belagavi news:
ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನರಿಗೆ ರಾಸಾಯನಿಕ ಮುಕ್ತ ಹಾಗೂ ಸಹಜವಾಗಿ ಹಣ್ಣಾಗಿರುವ ಮಾವಿನ ಹಣ್ಣುಗಳನ್ನು ಒದಗಿಸುವ ಉದ್ದೇಶದಿಂದ ಲಾಲ್ ಬಾಗ್ ಮತ್ತು ಕಬ್ಬನಪಾರ್ಕ್ ನಲ್ಲಿ ಇಂದಿನಿಂದ 10 ದಿನಗಳ ಕಾಲ ಮಾವು ಹಾಗೂ ಹಲಸಿನ ಮೇಲೆ ಆರಂಭವಾಗಿದೆ.
ತೋಟಗಾರಿಕೆ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಆಯೋಜಿಸಲದ ಈ ಮೇಳಕ್ಕೆ ರಾಜ್ಯಮಾವು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ.ಬಿ.ಸಿ ಮುದ್ದುಗಂಗಾಧರ್ ಅವರು ಚಾಲನೆ ನೀಡಿದರು.
ಮುಂದಿನ 10 ದಿನಗಳ ಕಾಲ ನಗರ ನಿವಾಸಿಗಳಿಗೆ ನೇರವಾಗಿ ರೈತರಿಂದ ರಾಸಾಯನಿಕ ಮುಕ್ತ ತಾಜಾ ಮಾವಿನ ಹಣ್ಣುಗಳು ಮತ್ತು ಹಲಸು ಲಭ್ಯವಾಗಲಿದೆ.
ಮೇಳದಲ್ಲಿ ರಾಮನಗರ, ಮಂಡ್ಯ, ತುಮಕೂರು, ಕೋಲಾರ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಮಾವು ಬೆಳೆಗಾರರು ಸುಮಾರು 50ಕ್ಕೂ ಹೆಚ್ಚು ಮಳಿಗೆಗಳನ್ನು ಆರಂಭಿಸಿದ್ದಾರೆ. ಇಲ್ಲಿ ಬಾದಾಮಿ, ಮಲ್ಲಿಕಾ, ರಸಪುರಿ ಹಾಗೂ ಕರಿ ಇಶಾಡ್ ಸೇರಿದಂತೆ ಹಲವು ತಳಿಯ ಮಾವು ಹಣ್ಣುಗಳು ಮಾರಾಟಕ್ಕಿವೆ.
ಇದರ ಜೊತೆಗೆ ರುದ್ರಾಕ್ಷಿ, ಶಿವರಾತ್ರಿ, ಏಕಾದಶಿ, ತೂಬಗೇರೆ ಮತ್ತು ಲಾಲ್ ಬಾಗ್ ಮಧುರ ಸೇರಿದಂತೆ ವಿವಿಧ ವಿಧಗಳ ಹಲಸು ಹಣ್ಣುಗಳ ಸಹ ಗ್ರಾಹಕರ ಗಮನ ಸೆಳೆಯುತ್ತಿವೆ. ಭೌಗೋಳಿಕ ಮುನ್ನಣೆ ಪಡೆದಿರುವ ಉತ್ತರ ಕನ್ನಡದ ಕರಿ ಇಶಾಡ್ ಮಾವು, ಮಿಡಿ ಉಪ್ಪಿನಕಾಯಿ ಸೇರಿದಂತೆ ವಿವಿಧ ತೋಟಗಾರಿಕಾ ಉತ್ಪನ್ನಗಳಿಗೂ ಮೇಳದಲ್ಲಿ ಸ್ಥಳ ಕಲ್ಪಿಸಲಾಗಿದೆ.
ಗ್ರಾಹಕರಿಗೆ ಗುಣಮಟ್ಟದ ಹಣ್ಣುಗಳನ್ನು ನೇರವಾಗಿ ಲಭ್ಯವಾಗುಗಿಸುವುದು ಹಾಗೂ ರೈತರಿಗೆ ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರನ್ನು ಸಂಪರ್ಕಿಸಲು ಅವಕಾಶ ಕಲ್ಪಿಸುವುದೇ ಈ ಮೇಳದ ಪ್ರಮುಖ ಉದ್ದೇಶವಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿ ತೀವ್ರ ಬಿಸಿಲು ಮತ್ತು ವಾತಾವರಣದ ತೇವಾಂಶ ಕೊರತೆಯಿಂದಾಗಿ ಮಾವಿನ ಹಣ್ಣುಗಳು ಹೆಚ್ಚಾಗಿ ಉದುರುವ ಸಮಸ್ಯೆ ಎದುರಾಗಿದ್ದು, ಇದರ ಪರಿಣಾಮ ಉತ್ಪಾದನೆ ಹಾಗೂ ಗುಣಮಟ್ಟದ ಮೇಲೆ ಬಿದ್ದಿದೆ. ಕಳೆದ ವರ್ಷ ಸುಮಾರು 15 ಲಕ್ಷ ಟನ್ ಉತ್ಪಾದನೆ ಇದ್ದರೆ ಈ ವರ್ಷ ಕೇವಲ 10 ಲಕ್ಷ ಟನ್ ಉತ್ಪಾದನೆ ಮಾತ್ರ ನಿರೀಕ್ಷಿಸಲಾಗುತ್ತಿದೆ ಇದರಿಂದ ಮಾವಿನ ಬೆಲೆಗಳು ಸ್ವಲ್ಪ ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.
ಮೇಳದ ಕುರಿತು ರಾಮನಗರ ತಾಲೂಕಿನ ರೈತರೋಬ್ಬರು ಮಾತನಾಡಿ, " ಇಂದು ಮೇಳ ಆರಂಭವಾಗಿದೆ. ನಾಳೆಯಿಂದ ಹೆಚ್ಚಿನ ಸಂಖ್ಯೆಯು ಗ್ರಾಹಕರು ಆಗಮಿಸುವ ನಿರೀಕ್ಷೆ ಇದೆ ಇನ್ನಷ್ಟು ವೆರೈಟಿಗಳನ್ನು ಮಾರಾಟಕ್ಕೆ ತರುವ ವ್ಯವಸ್ಥೆ ಮಾಡಲಾಗುತ್ತದೆ" ಎಂದು ತಿಳಿಸಿದ್ದಾರೆ.
ಬೆಳಗಾವಿಯಲ್ಲೂ ಇಂದಿನಿಂದ ಮೂರು ದಿನಗಳ ಮಾವು ಮೇಳ ನಡೆಯುತ್ತಿದ್ದು, ಮೇಳದಲ್ಲಿ ಬೆಳಗಾವಿ, ಧಾರವಾಡ ಜಿಲ್ಲೆ ಮತ್ತು ಮಹಾರಾಷ್ಟ್ರದ ಕೆಲ ರೈತರಿಗೆ ಅವಕಾಶ ನೀಡಲಾಗಿದೆ. ಸಾವಯವ ಪದ್ಧತಿಯಲ್ಲಿ ಬೆಳೆದ ಹಣ್ಣುಗಳನ್ನು ತಾವೇ ಸ್ವತಃ ರೈತರಿ ಮಾರಾಟ ಮಾಡುತ್ತಿರುವುದು ವಿಶೇಷ.
Also Read:
Health tips: ಮರು ಬಿಸಿ ಮಾಡಿದ ಟಿ ಕುಡಿಯುವುದರಿಂದ ಏನು ಸಮಸ್ಯೆ?