<?= $pageTitle ?>
Logo
ಮುಖಪುಟ ಓದುವುದು ಕೇಳು
Education

ಮಂಗಳೂರಿನಲ್ಲಿ ಭಾರಿ ಉದ್ಯೋಗ ಮೇಳ: ನಿರುದ್ಯೋಗಿಗಳಿಗೆ ನೇರ ನೇಮಕಾತಿ ಅವಕಾಶ

ಮಂಗಳೂರಿನಲ್ಲಿ ಭಾರಿ ಉದ್ಯೋಗ ಮೇಳ: ನಿರುದ್ಯೋಗಿಗಳಿಗೆ ನೇರ ನೇಮಕಾತಿ ಅವಕಾಶ
Summary: The unemployed will get good job opportunities through Mangaluru Job Fair 2026. Many private companies will participate in the job fair to be held in Mangaluru, and candidates will be given a golden opportunity to get jobs through direct interviews.

Belagavi news:

ಮಂಗಳೂರಿನ ನಿರುದ್ಯೋಗಿ ಯುವಕರಿಗೆ ಸುವರ್ಣಾವಕಾಶ ಲಭಿಸಿದೆ. ಮೇ 16 ರಂದು ಉಚಿತ ನೇರ ಸಂದರ್ಶನ (Direct Interview) ಆಯೋಜಿಸಲಾಗಿದ್ದು , ಆಸಕ್ತ ಅಭ್ಯರ್ಥಿಗಳು ಭಾಗವಹಿಸಿ ಉದ್ಯೋಗ ಪಡೆಯಬಹುದಾಗಿದೆ.

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ನಡೆಯಲಿರುವ ಈ ಸಂದರ್ಶನದಲ್ಲಿರುವ ಎಕ್ಸ್ಪರ್ಟ್ ಕಾಲೇಜಿನಲ್ಲಿ ಫಿಸಿಕ್ಸ್ ಲ್ಯಾಬ್ ಇನ್ ಸ್ಟ್ರಕ್ಟರ್ ಹಾಗೂ ಮಾಂಡೋವಿ ಮೋಟಾರ್ಸ್ ನಲ್ಲಿ ಫೀಲ್ಡ್ ಸೇಲ್ಸ್ ಎಕ್ಸಿ ಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದೆ ನಡೆಯಲಿದೆ.

ಬಿ. ಎಸ್ಸಿ (ಫಿಸಿಕ್ಸ್) , ಪಿಯುಸಿ, ಐಟಿಐ ಹಾಗೂ ಡಿಪ್ಲೋಮಾ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಉದ್ಯೋಗ ಹುಡುಕುತ್ತಿರುವ ಯುವಕರು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಭಾಗವಹಿಸಲು ಸೂಚಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಿರುದ್ಯೋಗಿಗಳಿಗೆ ಭರ್ಜರಿ ಉದ್ಯೋಗಾವಕಾಶ ಲಭ್ಯವಾಗಿದೆ. ಕರ್ನಾಟಕ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಪ್ರತಿಷ್ಠಿತ ಸಂಸ್ಥೆಗಳಾದ ಎಕ್ಸ್ಪರ್ಟ್ ಕಾಲೇಜ್ ಹಾಗೂ ಮಾಂಡೋವಿ ಮೋಟಾರ್ಸ್ ಸಹಯೋಗದಲ್ಲಿ "ನೇರ ಸಂದರ್ಶನ" ಕಾರ್ಯಕ್ರಮವನ್ನು ಅಯೋಜಿಸಿದೆ.

ಈ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿದ್ದು ಉದ್ಯೋಗ ಹುಡುಕುತ್ತಿರುವ ಅರ್ಹ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ. ವಿವಿಧ ಹುದ್ದೆಗಳಿಗೆ ನಡೆಯಲಿರುವ ಈ ಸಂದರ್ಶನದಲ್ಲಿ ಭಾಗವಹಿಸಿ ತಕ್ಷಣ ಉದ್ಯೋಗ ಪಡೆಯುವ ಅವಕಾಶ ಯುವಕರಿಗೆ ದೊರೆಯಲಿದೆ. ಮಂಗಳೂರಿನ ಉದ್ಯೋಗಾಕಾಂಕ್ಷಿಗಳು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಭಾಗವಹಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮನವಿ ಮಾಡಿದೆ.

ಲಭ್ಯವಿರುವ ಹುದ್ದೆಗಳು ಮತ್ತು ಅರ್ಹತೆಗಳು:

ಮಂಗಳೂರಿನಲ್ಲಿ ನಡೆಯುತ್ತಿರುವ ಈ ನೇರ ಸಂದರ್ಶನದಲ್ಲಿ ಎರಡು ಪ್ರಮುಖ ಸಂಸ್ಥೆಗಳ ಕಾಲ ಹುದ್ದೆಗಳು ಭರ್ತಿ ಮಾಡಲಾಗುತ್ತಿದೆ. ಎಕ್ಸ್ ಪರ್ಟ್ ಕಾಲೇಜಿನಲ್ಲಿ ಫಿಸಿಕ್ಸ್ ಇನ್ಸ್ಪೆಕ್ಟರ್ ಹುದ್ದೆಗೆ ಬಿ. ಎಸ್ಸಿ (ಫಿಸಿಕ್ಸ್) ಪದವೀಧರರು ಅರ್ಹರಾಗಿದ್ದಾರೆ.

ಅದೇ ರೀತಿ, ಮಾಂಡೋವಿ ಮೋಟಾರ್ಸ್ ಕಂಪನಿಯಲ್ಲಿ ಫೀಲ್ಡ್ ಸೇಲ್ಸ್ ಎಕ್ಸ್ ಕ್ಯೂಟಿವ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಈ ಹುದ್ದೆಗೆ ಪಿಯುಸಿ, ಐಟಿಐ, ಡಿಪ್ಲೋಮಾ ಅಥವಾ ಯಾವುದೇ ಪದವಿ ಹೊಂದಿರುವ ಜೊತೆಗೆ ವಾಹನ ಚಾಲನಾ ಪರವಾನಿಗಿ (Driving licence) ಹೊಂದಿರುವ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.

ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು ನೇರ ಸಂದರ್ಶನದಲ್ಲಿ ಭಾಗವಹಿಸಿ ಉದ್ಯೋಗ ಪಡೆಯಬಹುದು.

ಸಂದರ್ಶನದ ಸಮಯ ಮತ್ತು ಸ್ಥಳದ ಮಾಹಿತಿ:

ಆಸಕ್ತ ಅಭ್ಯರ್ಥಿಗಳು ದಿನಾಂಕ 16-05-2026 ರಂದು ನಡೆಯುವ ಈ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಸಂದರ್ಶನವು ಅಂದು ಬೆಳಗ್ಗೆ 10:00 ಗಂಟೆಯಿಂದ ಆರಂಭವಾಗಿ ಮಧ್ಯಾಹ್ನ 1:30 ರವರೆಗೆ ನಡೆಯಲಿದೆ. ಅಭ್ಯರ್ಥಿಗಳು ಮಂಗಳೂರಿನ ಪಡೀಲ್ ನಲ್ಲಿರುವ ಜಿಲ್ಲಾಡಳಿತ ಭವನದ ಕಟ್ಟಡದಲ್ಲಿರುವ 'ಪ್ರಜಾಸೌಧ' ದ ನೆಲಮಹಡಿಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ (ಕೊಠಡಿ ಸಂಖ್ಯೆ:04) ಹಾಜರಾಗಬೇಕು. ಈ ನೇಮಕಾತಿ ಕುರಿತು ಯಾವುದೇ ರೀತಿಯ ಸಂದೇಹಗಳಿದ್ದಲ್ಲಿ ಅಥವಾ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಅಭ್ಯರ್ಥಿಗಳು ಕಚೇರಿಯ ದೂರವಾಣಿ ಸಂಖ್ಯೆ 0824 2457139 ಅನ್ನು ಸಂಪರ್ಕಿಸಬಹುದು.

Also Read:

ಸೋಲಿನ ನೋವಿನಲ್ಲಿದ್ದ ಕಮ್ಮಿನ್ಸ್ ಗೆ ಬಿಸಿಸಿಐನಿಂದ ಬಿಗ್ ಶಾಕ್

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online