<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

"ನನ್ನನ್ನು T20 ಆಟಗಾರನಾಗಿ ಯಾರೂ ನೋಡಲೇ ಇಲ್ಲ” : ಕೆ ಎಲ್ ರಾಹುಲ್ ಅಚ್ಚರಿ ಹೇಳಿಕೆ!"

"ನನ್ನನ್ನು T20 ಆಟಗಾರನಾಗಿ ಯಾರೂ ನೋಡಲೇ ಇಲ್ಲ” : ಕೆ ಎಲ್ ರಾಹುಲ್ ಅಚ್ಚರಿ ಹೇಳಿಕೆ!"
Summary: Reminiscing about the early days of his cricketing career, KL Rahul has revealed something important. He said that he was never considered a T20 format player in the beginning.

belagavi news :

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಕೆ ಎಲ್ ರಾಹುಲ್ ತಮ್ಮ ವಿಕೆಟ್ ವೃತ್ತಿ ಜೀವನದ ಆರಂಭದ ದಿನಗಳನ್ನು ನೆನೆಸಿಕೊಂಡು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆರಂಭದಲ್ಲಿ ತಮ್ಮನ್ನು ಟಿ 20 ಆಟಗಾರನಾಗಿ ಯಾರೂ ಪರಿಗಣಿಸಲಿಲ್ಲ ಮತ್ತು ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ ಎಂದು ಮಾತ್ರ ನೋಡಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

“ಜಿಯೋ ಸಿನಿಮಾ” ಆಯೋಜಿಸಿದ 'ಸೂಪರ್ ಸ್ಟಾರ್ಸ್ 'ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ರಾಹುಲ್ ತಮ್ಮ ಕ್ರಿಕೆಟ್ ಪ್ರಯಾಣದ ಬಗ್ಗೆ ಮನದಾಳದ ಮಾತುಗಳನ್ನು ಹೇಳಿದ್ದಾರೆ. ಸುಮಾರು 10 ವರ್ಷಗಳ ಹಿಂದೆ ಯಾವುದೇ ಬೆಲೆಯಾದರೂ ಟಿ20 ಪಂದ್ಯದಲ್ಲಿ ಸ್ಥಾನ ಪಡೆಯಲೇಬೇಕೆಂಬ ಆಸೆ ಇತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.

ಸಮಯದಲ್ಲಿ ವೈಟ್ ಬಾಲ್ ಕ್ರಿಕೆಟ್ನಲ್ಲಿ ತಮ್ಮನ್ನು ಗುರುತಿಸಲಾಗಿರಲಿಲ್ಲ ಮತ್ತು "ಟೆಸ್ಟ್ ಆಟಗಾರ"ಎಂಬ ಟ್ಯಾಗ್ ಮಾತ್ರ ಇದ್ದುದ್ದಾಗಿ ಅವರು ಹೇಳಿದ್ದಾರೆ. ಆದರೆ ಕಠಿಣ ಪರಿಶ್ರಮ ಮತ್ತು ನಿರಂತರ ಸುಧಾರಣೆಯ ಮೂಲಕ ಆಗ್ರಹಿಕೆಯನ್ನು ಬದಲಾಯಿಸಲು ಸಾಧ್ಯವಾಯಿತು ಎಂದು ರಾಹುಲ್ ತಿಳಿಸಿದ್ದಾರೆ.

Sponsored

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಕೆ ಎನ್ ರಾಹುಲ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಂದೆಯಾಗಿರುವುದು ತಮ್ಮ ಜೀವನದ ಅತ್ಯಂತ ಸುಂದರ ಅನುಭವ ಆಗಿದ್ದು, ತಮ್ಮ ಮಗಳನ್ನು ನೋಡಿದಾಗ ಎಲ್ಲ ನೋವು ಮತ್ತು ಒತ್ತಡಗಳು ಮರೆತು ಹೋಗುತ್ತವೆ ಎಂದು ಅವರು ಹೇಳುತ್ತಾರೆ. ಈ ಹೊಸ ಜೀವನ ಹಂತವು ತಮ್ಮ ಆಟದ ಮೇಲು ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ರಾಹುಲ್ ತಿಳಿಸಿದ್ದಾರೆ. ಈಗ ಕ್ರಿಕೆಟ್ ಅನ್ನು ಹೆಚ್ಚು ಆನಂದಿಸುತ್ತಿದ್ದು, ಅನಗತ್ಯ ಯೋಚನೆಗಳನ್ನು ಕಡಿಮೆ ಮಾಡಿ ಕೊಂಡಿರುವುದಾಗಿ ಅವರು ಹೇಳಿದ್ದಾರೆ.

ತಮ್ಮ ಆಟವನ್ನು ಸಾಕಷ್ಟು ಸುಧಾರಿಸಿದ್ದೇನೆ ಎಂದು ಹೇಳಿದ ಅವರು, ಹಿಂದೆ ಇದ್ದ ಇಮೇಜಿನಿಂದ ಹೊರಬರುವುದು ಸುಲಭವಲ್ಲ ಆದರೆ ನಿರಂತರ ಶ್ರಮದಿಂದ ಅದನ್ನು ಬದಲಾಯಿಸಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. ಚುಟುಕು ಕ್ರಿಕೆಟ್ ನಲ್ಲಿ ಕಠಿಣ ಪರಿಶ್ರಮ ವಹಿಸಿ ಈ ಹಂತವನ್ನು ತಲುಪಿರುವುದಕ್ಕೆ ಹೆಮ್ಮೆ ಇದೆ ಎಂದು ಹೇಳಿದ ರಾಹುಲ್, ದಾರಿ ಯುದ್ಧಕ್ಕೂ ಮಾಡಿದ ತಪ್ಪುಗಳನ್ನು ತಿದ್ದಿಕೊಂಡಿದ್ದೇನೆ ಮತ್ತು ಇನ್ನು ಕಲಿಯುತ್ತಲೇ ಇದ್ದೇನೆ ಎಂದು ತಿಳಿಸಿದ್ದಾರೆ. ಸದಾ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ ಎಂಬುದು ಅವರ ದೃಢ ನಿಲುವಾಗಿದೆ. 2022ರಿಂದ ಅವರು ಇಂಡಿಯನ್ ನ್ಯಾಷನಲ್ ಕ್ರಿಕೆಟ್ ಟೀಮ್ ಪರ ಟಿ20 ಪಂದ್ಯಗಳನ್ನು ಆಡಿಲ್ಲದಿದ್ದರೂ, ಏಕದಿನ ಮತ್ತು ಟೆಸ್ಟ್ ತಂಡದ ಪ್ರಮುಖ ಸದಸ್ಯರಾಗಿ ಮುಂದುವರೆದಿದ್ದಾರೆ. ಕ್ರಿಕೆಟ್ ಜೀವನ ಏರಿಳಿತದಿಂದ ಕೂಡಿದೆ ಹೇಳುವ ರಾಹುಲ್, ಆಟಗಾರರು ಅದನ್ನು ಸ್ವೀಕರಿಸಿ ಮುಂದುವರೆಯಲು ಕಲಿಯಬೇಕು ಎಂದು ಸಲಹೆಯನ್ನು ನೀಡಿದ್ದಾರೆ.

ಪ್ರಸ್ತುತ ಐಪಿಎಲ್ ಸೀಸನ್ ನಲ್ಲಿ ಅವರು ಅದ್ಭುತ ಫಾರ್ಮ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ ಪರ ಆಡುತ್ತಿರುವ ರಾಹುಲ್ ತಮ್ಮ ಟ್ರೇಡ್ ಮಾರ್ಕ್ ಗಳಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. 9 ಪಂದ್ಯಗಳಲ್ಲಿ 185.84 ಸ್ಟ್ರೈಕ್ ರೇಟ್ ನೊಂದಿಗೆ 43 ರನ್ ಗಳಿಸಿರುವ ಅವರು ಈ ಸೀಸನ್ 2 ಆಗಿದ್ದಾರೆ. ಪ್ರಸ್ತುತ ಅಗ್ರಸ್ಥಾನದಲ್ಲಿ ಅಭಿಷೇಕ್ ಶರ್ಮ ಇದ್ದಾರೆ.

Also Read:

Sponsored

ದೇವರ ಮನೆಯಲ್ಲಿ ದೀಪ ಹಚ್ಚುವ ಹಿಂದಿನ ರಹಸ್ಯವೇನು? ಇಲ್ಲಿದೆ ನೋಡಿ ಫುಲ್ ಅಪ್ಡೇಟ್

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online