belagavi news:
ದೇಶ್ಯಾದಂತ ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ಬಿಸಿ ಗಾಳಿ ನೀರು ಘಟಕಗಳನ್ನು ಕಾರ್ಯಗತ ಸ್ಥಿತಿಯಲ್ಲಿ ಇಡಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೋಮವಾರ ನಿರ್ದೇಶನ ನೀಡಿದೆ.
ನವದೆಹಲಿ: ದೇಶದಲ್ಲಿ ಬೇಸಿಗೆ ಬಿಸಿಲು ಬೆಂಕಿಯಂತಿದೆ. ನೆತ್ತಿ ಸುಡುವ ಬಿಸಿಲಿಗೆ ಜನ ಹೈರಾಣಾ ಗುತ್ತಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ಬಿಸಿ ಗಾಳಿ ನಿರ್ವಹಣೆಗೆ ಮೀಸಲಾದ ಘಟಕಗಳನ್ನು ಕಾರ್ಯಗತಗೊಳಿಸಲು ಹಾಗೂ ಆಂಬ್ಯುಲೆನ್ಸ್ ಸೇವೆಗಳನ್ನು ಸಮರ್ಪಕವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರವು ಇಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.
ಹೀಟ್ ವೇವ್ ಅಲರ್ಟ್: ಪ್ರಸ್ತುತ ಬೇಸಿಗೆಯಲ್ಲಿ ನಿರೀಕ್ಷೆಯ ಸಾಮಾನ್ಯಕ್ಕಿಂತ ಹೆಚ್ಚಿನ ಬಿಸಿ ಗಾಳಿಯ ದಿನಗಳನ್ನು ಸಂಭವಿಸುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಈ ನಿರ್ದೇಶನ ನೀಡಿದೆ.
ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಪುಣ್ಯ ಸಲಿಲಾ ಶ್ರೀವಾಸ್ತವ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸಮಗ್ರ ಆರೋಗ್ಯ ಮಾಹಿತಿ ವೇದಿಕೆ ಐಎಚ್ಐಪಿ ಪೋರ್ಟಲ್ ನಲ್ಲಿ ಆರಂಭಿಕ ಎಚ್ಚರಿಕೆಗಳು ಹಾಗೂ ಶಾಖ ಗಾಳಿ ಪ್ರಕರಣಗಳ ನೈಜ ಸಮಯದ ವರದಿಯನ್ನು ಸಮಯೋಚಿತವಾಗಿ ಹಂಚಿಕೊಳ್ಳುವ ಅವಕಾಶವನ್ನು ತಿಳಿಸಿದ್ದಾರೆ.
ಭಾರತೀಯ ಹವಮಾನ ಇಲಾಖೆ ನೀಡಿರುವ ಮುನ್ಸೂಚನೆ ಯಂತೆ ಏಪ್ರಿಲ್ ನಿಂದ ಜೂನ್ 2026ರ ಅವಧಿಯಲ್ಲಿ ಪೂರ್ವ ಮಧ್ಯ ಮತ್ತು ವಾಯುವ್ಯ ಭಾರತ ಹಾಗೂ ಆಗ್ನೇಯ ಪರ್ಯಾಯ ದ್ವೀಪದ ಕೆಲವು ಭಾಗಗಳಲ್ಲಿ ಸಾಮಾನ್ಯಕಿಂತ ಹೆಚ್ಚು ಶಾಖದ ದಿನಗಳು ಇರಬಹುದೆಂದು ಪತ್ರದಲ್ಲಿ ತಿಳಿಸಲಾಗಿದೆ. ಓಡಿಸಾ, ಪಶ್ಚಿಮ ಬಂಗಾಳ, ತಮಿಳ್ ನಾಡು, ಪುದುಚೇರಿ ಹಾಗೂ ಆಂಧ್ರಪ್ರದೇಶದ ಹಲವು ಕರಾವಳಿ ಪ್ರದೇಶಗಳು ಇದರಿಂದ ಹೆಚ್ಚು ಪರಿಣಾಮ ಕ್ಕೊಳಗಾಗುವ ಸಾಧ್ಯತೆ ಇದೆ.
ಇದೇ ವೇಳೆ ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿಯೂ ಬಿಸಿ ಗಾಳಿಯ ಪರಿಣಾಮ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಲಾಗಿದೆ.
Also Read:
ಮಧ್ಯವರ್ತಿಗಳಿಗೆ ಕಚೇರಿಯಲ್ಲಿ ಅವಕಾಶ ಬೇಡ, ಹೊರಗೇ ಕಳಿಸಿ: ಸಿಎಂ ಸೂಚನೆ