ಚ್ 7: ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂ ವಿಜ್ಞಾನ ಮಾರ್ಚ್ 9: ರಸಾಯನಶಾಸ್ತ್ರ, ಶಿಕ್ಷಣ, ಮೂಲ ಗಣಿತ ಮಾರ್ಚ್ 10: ಅರ್ಥಶಾಸ್ತ್ರ ಮಾರ್ಚ್ 11: ತರ್ಕ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್,, ಕಂಪ್ಯೂಟರ್ ವಿಜ್ಞಾನ ಮಾರ್ಚ್ 12: ಹಿಂದಿ ಮಾರ್ಚ್ 13: ರಾಜ್ಯಶಾಸ್ತ್ರ ಮಾರ್ಚ್ 14: ಲೆಕ್ಕಪತ್ರ ನಿರ್ವಹಣೆ ಮಾರ್ಚ್ 16: ಸಮಾಜಶಾಸ್ತ್ರ, ಗಣಿತ ಮಾರ್ಚ್ 17: ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ ದ್ವೀತಿಯ ಪಿಯುಸಿ ಪರೀಕ್ಷೆ 2ರ ವೇಳಾಪಟ್ಟಿ ಹೀಗಿದೆ: ಏಪ್ರಿಲ್ 25: ಕನ್ನಡ, ಅರೇಬಿಕ್ ಏಪ್ರಿಲ್ 27: ಐಚ್ಫಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕಶಾಸ್ತ್ರ ಜೀವಶಾಸ್ತ್ರ ಏಪ್ರಿಲ್ 28: ರಾಜ್ಯಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ ಏಪ್ರಿಲ್ 29: ಗಣಿತ, ಗೃಹ ವಿಜ್ಞಾನ, ಮೂಲ ಗಣಿತ ಏಪ್ರಿಲ್ 30: ಅರ್ಥಶಾಸ್ತ್ರ ಮೇ 2: ಇತಿಹಾಸ, ರಸಾಯನಶಾಸ್ತ್ರ ಮೇ 4: ಇಂಗ್ಲಿಷ್ ಮೇ 5: ಹಿಂದಿ ಮೇ 6: ವ್ಯವಹಾರ ಅಧ್ಯಯನ, ಭೌತಶಾಸ್ತ್ರ, ಶಿಕ್ಷಣ ಶಾಸ್ತ್ರ ಮೇ 7: ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ ಮೇ 8: ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೂಗರ್ಭ ಶಾಸ್ತ್ರ ಮೇ 9: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಮೇ 9: ಹಿಂದೂಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್, ರಿಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ ಇನ್ನಷ್ಟು ಓದಿರಿ : ಭಾರತೀಯ ಮೂಲದ ಮಮ್ದಾನಿ ನ್ಯೂಯಾರ್ಕ್ ನೂತನ ಮೇಯರ್
Sponsored Ads
image computer academy
image computer academy
image computer academy
image computer academy
LANDSCAPING IN CAD
LANDSCAPING IN CAD
HSRNEWS
HSRNEWS

Related News

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy