belagavi news:
ಬೆಂಗಳೂರು: ಸಿಎಂ ಹಾಗೂ ಡಿಸಿಎಂ ಅವರನ್ನು ದೆಹಲಿಗೆ ಕರೆಯಿಸಿ ರಾಜ್ಯದ ರಾಜಕೀಯ ಗೊಂದಲಗಳಿಗೆ ಸ್ಪಷ್ಟತೆ ನೀಡಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದವರು ಮಲ್ಲಿಕಾರ್ಜುನ ಖರ್ಗೆಯವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು. "ಎಷ್ಟು ದಿನ ಹೀಗೆ ಮುಂದುವರೆಯಲು ಸಾಧ್ಯ? ಶೀಘ್ರವಾಗಿ ನಿರ್ಧಾರವಾಗಬೇಕು. ಹೈಕಮಾಂಡ್ ನಾಯಕರು ಈ ಬಗ್ಗೆ ಕ್ರಮ ಕೈಗೊಳ್ಳಬಹುದು. ಎಲ್ಲರ ಅಭಿಪ್ರಾಯವೂ ಇದೇ ಆಗಿದೆ," ಎಂದು ಹೇಳಿದರು.
ರಾಜ್ಯದಲ್ಲಿ ಉಂಟಾಗಿರುವ ಗೊಂದಲಗಳನ್ನು ಮೊದಲು ಸರಿಪಡಿಸಬೇಕು ಹಾಗೂ ಸ್ಪಷ್ಟವಾಗಿ ತೀರ್ಮಾನ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.
ಅಹಿಂದ ಮತ್ತೆ ವಾಪಸ್ ತಂದಿದ್ದೇವೆ: ನಾವು ಅಹಿಂದ ವೋಟು ವಾಪಸ್ ತಂದಿದ್ದೇವೆ. ನಮ್ಮ ತಂಡ ಕೂಡ ಸಾಕಷ್ಟು ಕೆಲಸ ಮಾಡಿದೆ. ಶಿಗ್ಗಾವಿಯನ್ನು ನಾವು ಅದೇ ತಂತ್ರ ಬಳಸಿದ್ದೆವು, ಅಲ್ಲಿ ಕೂಡ ಅಹಿಂದ ಮತಗಳೆ ಕೈಹಿಡಿದಿದ್ದವು ಎಂದು ಅವರು ಹೇಳಿದರು. ಕಾಂಗ್ರೆಸ್ ಗೆಲ್ಲಲು ಅವೇ ಮುಖ್ಯವಾಗಿದ್ದು ಅವನ್ನು ಕಾಪಾಡಿಕೊಂಡು ಹೋಗಬೇಕು ಎಂದ ಅಭಿಪ್ರಾಯಪಟ್ಟರು.
2028 ರಲ್ಲಿ ಅಹಿಂದ ಒಗ್ಗೂಡಿಸುವುದು ದೊಡ್ಡ ಸವಾಲಾಗಿದ್ದು , ಅದಕ್ಕಾಗಿ ಇನ್ನು ಎರಡು ವರ್ಷ ಸಮಯವಿದೆ. ಅವಧಿಯಲ್ಲಿ ಎಲ್ಲರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತೇವೆ. ಜಿಪಂ ಮತ್ತು ತಾಪಂ ಚುನಾವಣೆಗಳು ಬರುತ್ತಿದ್ದು, ಅಲ್ಲಿ ಬೇರೆ ರೀತಿಯ ತಂತ್ರ ಅಗತ್ಯವಿದೆ. ನಾವು ಅಹಿಂದ ವರ್ಗದವರೇ ಆಗಿದ್ದೇವೆ, ಆದರೆ ಸ್ಥಳೀಯ ಮಟ್ಟದಲ್ಲಿ ಇದು ಕೆಲವೊಮ್ಮೆ ಕಾರ್ಯಗತವಾಗುವುದಿಲ್ಲ ಎಂದು ಹೇಳಿದರು.
ದಾವಣಗೆರೆಯಲ್ಲಿ ಅಲ್ಪಸಂಖ್ಯಾತ ಮತ ಕಡಿಮೆಯಾದ ವಿಚಾರಕ್ಕೆ ಪ್ರತಿಕ್ರಿಸಿದವರು ಅದು ಕೈವಾಡದಿಂದ ಆಗಿದೆಯೋ ಅಥವಾ ಸ್ಥಳೀಯ ಅಭ್ಯರ್ಥಿಯ ಕಾರಣವೋ ಎನ್ನುವುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದರು. ಚುನಾವಣೆಗೆ ಇನ್ನು ಎರಡು ವರ್ಷ ಇರುವುದರಿಂದ ಆ ಅವಧಿಯಲ್ಲಿ ಎಲ್ಲವನ್ನು ಸರಿಪಡಿಸಬೇಕು ಎಂದು ಹೇಳಿದರು. ದಾವಣಗೆರೆಯನ್ನು ಮಾತ್ರ ಸೀಮಿತವಾಗಿ ನೋಡಬಾರದು, ಇಡೀ ರಾಜವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಸಿಎಂ ಮತ್ತು ಡಿಸಿಎಂ ಎಲ್ಲರನ್ನು ಕರೆದು ಈ ಬಗ್ಗೆ ಚರ್ಚೆ ಮಾಡುತ್ತಾರೆ ಎಂದು ಅವರು ತಿಳಿಸಿದ್ದಾರೆ.
ನಸೀರ್ ಅಹಮದ್, ಜಬ್ಬಾರ್ ಮಾನತೆ ವಿಚಾರವಾಗಿ ಪ್ರತಿಕ್ರೀಯಿಸಿ ಸಿಎಂ, ಡಿಸಿಎಂ ನೋಡುತ್ತಾರೆ. ನಮ್ಮ ಗೊಂದಲದಿಂದ ವೋಟು ಹೋಗಿದೆ ಅಷ್ಟೇ, ಯಾಕೆ ನಮ್ಮ ವೋಟು ಹೋಯಿತು ? ಅದನ್ನು ಸರಿಪಡಿಸುವ ಕೆಲಸ ಮಾಡಬೇಕು. ಹಿಂದೆಯೂ ಸಾಕಷ್ಟು ಜನ ವಿರೋಧ ಮಾಡಿದ್ದರು. ಒಮ್ಮೆ ತಪ್ಪು ಮಾಡ್ತಾರೆ ಸರಿ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ತಮಿಳ್ ನಾಡಿನಲ್ಲಿ ಟಿವಿಕೆಗೆ ಕಾಂಗ್ರೆಸ್ ನೀಡುತ್ತಿರುವ ಬೆಂಬಲದ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಅವರು ಸೆಕ್ಯುಲರ್ ಆಗಿದ್ದಾರೆ, ನಾವು ಕೂಡ ನಾವು ಕೂಡ ಸೆಕ್ಯುಲರ್ . ಸೆಕ್ಯುಲರ್ ಮೌಲ್ಯಗಳನ್ನು ಹೊಂದಿರುವವರು ಪರಸ್ಪರ ಬೆಂಬಲ ನೀಡಬೇಕು. ಡಿಎಂಕೆ ಯವರು ಹೊರಗಿನಿಂದ ಸಹಕರಿಸಿ ಟಿವಿಕೆಗೆ ಬೆಂಬಲ ನೀಡಬೇಕು. ಆಗಷ್ಟೇ ಸೆಕ್ಯುಲರಿಸಂ,ಉಳಿಯುತ್ತದೆ "ಎಂದು ಹೇಳಿದರು.
ನಸೀಲ್ ಮತ್ತು ಜಬ್ಬಾರ್ ವಿರುದ್ಧ ಕೆಪಿಸಿಸಿ ತೆಗೆದುಕೊಂಡ ಕ್ರಮ ಸರಿಯಾಗಿದೆ ಎಂಬ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು," ಅವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಅವರಿಗೆ ಮತ್ತೆ ಪಕ್ಷದಲ್ಲಿ ಅವಕಾಶ ನೀಡಬೇಕು. ಆ ಸಮುದಾಯ ಕಾಂಗ್ರೆಸ್ ಬಿಟ್ಟು ಎಲ್ಲಿಗೆ ಹೋಗುತ್ತದೆ? ಆದ್ದರಿಂದ ಅವರ ಮೇಲಿನ ಅಮಾನತು ಹಿಂಪಡೆಯಬೇಕು" ಎಂದು ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು
Also Read:
"ನನ್ನನ್ನು T20 ಆಟಗಾರನಾಗಿ ಯಾರೂ ನೋಡಲೇ ಇಲ್ಲ” : ಕೆ ಎಲ್ ರಾಹುಲ್ ಅಚ್ಚರಿ ಹೇಳಿಕೆ!"