<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಬೆಳಗಾವಿಯಲ್ಲಿ ಭಾರಿ ಗಾಳಿ- ಮಳೆ ಅಬ್ಬರ!

ಬೆಳಗಾವಿಯಲ್ಲಿ ಭಾರಿ ಗಾಳಿ- ಮಳೆ ಅಬ್ಬರ!
Summary: Heavy rain accompanied by wind has caused trees and electric poles to fall in many places in Belgaum. This has caused traffic disruption and power supply has also been disrupted in some areas.

belagavi news:

ಬೆಳಗಾವಿ: ಬಿರುಗಾಳಿ ಬೀಸಿದ ಪರಿಣಾಮ ಬೆಳಗಾವಿ ನಗರದಲ್ಲಿ 6ಕ್ಕೂ ಹೆಚ್ಚು ಬೃಹತ ಮರಗಳು ಹಾಗೂ ಮೂರು ವಿದ್ಯುತ್ ಕಂಬಗಳು ಧರೆಗುರುಳಿವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಸಿಲಿನಿಂದ ಬಸವಳಿದಿದ್ದ ಬೆಳಗಾವಿ ನಗರಕ್ಕೆ ಮಳೆರಾಯ ಒಂದೆಡೆ ತಂಪು ನೀಡಿದರೆ ಮತ್ತೊಂದೆಡೆ ಅವಾಂತರವನ್ನು ಸೃಷ್ಟಿಸಿದ್ದಾನೆ. ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದ ಜನರಲ್ಲಿ ಭೀತಿ ಉಂಟಾಗಿದೆ.

ಮಂಗಳವಾರ ಬೆಳಿಗ್ಗೆ ಇಂದಲೇ ನಗರದಲ್ಲಿ ಸುಡು ಬಿಸಿಲು ಕಾಡಿತ್ತು. ರನ್ನರನ ಬಿಸಿಲಿನಿಂದ ಜನರು ಕಂಗೆಟ್ಟಿದ್ದರು. ಆದರೆ ಸಾಯಂಕಾಲ ಸುಮಾರು 5:00 ವೇಳೆಗೆ ಏಕಾಏಕಿ ಬಿರುಗಾಳಿ ಬೀಸಲು ಆರಂಭವಾಯಿತು. ಅದರೊಂದಿಗೆ ಗುಡುಗುಮಿಂಚು ಸಹಿತ ಭಾರಿ ಮಳೆ ಸುರಿಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ನಿರಂತರವಾಗಿ ಸುರಿಯಿತು.

Sponsored

ಮಳೆ ಮತ್ತು ಬಿರುಗಾಳಿ ಎರಡು ಒಂದೇ ಸಮಯದಲ್ಲಿ ಬೀಸಿದ ಪರಿಣಾಮ ಬೆಳಗಾವಿ ನಗರದಲ್ಲಿ 6ಕ್ಕೂ ಹೆಚ್ಚು ಬೃಹತ್ ಮರಗಳು ಹಾಗೂ ಮೂರು ವಿದ್ಯುತ್ ಕಂಬಗಳು ದರೆಗುರುಳಿವೆ . ಇದರಿಂದ ಕೆಲವು ಪ್ರದೇಶಗಳಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ವಿದ್ಯುತ್ ವ್ಯತ್ಯಯವೂ ಕಂಡು ಬಂದಿದೆ. ಅದೃಷ್ಟವಶಾತ ಈ ಘಟನೆಗಳಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ನಗರದ ಜಿಲ್ಲಾಸ್ಪತ್ರೆ ರಸ್ತೆ, ಶಾಹು ನಗರದ ಮೊದಲನೇ ಕ್ರಾಸ್, ಜಿನಾ ಬಕುಲ್ ರಸ್ತೆ, ಹಳೆ ಆರ್ ಟಿಓ ವೃತ್ತ, ಸದಾಶಿವನಗರ್ ಹಾಗೂ ಹಿಂಡಲಗಾ ಪ್ರದೇಶದ ಮುಖ್ಯ ರಸ್ತೆಗಳಲ್ಲಿ ಮರು ಮರಗಳು ಬುಡಸಮೇತ ಕಿತ್ತು ಬಿದ್ದಿವೆ.

ರಜೆ ಹಿನ್ನೆಲೆ ಮಕ್ಕಳನ್ನು ಉದ್ಯಾನಗಳಿಗೆ ಕರೆದುಕೊಂಡು ಬಂದಿದ್ದವರು ಹಾಗೂ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದವರು ಏಕಾಏಕಿ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಯಿಂದ ಪರದಾಡುವಂತಾಯಿತು. ಹಲವರು ಸಮೀಪದ ದೇವಸ್ಥಾನಗಳು, ಹೋಟೆಲ್ ಗಳು ಹಾಗೂ ಅಂಗಡಿಗಳಲ್ಲಿ ಆಶ್ರಯ ಪಡೆದರು.

ನಗರದ ರಾಣಿ ಚೆನ್ನಮ್ಮ ವೃತ್ತ, ಕ್ಯಾಂಪ್ ಪ್ರದೇಶ, ಕಾಂಗ್ರೆಸ್ ರಸ್ತೆ, ತಿಲಕವಾಡಿ, ಶಾಹುನಗರ, ಗಾಂಧಿನಗರ ಉದ್ಯಮಭಾಗ ಹಾಗೂ ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಬಿರುಗಾಳಿಯೊಂದಿಗೆ ಮಳೆ ಸುರಿಯಿತು. ಪರಿಣಾಮವಾಗಿ ರಸ್ತೆ ಮತ್ತು ಚರಂಡಿಗಳು ನೀರಿನಿಂದ ತುಂಬಿ ಹರಿದವು. ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು.

Sponsored

ಕೆಲವೊಂದು ಚರಂಡಿಗಳು ಹೂಳು ತುಂಬಿಕೊಂಡ ಬ್ಲಾಕ್ ಆಗಿದ್ದವು. ಇದರಿಂದ ನೀರು ಮುಂದೆ ಹರಿಯಲು ತೊಂದರೆ ಉಂಟಾಗಿತ್ತು. ಈ ವೇಳೆ ಟ್ರಾಫಿಕ್ ಪೊಲೀಸರೇ ಕಾರ್ಯಾಚರಣೆಗಿಳಿದು ನೀರು ಸರಾಗವಾಗಿ ಹರಿಯುವಂತೆ ಮಾಡಿದರು.

ನೆಲಕ್ಕುರುಳಿದ ಮರಗಳು ಮತ್ತು ವಿದ್ಯುತ್ ಕಂಬಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮಳೆ ನಿಂತವಳಿಕ ಅಲ್ಲಲ್ಲಿ ಆಶ್ರಯ ಪಡೆದಿದ್ದ ಜನರು ನಿಟ್ಟುಸಿರು ಬಿಟ್ಟು ತಮ್ಮ ಮನೆಗಳತ್ತ ಹೊರಟರು.

Also Read:

"ನಾವು ತಂಡವಾಗಿ ಕೆಲಸ ಮಾಡಬೇಕಿತ್ತು, ಒಟ್ಟಾಗಿ ಸಾಗಬೇಕಿತ್ತು. ವಿ ಸೋಮಣ್ಣ"

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online