ಉದ್ಯೋಗ ಪ್ರೀತಿ ಕುಟುಂಬ ಹಾಗೂ ಸಾಮಾಜಿಕ ಸಂಬಂಧಗಳಲ್ಲಿ ಉತ್ತಮ ಫಲಿತಾಂಶ ಪಡೆಯುವ ಸೂಚನೆಗಳು. ಸಂಪೂರ್ಣ ಪಂಚಾಂಗ, ಶುಭ ಮುಹೂರ್ತ ಮತ್ತು ದಿನ ಭವಿಷ್ಯವನ್ನು ಇಲ್ಲಿ ಓದಿರಿ.
ಪಂಚಾಂಗ:
ದಿನಾಂಕ : 30.01.2026
ವಾರ : ಶುಕ್ರವಾರ
ಸಂವತ್ಸರ : ವಿಶ್ವವಸು
ಆಯನ : ಉತ್ತರಾಯಣ
ಪಕ್ಷ : ಶುಕ್ಲ
ತಿಥಿ : ದ್ವಾದಶಿ
ನಕ್ಷತ್ರ : ಆದ್ರ
ಸೂರ್ಯೋದಯ : ಮುಂಜಾನೆ 06:45 ಗಂಟೆಗೆ
ಅಮೃತ ಕಾಲ : ಬೆಳಗ್ಗೆ 08:12 ರಿಂದ 09:38ರ ವರೆಗೆ
ದುರ್ಮುಹೂರ್ತ : ಬೆಳಗ್ಗೆ 09:09 ರಿಂದ 09:57 & ಮಧ್ಯಾಹ್ನ 03:33 ರಿಂದ 04:21ರ ತನಕ
ರಾಹು ಕಾಲ : ಬೆಳಗ್ಗೆ 11:04 ರಿಂದ 12:31ರ ವರೆಗೆ
ಸೂರ್ಯಾಸ್ತ: ಸಂಜೆ 06:17 ಗಂಟೆಗೆ
ರಾಶಿ ಭವಿಷ್ಯ:
ಮೇಷ ರಾಶಿ:
ನಿಮ್ಮ ದಿನ ಇಂದು ಯಶಸ್ಸಿನ ಬೆಳಕಿನಿಂದ ಅಳೆಯುತ್ತಿದೆ. ನೀವು ದೂರ ದೃಷ್ಟಿ ಉಳ್ಳ ತೀಕ್ಷ್ಣ ಮತಿಯಾಗಿದ್ದೀರಿ. ನಿಮ್ಮ ಮಹತ್ವಾಕಾಂಕ್ಷೆ ನಿಮಗೆ ಸಾಧ್ಯವಾಗುತ್ತದೆ ಕೆಲಸದ ಒತ್ತಡ ಕಡಿಮೆ ಇರಲಿ ನಿಮ್ಮ ಆಶಾವಾದದ ಸಾಮರ್ಥ್ಯಗಳು ನಿಮಗೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಅವಕಾಶ ನೀಡುತ್ತವೆ. ಸರ್ವ ಶಕ್ತನ ಮೇಲೆ ನಂಬಿಕೆ ಇರಲಿ.
ವೃಷಭ ರಾಶಿ:
ಇಂದು ನೀವು ನಿಮ್ಮೊಂದಿಗೆ ಸ್ವಲ್ಪ ಗುಣಮಟ್ಟದ ಸಮಯ ಕಳೆಯಲು ಸೂಕ್ತವಾದ ದಿನ. ಹಿಂದೆಂದೂ ಇಲ್ಲದಂತೆ ವಿಶ್ರಾಂತಿ ತೆಗೆದುಕೊಳ್ಳಿ ಮತ್ತು ನಮೋತ್ಸಾಹ ತುಂಬಿಕೊಳ್ಳಿರಿ. ನಿಮ್ಮ ದಿನವೂ ಮಿತ್ರರು ಹಾಗೂ ಕುಟುಂಬದೊಂದಿಗೆ ಆಕರ್ಷಕ ಭೋಜನ ಮತ್ತು ಮನರಂಜನೆಯೊಂದಿಗೆ ಸ್ನೇಹಮಯ ಭೋಜನಕೂಟ ಒಳಗೊಂಡಿರುತ್ತದೆ ನೀವು ಕಟುವಾದ ಭರ್ಜರಿಯಾದ ಮತ್ತು ಅತ್ಯಂತ ಸ್ವಾದಿಷ್ಟ ರುಚಿಯನ್ನು ಬಯಸುತ್ತೀರಿ ನಿಮ್ಮ ಮನಸ್ಸು ಇಚ್ಚೆ ಇದನ್ನು ನೆರವೇರಿಸಿಕೊಳ್ಳಿ.
ಮಿಥುನ ರಾಶಿ:
ಯಾವುದೋ ಒಂದು ಕಾರಣಕ್ಕೆ ನಿಮ್ಮ ಮನಸ್ಸು ವಿಚಲಿತ ಮತ್ತು ಆತಂಕದಿಂದ ಕೂಡಿರುತ್ತದೆ. ನಿಮ್ಮ ಆತಂಕಗಳನ್ನು ವ್ಯಕ್ತಪಡಿಸಲು ನೀವು ಅಶಕ್ತರಾಗುತ್ತಿರಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ನಿಮ್ಮ ಸಂಗಾತಿಯ ಪ್ರೀತಿಯನ್ನು ಗಳಿಸುವಲ್ಲಿ ಶಕ್ತರಾಗುತ್ತಿರಿ. ಹಿಂದಿನದು ಹೋಗಲಿ ಎಂದು ಬಿಟ್ಟು ವಿಶ್ವಾಸದಿಂದ ಮುಂದುವರಿಯಲು ಪ್ರಯತ್ನಿಸಿ.
ಕರ್ಕಾಟಕ ರಾಶಿ:
ಇಂದು ನೀವು ಮನೆಯಲ್ಲಿ ಹೊಸ ಹೊಸ ರುಚಿಗಳನ್ನು ಪ್ರಯತ್ನಿಸುವ ಉತ್ಸಾಹದಲ್ಲಿ ಇರುತ್ತೀರಿ ನಿಮ್ಮ ಪ್ರಯೋಗ ಗಳಿಂದ ಕುಟುಂಬ ಸಂದೇಶದ ಸಂತೋಷ ಪಡೆದು ಆನಂದಿಸುತ್ತಾರೆ ಕಾರ್ಯಕ್ಷೇಪ ಮತ್ತು ಮನರಂಜನೆಗೆ ಸಮಯ ಮೀಸಲಿಡುವಿರಿ. ಅತಿಥಿಗಳ ಆಗಮನದಿಂದ ಮನೆಗೆ ಹಬ್ಬದ ವಾತಾವರಣ ಮತ್ತು ಖುಷಿಯ ಸಂಭ್ರಮ ತುಂಬುತ್ತದೆ ಕುಟುಂಬ ಬಂಧುಗಳು ಇನ್ನಷ್ಟು ಗಟ್ಟಿಯಾಗುವ ದಿನ.
ಸಿಂಹ ರಾಶಿ:
ಇಂದು ಅನೇಕ ವಿಷಯಗಳು ನೀವು ಇತರರ ಅಭಿಪ್ರಾಯವನ್ನು ಕೇಳುವ ಮನಸ್ಥಿತಿಯಲ್ಲಿ ಇರುತ್ತೀರಿ. ಆದರೆ ಸಂವಹನದ ವೇಳೆ ತಾಳ್ಮೆಯಿಂದ ಆಲಿಸುವುದು ಬಹಳ ಮುಖ್ಯ. ಅಗತ್ಯವಿಲ್ಲದ ಮಾತುಗಳನ್ನು ತಪ್ಪಿಸಿ ಮೌನ ಕಾಪಾಡುವುದು ಒಳಿತು. ಆತ್ಮವಿಶ್ವಾಸದಲ್ಲಿ ಸ್ವಲ್ಪ ಕುಗ್ಗುವಿಕೆ ಕಾಣಬಹುದು. ಆದ್ದರಿಂದ ಇಂದು ಯಾವುದೇ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳದೆ ಇರಲು ಸಲಹೆ.
ಕನ್ಯಾ ರಾಶಿ:
ನೀವು ಇಂದು ಅತ್ಯಂತ ಸ್ಪೂರ್ತಿಯುತ ಮತ್ತು ಉತ್ಸಾಹಭರಿತರಾಗಿರುತ್ತಿರಿ. ನಿಮ್ಮ ಸೃಜನಶೀಲ ಪ್ರತಿಭೆ ಮತ್ತು ಸಾಮರ್ಥ್ಯಗಳು ನಿಮ್ಮನ್ನು ಈ ತರರಿಂದ ವಿಭಿನ್ನವಾಗಿ ಗುರುತಿಸುತ್ತವೆ. ನಿಮ್ಮ ಕಲ್ಪನೆಗಳಿಗೆ ಅವಕಾಶ ನೀಡಿದರೆ ಮಾತುಗಳು ಸರಾಂಗವಾಗಿ ಹರಿದು ಬರುತ್ತವೆ ಹಾಡು ನೃತ್ಯ ಬರವಣಿಗೆ ಅಥವಾ ಪ್ರದರ್ಶನ ಕಲೆಗಳಲ್ಲಿ ತೊಡಗಿಕೊಂಡರೆ ನೀವು ಎಲ್ಲರ ಗಮನ ಕೇಂದ್ರವಾಗುತ್ತಿರಿ. ಇಂತ ಹವ್ಯಾಸಗಳನ್ನು ಬೆಳೆಸಲು ಇಂದು ಅತ್ಯುತ್ತಮ ದಿನ.
ತುಲಾ ರಾಶಿ:
ಇಂದು ನಿಮ್ಮೊಳಗಿನ ಕಲಾವಿದ ಸಂಪೂರ್ಣವಾಗಿ ಹೊರಹೊಮ್ಮುತ್ತಾನೆ. ನಿಮ್ಮ ಕಲ್ಪನಾ ಶಕ್ತಿ ಮತ್ತು ಸೃಜನಶೀಲತೆ ಗಮನಿಸಲಿಯುತ್ತದೆ ನಿಮ್ಮ ಶಕ್ತಿಯ ವಿಷಯಗಳಂತ ಗಮನಹರಿಸಲು ಉತ್ತಮ ಅವಕಾಶ ಸಿಗುತ್ತದೆ ಆಸಕ್ತಿಯೇ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಮುಂದಿನ ಹಂತಕ್ಕೆ ಹೇರಲು ಸಾದ್ಯತೆ ಇದೆ ಕಾನೂನು ಸಂಬಂಧಿತ ವ್ಯವಹಾರಗಳು ಅಥವಾ ಒಪ್ಪಂದಗಳಿಗೆ ಇಂದು ಅನುಕೂಲಕರ ದಿನ ಒಟ್ಟಾರೆ ಯಶಸ್ಸು ಮತ್ತು ತೃಪ್ತಿ ನೀಡುವ ಅತ್ಯುತ್ತಮ ದಿನ ಇದು.
ವೃಶ್ಚಿಕ ರಾಶಿ:
ಇಂದು ನಿಮ್ಮನ್ನು ಖಂಡಿತವಾಗಿಯೂ 'ಪರ್ಫೆಕ್ಷನಿಸ್ಟ್ ' ಎಂದು ಕರೆಯಬಹುದು. ಕೆಲಸದಲ್ಲಿ ಸಮಯ ಪಾಲನೆ ಮಾತ್ರವಲ್ಲದೆ, ವ್ಯವಸ್ಥೆತ ಮತ್ತು ಕ್ರಮಬದ್ಧ ವಿಧಾನವನ್ನು ಅನುಸರಿಸುತ್ತೀರಿ ನಿಮ್ಮ ಕಾರ್ಯನಿರ್ವಹಣೆ ಶೈಲಿಸುತ್ತ ಮುತ್ತಲಿನವರಿಗೆ ಪ್ರೇರಣೆಯಾಗುತ್ತದೆ ಒಟ್ಟಾರೆ ನೀವು ಇಂದು ಉತ್ತಮ ಮಾದರಿಯಾಗಿ ಹೊರಹೊಮ್ಮುವಿರಿ.
ಧನು ರಾಶಿ:
ಇಂದು ಸಂಪೂರ್ಣ ಜಾಗರೂಕತೆ ಅಗತ್ಯವಿರುವ ದಿನ. ನಿಮ್ಮ ಹೃದಯ ತನ್ನ ಸಂಗಾತಿಯನ್ನು ಕಂಡುಕೊಳ್ಳುವ ಸೂಚನೆಯಲ್ಲಿದ್ದು, ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದೆ. ಪ್ರಣಯ ದೇವತೆ ನಿಮ್ಮತ್ತ ಮುಖ ಮಾಡಿದ್ದಾನೆ ಎನ್ನಬಹುದು. ಆದರೆ ಸಂಬಂಧದ ಆರಂಭಿಕ ಹಂತಗಳು ಸೂಕ್ಷ್ಮವಾಗಿರುವುದರಿಂದ ಹೆಜ್ಜೆ ಹೆಜ್ಜೆಗೆ ಎಚ್ಚರಿಕೆ ಅಗತ್ಯ ಜೊತೆಗೆ ನಿಮ್ಮ ಸಾಮಾಜಿಕ ಪ್ರತಿಷ್ಠೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಮಕರ ರಾಶಿ:
ಇಂದು ನೀವು ಒತ್ತಡ ಬರಿತ ದಿನವನ್ನು ಅನುಭವಿಸಬಹುದು ಕೆಲಸದ ಹೆಚ್ಚುವರಿ ಬೇಡಿಕೆಗಳಿಂದ ನಿಮ್ಮ ಬಗ್ಗೆ ಆಲೋಚಿಸಲು ಸಮಯ ಸಿಗದ ಸ್ಥಿತಿ ಉಂಟಾಗುತ್ತದೆ. ಸೃಜನಶೀಲತೆಯನ್ನು ಹೊರಹಾಕಲು ಬಯಸಿದರು ಕಾರ್ಯದೊತ್ತಡ ಅದಕ್ಕೆ ಅಡ್ಡಿ ಯಾಗಬಹುದು. ಆದರೆ ನೀವು ಸಮಯ ನಿರ್ವಹಣೆಯ ಕೌಶಲವನ್ನು ಚೆನ್ನಾಗಿ ಅಳವಡಿಸಿಕೊಂಡಿದ್ದೀರಿ. ಆದ್ಯತೆಗಳನ್ನು ಸರಿಯಾಗಿ ನಿರ್ಧರಿಸುವ ಮೂಲಕ ಮುಂದೆ ಸಾಗಿದರೆ, ಯಶಸ್ಸು ನಿಮ್ಮನ್ನು ಕಾಯುತ್ತಿದೆ.
ಕುಂಭ ರಾಶಿ:
ಇಂದು ನೀವು ಸರಿಯಾದ ಗುರಿಯನ್ನು ನಿಗದಿಪಡಿಸಿ ಅದನ್ನು ಸಾಧಿಸುವ ದಿನ ಸಣ್ಣ ಯೋಜನೆಯಿಂದ ದೊಡ್ಡ ಗುರಿವರೆಗೂ ನಿಮ್ಮ ಎಲ್ಲಾ ಪ್ರಯತ್ನಗಳು ಫಲ ನೀಡುತ್ತವೆ. ಮಾರ್ಗದಲ್ಲಿ ಕೆಲ ಅಡೆತಡೆಗಳು ಎದುರಾದರು ನಿರಾಶಿಗೊಳ್ಳಬೇಡಿ, ನೀವು ಸವಾಲುಗಳನ್ನು ಎದುರಿಸಲು ಸಂಪೂರ್ಣ ಸನ್ನದ್ಧರಾಗಿದ್ದು, ವಿಜಯೋತ್ಸವದಿಂದ ಹೊರಬರುವಿರಿ ಉತ್ಸಾಹ ಕಾಪಾಡಿಕೊಂಡರೆ ಯಶಸ್ಸು ಖಚಿತ.
ಮೀನ ರಾಶಿ:
ಇಂದು ಗ್ರಹಗಳ ಸ್ಥಿತಿ ಸಂಪೂರ್ಣ ಪೂರಕವಾಗಿಲ್ಲ ಹೊಸ ಯೋಜನೆಗಳನ್ನು ಆರಂಭಿಸುವುದು ಉತ್ತಮವಲ್ಲ. ಯಾವುದೇ ಕಾರ್ಯದಲ್ಲಿ ಲಾಭಕ್ಕಿಂತ ರಿಸ್ಕ ಹೆಚ್ಚು ಇರಬಹುದು. ವ್ಯಾಪಾರದಲ್ಲಿರುವರು ವ್ಯವಹಾರಗಳಲ್ಲಿ ಹೆಚ್ಚಾಗಿ ಜಾಗರೂಕಯಾಗಬೇಕು. ಆದರೆ ಆತಂಕ ಬೇಡ ವೈಯಕ್ತಿಕ ಜೀವನ ದೇವರ ಕೃಪೆಯಿಂದ ಶಾಂತಿಯುತವಾಗಿರುತ್ತದೆ ಮತ್ತು ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಇನ್ನಷ್ಟು ಓದಿರಿ:
ಭಾರತದ ಎಐ ಭವಿಷ್ಯ ರೂಪಿಸಲು ಪ್ರಧಾನ ಮೋದಿ - ಎಐ ಕಂಪನಿಗಳ ಸಿಇಒಗಳ ಸಭೆ