<?= $pageTitle ?>
Logo
ಮುಖಪುಟ ಓದುವುದು ಕೇಳು
Business

ವ್ಯಾಪಾರ ಒಪ್ಪಂದ ಕ್ಷೇತ್ರದಲ್ಲಿ ಭಾರತದ ಸಾಧನೆಗೆ ಜಾಗತಿಕ ಮೆಚ್ಚುಗೆ - ಪ್ರಧಾನಿ ಮೋದಿ

ವ್ಯಾಪಾರ ಒಪ್ಪಂದ ಕ್ಷೇತ್ರದಲ್ಲಿ ಭಾರತದ ಸಾಧನೆಗೆ ಜಾಗತಿಕ ಮೆಚ್ಚುಗೆ - ಪ್ರಧಾನಿ ಮೋದಿ
Summary: ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭಾರತದ ವ್ಯಾಪಾರ ಒಪ್ಪಂದಗಳು ಇಂದು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದಿವೆ ಎಂದು ಹೇಳಿದರು.
belagavi news:
ನವದೆಹಲಿ:
ಯುರೋಪಿಯನ್ ಯೂನಿಯನ್ (UE) ಮತ್ತು ಅಮೆರಿಕದ ಜತೆ ಭಾರತದ ವ್ಯಾಪಾರ ಒಪ್ಪಂದಗಳ ನಂತರ ಜಗತ್ತು ಸ್ಥಿರತೆಯ ಬಗ್ಗೆ ಹೆಚ್ಚು ವಿಶ್ವಾಸ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ಸ್ವಾತಂತ್ರ್ಯ ವ್ಯಾಪಾರ ಒಪ್ಪಂದಗಳು ರಫ್ತು, ಆಮದು ನೀತಿ ವಾಣಿಜ್ಯ, ವೃದ್ಧಿ ಹಾಗು ಆತ್ಮನಿರ್ಬಧ ಭಾರತ ಅಭಿಯಾನದಿಂದ ಭಾರತದ ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಅವರು ತಿಳಿಸಿದರು. ಭಾರತದ ವ್ಯಾಪಾರ ನೀತಿಗೆ ವಿದೇಶಿ ರಾಷ್ಟ್ರಗಳು ವಿಶ್ವಾಸ ವ್ಯಕ್ತಪಡಿಸುತ್ತಿದ್ದು ಇದು ದೇಶದ ಆರ್ಥಿಕ ಅಭಿವೃದ್ಧಿಗೆ ಹೊಸ ದಿಕ್ಕು ನೀಡುತ್ತಿದೆ.

ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸುತ್ತಾ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ಇಂದು ಸಂಜೆ ರಾಜ್ಯಸಭೆಯಲ್ಲಿ ಸುಮಾರು 100 ನಿಮಿಷ ಸುದೀರ್ಘ ಭಾಷಣ ಮಾಡಿದರು. ಭಾರತದ ವ್ಯಾಪಾರ ಒಪ್ಪಂದಗಳನ್ನು ಜಗತ್ತು ಮೆಚ್ಚಿದೆ ಎಂದು ಪ್ರಧಾನಿ ಮೋದಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಭಾರತವು ಒಂದು ವರ್ಷದಲ್ಲಿ ಐದು ಪ್ರಮುಖ ವ್ಯಾಪಾರ ಒಪ್ಪಂದಗಳನ್ನು ಮುಕ್ತಾಯಗೊಳಿಸಿದೆ ಇದರಲ್ಲಿ ಅಮೆರಿಕ ಯುರೋಪಿಯನ್ ಯೂನಿಯನ್ (EU), ಯುನೈಟೆಡ್ ಕಿಂಗ್ ಡಮ್ (UK) ಓಮನ್ ಮತ್ತು ನ್ಯೂಜಿಲೆಂಡ್ ನಂತರ ದೇಶಗಳು ಸೇರಿವೆ.

ರಾಷ್ಟ್ರಪತಿಗಳ ಭಾಷಣದ ವಂದನ ನಿರ್ಣಯ ಮೇಲಿನ ಚರ್ಚೆಗೆ ಇಂದು ಸಂಜೆ ರಾಜ್ಯಸಭೆಯಲ್ಲಿ ದೀರ್ಘವಾಗಿ ಉತ್ತರಿಸಿದ್ದ ಮೋದಿ ಸರ್ಕಾರ ಸಾಧನೆಗಳನ್ನು ಬಿಡಿಬಿಡಿಯಾಗಿ ವಿತರಿಸುತ್ತ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮಾಡಿದರು.

ಭಾರತದ ಒಪ್ಪಂದಗಳನ್ನು ಜಗ ಮೆಚ್ಚಿದೆ: ಭಾರತ ಹಲವಾರು ದೇಶಗಳೊಂದಿಗೆ ಭವಿಷ್ಯಕ್ಕೆ ಸಿದ್ಧವಾದ ( Future ready) ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕುತ್ತಿದೆ. ಈ ಒಪ್ಪಂದಗಳನ್ನು ಜಗತ್ತು ಮೆಚ್ಚಿಕೊಂಡಿದೆ ಎಂದು ವಿವರಿಸಿದರು ಇದೇ ವೇಳೆ ಭಾರತ ಈಗ ಜಾಗತಿಕ ದಕ್ಷಿಣ (Global South) ದ ಬಲವಾದ ಧ್ವನಿಯಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಕಳೆದ ಕೆಲವು ದಿನಗಳಲ್ಲಿ ಯುರೋಪಿಯನ್ ಒಕ್ಕೂಟ ( EU) ದ 27 ರಾಷ್ಟ್ರಗಳ ಗುಂಪಿನೊಂದಿಗೆ 'ಮದರ್ ಆಫ್ ಆಲ್ ಡೀಲ್ಸ್'ಎಂದೆ ಬಣ್ಣಿಸಲಾದ ಮಹತ್ವದ ವ್ಯಾಪಾರ ಒಪ್ಪಂದವು ಸೇರಿ ಈ ತರ ಒಂಬತ್ತು ದೊಡ್ಡ ದೇಶಗಳೊಂದಿಗೆ ನಾವು ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದ್ದೇವೆ.

ರಾಹುಲ್ ಹೇಳಿಕೆ ಇಡೀ ಸಿಖ್ ಸಮುದಾಯಕ್ಕೆ ಮಾಡಿದ ಅವಮಾನ: ಕೇಂದ್ರ ಸಚಿವ ಅವನಿಗೆ ಸಿಂಗ್ ಬಿಟ್ಟು ಅವರ ಬಗ್ಗೆ ರಾಹುಲ್ ಗಾಂಧಿಯವರ 'ದೇಶದ್ರೋಹಿ' ಹೇಳಿಕೆಯನ್ನು ಖಂಡಿಸಿದ ಮೋದಿ ಇಂದು ಇಡೀ ಸಿಖ್ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಗೆ ಸಮಾಧಿ ಮಾಡಲು ಎಂದಿಗೂ ಸಾಧ್ಯವಿಲ್ಲ: ಕಾಂಗ್ರೆಸ್ ಪಕ್ಷಕ್ಕೆ ನನ್ನ ಸಮಾಧಿ ಮಾಡಲು ಎಂದಿಗೂ ಸಾಧ್ಯವಿಲ್ಲ. ನನಗೆ ಕೋಟ್ಯಾಂತರ ತಾಯಂದಿರು, ಸಹೋದರಿಯರು ಮತ್ತು ದೇಶದ ಬಡವರ ಆಶೀರ್ವಾದವಿದೆ. ಅವರಿಗಾಗಿ ನಿಸ್ವಾರ್ಥ ವಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.

ಕಾಂಗ್ರೆಸ್ ಸರ್ಕಾರದ ತಪ್ಪು ಸರಿಪಡಿಸುವಲ್ಲಿ ನಮ್ಮ ಹೆಚ್ಚು ಸಮಯ ವ್ಯಯ: ಇದೇ ವೇಳೆ ವಿರೋಧ ಪಕ್ಷದ ವಾಗ್ದಾಳಿ ನಟಿಸುತ್ತಾ, ಈ ಹಿಂದೆ ನಾವು ರಾಷ್ಟ್ರಕ್ಕೆ ಮಾಡಿರುವ ಕೆಲಸಗಳಿಗೆ ಒಂದಿನ ಉತ್ತರಿಸಬೇಕಾಗುತ್ತದೆ ಎಂದು ಚಾಟಿ ಬೀಸಿದರು. ಸಂಸತ್ತಿನಲ್ಲಿ ನಡೆದ ಕೋಲಾಹಲವನ್ನು ಉಲ್ಲೇಖಿಸಿ ವಿರೋಧ ಪಕ್ಷ ಸತತವಾಗಿ ಚುನಾವಣಾ ಸೋಲುಗಳನ್ನು ಅನುಭವಿಸುತ್ತಿದ್ದು ಅವರಿಗೆ ಅವುಗಳನ್ನು ಆರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು. ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ತಪ್ಪುಗಳನ್ನು ಸರಿಪಡಿಸುವಲ್ಲಿ ನಮ್ಮ ಹೆಚ್ಚಿನ ಶಕ್ತಿ ವ್ಯಯವಾಗಿದೆ ಎಂದು ತಿಳಿಸಿದರು.


ಲೋಕಸಭೆಯಲ್ಲಿ ಕಲಾಪಗಳಿಗಾದ ಅಡಚಣೆಗೆ ವಿಷಾದ ವ್ಯಕ್ತಪಡಿಸಿ, ಇದು ಭಾರತದ ಬಡ ಬುಡಕಟ್ಟು ಮಹಿಳೆ ರಾಷ್ಟ್ರಪತಿಗೆ ಮಾಡಿದ ಅವಮಾನ. ಮಾತ್ರವಲ್ಲದೆ, ಅವರು ಹೊಂದಿದ್ದ ಉನ್ನತ ಸಾಂವಿಧಾನಿಕ ಸ್ಥಾನಮಾನ ಮತ್ತು ಭಾರತದ ಸಂವಿಧಾನಕ್ಕೂ ಮಾಡಿದ ಅವಮಾನ ಎಂದು ಟೀಕಿಸಿದರು.

ಟಿಎಂಸಿಯಿಂದ ಒಳ ನುಸುಳುಕೋರರ ರಕ್ಷಣೆ: ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ ಪಶ್ಚಿಮ ಬಂಗಾಳದಲ್ಲಿ ಒಳ ನುಸುಳುಕೋರರನ್ನು ರಕ್ಷಿಸುತ್ತಿದೆ. ಅವರು ಯುವಕರ ಉದ್ಯೋಗಗಳು ಹಕ್ಕುಗಳನ್ನು ಮತ್ತು ಬುಡಕಟ್ಟು ಜನಾಂಗದ ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ವಿಪಕ್ಷಗಳಿಂದ ಸಭಾತ್ಯಾಗ: ಇದಕ್ಕೂ ಮುನ್ನ ವಿರೋಧ ಪಕ್ಷದ ಘೋಷಣೆಗಳ ನಡುವೆಯೇ ಪ್ರಧಾನಿ ಮೋದಿ ತಮ್ಮ ಭಾಷಣ ಶುರು ಮಾಡಿದರು. ನಂತ ವಿಪಕ್ಷಗಳ ಸದಸ್ಯರು ಸಭಾ ತ್ಯಾಗ ಮಾಡಿದರು.

'ಸುಧಾರಣಾ ಎಕ್ಸ್ ಪ್ರೆಸ್' ನಲ್ಲಿದೆ ಭಾರತ: 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರದ ಗುರಿ ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ 11 ವರ್ಷಗಳಲ್ಲಿ ತಮ್ಮ ಸರ್ಕಾರದ ಸಾಧನೆಗಳನ್ನು ಹೇಳುತ್ತಾ, ಭಾರತ ಈಗ 'ಸುಧಾರಣಾ ಎಕ್ಸ್ಪ್ರೆಸ್' ನಲ್ಲಿದೆ.


ಇನ್ನಷ್ಟು ಓದಿರಿ:
PM Modi ನೆಚ್ಚಿನ ಸೂಪರ್ ಫ್ರೂಟ್ ಯಾವುದು ಗೊತ್ತೇ? ಏಕೆ ಇದು ವಿಶೇಷ!

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online