<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಉತ್ತರ ಪ್ರದೇಶಕ್ಕೆ ಗಂಗಾ ಎಕ್ಸ್ ಪ್ರೆಸ್ ವೇ ಬಲ - ಪ್ರಧಾನಿ ಮೋದಿ ಉದ್ಘಾಟನೆ

ಉತ್ತರ ಪ್ರದೇಶಕ್ಕೆ ಗಂಗಾ ಎಕ್ಸ್ ಪ್ರೆಸ್ ವೇ ಬಲ - ಪ್ರಧಾನಿ ಮೋದಿ ಉದ್ಘಾಟನೆ
Summary: In a major step towards infrastructure development in Uttar Pradesh, Prime Minister Narendra Modi inaugurated the Ganga Expressway. He said the expressway will be a lifeline for the state's economic growth.

Belagavi news:

ಗಂಗಾ ಎಕ್ಸ್ಪ್ರೆಸ್ ವೇ ಉದ್ಘಾಟಿಸಿದರು. ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ, ವ್ಯಾಪಾರ ಕೈಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಈ ಯೋಜನೆ ದೊಡ್ಡ ಉತ್ತೇಜನ ನೀಡಲಿದೆ.

ಗಂಗಾ ಎಕ್ಸ್ಪ್ರೆಸ್ ಪೂರ್ಣಗೊಂಡ ನಂತರ, ರಾಜ್ಯದ ಪ್ರಮುಖ ನಗರಗಳ ನಡುವಿನ ಪ್ರಯಾಣ ಸಮಯ ಕಡಿಮೆಯಾಗಲಿದ್ದು, ಹೂಡಿಕೆ ಅವಕಾಶಗಳು ಹೆಚ್ಚಾಗುವ ನಿರೀಕ್ಷೆ ಇದೆ. ಉತ್ತರ ಪ್ರದೇಶವನ್ನು ಅಭಿವೃದ್ಧಿಯ ಹೊಸ ಹಾದಿಯಲ್ಲಿ ಮುನ್ನಡೆಸುವ ಈ ಮಹತ್ವಾಕಾಂಕ್ಷೆ ಯೋಜನೆ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಪ್ರಧಾನಿ ಮೋದಿ ಈ ಯೋಜನೆಯನ್ನು ರಾಷ್ಟ್ರದ ಅಭಿವೃದ್ಧಿ ದೃಷ್ಟಿಕೋನದ ಭಾಗವೆಂದು ಹೇಳಿ ಮೂಲಸೌಕರ್ಯದಲ್ಲಿ ಹೂಡಿಕೆ ದೇಶದ ಒಟ್ಟು ಬೆಳವಣಿಗೆಗೆ ಅಗತ್ಯವೆಂದು ಒತ್ತಿ ಹೇಳಿದರು. ಗಂಗಾ ಎಕ್ಸ್ ಪ್ರೆಸ್ ರಾಜ್ಯದ ಪ್ರಗತಿಗೆ ಹೊಸ ವೇಗ ನೀಡಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

Sponsored

ಗಂಗಾ ಎಕ್ಸ್ಪ್ರೆಸ್ ವೇ ಉದ್ಘಾಟನೆಯು ಉತ್ತರ ಪ್ರದೇಶದ ಅಭಿವೃದ್ಧಿಗೆ ಹೊಸ ಜೀವನಾಡಿ ಎಂದು ಪ್ರಧಾನಿ ಮೋದಿ ಅವರು ಹೇಳಿದರು. ಮೀರತ್, ಎಪ್ರಿಲ್ 29ರಂದು ಪ್ರಧಾನಿ ನರೇಂದ್ರ ಮೋದಿ ಇದು ಮಹತ್ವಾಕಾಂಕ್ಷಿ ಗಂಗಾ ಎಕ್ಸ್ಪ್ರೆಸ್ ವೇ ಯನ್ನು ಉದ್ಘಾಟಿಸಿದರು. ಪಶ್ಚಿಮ ಉತ್ತರ ಪ್ರದೇಶವನ್ನು ಪೂರ್ವ ಭಾಗದೊಂದಿಗೆ ಸಂಪರ್ಕಿಸುವ ಎಕ್ಸ್ಪ್ರೆಸ್ ಮೀರತ್ನಿಂದ ಪ್ರಯಾಗ್ ರಾಜ್ ವರೆಗೆ ಸುಮಾರು 594 ಕಿಲೋಮೀಟರ್ ದೂರವನ್ನು ಕಡಿಮೆ ಮಾಡುವ ಮೂಲಕ ಪ್ರಯಾಣವನ್ನು ವೇಗವಾಗಿಸುತ್ತದೆ.

ಈ ಯೋಜನೆಯ ಮೂಲಕ ಈಗ ಕೇವಲ ಗಂಟೆಗಳಲ್ಲಿ ಪ್ರಯಾಗ್ ರಾಜ್ ನ ಸಂಗಮವನ್ನು ತಲುಪುವುದು ಸುಲಭವಾಗಿದೆ. ಅಲ್ಲದೆ, ಭಕ್ತರು ವಾರಣಾಸಿಯಲ್ಲಿ ಇರುವ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂದಿರುಗುವ ಅವಕಾಶವು ಸುಲಭವಾಗಲಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ,"ಸಾವಿರಾರು ವರ್ಷಗಳಿಂದ ಗಂಗಾ ತಾಯಿ ಉತ್ತರ ಪ್ರದೇಶ ಮತ್ತು ದೇಶದ ಜೀವನಾಡಿಯಾಗಿದ್ದಾಳೆ. ಅದೇ ರೀತಿ, ಆಧುನಿಕ ಯುಗದಲ್ಲಿ ಆಕೆಯ ಬಳಿ ಹಾದು ಹೋಗುವ ಈ ಎಕ್ಸ್ಪ್ರೆಸ್ ವೇ ರಾಜ್ಯದ ಅಭಿವೃದ್ಧಿಗೆ ಹೊಸ ಜೀವನಾಡಿ ಆಗಲಿದೆ ಎಂದು ಹೇಳಿದರು.

ಗಂಗಾ ಎಕ್ಸ್ಪ್ರೆಸ್ ವೇ ನಿರ್ಮಾಣದಿಂದ ರಾಜ್ಯದ ಸಂಪರ್ಕ ವ್ಯವಸ್ಥೆ ಸುಧಾರಿಸಿ, ವ್ಯಾಪಾರ ಕೈಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಇದು ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

Sponsored

ಉತ್ತರ ಪ್ರದೇಶವನ್ನು ವೇಗವಾಗಿ ಅಭಿವೃದ್ಧಿಪಡಿಸುವ ದೆಸೆಯಲ್ಲಿ ಈ ಯೋಜನೆ ಪ್ರಮುಖ ಮೈಲಿಗಲ್ಲಾಗಿದ್ದು, ಮೂಲ ಸೌಕರ್ಯ ಅಭಿವೃದ್ಧಿ ಕೇಂದ್ರ ಸರ್ಕಾರದ ಬದ್ಧತೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಈ ಗಂಗಾ ಎಕ್ಸ್ಪ್ರೆಸ್ ವೇ ಯನ್ನು ಅಭಿವೃದ್ಧಿಯ ದೃಷ್ಟಿಕೋನ ಮತ್ತು ಪ್ರತಿಬಿಂಬ ಎಂದು ಹೇಳಿದ ಪ್ರಧಾನಿ ಮೋದಿ:

ಪ್ರಧಾನಿ ನರೇಂದ್ರ ಮೋದಿ ಗಂಗಾ ತಾಯಿಯ ಸಾನಿತ್ಯದ ಕುರಿತು ಭಾವನಾತ್ಮಕವಾಗಿ ಮಾತನಾಡುತ್ತಾ, ಕಳೆದ ಕೆಲವು ದಿನಗಳಿಂದ ತಮಗೆ ಸಿಕ್ಕ ಆತ್ಮೀಯ ಅನುಭವವನ್ನು ಹಂಚಿಕೊಂಡರು."ನಾನು ಇತ್ತೀಚಿಗೆ ವೆಸ್ಟ್ ಬಂಗಾಲ್ ನಲ್ಲಿ ಇದ್ದಾಗ ಗಂಗಾ ತಾಯ ದರ್ಶನ ಪಡೆದಿದ್ದೆ. ಇಲ್ಲಿ ವಾರನಾಸಿಯಲ್ಲಿ ಇದ್ದೇ. ಇಂದು ಮತ್ತೆ ಬಾಬಾ ವಿಶ್ವನಾಥರ ಆಶೀರ್ವಾದದೊಂದಿಗೆ ಗಂಗಾ ತಾಯ ದರ್ಶನ ಪಡೆಯುವ ಭಾಗ್ಯ ಸಿಕ್ಕಿದೆ", ಎಂದು ಹೇಳಿದರು.

ಈ ವೇಳೆ ಅವರು ಮಹತ್ವಾಕಾಂಕ್ಷಿ ಗಂಗಾ ಎಕ್ಸ್ಪ್ರೆಸ್ ರೈ ಕುರಿತು ಮಾತನಾಡಿ, ಇದು ಉತ್ತರ ಪ್ರದೇಶದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ ಎಂದರು. ಸುಮಾರು 36,230 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಎಕ್ಸ್ಪ್ರೆಸ್ ವೇ, ಮೀರತ್ ಮತ್ತು ಪ್ರಯಾಗ್ ರಾಜ್ ನಡುವಿನ ಪ್ರಯಾಣದ ಸಮಯವನ್ನು 10 - 12 ಗಂಟೆಯಿಂದ ಸುಮಾರು 6ಗಳ ವರೆಗೆ ಕಡಿಮೆ ಮಾಡುವ ನಿರೀಕ್ಷೆ ಇದೆ.

Sponsored

ರಾಜ್ಯ ಸರ್ಕಾರ ಈ ಎಕ್ಸ್ಪ್ರೆಸ್ ವಿ ಗಂಗಾ ಎಂಬ ಹೆಸರು ನೀಡಿರುವುದನ್ನು ಮೋದಿ ಮೆಚ್ಚಿ,"ಇದು ನಮ್ಮ ಅಭಿವೃದ್ಧಿಯ ದೃಷ್ಟಿಕೋನವನ್ನು ಪ್ರತಿಬಿಂಬಿಸಿರುವುದರ ಜೊತೆಗೆ ನಮ್ಮ ಸಮೃದ್ಧ ಪರಂಪರೆಯನ್ನು ಕೂಡ ತೋರಿಸುತ್ತದೆ", ಎಂದು ಅಭಿಪ್ರಾಯಪಟ್ಟರು.

ಈ ಯೋಜನೆ ರಾಜ್ಯದ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ, ವ್ಯಾಪಾರ, ಪ್ರವಾಸೋದ್ಯಮ ಮತ್ತು ಕೈಗಾರಿಕಾ ವಲಯಗಳಿಗೆ ಹೊಸ ಚೈತನ್ಯ ನೀಡಲಿದೆ. ಉತ್ತರ ಪ್ರದೇಶವನ್ನು ವೇಗವಾಗಿ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸುವ ಮಹತ್ವದ ಹೆಜ್ಜೆಯಾಗಿ ಗಂಗಾ ಎಕ್ಸ್ಪ್ರೆಸ್ ಪರಿಗಣಿಸಲಾಗುತ್ತಿದೆ.

Also Read:

ಶಾಲಾ ಕಾರ್ಯಕ್ರಮಗಳಿಗೆ ಹೊಸ ನಿಯಮ: ಅಶ್ಲೀಲ ಹಾಡುಗಳಿಗೆ ಸಂಪೂರ್ಣ ನಿಷೇಧ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online