belagavi news:
ಶುಕ್ರವಾರದ ಪಂಚಾಂಗ ದಿನ ಭವಿಷ್ಯ ಹೇಗಿದೆ.
ಇಂದಿನ ಪಂಚಾಂಗ:
ದಿನಾಂಕ: 8 -5 -2026
ವಾರ: ಶುಕ್ರವಾರ
ಸಂವತ್ಸರ: ಶ್ರೀ ಪರಾಭವನಾಮ
ಆಯನ: ಉತ್ತರಾಯಣ
ಪಕ್ಷ: ಕೃಷ್ಣ
ತಿಥಿ: ಷಷ್ಠಿ
ನಕ್ಷತ್ರ: ಉತ್ತರಾಷಾಢ
ಸೂರ್ಯೋದಯ: ಮುಂಜಾನೆ 5:54 ಗಂಟೆಗೆ
ಅಮೃತಕಾಲ: ಬೆಳಗ್ಗೆ 07:29 ರಿಂದ 9:04ರ ವರೆಗೆ
ದುರ್ಮುಹೂರ್ತ: ಬೆಳಿಗ್ಗೆ 08:18 ರಿಂದ 09:06ರವರೆಗೆ ಹಾಗೂ 02:42 ರಿಂದ 03:30 ರವರೆಗೆ
ರಾಹುಕಾಲ: ಬೆಳಗ್ಗೆ 10:39 ರಿಂದ 12:14ರ ವರೆಗೆ
ಸೂರ್ಯಾಸ್ತ: ಸಂಜೆ 06:35ಕ್ಕೆ
ಇಂದಿನ ಭವಿಷ್ಯ:
ಮೇಷ ರಾಶಿ: ನೀವು ನಿಮ್ಮ ಕೆಲಸದಲ್ಲಿ ಮತ್ತು ಸಾಮಾಜಿಕ ಬದ್ಧತೆಗಳಲ್ಲಿ ಅತಿಯಾದ ಒತ್ತಡದಲ್ಲಿದ್ದೀರಿ. ಇಂದು ನೀವು ಬಿಡುವು ತೆಗೆದುಕೊಂಡು ಸಂತೋಷಪಡುವ ಮತ್ತು ನಿಮಗಾಗಿ ಕೊಂಚ ಏನಾದರು ಮಾಡುವ ಸಮಯವಾಗಿದೆ.
ವೃಷಭ ರಾಶಿ: ಇಂದು ನೀವು ನಿಮ್ಮ ಸಮಸ್ಯೆಗಳಿಂದ ಹೊರಬರಲು ಪ್ರಯತ್ನಿಸುತ್ತಿರಿ. ಇತರರ ಕೆಲಸದ ಹೊಣೆಯನ್ನು ನಿಮ್ಮ ತಪ್ಪು ಎಂದುಕೊಳ್ಳುವ ಸಾಧ್ಯತೆ ಇದೆ. ಸಂಜೆಯ ವೇಳೆಗೆ ಕೆಲವು ವಿಷಯಗಳು ಆಶಾಭಂಗ ಉಂಟು ಮಾಡಬಹುದು ಮತ್ತು ಆತ್ಮವಿಶ್ವಾಸ ಕುಸಿಯುವ ಸಂಭವವಿದೆ. ಆದ್ದರಿಂದ ಶಾಂತ ಮನೋಭಾವ ಉಳಿಸಿಕೊಳ್ಳುವುದು ಉತ್ತಮ.
ಮಿಥುನ ರಾಶಿ: ಹಣಕಾಸು, ಜಂಟಿ ಆಸ್ತಿ ಹಾಗು ಸ್ಥಿರಾಸ್ತಿ ವಿಚಾರಗಳು ನಿಮ್ಮಲ್ಲಿ ಆತಂಕ ಹುಟ್ಟಿಸಬಹುದು. ಸಣ್ಣ ಸಮಸ್ಯೆಗಳು ಮನಸ್ಥಿತಿಗೆ ಪರಿಣಾಮ ಬೀರುವ ಸಾದ್ಯತೆ ಇದೆ. ಹಣಕಾಸಿನ ವಿಚಾರಗಳಲ್ಲಿ ಹೊಸ ಅವಕಾಶಗಳನ್ನು ಪ್ರಯತ್ನಿಸಬಹುದು ಆದರೆ ವಿಚಲಿತ ರಾಗದ್ದೆ ನಿಮ್ಮ ಸಹಜ ವರ್ಚಸ್ವಿ ವ್ಯಕ್ತಿತ್ವವನ್ನು ಉಳಿಸಿಕೊಳ್ಳಿ.
ಕರ್ಕಾಟಕ ರಾಶಿ: ಇಂದು ನಿಮ್ಮ ಅಗತ್ಯಗಳನ್ನು ಪೂರೈಸಲು ಹಣವನ್ನು ಹೆಚ್ಚು ಬಳಸುವ ಸಾಧ್ಯತೆ ಇದೆ. ಯಾವುದನ್ನಾದರೂ ಬದಲಾಯಿಸಬೇಕೆಂದರೆ ಅದಕ್ಕೆ ಹಣ ಖರ್ಚು ಮಾಡಲು ಹಿಂಜರಿಯುವುದಿಲ್ಲ. ನಿಮ್ಮ ಆರ್ಥಿಕ ಲಾಭವನ್ನು ಆತ್ಮೀಯರು ಸಂಭ್ರಮಿಸುವರು ಆದರೆ ಅದರಿಂದ ಖರ್ಚು ಕೂಡ ಹೆಚ್ಚಾಗಬಹುದು ಆದರೆ ಇದ್ದರೂ ವೆಚ್ಚಗಳ ಮೇಲೆ ನಿಯಂತ್ರಣ ಅಗತ್ಯ.
ಸಿಂಹ ರಾಶಿ: ನೀವು ಒತ್ತಡದ ಕಾರ್ಯಗಳಿಂದ ದೂರ ಉಳಿಯುವಲ್ಲಿ ಕೊಂಚ ಆತಂಕ ಅನುಭವಿಸುತ್ತಿರಿ. ನೀವು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಪ್ರಮುಖ ಸಭೆಗಳು ಯಶಸ್ವಿಯಾಗಿ ಮುಗಿಯುತ್ತವೆ ಆದರೆ ಅವು ನಿಮ್ಮನ್ನು ದಿನದ ಅಂತ್ಯಕ್ಕೆ ನಿರುತ್ಸಾಹಗೊಳಿಸುತ್ತವೆ. ನಿರಾಳಗೊಳ್ಳಲು ದಾರಿಗಳನ್ನು ಹುಡುಕುತ್ತಿರಿ.
ಕನ್ಯಾ ರಾಶಿ: ಆರೋಗ್ಯದ ವಿಷಯಕ್ಕೆ ಬಂದರೆ ಅನಿಶ್ಚಿತತೆ ಬೇಡ. ನೀವು ಹಳೆಯ ಗಾಯಗಳನ್ನು ವಾಸಿ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದೀರಿ. ಆದರೆ ಶಾಂತಿ ಮತ್ತು ಸಮೃದ್ಧಿ ದಿನದ ವಿಶೇಷತೆಗಳು. ನೀವು ಇಂದು ವಿನೋದ ಮತ್ತು ಮನರಂಜನೆಯಲ್ಲಿ ಸಮಯ ಹೂಡಿಕೆ ಮಾಡಿ. ಕೇವಲ ಬ್ಯಾಟರಿ ಚಾರ್ಜ್ ಮಾಡಿಕೊಳ್ಳಲು ಎಂದು ತಿಳಿಯಿರಿ.
ತುಲಾ ರಾಶಿ: ನಿಮ್ಮ ಶ್ರಮಶೀಲ ಪ್ರಭಾವಕ್ಕೆ ಇಂದು ಉತ್ತಮ ಫಲ ಸಿಗುವ ಸಾಧ್ಯತೆ ಇದೆ. ವಿಶೇಷವಾಗಿ ಫ್ರೀಲಾನ್ಸರ್ ಗಳಿಗೆ ಹೊಸ ವ್ಯಾಪಾರಿಕ ಅವಕಾಶಗಳು ಎದುರಾಗಬಹುದು. ನಿಮ್ಮ ಆಂತರಿಕ ಧ್ವನಿಯನ್ನು ನಂಬಿ ಉತ್ಸಾಹದಿಂದ ಮುಂದುವರೀದದೆ ಯಶಸ್ಸು ಸಾಧ್ಯ. ಬೆಳಗಿನ ಪರಿಶ್ರಮ ಮತ್ತು ಮಧ್ಯಾಹ್ನದ ಒತ್ತಡದ ಬಳಿಕ ಸಂಜೆಯ ವೇಳೆಗೆ ಸಂತೋಷಕರ ಕ್ಷಣಗಳು ಎದುರಾಗಬಹುದು ನೀವು ಮಾಡುವ ಕೆಲಸವನ್ನು ಆನಂದದಿಂದ ನಿರ್ವಹಿಸಿ.
ವೃಶ್ಚಿಕ ರಾಶಿ: ಇಂದು ವ್ಯಾಪಾರ ಕ್ಷೇತ್ರದಲ್ಲಿ ಚುರುಕು ಹೆಚ್ಚಾಗಬಹುದು. ಹೊಸ ಉತ್ಪನ್ನ ಬಿಡುಗಡೆ ಅಥವಾ ಹೊಸ ಯೋಜನೆ ಮೂಲಕ ಸ್ಪರ್ಧಿಗಳಿಗೆ ಅಚ್ಚರಿ ನೀಡುವ ಸಾಧ್ಯತೆ ಇದೆ. ಗ್ರಹ ಸ್ಥಿತಿಗಳು ನಿಮ್ಮ ಪರವಾಗಿದ್ದರೂ ಕೆಲವು ಅಡೆ-ತಡೆಗಳು ಎದುರಾಗಬಹುದು ಎಂಬ ಸೂಚನೆ ಇದೆ. ಆದರಿಂದ ಆತುರ ಪಡದೆ ಸಮಸ್ಯೆಗಳನ್ನು ಸಮಾಧಾನದಿಂದ ಪರಿಹರಿಸಿ ಮುಂದುವರೆಯಿರಿ ಸರಿಯಾದ ಯೋಜನೆ ಮತ್ತು ಆತ್ಮವಿಶ್ವಾಸರೊಂದಿಗೆ ಯಶಸ್ಸು ನಿಮ್ಮದಾಗಬಹುದು.
ಧನು ರಾಶಿ: ನಿಮ್ಮ ಒಳ್ಳಗಿರುವ ಖುಷಿ ಇಂದು ನಾಯಕತ್ವ ವಹಿಸುತ್ತಾನೆ. ನಿಮ್ಮ ಮನಃ ಶಾಂತಿಗೆ ನಿಮ್ಮದೇ ಔಷದ ಸೂಚಿಸಿಕೊಳಲಿದ್ದೀರಿ. ನೀವು ಇಂದು ಜ್ಞಾನಿ ಮತ್ತು ಸಂತೃಪ್ತರು. ನಿಮ್ಮ ಸುತ್ತಲು ಜನರಿಗೆ ಅದೇ ಸಂದೇಶ ಹರಡುತ್ತಿರಿ.
ಮಕರ ರಾಶಿ: ಬಾಂಧವ್ಯಗಳಿಗೆ ಸಂಬಂಧಿಸಿದ ಕೆಲವು ವಾಸ್ತವಾಂಶಗಳು ಇಂದು ನಿಮ್ಮ ಗಮನಸೆಲೆಯಬಹುದು ಅವುಗಳ ಹಿಂದೆ ಇರುವ ಅರ್ಥ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿ, ಅದನ್ನು ಅರಿಯಲು ಸಮಯ ಕಳೆಯುವ ಸಾಧ್ಯತೆ ಇದೆ. ಪರಿಣಾಮವಾಗಿ ಸಂವಹನದಿಂದ ತಪ್ಪು ಅರ್ಥೈಸಿಕೆಗಳಿಂದ ಉಂಟಾಗುವ ಸಂಘರ್ಷಗಳನ್ನು ನಿವಾರಿಸಬಹುದು.
ಕುಂಭ ರಾಶಿ: ಇಂದು ನೀವು ದಿನಪತ್ರಿಕೆ ಓದು ಪುಸ್ತಕ ಖರೀದಿ ಹಾಗೂ ಹೊಸ ವಿಷಯಗಳನ್ನು ತಿಳಿದುಕೊಳ್ಳುವತ್ತ ಹೆಚ್ಚು ಆಸಕ್ತಿ ತೋರಬಹುದು. ಓದಿನ ಮೂಲಕ ಲೋಕಜ್ಞಾನ ಹೆಚ್ಚಾಗುತ್ತಿದ್ದು, ಅದು ನಿಮಗೆ ಸಂತೋಷವನ್ನು ನೀಡುತ್ತದೆ. ಸತ್ಯ ವಿಚಾರಗಳನ್ನು ನಿರಂತರವಾಗಿ ತಿಳಿದುಕೊಳ್ಳುವ ಮನೋಭಾವ ನಿಮ್ಮ ಬೆಳವಣಿಗೆ ಸಹಕಾರಿ.
ಮೀನ ರಾಶಿ: ಇಂದು ನೀವು ಆತ್ಮೀಯತೆ ಮತ್ತು ಮಾನವೀಯತೆಯ ಮನೋಭಾವವನ್ನು ಹೆಚ್ಚಾಗಿ ಅನುಭವಿಸಬಹುದು. ಧಾರ್ಮಿಕ ಅಥವಾ ಆಧ್ಯಾತ್ಮಿಕ ವಿಚಾರಗಳು ನಿಮ್ಮ ಚಿಂತನೆಗೆ ಆಹಾರವಾಗುತ್ತದೆ. ಆಧ್ಯಾತ್ಮಿಕ ಅನ್ವೇಷಣೆಗಳು ನಿಮ್ಮನ್ನು ಚುರುಕಾಗಿರಸಲಿದ್ದು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ.
Also Read:
Kalghatagi color cradle : ಡಾಲಿ ಧನಂಜಯ್ ಮನೆ ಸೇರಲಿದೆ ವಿಶೇಷ ತೊಟ್ಟಿಲು