<?= $pageTitle ?>
Logo
ಮುಖಪುಟ ಓದುವುದು ಕೇಳು
Technology

WhatsApp Web ಬಳಕೆದಾರರಿಗೆ ಗುಡ್ ನ್ಯೂಸ್: ಹೊಸ ಫೀಚರ್ ಅಧಿಕೃತ ಬಿಡುಗಡೆ

WhatsApp Web ಬಳಕೆದಾರರಿಗೆ ಗುಡ್ ನ್ಯೂಸ್: ಹೊಸ ಫೀಚರ್ ಅಧಿಕೃತ ಬಿಡುಗಡೆ
Summary: WhatsApp Web Calling: ಬಹಳ ಸಮಯದ ನಿರೀಕ್ಷೆಯ ಬಳಿಕ ವಾಟ್ಸಾಪ್ ವೆಬ್ ನಲ್ಲಿ ಆಡಿಯೋ ಮತ್ತು ವಿಡಿಯೋ ಕಾಲಿಂಗ್ ಫೀಚರ್ ಲಭ್ಯವಾಗಿದೆ. ಈ ಹೊಸ ಅಪ್ಡೇಟ್ ಅನ್ನು ಮೊದಲು ಬೀಟಾ ಬಳಕೆದಾರರಿಗೆ ಬಿಡುಗಡೆ ಮಾಡಲು ವಾಟ್ಸಾಪ್ ಪ್ರಾರಂಭಿಸಿದೆ. ಈಗ ಬ್ರೌಸರ್ ಮೂಲಕವೇ ಸುಲಭವಾಗಿ ಕರೆ ಮಾಡಬಹುದಾಗಿದೆ. ಈ ಫೀಚರ್ ನ ವಿಶೇಷತೆಗಳು, ಬಳಸುವ ವಿಧಾನ ಮತ್ತು ಎಲ್ಲಾ ಬಳಕೆದಾರರಿಗೆ ಯಾವಾಗ ಲಭ್ಯವಾಗಲಿದೆ ಎಂಬ ಸಂಪೂರ್ಣ ಮಾಹಿತಿ ತಿಳಿಯಿರಿ.
belagavi news:
WhatsApp Web Calling:
ವಾಟ್ಸಾಪ್ ವೆಬ್ ನಲ್ಲಿ ಆಡಿಯೋ ಮತ್ತು ವಿಡಿಯೋ ಕಾಲಿಂಗ್ ಫೀಚರ್ ಕಾಯುತ್ತಿರುವ ರಿಗೆ ಒಳ್ಳೆಯ ಸುದ್ದಿ ಇದೆ. ಅಂದರೆ, ಶೀಘ್ರದಲ್ಲೇ ಎಲ್ಲ ವಾಟ್ಸಪ್ ಬಳಕೆದಾರರಿಗೆ ಲಭ್ಯವಾಗಲಿದೆ. ಕಂಪನಿಯ ಈ ವೈಶಿಷ್ಟ್ಯ ವನ್ನು ಬೀಟಾ ಬಳಕೆದಾರರಿಗೆ ಬಿಡುಗಡೆ ಮಾಡಲು ಪ್ರಾರಂಭಿಸಿದೆ.

ಆದರೆ ಈಗ ಅದು ವೆಬ್ ಆವೃತ್ತಿಯಲ್ಲಿಯು ಲಭ್ಯವಿರುತ್ತದೆ. ಇಲ್ಲಿವರೆಗೆ ತನ್ನ ಅಧಿಕೃತ ಡೆಸ್ಕ್ ಟಾಪ್ ಅಪ್ಲಿಕೇಶನ್ ಮೂಲಕ ಆಡಿಯೋ ಮತ್ತು ರೇಡಿಯೋ ಕರೆ ಆಯ್ಕೆಗಳನ್ನು ಮಾತ್ರ ನೀಡುತ್ತಿತ್ತು. ಬಳಕೆದಾರರು ಬಹಳ ಸಮಯದಿಂದ ಈ ವೈಶಿಷ್ಟ್ಯ ವನ್ನು ಒತ್ತಾಯಿಸುತ್ತಿದ್ದರು.

ಒನ್ ಟು ಒನ್ ಕಾಲಿಂಗ್ ಆಪ್ಶನ್: WhatsApp Web ಬಳಕೆದಾರರಿಗೆ ಒಳ್ಳೆಯ ಸುದ್ದಿ! WABetaInfo ಪ್ರಕಾರ, ಈಗ ಒನ್ ಟು ಒನ್ ಕಾಲಿಂಗ್ ಫೀಚರ್ Beta ಪ್ರೋಗ್ರಾಂನಲ್ಲಿ ದಾಖಲಾಗಿರುವ ಬಳಕೆದಾರರಿಗೆ ಲಭ್ಯವಾಗಿದೆ. ಈ ಅಪ್ಡೇಟ್ ಬಳಕೆದಾರರಿಗೆ ಒಬ್ಬರಿಂದ ಒಬ್ಬರಿಗೆ ಆಡಿಯೋ ಮತ್ತು ವಿಡಿಯೋ ಕರೆಗಳನ್ನು ಮಾಡುವ ಅವಕಾಶ ನೀಡುತ್ತದೆ. ಆದರೆ ಗ್ರೂಪ್ ಕಾಲಿಂಗ್ ಫೀಚರ್ ಗೆ ಸ್ವಲ್ಪ ಸಮಯ ಕಾಯಬೇಕಾಗುತ್ತದೆ.

ಕಂಪನಿಯ ಈ ವೈಶಿಷ್ಟ್ಯವನ್ನು ಒಂದು ವರ್ಷದಿಂದ ಅಭಿವೃದ್ಧಿಪಡಿಸುತ್ತಿದ್ದು ಈಗ ವೆಬ್ ಆವೃತ್ತಿಯು ಡೆಸ್ಕ್ ಟಾಪ್ ಅಪ್ಲಿಕೇಶನ್ ತರಹ ಕೆಲಸ ಮಾಡುತ್ತದೆ. Beta ಬಳಕೆದಾರರು ಈಗ ತಮ್ಮ ಬ್ರೌಸರ್ ಮೂಲಕ ಸುಲಭವಾಗಿ ವಾಟ್ಸಾಪ್ ಅನುಭವವನ್ನು ಪಡೆಯಬಹುದು.
ಈ ಹೊಸ ವೈಶಿಷ್ಟ್ಯವು WhatsApp Web ಬಳಕೆದಾರರಿಗೆ ಸಂಪೂರ್ಣ ಸುಲಭಗೊಳಿಸುವುದು, ಕೆಲಸದ ಸಮಯದಲ್ಲಿ ಸಂಪರ್ಕವಿಲ್ಲದೆ ತೊಂದರೆಗಳನ್ನು ಕಡಿಮೆ ಮಾಡುವುದು ಮತ್ತು ಒಬ್ಬರಿಂದ ಒಬ್ಬರಿಗೆ ಪಾಸ್ಟ್ ಕಾಲಿಂಗ್ ಅನುಭವವನ್ನು ಒದಗಿಸುತ್ತದೆ.

ಸ್ಕ್ರೀನ್ ಶೇರ್ ಆಯ್ಕೆಯೂ ಲಭ್ಯ: ಬಳಕೆದಾರರು ವಾಟ್ಸಾಪ್ ವೆಬ್ ನಲ್ಲಿ ವಿಡಿಯೋ ಕರೆಗಳ ಸಮಯದಲ್ಲಿ ಸ್ಕ್ರೀನ್ ಶೇರಿಂಗ್ ಆಯ್ಕೆಯನ್ನು ಸಹ ಹೊಂದಿರುತ್ತಾರೆ. ನೀವು WhatsApp ವೆಬ್ ನಿಂದಲೇ ನೇರವಾಗಿ ವಿಡಿಯೋ ಕರೆ ಮಾಡಬಹುದು ಮತ್ತು ನಿಮ್ಮ ಸ್ಕ್ರೀನ್ ಹಂಚಿಕೊಳ್ಳಬಹುದು. ಈ ಆಯ್ಕೆ ಈಗಾಗಲೇ ಮೊಬೈಲ್ ಅಪ್ಲಿಕೇಶನ್ ನಲ್ಲಿದೆ. ಇದರರ್ಥ ನೀವು ಕಚೇರಿಯಲ್ಲಿ ಸಭೆ ನಡೆಸಬೇಕಾದರೆ, ನಿಮಗೆ Google Meet ಅಥವಾ Microsoft Teams ನಂತಹ ಅಗತ್ಯವಿಲ್ಲ. ಗ್ರೂಪ್ ಕಾಲಿಂಗ್ ವೈಶಿಷ್ಟ್ಯ ವನ್ನು ಪರಿಚಯಿಸಿದ ನಂತರ ಈ ವೈಶಿಷ್ಟ ಇನ್ನಷ್ಟು ಶಕ್ತಿಶಾಲಿಯಾಗುತ್ತದೆ.

ಡೆಸ್ಕ್ ಟಾಪ್ ಅಪ್ಲಿಕೇಶನ್ ಇನ್ನು ಅಗತ್ಯ: ವಾಟ್ಸಪ್ ಮೊಬೈಲ್ ಅಪ್ಲಿಕೇಶನ್ ಬಳಸಿ ಚಾಟಿಂಗ್ ಜೊತೆಗೆ ಆಡಿಯೋ ಮತ್ತು ವಿಡಿಯೋ ಕರೆ ಮಾಡುವಿಕೆಯನ್ನು ನೀವು ಆನಂದಿಸಬಹುದು. ಹೊಸ ವೈಶಿಷ್ಟ್ಯ ದೊಂದಿಗೆ ಈ ಅವಶ್ಯಕತೆಯನ್ನು ತೆಗೆದುಹಾಕಲಾಗುತ್ತದೆ ಮತ್ತು ನೀವು ವೆಬ್ ಆವೃತ್ತಿಯಿಂದ ನೇರವಾಗಿ ಕರೆಗಳನ್ನು ಮಾಡಬಹುದು.

ಆದರೆ ನೀವು ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ನಿಂದ ವಾಯ್ಸ್ ಅಥವಾ ವಿಡಿಯೋ ಕರೆ ಮಾಡಲು ಬಯಸಿದರೆ ನೀವು ಇನ್ನೂ ವಾಟ್ಸಪ್ಪ್ ಅಪ್ಲಿಕೇಶನ್ ಅನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಮೆಟಾ ಸುಮಾರು ಒಂದು ವರ್ಷದಿಂದ ವೆಬ್ ಇಂಟರ್ಫೇಸ್ ಮೂಲಕ ಕರೆ ಮಾಡುವಿಕೆಯನ್ನು ಸಕ್ರಿಯಗೊಳಿಸುವಲ್ಲಿ ಕೆಲಸ ಮಾಡುತ್ತಿದೆ ಎಂದ ವರದಿ ಹೇಳಿದ್ದಾರೆ.


ಇನ್ನಷ್ಟು ಓದಿರಿ:
ಸತ್ಯನಿಷ್ಠೆ ಮೆರೆದ ಪೌರ ಕಾರ್ಮಿಕರು

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online