<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ರಾಜ್ಯ ಸರ್ಕಾರದ ವಿರುದ್ಧ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ

ರಾಜ್ಯ ಸರ್ಕಾರದ ವಿರುದ್ಧ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ
Summary: ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿ ಮಾಡಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ.
belagavi news :
ರಾಜ್ಯ ಸರ್ಕಾರದ ಬಗ್ಗೆ ಬೃಹತ್ ಕೈಗಾರಿಕಾ ಹಾಗೂ ಉಕ್ಕು ಖಾತೆಯ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ವಾಗ್ದಾಳಿಯನ್ನು ನಡೆಸಿದ್ದಾರೆ. ಇಂದು ಸರಕಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ. ‘ಸಿದ್ದರಾಮಯ್ಯರ ಸರ್ಕಾರವು ರಾಜ್ಯವನ್ನು ದಿವಾಳಿ ಮಾಡುತ್ತಿದೆ’ ಎಂದು ಆರೋಪಿಸಿದರು. ಎತ್ತಿನಹೊಳೆ ಯೋಜನೆಯ ಕುರಿತು ಮಾತನಾಡಿದ ಅವರು , ಎತ್ತಿನಹೊಳೆ ಯೋಜನೆ 8,000 ಕೋಟಿಯಿಂದ ಆರಂಭವಾಯಿತು. ಈಗ 33,000 ಸಾವಿರ ಕೋಟಿ ಅಂದಾಜು ವೆಚ್ಚ ಮಾಡಲಾಗಿದೆ.

ಎತ್ತಿನಹೊಳೆ ಪ್ರಾಜೆಕ್ಟ್ ಅನ್ನು ಕಳಪೆ ಗುತ್ತಿಗೆದಾರಿಗೆ ಕೊಡಲಾಗಿದೆ, ಸಿಎಜಿ ರಿಪೋರ್ಟ್ ನೋಡಿದಿರಾ?.. ಎಂದು ಗುಡುಗಿದರು. ಮೆಟ್ರೋ ಯೋಜನೆಗೆ ಹಣ ಹೊಂದಿಸಲು ಬೆಲೆ ಏರಿಕೆ ಮಾಡಿದ್ದೀರಾ. ಕೇಂದ್ರ ಸರ್ಕಾರಕ್ಕೆ ಬೆಲೆ ಏರಿಸಬಾರದು ಎಂದು ಪತ್ರ ಬಂದಿದೆ ಎಂದು ಕುಮಾರಸ್ವಾಮಿಯವರು ತಿಳಿಸಿದರು. ಈ ಬಾರಿ ಕೇಂದ್ರದ ಬಜೆಟ್ ನಲ್ಲಿ ಯುವಕರಿಗೆ ಉದ್ಯೋಗವನ್ನು ಕಲ್ಪಿಸಿದೆ.

ಬೃಹತ್ ಕೈಗಾರಿಕಾ ವಲಯಕ್ಕೂ ಉತ್ತೇಜನ ನೀಡಲಾಗಿದೆ ಮತ್ತು ಕ್ಯಾನ್ಸರ್ ಗೆ ಸಂಬಂಧಪಟ್ಟ 17 ಔಷಧಿಗಳಿಗೆ ತೆರಿಗೆ ವಿನಾಯಿತಿಯನ್ನು ಕೇಂದ್ರ ಸರ್ಕಾರವು ತಮ್ಮ ಬಜೆಟ್ ನಲ್ಲಿ ಘೋಷಿಸಿದೆ. ಹೊಂದಾಣಿಕೆ ಬಗ್ಗೆ ಚರ್ಚೆ ಮಾಡಿಲ್ಲ.ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಬ್ರಷ್ಟ ಕೆಟ್ಟ ಸರ್ಕಾರವನ್ನು ತೆಗೆದುಹಾಕಲು ನಾವು ಒಂದಾಗಿ ಹೋರಾಡುತ್ತಿದ್ದೇವೆ ಎಂದು ಬಿಬಿಎಂಪಿ ಚುನಾವಣೆ ಕುರಿತು ಕುಮಾರಸ್ವಾಮಿಯವರು ಹೇಳಿದರು.

ಕುಮಾರಸ್ವಾಮಿ ಮಂಡ್ಯಕ್ಕೆ ಏನು ತಂದರು? ರಾಜಕೀಯ ಏನು ತಂದರು? ಅಂತ ದಿನಂಪ್ರತಿ ಮಂಡ್ಯ ಶಾಸಕರು ಪ್ರಶ್ನಿಸುತ್ತಾ ತಮ್ಮ ಸಣ್ಣತವನ್ನು ತೋರಿಸುತ್ತಿದ್ದಾರೆ. ಕಾಂಗ್ರೆಸ್ ಶಾಸಕರ ಪ್ರಶ್ನೆಗಳಿಗೆ ಬಜೆಟ್ ನಲ್ಲಿ ಉತ್ತರವಿದೆ ಎಂದು ಅವರು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಬದಲಾಗ್ತಾರಾ ಎಂಬುದಕ್ಕೆ, ನಾವೇನು ಜ್ಯೋತಿಷಿಯಲ್ಲ. ಮುಖ್ಯಮಂತ್ರಿ ಯಾರಾದರೇನು ? ಎಂದು ಗೂಡುಗಿದರು. ಆಟೋ ಮೇಟಿವ್ ಇಂಡಿಯಾ ಸಂಸ್ಥೆಯ ಸಂಘಟಕ ಸ್ಥಾಪಿಸಲು ನೂರು ಎಕರೆ ಜಾಗವನ್ನು ಮಂಡ್ಯದಲ್ಲಿ ಕೊಡಲು ರಾಜ್ಯ ಸರ್ಕಾರಕ್ಕೆ ನಾನು ಪತ್ರ ಬರೆದಿದ್ದೇನೆ ಸಿಎಂ ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳಿಗೆ ತಲುಪಿದೆ.

ನಾನೇ ಖುದ್ದಾಗಿ ಸಿಎಂ ಅವರಿಗೆ ಪತ್ರ ಬರೆದಿದ್ದೇನೆ. ನಾನು ನಾಟಕವಾಡಲು ಪತ್ರ ಬರೆದಿಲ್ಲ, ನಾಟಕವಾಡುವುದಕ್ಕೆ ನನಗೆ ಪ್ರಧಾನಿಯವರು ಈ ಸ್ಥಾನ ಕೊಟ್ಟಿಲ್ಲ. ಆಟೋ ಮೊಬೈಲ್ ಇಂಡಸ್ಟ್ರಿ ಸ್ಥಾಪನೆಗೆ ಕೇಂದ್ರ ಸರ್ಕಾರ ಬೆಂಬಲವನ್ನು ಸೂಚಿಸಿದೆ. ‘ರಾಜ್ಯದ ಕೈಗಾರಿಕಾ ಅಭಿವೃದ್ಧಿಗೆ ಪ್ರಾಮಾಣಿಕನಾಗಿ ನಾನು ದುಡಿಯುತ್ತಿದ್ದೇನೆ’ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಅವರು ಬೇರೆ ಬೇರೆ ಮಹಾನ್ ನಾಯಕರ ಜೊತೆ ಯಲ್ಲಿದ್ದಾರೆ. ಈಗ ಅವರು ನಮ್ಮ ಜೊತೆಯಲ್ಲಿ ಇಲ್ಲ ಎಂದು ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದರು. ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಯಾವುದು ಇಲ್ಲದವರನ್ನು ನಾವು ಜೊತೆಯಲ್ಲಿಟ್ಟು ಕೊಳ್ಳಬೇಕಾ? ಎಂದು ಗುಡುಗಿದರು. ನನ್ನ ಮುಂದೆ ಪದೇಪದೇ ಜಿಟಿಡಿ ಹೆಸರು ಪ್ರಸ್ತಾಪಿಸಬೇಡಿ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಅವರು ಮನವಿ ಮಾಡಿಕೊಂಡರು.

ಮುಂದಿನ ಚುನಾವಣೆಯಲ್ಲಿ 11 ಕ್ಷೇತ್ರಗಳಲ್ಲೂ ಜೆಡಿಎಸ್ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಅವರು ವಿಶ್ವಾಸವನ್ನು ವ್ಯಕ್ತಪಡಿಸಿದರು. ಚಾಮುಂಡಿ ಕ್ಷೇತ್ರಕ್ಕೂ ನನಗೂ ಭಾವನಾತ್ಮಕ ಸಂಬಂಧವಿದೆ .ಅಲ್ಲಿ ಯಾರನ್ನಾದರೂ ಅಭ್ಯರ್ಥಿ ಮಾಡಿದರೆ ಗೆಲ್ಲುತ್ತಾರೆ. ಹಲವು ಜನ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧೆ ಮಾಡಲು ಸಿದ್ಧರಾಗಿದ್ದಾರೆ.

ಬಿಜೆಪಿ ಸಂಸದರು ಬಾಯಿ ತೆರೆಯಲ್ಲ ಅಂತೀರಿ. ಕೇಂದ್ರದ ಜೊತೆ ನಿಮ್ಮ ಸಹಕಾರ ಎಷ್ಟಿದೆ? ರಾಜ್ಯದ ಯಾವ ಮಂತ್ರಿಯೂ ನನ್ನ ಬಳಿ ಬಂದಿಲ್. ನೀವು ಮಾಡಿರುವ ಸಾಲ ತೀರಿಸಲು ನಿಮ್ಮ ಬಳಿ ಹಣ ಇಲ್ಲವೇ ? .ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿಲ್ಲ. ಮೆಟ್ರೋ ಪಯಣದರ ಏರಿಸಿ ಕೇಂದ್ರ ಸರ್ಕಾರದಕ್ಕೆ ಬೆರಳು ಮಾಡಿ ತೋರಿಸುತ್ತಿದ್ದೀರಿ. ಇದು ಎಷ್ಟರಮಟ್ಟಿಗೆ ಸರಿ ಎಂದು ವಾಗ್ದಾಳಿಯನ್ನು ನಡೆಸಿದರು.

ಖಾಲಿ ಚೊಂಬಿನ ಕ್ರೆಡಿಟ್ ರಾಜ್ಯ ಸರಕಾರಕ್ಕೆ ಸಲ್ಲುತ್ತದೆ. ಕೇಂದ್ರದ 53ಕ್ಕೂ ಹೆಚ್ಚಿನ ಸ್ಕೀಮ್ಗಳನ್ನು ರಾಜ್ಯ ಸರ್ಕಾರಗಳು ಬಳಕೆ ಮಾಡಿಕೊಳ್ಳುತ್ತಿಲ್ಲ. ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಬಜೆಟ್ ವಿರುದ್ಧ ಮಾತನಾಡುತ್ತಿದ್ದೀರಿ ಎಂದು ಅವರು ಗುಡುಗಿದರು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಜೊತೆ ಉತ್ತಮ ಭಾಂದವ್ಯ ಇಟ್ಟುಕೊಳ್ಳಲಿ. ಪ್ರತಿಯೊಂದು ಕೇಂದ್ರ ಸರ್ಕಾರವನ್ನು ಆರೋಪಿಸುವುದು ಬಿಟ್ಟು ತಮ್ಮ ಸರ್ಕಾರದ ಬಗ್ಗೆ ಚಿಂತಿಸಬೇಕು. ಮಾವಿನ ಬೆಲೆ ಕುಸಿತಗೊಂಡಾಗ ಬೆಂಬಲ ಬೆಲೆ ಕೊಟ್ಟಿದ್ದು ನರೇಂದ್ರ ಮೋದಿ ಸರ್ಕಾರ ಎಂದು ರಾಜ್ಯ ಸರ್ಕಾರದ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಅವರು ಗುಡುಗಿದರು. ಸಿದ್ದರಾಮಯ್ಯನವರು ರಾಜ್ಯವನ್ನು ದಿವಾಳಿ ಮಾಡುತ್ತಾರೆ ಎಂದು ಅವರು ಆರೋಪಿಸಿದ್ದಾರೆ.




ಇನ್ನಷ್ಟು ಓದಿರಿ:
ಜಯಮ್ಮ ಪದ್ಮರಾಜ್ ನಿರ್ಮಿಸಿದ ದೈವ ಟ್ರೈಲರ್ ರಿಲೀಸ್

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online