<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಅತಿಕ್ರಮಕ್ಕೆ ಬ್ರೇಕ್ ಹಾಕಲು ಜಿಬಿಎ ಸಜ್ಜು : ರಾಜಕಾಲುವೆ ಒತ್ತುವರಿದಾರರಿಗೆ ಎಚ್ಚರಿಕೆ

ಅತಿಕ್ರಮಕ್ಕೆ ಬ್ರೇಕ್ ಹಾಕಲು ಜಿಬಿಎ ಸಜ್ಜು : ರಾಜಕಾಲುವೆ ಒತ್ತುವರಿದಾರರಿಗೆ ಎಚ್ಚರಿಕೆ
Summary: After the operation to clear footpath encroachments and abandoned vehicles, the Greater Bengaluru Authority is now ready to take action against the encroachers of Rajkaluve. The GBA has prepared a list of those who have encroached on the city's Rajkaluves and is planning to carry out the clearance operation.

belagavi news :

ಪುಟ್ ಪಾತ್, ಬಿಡಾಡಿ ವಾಹನಗಳ ಬಳಿಕ ರಾಜಕಾಲುವೆ ಒತ್ತುವರಿದಾರರಿಗೆ ಶಾಕ್ : ಜಿಬಿಎಯಿಂದ ತೆರವು ಕಾರ್ಯಾಚರಣೆ.

ಪುಟ್ ಪಾತ್ ಅತಿಕ್ರಮಣ ಮತ್ತು ಬಿಡಾಡಿ ವಾಹನಗಳ ತೆರವು ಕಾರ್ಯಾಚರಣೆ ಬಳಿಕ ಇದೀಗ ರಾಜಕಾರಣಿದಾರರ ವಿರುದ್ಧ ಕ್ರಮಕ್ಕೆ ಗ್ರೇಡರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ.

ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಈ ಕುರಿತು ಮಾಹಿತಿ ನೀಡಿದ್ದು, ನಗರದ ವಿವಿಧ ಭಾಗಗಳಲ್ಲಿರುವ ರಾಜ ಕಾಲುವೆ ಒತ್ತುವರಿಗಳನ್ನು ಗುರುತಿಸಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ನಗರದಲ್ಲಿ ಮಳೆಯ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗುತ್ತಿರುವ ಅತಿಕ್ರಮಣಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕ ಆಸ್ತಿಗಳ ರಕ್ಷಣೆ ಹಾಗೂ ಪ್ರವಾಹ ಸಮಸ್ಯೆ ನಿಯಂತ್ರಣಕ್ಕೆ ಒತ್ತು ನೀಡಲಾಗುತ್ತಿದೆ. ಪುಟ್ ಪಾತ್ ಮತ್ತು ಬಿಡಾಡಿ ವಾಹನಗಳ ತೆರವು ಬಳಿಕ ರಾಜಕಾಲುವೆ ಒತ್ತುವರಿ ಪ್ರಮುಖ ಕಾರ್ಯಸೂಚಿಯಾಗಿದೆ.

ಬೆಂಗಳೂರು 860 ಕಿಲೋಮೀಟರ್ ರಾಜ ಕಾಲುವೆ ಪೈಕಿ 600 ಕಿಲೋಮೀಟರ್ ಅಭಿವೃದ್ಧಿ: ಕೃಷ್ಣ ಬೈರೇಗೌಡ ಮಾಹಿತಿ

ನಗರದ ಮಳೆ ನೀರು ಹರಿಯುವ ವ್ಯವಸ್ಥೆ ಸುಧಾರಿಸಲು ರಾಜ್ಯ ಕಾಲುವೆಗಳ ಅಭಿವೃದ್ಧಿ ಕಾರ್ಯ ಮುಂದುವರಿದಿದ್ದು, ಬೆಂಗಳೂರಿನಲ್ಲಿ ಒಟ್ಟು 860 ಕಿ.ಮೀ ರಾಜಕಾಲುವೆ ವ್ಯಾಪ್ತಿ ಇದೆ ಎಂದು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಈ ಪೈಕಿ ಈಗಾಗಲೇ ಸುಮಾರು 600 ಕಿ.ಮೀ ರಾಜಕಾಲುವೆಯ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಹಿಂದಿನ ಸರ್ಕಾರಗಳ ಅವಧಿಯನ್ನು ವಿವಿಧ ಹಂತದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸುಮಾರು 400 ಕಿ.ಮೀ ರಾಜಕಾಲುವೆ ಅಭಿವೃದ್ಧಿ ಮಾಡಲಾಗಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು 150 ಕಿಲೋ ಮೀಟರ್ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಸಚಿವರು ತಿಳಿಸಿದ್ದಾರೆ.

ನಗರದಲ್ಲಿ ಮಳೆ ನೀರು ಸರಾಗವಾಗಿಹರಿಯಲು ಹಾಗೂ ಪ್ರವಾಹ ಸಮಸ್ಯೆ ನಿಯಂತ್ರಿಸಲು ಉಳಿದ ರಾಜಕಾಲುವೆಗಳ ಅಭಿವೃದ್ಧಿ ಮತ್ತು ಒತ್ತುವರಿ ತೆರವು ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ.

ಬೆಂಗಳೂರಿನ ಉಳಿದ 260 ಕಿಲೋಮೀಟರ್ ರಾಜಕಾಲುವೆ ಅಭಿವೃದ್ಧಿಗೆ ಸಿದ್ಧತೆ : ಒತ್ತುವರಿ ತೆರೆವು ಖಚಿತ ಎಂದ ಸಚಿವರು

ನಗರದ ಉಳಿದಿರುವ 260 ಕಿಲೋಮೀಟರ್ ರಾಜಕಾಲುವೆ ಅಭಿವೃದ್ಧಿ ಕಾರ್ಯಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ವಿಶ್ವ ಬ್ಯಾಂಕ್ ಸಹಾಯದೊಂದಿಗೆ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ರಾಜಕಾಲುವೆ ಅಭಿವೃದ್ಧಿ ವೇಳೆ ಅತಿಕ್ರಮ ತೆರವು ಕಾರ್ಯವು ನಡೆಸಲಾಗುವುದು. ಯಾವುದೇ ಒತ್ತುವರಿಯನ್ನು ಉಳಿಸದೇ ತೆರವುಗೊಳಿಸಿ, ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಒಟ್ಟು 860 ಕಿಲೋಮೀಟರ್ ರಾಜಕಾಲುವೆ ವ್ಯಾಪ್ತಿ ಇದ್ದು, ಈಗಾಗಲೇ ಸುಮಾರು 600 ಕಿಲೋಮೀಟರ್ ಅಭಿವೃದ್ಧಿ ಮಾಡಲಾಗಿದೆ. ಉಳಿದ ಭಾಗದ ಅಭಿವೃದ್ಧಿ ಮತ್ತು ಒತ್ತುವರಿ ತೆರವು ಮೂಲಕ ನಗರದ ಪ್ರವಾಹ ವ್ಯವಸ್ಥೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online