belagavi news :
ಉಪಚುನಾವಣೆಯಲ್ಲಿ ತಂಡವಾಗಿ ಕೆಲಸ ಮಾಡದಿರುವುದೇ ಸೋಲಿಗೆ ಕಾರಣ ಎಂದು ಕೇಂದ್ರ ಸಚಿವ ವಿ ಸೋಮನ ಹೇಳಿದರು. ಮಂಗಳವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ದೇಶ ಇದ್ದರೆ ಪಕ್ಷ, ಪಕ್ಷ ಇದ್ದರೆ ನಾವು. ಇದನ್ನು ಅರಿತು ನನ್ನನ್ನು ಸೇರಿ ಎಲ್ಲರೂ ಒಟ್ಟಿನಿಂದ ಕೆಲಸ ಮಾಡಬೇಕಿತ್ತು. ಟೀಮ್ ವರ್ಕ್ ನಲ್ಲಿ ಎಡವಟ್ಟಾಗಿದೆ. ಆದರೆ ಮುಂದೆ ಎಲ್ಲವೂ ಸರಿಯಾಗಲಿದೆ, ಯಾರ ಮೇಲು ಹೊಣೆ ಹಾಕುವುದಿಲ್ಲ"ಎಂದು ತಿಳಿಸಿದ್ದಾರೆ. ಬೈ ಎಲೆಕ್ಷನ್ ಸೋಲು ನೋವು ತಂದಿದೆ ಎಂದು ಹೇಳಿದ ಅವರು, ಸಿದ್ದರಾಮಯ್ಯ ಅವರ ವಿರುದ್ಧ ಟೀಕೆ ಮಾಡಿದರು." ದುಡ್ಡು ಮತ್ತು ಪಾಪದ ಕೆಲಸಗಳಿಂದ ಗೆದ್ದಿದ್ದಾರೆ"ಎಂದು ಆರೋಪಿಸಿದರು.
ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ಸಿಕ್ಕಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ನಿತಿನ್ ಗಡ್ಕರಿ ಅಭಿನಂದನೆ ಸಲ್ಲಿಸಿದರು. ಮಹಿಳಾ ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಇದನ್ನು ಒಪ್ಪದಿದ್ದರೆ ಮುಂದಿನ ದಿನಗಳಲ್ಲಿ ಪಶ್ಚಿಮ ಬಂಗಾಳದಂತ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಸಿದರು. ತಮಿಳುನಾಡಿನಲ್ಲಿ ಡಿಎಂಕೆ ವಂಶಾಡಳಿತಕ್ಕೆ ಜನರು ಅಂತ್ಯ ಹಾಡುತ್ತಿದ್ದಾರೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಜನರು ಐತಿಹಾಸಿಕ ತೀರ್ಪು ನೀಡಿದ್ದು,"2011ರಲ್ಲಿ ಶೂನ್ಯವಾಗಿದ್ದ ನಾವು ಈಗ 200 ಸೀಟುಗಳನ್ನು ದಾಟಿದ್ದೇವೆ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಕನಸನ್ನು ಮೋದಿ ಅವರು ಈಡೇರಿಸಿದ್ದಾರೆ. ಟಿಎಂಸಿ ಪಕ್ಷದ ಗುಂಡಾಗಿರಿ ಹಾಗೂ ಹಿಂಸಾಚಾರಕ್ಕೆ ಅಂತ್ಯಕಾಲ ಆರಂಭವಾಗಿದೆ. ಎಂದು ಹೇಳಿದರು.
ಉಪ ಚುನಾವಣಾ ಫಲಿತಾಂಶಗಳು ಇತ್ತೀಚಿಗೆ ಪ್ರಕಟವಾಗಿದ್ದು, ಪ್ರಮುಖ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗೂ ಎಚ್ ವೈ ಮೇಟಿ ಅವರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸಮರ್ಥ್ ಶಾಮನೂರು ಅವರು ಕಾಂಗ್ರೆಸ್ ಪರವಾಗಿ ಜಯಗಳಿಸಿದರು. ಅವರು ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ರಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ಸೋಲ ಅನುಭವಿಸಿದರು. ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು 21866 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ್ ಅವರು 76075 ಮತಗಳನ್ನು ಪಡೆದು ಸೋಲು ಕಂಡರು.
ಮೇ 9 ರಂದು ನಡೆಯಲಿರುವ ಅಭಿಮಾನೋತ್ಸವ ಕುರಿತು ಮಾತನಾಡಿದ ಕೇಂದ್ರ ಸಚಿವ ವಿ ಸೋಮಣ್ಣ,"ಅಭಿಮನೋತ್ಸವಕ್ಕೆ ನನ್ನನ್ನು ಆಹ್ವಾನಿಸಿದ್ದಾರೆ. ಇದು ಪಕ್ಷಾತೀತವಾಗಿ ನಡೆಯುತ್ತಿದೆ ಎಂದು ತಿಳಿದುಬಂದಿದೆ. ನಾನು ಕೇಂದ್ರದಿಂದ ಮಂತ್ರಿಯಾಗಿದ್ದೇನೆ. ಬಿಎಸ್ ಯಡಿಯೂರಪ್ಪ ಅನೇಕ ನಾಯಕರ ಜೊತೆ ಕೆಲಸ ಮಾಡಿದ್ದಾರೆ. ಅವರ ಅಭಿಮಾನೋತ್ಸವಕ್ಕೆ ಕರೆದಿರುವುದರಿಂದ ನಾನು ಹೋಗುತ್ತೇನೆ. ಕಾರ್ಯಕ್ರಮವನ್ನು ಹೇಗೆ ನಡೆಸುತ್ತಾರೆ ಎಂಬ ಮಾಹಿತಿ ನನಗಿಲ್ಲ"ಎಂದು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ರಾಗುವ ವಿಚಾರಕ್ಕೆ ಪ್ರತಿಕ್ರಿಸಿದ ಅವರು,"ಯಾವುದೇ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಈಗ ರಾಜ್ಯದಲ್ಲಿ ಅಧ್ಯಕ್ಷರಿದ್ದಾರೆ. ವರಿಷ್ಠರು ಏನು ನಿರ್ಧರಿಸುತ್ತಾರೋ ಅದಕ್ಕೆ ನಾವು ಬದ್ಧ. ಎಲ್ಲವೂ ದೇವರ ಕೃಪೆ ಮತ್ತು ಜನರ ಆಶೀರ್ವಾದ"ಎಂದು ಹೇಳುವ ಮೂಲಕ ಪರೋಕ್ಷವಾಗಿ ಹುದ್ದೆಯ ಮೇಲಿನ ಆಸೆ ವ್ಯಕ್ತಪಡಿಸಿದರು.
Also Read:
Satish Jarkiholi Statement: CM, DCM ಜೊತೆ ಮಾತುಕತೆ ಮಾಡಿ ಸಮಸ್ಯೆ ಬಗೆಹರಿಸಬೇಕು