belagavi news :
'ಧುರಂಧರ್' ಹಮ್ಜಾ ಅಲಿ ಕ್ವಾಟ್ಲೆ ಕಿಚನ್ ಗೆ ಎಂಟ್ರಿ; ವಿಡಿಯೋದಲ್ಲಿ ಸಖತ್ ಮನರಂಜನೆ"
'ಧುರಂಧರ್' (Dhurandhar) ಹಾಗೂ 'ಧುರಂಧರ್ 2' ಸಿನಿಮಾಗಳು ಭರ್ಜರಿ ಯಶಸ್ಸು ಕಂಡ ಬಳಿಕ, ಚಿತ್ರದ ಹಮ್ಜಾ ಅಲಿ ಪಾತ್ರ ಎಲ್ಲೆಡೆ ಚರ್ಚೆಯಾಗುತ್ತಿದೆ. ನಟ Ranveer Singh ಅವರು ' ಧುರಂಧರ್' ಸಿನಿಮಾದಲ್ಲಿ ಹಮ್ಜಾ ಅಲಿ ಪಾತ್ರದ ಮೂಲಕ ಗಮನ ಸೆಳೆದಿದ್ದು, ಇದೀಗ ಈ ಪಾತ್ರ ಇಂಟರ್ನೆಟ್ ಮೀಮ್ ಗಳು ಹಾಗೂ ಜಾಹೀರಾತುಗಳಲ್ಲೂ ಟ್ರೆಂಡ್ ಆಗುತ್ತಿದೆ.
ಈಗ 'ಧುರಂಧರ್' ಹಮ್ಜಾ ಅಲಿ ಪಾತ್ರದ ಝಲಕ್ ಕಲರ್ಸ್ ನ ಜನಪ್ರಿಯ ಕಾರ್ಯಕ್ರಮ "ಕ್ವಾಟ್ಲೆ ಕಿಚನ್ 2" ರಲ್ಲೂ ಕಾಣಿಸಿಕೊಂಡಿದೆ. ಹಾಸ್ಯ ಕಲಾವಿದರೊಬ್ಬರು ಹಮ್ಜಾ ಅಲಿ ವೇಷ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿ ಸ್ಪರ್ಧಿಗಳಿಗೆ ಸಖತ್ ಮನೋರಂಜನೆ ನೀಡಿದ್ದಾರೆ.
ಹಮ್ಜಾ ಅಲಿ ಗೆಟಪ್ ನಲ್ಲಿ ಬಂದ ಕಲಾವಿದರೊಂದಿಗೆ ಸ್ಪರ್ಧಿಗಳು ತಮಾಷೆಯ ಮಾತುಕತೆ ನಡೆಸಿದ್ದು, ಅವರ ಕಾಲೆಳೆಯುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮನರಂಜನೆಯ ರಂಗು ತುಂಬಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಧುರಂಧರ್ ಹಮ್ಜಾ ಅಲಿ, ರಣವೀರ್ ಸಿಂಗ್, ಕ್ವಾಟ್ಲೆ ಕಿಚನ್ 2, ವೈರಲ್ ವಿಡಿಯೋ, ಮನರಂಜನೆ ಸುದ್ದಿ, ಇದೀಗ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.