ದಟ್ಟವಾದ ಆರೋಗ್ಯಕರ ಕೂದಲುಗಳಿಗಾಗಿ ಈ ನಿಯಮಗಳನ್ನು ಅನುಸರಿಸಿ
ಕೂದಲು ಉದ್ದ ಹಾಗೂ ದಪ್ಪವಾಗಿ ಬೆಳೆಯಬೇಕಾದರೆ ಈ ಅಭ್ಯಾಸಗಳನ್ನು ಪಾಲಿಸುವಂತೆ ಸೌಂದರ್ಯ ತಜ್ಞರು ತಿಳಿಸುತ್ತಾರೆ.
ಪ್ರತಿದಿನ ಕೆಲವು ಅಭ್ಯಾಸಗಳನ್ನು ಅನುಸರಿಸಿದರೆ ಕೂದಲು ದಪ್ಪ ಮತ್ತು ಬಲವಾಗಿ ಬೆಳೆಯುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ವಾಯು ಮಾಲಿನ್ಯ, ಗಡಸು ನೀರಿನ ಬಳಕೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕೆಲವು ಮಹಿಳೆಯರ ಕೂದಲು ಉದುರುತ್ತವೆ. ಆದರೆ, ಕೆಲವು ನಿಯಮಗಳನ್ನು ಪಾಲಿಸಿದರೆ ಕೂದಲಿನ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.
ಪ್ರೋಟೀನ್:
ಕೂದಲನ್ನು ಚೆನ್ನಾಗಿ ಬಾಚಿಕೊಂಡ ಬಳಿಕ ಅದನ್ನು ಹೆಣೆಯುತ್ತೇವೆ. ಆದರೆ ಅದಕ್ಕೂ ಮುಂಚೆ ಕೂದಲಿನ ಕಿರುಚೀಲಗಳಿಗೆ ಸ್ವಲ್ಪ ತೆಂಗಿನಕಾಯಿ, ಬಾದಾಮಿ ಅಥವಾ ಜೊಜೊಬಾ ಎಣ್ಣೆಯನ್ನು ಹಚ್ಚಿ 5ರಿಂದ 10 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಇದು ಕೂದಲನ್ನು ಪೋಷಿಸುತ್ತದೆ ಹಾಗೂ ದಪ್ಪವಾಗಿ ಬೆಳೆಯುತ್ತದೆ.
ಬೆಳಿಗ್ಗೆ ತಿನ್ನುವ ಉಪಹಾರವು ಹಸಿವು ನೀಗಿಸುವುದಲ್ಲದೆ, ಕೂದಲು ದಪ್ಪವಾಗಿ ಬೆಳೆಯುವಂತೆ ಮಾಡುತ್ತದೆ. ಆದರೆ, ಇದಕ್ಕಾಗಿ ಪ್ರೋಟೀನ್ ಸಮೃದ್ಧವಾಗಿರುವ ಮೊಸರು, ನಟ್ಸ್, ಶೇಂಗಾ, ಬೆಣ್ಣೆ, ಮೊಟ್ಟೆಗಳು ಮತ್ತು ಪ್ರೋಟೀನ್ ಭರಿತವಾದ ಆಹಾರಗಳನ್ನು ತೆಗೆದುಕೊಳ್ಳಬೇಕು. ಅಲ್ಲದೇ ಒತ್ತಡವು ಆರೋಗ್ಯಕ್ಕೆ ಮಾತ್ರವಲ್ಲದೆ ಕೂದಲಿನ ಆರೋಗ್ಯಕ್ಕೂ ಹಾನಿ ಮಾಡುತ್ತದೆ. ಈ ಸಮಸ್ಯೆಯನ್ನು ತೊಡೆದುಹಾಕಲು ಬೆಳಿಗ್ಗೆ ವ್ಯಾಯಾಮ ಮಾಡುವುದು ಬಹಳ ಮುಖ್ಯ. ಇದರ ಭಾಗವಾಗಿ ವಾಕಿಂಗ್, ಯೋಗ ಮತ್ತು ಧ್ಯಾನವನ್ನು ಮಾಡಬೇಕು. ಇವು ಕೂದಲಿನ ಕಿರುಚೀಲಗಳಿಗೆ ರಕ್ತ ಪರಿಚಲನೆ ಸುಧಾರಿಸುತ್ತದೆ ಹಾಗೂ ಕೂದಲು ದಪ್ಪವಾಗಿ ಬೆಳೆಯುವಂತೆ ಮಾಡುತ್ತದೆ.
ಕಡಿಮೆ ತಾಪಮಾನ:
ಕೂದಲನ್ನು ಬಾಚಲು ದಪ್ಪ ಬಾಚಣಿಗೆ ಬದಲು ಮರದ ಬಾಚಣಿಗೆಯನ್ನು ಬಳಸುವುದು ಸೂಕ್ತ. ಇದು ಕೂದಲು ಉದುರುವಿಕೆಯ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ. ಸ್ನಾನಕ್ಕೆ ಉಗುರು ಬೆಚ್ಚಗಿನ ನೀರನ್ನು ಬಳಸುವುದು ಹಾಗೂ ಸಲ್ಫೇಟ್ ಮುಕ್ತ ಶಾಂಪೂಗಳನ್ನು ಬಳಸುವುದು ಉತ್ತಮ. ಕೂದಲನ್ನು ಒಣಗಿಸಲು ಬ್ಲೋ ಡ್ರೈಯರ್ಗಳನ್ನು ಬಳಸುವವರು, ಕೂದಲನ್ನು ಸುರುಳಿಯಾಗಿ ಇಲ್ಲವೇ ನೇರವಾಗಿಡಲು ಹೇರ್ ಸ್ಟೈಲಿಂಗ್ ಪರಿಕರಗಳನ್ನು ಬಳಸುವವರು ತಾಪಮಾನ ಕಡಿಮೆ ಮಾಡಲು ಸಲಹೆ ನೀಡಲಾಗುತ್ತದೆ. ಇದಲ್ಲದೆ, ಇವುಗಳನ್ನು ಬಳಸುವ ಮೊದಲು ಹೇರ್ ಸ್ಪ್ರೇ ಅಥವಾ ಸೀರಮ್ ಅನ್ನು ಬಳಸಲು ಸಲಹೆ ನೀಡಲಾಗುತ್ತದೆ.
ಹೊರಗೆ ಹೋಗುವಾಗ: ಸೂರ್ಯನ ಬಿಸಿಲಿನಿಂದ ಚರ್ಮವು ಸುಡುವುದನ್ನು ತಡೆಯಲು ನಾವು ಸನ್ಸ್ಕ್ರೀನ್ ಲೋಷನ್ ಹಚ್ಚುವಂತೆಯೇ, ಕೂದಲಿನ ಆರೋಗ್ಯಕ್ಕೆ ಹಾನಿಯಾಗದಂತೆ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ. ಹೊರಗೆ ಹೋಗುವಾಗ, ನಾವು ಕೂದಲಿನ ಸೀರಮ್ ಬಳಸಬೇಕು, ಟೋಪಿ ಧರಿಸಬೇಕು ಹಾಗೂ ನಮ್ಮ ಕೂದಲನ್ನು ಸಂಪೂರ್ಣವಾಗಿ ಮುಚ್ಚಲು ಸ್ಕಾರ್ಫ್ ಕಟ್ಟಬೇಕು. ಇವುಗಳು ನಮ್ಮ ಕೂದಲನ್ನು ಮಾಲಿನ್ಯದಿಂದ ರಕ್ಷಿಸುತ್ತವೆ. ಇವೆಲ್ಲವೂ ನಾವು ನಿಯಮಿತವಾಗಿ ಅನುಸರಿಸಿದರೆ ಮಾತ್ರ ಪರಿಣಾಮಕಾರಿಯಾಗುತ್ತವೆ.
ಉತ್ತಮ ಅಭ್ಯಾಸಗಳು:
ನಮ್ಮ ನೆಚ್ಚಿನ ಚಟುವಟಿಕೆಗಳಿಗೆ ಬೆಳಿಗ್ಗೆ ಸ್ವಲ್ಪ ಸಮಯವನ್ನು ಮೀಸಲಿಟ್ಟರೆ ನಾವು ಇಡೀ ದಿನವನ್ನು ಉತ್ಸಾಹದಿಂದ ಹಾಗೂ ಹರ್ಷಚಿತ್ತದಿಂದ ಕಳೆಯಬಹುದು. ಈ ಅಭ್ಯಾಸವು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಬಳಿಕ ನೆಚ್ಚಿನ ಚಟುವಟಿಕೆಗಳನ್ನು ಮಾಡುವುದರಿಂದ ಒತ್ತಡ ಉಂಟಾಗುವುದಿಲ್ಲ ಹಾಗೂ ಕೂದಲಿನ ಆರೋಗ್ಯಕ್ಕೂ ಉತ್ತಮ.