ಐಪಿಎಲ್ 2026: ನಾಯಕನಾಗಿ ಕಮ್ಮಿನ್ಸ್ ಮರು ನೇಮಕ!
ಐಪಿಎಲ್ ಮುಂದಿನ ಆವೃತ್ತಿಗಾಗಿ ಸನ್ರೈಸರ್ಸ್ ಹೈದರಾಬಾದ್ ತಂಡ ನಾಯಕನ ಘೋಷಣೆ ಮಾಡಿದೆ.
IPL 2026 Captains List:
ಇದರ ನಡುವೆಯೇ ಸನ್ರೈಸರ್ಸ್ ಹೈದರಾಬಾದ್ (SRH) ತಂಡ ದೊಡ್ಡ ನಿರ್ಧಾರ ಒಂದನ್ನು ತೆಗೆದುಕೊಂಡಿದೆ. ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಎಸ್ಆರ್ಹೆಚ್ ಈ ಬಾರಿ ನಾಯಕನ ಬದಲಾವಣೆ ಮಾಡಲಿದೆ ಎಂಬ ಮಾತುಗಳು ಕಳೆದ ಕೆಲ ದಿನಗಳಿಂದ ಕೇಳಿ ಬರಲಾರಂಭಿಸಿದ್ದವು. ಆದರೆ ಎಸ್ಆರ್ಹೆಚ್ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ.
ಮತ್ತೊಮ್ಮೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ವೇಗಿ ಪ್ಯಾಟ್ ಕಮ್ಮಿನ್ಸ್ಗೆ ನೀಡಿದೆ. ಹೌದು ಮುಂದಿನ ಆವೃತ್ತಿಗಾಗಿ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಮರು ನೇಮಕಗೊಂಡಿದ್ದಾರೆ.
ಮುಂದಿನ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL)ಗೆ ಇನ್ನೂ ಬಹಳ ಸಮಯವಿದೆ. ಆದರೆ ಈಗಿನಿಂದಲೇ ಫ್ರಾಂಚೈಸಿಗಳು ಇದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿವೆ. ಇತ್ತೀಚೆಗೆ 19ನೇ ಆವೃತ್ತಿಗಾಗಿ ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯನ್ನು ಫ್ರಾಂಚೈಸಿಗಳು ಬಿಸಿಸಿಐಗೆ ಸಲ್ಲಿಸಿವೆ. ಇದೀಗ ಡಿಸೆಂಬರ್ 15 ರಂದು ನಡೆಯಲಿರುವ ಮಿನಿ ಹರಾಜಿಗಾಗಿ ಎದುರು ನೋಡುತ್ತಿವೆ.
20 ಕೋಟಿಗೆ ಖರೀದಿ:
ಕಮ್ಮಿನ್ಸ್ ಐಪಿಎಲ್ 2024ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಭಾಗವಾದರು. ಆ ಋತುವಿನಲ್ಲಿ ಕಮ್ಮಿನ್ಸ್ ಅವರನ್ನು ₹20.5 ಕೋಟಿ ರೂ.ಗಳ ಮೊತ್ತಕ್ಕೆ ಖರೀದಿಸಲಾಗಿತ್ತು. ನಂತರ, ದಕ್ಷಿಣ ಆಫ್ರಿಕಾದ ಆಟಗಾರ ಆಡಮ್ ಮಾರ್ಕ್ರಾಮ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಕಮಿನ್ಸ್ ಅವರಿಗೆ ಈ ಜವಾಬ್ದಾರಿ ಹಸ್ತಾಂತರಿಸಲಾಯ್ತು.
ಐಪಿಎಲ್ 2024ರ ಹರಾಜಿಗೂ ಮೊದಲು, ಕಮ್ಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತು. 2023ರಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಅಲ್ಲಿ ಭಾರತವನ್ನು ಮಣಿಸಿ ವಿಶ್ವಕಪ್ ಗೆದ್ದುಕೊಂಡಿತು. ಇದಕ್ಕೂ ಮೊದಲು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023 (WTC 2023) ಫೈನಲ್ ಅನ್ನು ಸಹ ಗೆದ್ದರು. ಇದು ಅವರನ್ನು ನಾಯಕತ್ವಕ್ಕೆ ಸೂಕ್ತ ಆಯ್ಕೆ ಎಂದು ಪರಿಗಣಿಸುವಂತೆ ಮಾಡಿತು.
ಕಮ್ಮಿನ್ಸ್ ನೇತೃತ್ವದ ಸನ್ರೈಸರ್ಸ್ ತಂಡವು 2024ರ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಫೈನಲ್ಗೆ ತಲುಪಿತ್ತು, ಆದರೆ ಟ್ರೋಫಿ ನಿರ್ಣಾಯಕ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋಲನ್ನು ಕಂಡು ರನ್ನರ್ಅಪ್ ಆಗಿ ಟೂರ್ನಿಯನ್ನು ಕೊನೆಗೊಳಿಸಿತು.
ಕಳೆದ ಋತುವಿನಲ್ಲಿ ಸನ್ರೈಸರ್ಸ್ ತಂಡದ ಪ್ರದರ್ಶನ ಕಳಪೆಯಾಗಿತ್ತು. ಪ್ಲೇ-ಆಫ್ ಸುತ್ತಿಗೆ ಮುನ್ನಡೆಯದೆ ಟೂರ್ನಿಯಿಂದ ಹೊರಬಿದ್ದಿತ್ತು. ಇದೀಗ ಮುಂದಿನ ಆವೃತ್ತಿಯಲ್ಲಿ ಕಮ್ಮಿನ್ಸ್ ತಂಡವನ್ನು ಯಾವ ರೀತಿ ಮುನ್ನಡೆಸುತ್ತಾರೆ ಎಂದು ಕಾದುನೋಡಬೇಕಿದೆ.
ಸನ್ರೈಸರ್ಸ್ ಹೈದರಾಬಾದ್
ಬಿಡುಗಡೆ/ಟ್ರೇಡ್ ಆದ ಆಟಗಾರರು: ಮೊಹಮ್ಮದ್ ಶಮಿ (ಎಲ್ಎಸ್ಜಿಗೆ ವಿನಿಮಯ), ಅಥರ್ವ ತೈಡೆ, ಸಚಿನ್ ಬೇಬಿ, ಅಭಿನವ್ ಮನೋಹರ್, ವಿಯಾನ್ ಮುಲ್ಡರ್, ಆಡಮ್ ಜಂಪಾ, ಸಿಮರ್ಜೀತ್ ಸಿಂಗ್, ರಾಹುಲ್ ಚಾಹರ್
ಉಳಿಸಿಕೊಂಡ/ವಿನಿಮಯ ಮಾಡಿಕೊಂಡ ಆಟಗಾರರು: ಅಭಿಷೇಕ್ ಶರ್ಮಾ, ಅನಿಕೇತ್ ವರ್ಮಾ, ಬ್ರೈಡನ್ ಕಾರ್ಸೆ, ಎಶನ್ ಮಾಲಿಂಗ, ಹರ್ಷ್ ದುಬೆ, ಹರ್ಷಲ್ ಪಟೇಲ್, ಹೆನ್ರಿಚ್ ಕ್ಲಾಸೆನ್, ಇಶಾನ್ ಕಿಶನ್, ಜಯದೇವ್ ಉನದ್ಕತ್, ಕಮಿಂದು ಮೆಂಡಿಸ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್, ಆರ್ ಸ್ಮರನ್, ಟ್ರಾವಿಸ್ ಹೇಡ್, ಜೀಶಾನ್ ಅನ್ಸರಿ
ಉಳಿದ ಹಣ: ₹25.50 ಕೋಟಿ ರೂ.
ಉಳಿದಿರುವ ಸ್ಲಾಟ್ಗಳು: 10 (2 ವಿದೇಶಿ ಸ್ಲಾಟ್)
ಗಾಯದ ಸಮಸ್ಯೆ:
ಪ್ಯಾಟ್ ಕಮ್ಮಿನ್ಸ್ ಪ್ರಸ್ತುತ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದಾಗಿ, ಇತ್ತೀಚೆಗೆ ತವರು ನೆಲದಲ್ಲಿ ನಡೆದ ಭಾರತ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲಿ ಭಾಗವಹಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಈಗ, ಅವರು ಪರ್ತ್ನಲ್ಲಿ ನಡೆಯಲಿರುವ ಮೊದಲ ಆಶಸ್ ಟೆಸ್ಟ್ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.
ಈ ಟೆಸ್ಟ್ ಪಂದ್ಯ ನವೆಂಬರ್ 21 ರಂದು ಆರಂಭವಾಗಲಿದ್ದು, ಕಮ್ಮಿನ್ಸ್ ನೋವಿನಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ ಎನ್ನಲಾಗುತ್ತಿದೆ. ಆದಾಗ್ಯೂ, ಸುದ್ದಿ ವರದಿಗಳ ಪ್ರಕಾರ, ಡಿಸೆಂಬರ್ 4 ರಂದು ಆರಂಭವಾಗಲಿರುವ ಬ್ರಿಸ್ಬೇನ್ನಲ್ಲಿ ನಡೆಯಲಿರುವ ಎರಡನೇ ಆಶಸ್ ಟೆಸ್ಟ್ಗೆ ಕಮ್ಮಿನ್ಸ್ ತಂಡಕ್ಕೆ ವಾಪಾಸ್ ಆಗಲಿದ್ದಾರೆ ಎಂಬ ವರದಿಗಳಿವೆ. ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ, ತಂಡದ ನಾಯಕತ್ವವನ್ನು ಸ್ಟೀವ್ ಸ್ಮಿತ್ಗೆ ವಹಿಸಲಾಗಿದೆ.
ಈ ಕುರಿತು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಎಸ್ಆರ್ಹೆಚ್, ಪ್ಯಾಟ್ ಕಮ್ಮಿನ್ಸ್ ಐಪಿಎಲ್ 2026 ರಲ್ಲೂ ನಾಯಕನಾಗಿ ಮುಂದುವರೆಯಲಿದ್ದಾರೆ ಎಂದು ದೃಢಪಡಿಸಿದೆ. ಇದರೊಂದಿಗೆ ಕಮ್ಮಿನ್ಸ್ ಇರುವ ಫೋಟೋವನ್ನು ಹಂಚಿಕೊಂಡಿದೆ.
ಇನ್ನಷ್ಟು ಓದಿರಿ :
ಭಾರತದ WTC ಫೈನಲ್ ಹಾದಿ ಕಠಿಣ