belGvi news :
ಶರ್ಮಿಳಾ ಮಾಂಡ್ರೆ ಮದುವೆ ಫಿಕ್ಸ್ : ತಮಿಳುನಾಡಿನ ಸೊಸೆಯಾಗಲಿರುವ ಕನ್ನಡದ ನಟಿ!
ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಶರ್ಮಿಳಾ ಮಾಂಡ್ರೆ ಅವರ ಮದುವೆ ಸುದ್ದಿ ಸಿನಿ ಪ್ರಿಯರಲ್ಲಿ ಬಾರಿ ಸಂಚಲನ ಮೂಡಿಸಿದೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡಿರುವ ಶರ್ಮಿಳಾ ಮಾಂಡ್ರೆ ಇದೀಗ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಮೂಲಗಳ ಪ್ರಕಾರ,ಶರ್ಮಿಳಾ ಮಾಂಡ್ರೆ ಅವರ ನಿಶ್ಚಿತಾರ್ಥ ಇದೇ ತಿಂಗಳ 25 ರಂದು ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆಯಲಿದೆ. ವಿಶೇಷವೆಂದರೆ, ಅವರವರ ತಮಿಳು ಚಿತ್ರರಂಗದ ನಿರ್ಮಾಪಕರಾಗಿದ್ದು, ಮದುವೆಯ ನಂತರ ಶರ್ಮಿಳಾ ಮಾಂಡ್ರೆ ತಮಿಳುನಾಡಿನ ಸೊಸೆಯಾಗಲಿದ್ದಾರೆ ಎನ್ನಲಾಗಿದೆ.
ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ನಟಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಆದರೆ ವರನ ಹೆಸರು ಹಾಗೂ ಮದುವೆ ದಿನಾಂಕ ಸೇರಿದಂತೆ ಇತರ ವಿವರಗಳನ್ನು ಕುಟುಂಬ ಇನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ನಿಶ್ಚಿತಾರ್ಥ ಸಮಾರಂಭದ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳುವ ನಿರೀಕ್ಷೆ ಇದೆ.
ಶರ್ಮಿಳಾ ಮಾಂಡ್ರೆ ಅವರ ವೈವಾಹಿಕ ಜೀವನದ ಹೊಸ ಅಧ್ಯಯ ಹೇಗಿರಲಿ ಎಂಬುದನ್ನು ಕಾದು ನೋಡಬೇಕಿದೆ
' ಮಹಾರಾಜ್' ನಿರ್ಮಾಪಕ ಕೈಹಿಡಿಯಲ್ಲಿರುವ ಶರ್ಮಿಳಾ ಮಾಂಡ್ರೆ, ಶೀಘ್ರದಲ್ಲೇ ನಿಶ್ಚಿತಾರ್ಥ!
ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಶರ್ಮಿಳಾ ಮಾಂಡ್ರೆಯವರ ಮದುವೆ ಸುದ್ದಿ ಈಗ ಸಿನಿವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿರುವ ಶರ್ಮಿಳಾ, ಇದೀಗ ತಮಿಳುನಾಡಿನ ಸೊಸೆಯಾಗಲು ಸಜ್ಜಾಗಿದ್ದಾರೆ. ಶರ್ಮಿಳಾ ಮಾಂಡ್ರೆ ಅವರು ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಸುಧನ್ ಸುಂದರಮ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ. ಸುಧನ್ ಸುಂದರಮ್ ಅವರು ಸೂಪರ್ ಹಿಟ್ ತಮಿಳು ಚಿತ್ರ 'ಮಹಾರಾಜ' ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದು, ಇತ್ತೀಚಿನ ಯಶಸ್ವಿ ಚಿತ್ರಗಳ ನಿರ್ಮಾಣದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ.
ಮೂಲಗಳ ಪ್ರಕಾರ, ಇವರ ನಿಶ್ಚಿತಾರ್ಥ ಇನ್ನೇನು ಕೆಲವೇ ದಿನಗಳಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆಯಲಿದ್ದು, ಮದುವೆ ಇದೇ ವರ್ಷದಲ್ಲಿ ನೆರವೇರಲಿದೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳು ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಶರ್ಮಿಳಾ ಮತ್ತು ಸುಧನ್ ಜೋಡಿಯ ವೈಭವಿಕ ಬದುಕಿನ ಹೊಸ ಅಧ್ಯಾಯಕ್ಕಾಗಿ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಮದುವೆಯ ದಿನಾಂಕ ಹಾಗೂ ಇತರ ಅಧಿಕೃತ ಮಾಹಿತಿಗಳು ಶೀಘ್ರದಲ್ಲಿ ಪ್ರಕಟವಾಗುವ ನೀರಿಕ್ಷೆ ಇದೆ.
ಸುಧನ್ ಅವರು ಫ್ಯಾಷನ್ ಸ್ಟುಡಿಯೋಸ್ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದು, ಸಿನಿಮಾ ನಿರ್ಮಾಣ ಮತ್ತು ವಿತರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 'ಮಹಾರಾಜ' ಮಾತ್ರವಲ್ಲದೆ, ತಮಿಳಿನ 'ಬೆಂಜ್', 'ಇರೈವೆನ್', ಇನ್ನು ಕೆಲ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇದೀಗ ನಟಿ ಶರ್ಮಿಳಾ ಮಾಂಡ್ರೆ ಅವರನ್ನು ವಿವಾಹವಾಗುತ್ತಿದ್ದಾರೆ.
ನಟಿ ಮಾತ್ರವಲ್ಲ, ಯಶಸ್ವಿ ನಿರ್ಮಾಪಕಿಯು ಹೌದು, ಶರ್ಮಿಳಾ ಮಾಂಡ್ರಿ; ಮದುವೆ ಸುದ್ದಿಯ ನಡುವೆ ಸಿನಿ ಜರ್ನಿ ವೈರಲ್!
ಶರ್ಮಿಳಾ ಮಾಂಡ್ರೆ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಚಾಕು ಮೂಡಿಸಿರುವ ಪ್ರತಿಭಾವಂತ ನಟಿಯಾಗಿ ಮಾತ್ರವಲ್ಲದೆ ನಿರ್ಮಾಪಕಿಯಾಗಿಯೂ ಯಶಸ್ಸಿನ ಹೆಜ್ಜೆ ಇಡುತ್ತಿದ್ದಾರೆ. ಈಗಾಗಲೇ ತಮಿಳಿನಲ್ಲಿ ನಾಲ್ಕು ಸಿನಿಮಾಗಳನ್ನು ನಿರ್ಮಿಸಿರುವ ಶರ್ಮಿಳ, ಕನ್ನಡದಲ್ಲಿ ದಸರಾ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊಂದಿದ್ದಾರೆ. ಜೊತೆಗೆ ತಮಿಳಿನ 'ಕಾದಲ್ ಕೊಂಜಜಂ ತೂಕಲಾ' ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.
ಇದೀಗ ತಮಿಳು ಚಿತ್ರರಂಗದ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಶರ್ಮಿಳಾ ಅವರ ವೃತ್ತಿಜೀವನ ಮತ್ತು ಸಾಧನೆಗಳು ಮತ್ತು ಚರ್ಚೆಗೆ ಬಂದಿವೆ. ನಟಿ, ನಿರ್ಮಾಪಕ ಎಂಬ ಎರಡು ಕ್ಷೇತ್ರಗಳಲ್ಲೂ ಯಶಸ್ಸು ಕಂಡಿರುವ ಶರ್ಮಿಳ, ವೈಯಕ್ತಿಕ ಹಾಗೂ ವೃತ್ತಿಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
Also Read:
ಬಿಡದಿ ಎಐ ಸಿಟಿ ಯೋಜನೆಗೆ ವಿರೋಧ ತೀವ್ರ: ರೈತರಿಂದ ರಾಹುಲ್ ಗಾಂಧಿಗೆ ಪತ್ರ