belagavi news :
ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದ KD: THE DEVIL ಏಪ್ರಿಲ್ 30 ರಂದು ಅದ್ದೂರಿಯಾಗಿ ಚಿತ್ರಮಂದಿರಗಳಿಗೆ ಪ್ರವೇಶಿಸಿತು. ಮುಂಬೈನಲ್ಲಿ ನಡೆದ ಗ್ರಾಂಡ್ ಟೀಸರ್ ರಿಲೀಸ್ ಇವೆಂಟ್ ಸೇರಿದಂತೆ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ವಿಮರ್ಶಕರಿಂದಲೂ ಹೆಚ್ಚಿನ ಮಟ್ಟದ ಉತ್ತಮ ಪ್ರತಿಕ್ರಿಯೆ ಪಡೆದಿರುವ ಈ ಸಿನಿಮಾ ಬಿಡುಗಡೆಗೊಂಡ ನಾಲ್ಕು ದಿನಗಳಲ್ಲಿ ಒಟ್ಟು 15.93 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಬಾಕ್ಸ್ ಆಫೀಸ್ ನಲ್ಲಿ ಸ್ಥಿರ ಆರಂಭವನ್ನು ಕಂಡಿದೆ. ಅದ್ದೂರಿ ಮೇಕಿಂಗ್, ಭರ್ಜರಿ ಆಕ್ಷನ್ ಮತ್ತು ಬಹುತಾರಾಗಣದ ಮೂಲಕ ಗಮನ ಸೆಳೆದ ಈ ಬಿಗ್ ಬಜೆಟ್ ಸಿನಿಮಾ ಕಳೆದ ಗುರುವಾರ ಥಿಯೇಟರ್ಗಳಲ್ಲಿ ಗ್ರಾಂಡ್ ಎಂಟ್ರಿ ನೀಡಿತು. ಅಭಿಮಾನಿಗಳ ಸಂಭ್ರಮಾಚರಣೆಗಳ ನಡುವೆ ಚಿತ್ರತಂಡವು ಹಲವು ಸ್ಥಳಗಳಲ್ಲಿ ಪ್ರೇಕ್ಷಕರ ಜೊತೆ ಕೂತು ಸಿನಿಮಾ ವೀಕ್ಷಿಸಿತು.
ದಕ್ಷಿಣ ಚಿತ್ರರಂಗ ಬಿಗ್ ಬಜೆಟ್ ಯೋಜನೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಈ ಚಿತ್ರವನ್ನು ಕೆ ವಿ ಎನ್ ಪ್ರೊಡಕ್ಷನ್ಸ್ನ ಸಂಸ್ಥೆಯ ವೆಂಕಟ.ಕೆ.ನಾರಾಯಣ ನಿರ್ಮಿಸಿದ್ದಾರೆ. ಸಿನಿಮಾಗೆ ಸಂಗೀತ ನಿರ್ದೇಶನವನ್ನು ಅರ್ಜುನ್ ಜನ್ಯ ನೀಡಿದ್ದಾರೆ.
ಚಿತ್ರವನ್ನು ಫ್ರೇಮ್ ನಿರ್ದೇಶಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದು, ಅವರ ಜೊತೆ ಬಾಲಿವುಡ್ ಖಳನಾಯಕ ಸಂಜಯ್ ದತ್ ಮತ್ತು ನಟಿ ಶಿಲ್ಪಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಧ್ರುವ ಸರ್ಜಾ ಅವರ ಜೋಡಿಯಾಗಿ ರೇಷ್ಮಾ ನಾಣಯ್ಯಾ ನಟಿಸಿದ್ದು, ಹಿರಿಯ ನಟರಾದ ವಿ ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ಈ ಸಿನಿಮಾ ಉತ್ತಮ ಪ್ರದರ್ಶನ ಮುಂದುವರಿಸುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ಸ್ಯಾಂಡಲ್ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಚಿತ್ರ KD: THE DEVIL ಮೊದಲ ನಾಲ್ಕು ದಿನಗಳಲ್ಲಿ ಉತ್ತಮ ಬಾಕ್ಸ್ ಆಫೀಸ್ ಪ್ರದರ್ಶನವನ್ನು ದಾಖಲಿಸಿದೆ.ಸ್ಯಾಕ್ನಿಲ್ಕ ವರದಿ ಪ್ರಕಾರ, ಸಿನಿಮಾ ಮೊದಲ ದಿನವೇ 4.10 ಕೋಟಿ ಗಳಿಸಿ ತಮ್ಮ ಬಾಕ್ಸ್ ಆಫೀಸ್ ಪ್ರಯಾಣ ಆರಂಭಿಸಿತು. ನಂತರ ಎರಡನೆಯ 2.40 ಕೋಟಿ ರೂಪಾಯಿ ಗಳಿಕೆ ಕಂಡಿದ್ದು, ಮೂರನೇ ದಿನವು ಸ್ಥಿರ ಪ್ರದರ್ಶನ ಮುಂದುವರೆಸಿದೆ. ಆದರೆ ನಾಲ್ಕನೇ ದಿನವಾದ ಭಾನುವಾರ ಚಿತ್ರ 5.34 ಗಳಿಸಿ, ಈ ನಾಲ್ಕು ದಿನಗಳಲ್ಲಿ ಅತ್ಯಧಿಕ ಕಲೆಕ್ಷನ್ ದಾಖಲಿಸಿದೆ. ಪ್ರೇಕ್ಷಕರ ಆಕ್ಯುಪೆನ್ಸಿಯಲ್ಲೂ ಬದಲಾವಣೆ ಕಂಡುಬಂದಿದ್ದು, ಮೊದಲ ದಿನ ಶೇ. 46.0% ಎರಡನೇ ದಿನ ಶೇ.50.0%, ಮೂರನೇ ದಿನ ಶೇಕಡ 36.0% ಮತ್ತು 4ನೇ ದಿನ 45.0% ದಾಖಲಾಗಿದೆ. ನಾಲ್ಕನೆಯ ದಿನದ ಏರಿಕೆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಮುಂದುವರಿಯುತ್ತಿರುವ ಸೂಚನೆ ನೀಡುತ್ತಿದೆ.
Also Read:
ವಿಜಯ್ ನ್ನು ಶ್ಲಾಘಿಸಿದ ಸಿಎಂ ಸಿದ್ದರಾಮಯ್ಯ- ಟಿವಿಕೆ ಯಶಸ್ಸಿಗೆ ಅಭಿನಂದನೆ