<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Corporate

ಯುವಕರಿಗೆ ಸುವರ್ಣಾವಕಾಶ! ಸ್ಟ್ರೈಡ್ಸ್ pharmaa ದಲ್ಲಿ ಕೆಲಸದ ಜೊತೆಗೆ ಪದವಿ

ಯುವಕರಿಗೆ ಸುವರ್ಣಾವಕಾಶ! ಸ್ಟ್ರೈಡ್ಸ್ pharmaa ದಲ್ಲಿ ಕೆಲಸದ ಜೊತೆಗೆ ಪದವಿ
Summary: A golden opportunity has been provided to those who want to get a free degree along with a job. Strides Pharma has introduced a special program for youth, providing them with the opportunity to continue their higher education while working. Interested candidates can apply and continue their career and life at the same time.

belagavi news:

ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಬೆಂಗಳೂರಿನ Strides Pharma Science ಕಂಪನಿ ' ಸ್ಟೂಡೆಂಟ್ ಟ್ರೈನಿ' ಹುದ್ದೆಗಳಿಗೆ ಮಂಗಳೂರಿನಲ್ಲಿ ನೇರ ಸಂದರ್ಶನ ನಡೆಸುತ್ತಿದೆ. ಐಟಿಐ, ಪಿಯುಸಿ, ಡಿಪ್ಲೋಮಾ ಅಥವಾ ಪದವೀಧರ ಪುರುಷ ಅಭ್ಯರ್ಥಿಗಳಿಗೆ ಇದು ಉತ್ತಮ ಉದ್ಯೋಗಾವಕಾಶವಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗದ ಜೊತೆಗೆ ಉಚಿತ B.Voc ಪದವಿ ಪಡೆಯುವ ಅವಕಾಶ ಲಭ್ಯವಿದೆ. ಇದರೊಂದಿಗೆ ಊಟ, ವಸತಿ ಹಾಗೂ ವಿಮಾ ಸೌಲಭ್ಯಗಳನ್ನು ಕಂಪನಿ ಒದಗಿಸಲಿದೆ. ಆಸಕ್ತರು ಮೇ 12ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

ಕರ್ನಾಟಕ ಸರ್ಕಾರದ ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗಾವಕಾಶಕ್ಕಾಗಿ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ.

Sponsored

ಮಂಗಳೂರಿನ ಪಂಡಿಲ್ ನಲ್ಲಿರುವ ಜಿಲ್ಲಾಡಳಿತ ಭವನದಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶ ಕಲ್ಪಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿ ಉದ್ಯೋಗ ಪಡೆಯುವ ಅವಕಾಶವನ್ನು ಬಳಸಿಕೊಳ್ಳಬಹುದು.

ಬೆಂಗಳೂರಿನ Strides Pharma Science limited ಸಂಸ್ಥೆಯಲ್ಲಿ ಖಾಲಿ ಇರುವ ' ಸ್ಟೂಡೆಂಟ್ ಟ್ರೈನಿ ' ಹುದ್ದೆಗಳಿಗೆ ನೇರ ನೇಮಕಾತಿ ನಡೆಯುತ್ತಿದೆ.

ಐಟಿಐ, ಪಿಯುಸಿ, ಡಿಪ್ಲೋಮಾ ಅಥವಾ ಯಾವುದೇ ಪದವಿ ಪೂರ್ಣಗೊಳಿಸಿರುವ 18 ರಿಂದ 25 ವರ್ಷದೊಳಗಿನ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಕೆಲಸದ ಅವಕಾಶ ಕಲ್ಪಿಸಲಾಗುತ್ತದೆ.

ಈ ನೇಮಕಾತಿಯ ಪ್ರಮುಖ ವಿಶೇಷತೆಎಂದರೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ಕಂಪನಿಯ ವತಿಯಿಂದ ಉಚಿತವಾಗಿ ಬಿ. ವಾಕ್ ( B.Voc) ಪದವಿ ಕೋರ್ಸ್ ಪಡೆಯುವ ಅವಕಾಶವನ್ನು ಒದಗಿಸಲಾಗುತ್ತದೆ. ಇದರ ಜೊತೆಗೆ ಉಚಿತ ಊಟ, ವಸತಿ ಸೌಲಭ್ಯ ಹಾಗೂ ಆರೋಗ್ಯ ವಿಮೆ ಸೇರಿದಂತೆ ಹಲವು ಸೌಲಭ್ಯಗಳು ನೀಡಲಾಗುವುದೆಂದು ಸಂಸ್ಥೆ ತಿಳಿಸಿದೆ.

Sponsored

ಆಸಕ್ತ ಅಭ್ಯರ್ಥಿಗಳು 12-05-2026ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:30ಯೊಳಗೆ ಮಂಗಳೂರಿನ ಪಂಡಿಲ್ ನಲ್ಲಿರುವ ಪ್ರಜಾಸೌಧದ ನೆಲಮಹಡಿಯ ಕೊಠಡಿ ಸಂಖ್ಯೆ 04ಕ್ಕೆ ಭೇಟಿ ನೀಡಿ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

ಈ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳಿಗೆ 0824-2457139 ಸಂಖ್ಯೆಯನ್ನು ಸಂಪರ್ಕಿಸಬಹುದು.

Also Read:

ಡಿಎಂಕೆ- ಎಐಎಡಿಎಂಕೆ ಜೊತೆ ಮೈತ್ರಿ? ಸ್ಟಾಲಿನ್ ಕೊಟ್ಟ ಖಡಕ್ ಉತ್ತರ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online