IPL 2026: 'ರಸೆಲ್ಗೆ ಕೊಟ್ಟ ಮಾತು ತಪ್ಪಿದ ಕೆಕೆಆರ್'
2020ರಲ್ಲಿ ಆಂಡ್ರೆ ರಸೆಲ್ಗೆ ಕೊಟ್ಟ ಮಾತನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಪ್ಪಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.
ದೊಡ್ಡ ಸಿಕ್ಸರ್ಗಳನ್ನು ಹೊಡೆಯುವಲ್ಲಿ ನಿಪುಣರಾಗಿರುವ ವೆಸ್ಟ್ ಇಂಡೀಸ್ ಆಲ್ರೌಂಡರ್ 2014ರಲ್ಲಿ KKR ತಂಡ ಸೇರಿದರು. ಅಂದಿನಿಂದ ಅನೇಕ ಪಂದ್ಯಗಳಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದರು. ಹಲವಾರು ಬಾರಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 2014 ಮತ್ತು 2024ರಲ್ಲಿ ಐಪಿಎಲ್ ಟ್ರೋಫಿ ಗೆದ್ದ ಕೋಲ್ಕತ್ತಾ ತಂಡದ ಭಾಗವಾಗಿದ್ದರು.
ಐಪಿಎಲ್ 2026ರ ಹರಾಜಿಗೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಹಲವು ವರ್ಷಗಳಿಂದ ತಂಡದಲ್ಲಿ ಪ್ರಮುಖ ಆಟಗಾರನಾಗಿರುವ ಆಲ್ರೌಂಡರ್ ಆಂಡ್ರೆ ರಸೆಲ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಕಳೆದ ಋತುವಿಗೆ ಮೊದಲು ನಡೆದ ಮೆಗಾ ಹರಾಜಿನಲ್ಲಿ ಕೋಲ್ಕತ್ತಾ ತಂಡ ರಸೆಲ್ ಅವರನ್ನು 12 ಕೋಟಿ ರೂ.ಗೆ ಖರೀದಿಸಿತು. ಈಗ, ಅವರನ್ನು ತಂಡದಲ್ಲಿ ಮುಂದುವರಿಸದೆ ಹರಾಜಿಗೆ ಬಿಟ್ಟಿದೆ.
ರಸೆಲ್ ಜೊತೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ವೆಂಕಟೇಶ್ ಅಯ್ಯರ್ (ರೂ. 23.75 ಕೋಟಿ), ಕ್ವಿಂಟನ್ ಡಿ ಕಾಕ್ (ರೂ. 3.6 ಕೋಟಿ), ಮೊಯೀನ್ ಅಲಿ (ರೂ. 2 ಕೋಟಿ), ಅನ್ರಿಚ್ ನೋಕಿಯಾ (ರೂ. 6.5 ಕೋಟಿ), ಸ್ಪೆನ್ಸರ್ ಜಾನ್ಸನ್ (ರೂ. 2.80 ಕೋಟಿ), ಮತ್ತು ರಹಮಾನುಲ್ಲಾ ಗುರ್ಬಾಜ್ (ರೂ. 2 ಕೋಟಿ) ಅವರನ್ನು ಬಿಡುಗಡೆ ಮಾಡಿದೆ.
ತಂಡದ ಪ್ರಸ್ತುತ ಪರ್ಸ್ನಲ್ಲಿ ₹64.3 ಕೋಟಿ ರೂ ಹೊಂದಿದ್ದು, ಇದು ಗರಿಷ್ಠವಾಗಿದೆ. ಅಲ್ಲದೇ ಕೋಲ್ಕತ್ತಾ ತಂಡದಲ್ಲಿ 13 ಸ್ಲಾಟ್ಗಳು ಖಾಲಿ ಇವೆ. ಬೃಹತ್ ಬಜೆಟ್ನೊಂದಿಗೆ ಕೆಕೆಆರ್ ಮಿನಿ ಹರಾಜಿಗೆ ಪ್ರವೇಶ ಮಾಡಲಿದೆ.
2020ರಲ್ಲಿ, KKR ಸಿಇಒ ವೆಂಕಿ ಮೈಸೂರು ಅವರು ಟಿ20 ಕ್ರಿಕೆಟ್ನಿಂದ ನಿವೃತ್ತರಾಗುವವರೆಗೂ ಆಲ್ರೌಂಡರ್ ರಸೆಲ್ ಫ್ರಾಂಚೈಸಿಯೊಂದಿಗೆ ಇರುತ್ತಾರೆ ಎಂದು ಹೇಳಿದ್ದರು.
ಈಗ ಅವರನ್ನು ಉಳಿಸಿಕೊಳ್ಳದ ಕಾರಣ, ಅಭಿಮಾನಿಗಳು ಹಿಂದೆ ಅವರು ನೀಡಿದ ಭರವಸೆಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಕೋಲ್ಕತ್ತಾ ಆಡಳಿತ ಮಂಡಳಿಯು ಕೊಟ್ಟ ಮಾತನ್ನು ತಪ್ಪಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ರಸೆಲ್ ಅವರು ಕೋಲ್ಕತ್ತಾ ಪರ 133 ಪಂದ್ಯಗಳನ್ನಾಡಿ 2,593 ರನ್ ಕಲೆಹಾಕಿದ್ದಾರೆ.
ಉಳಿಸಿಕೊಂಡ ಆಟಗಾರರು:
ಅಜಿಂಕ್ಯ ರಹಾನೆ, ಆಂಗ್ಕ್ರಿಶ್ ರಘುವಂಶಿ, ಅನುಕುಲ್ ರಾಯ್, ಹರ್ಷಿತ್ ರಾಣಾ, ಮನೀಶ್ ಪಾಂಡೆ, ರಮಣದೀಪ್ ಸಿಂಗ್, ರಿಂಕು ಸಿಂಗ್, ರೋವ್ಮನ್ ಪೊವೆಲ್, ಸುನಿಲ್ ನರೈನ್, ಉಮ್ರಾನ್ ಮಲಿಕ್, ವೈಭವ್ ಅರೋರಾ ಮತ್ತು ವರುಣ್ ಚಕ್ರವರ್ತಿ
ಕೋಲ್ಕತ್ತಾ ನೈಟ್ ರೈಡರ್ಸ್ ಬಿಡುಗಡೆ ಮಾಡಿದ ಆಟಗಾರರು:
ಆಂಡ್ರೆ ರಸೆಲ್, ಅನ್ರಿಚ್ ನೋಕಿಯಾ, ಚೇತನ್ ಸಕರಿಯಾ, ಲುವ್ನಿತ್ ಸಿಸೋಡಿಯಾ, ಮೊಯಿನ್ ಅಲಿ, ಕ್ವಿಂಟನ್ ಡಿ ಕಾಕ್, ರಹಮಾನುಲ್ಲಾ ಗುರ್ಬಾಜ್, ಸ್ಪೆನ್ಸರ್ ಜಾನ್ಸನ್ ಮತ್ತು ವೆಂಕಟೇಶ್ ಅಯ್ಯರ್
ಇನ್ನಷ್ಟು ಓದಿರಿ :
6-7 ತಿಂಗಳಿಂದ ಪಡಿತರ ವಿತರಕರಿಗೆ ತಲುಪಿಲ್ಲ ಕೇಂದ್ರ-ರಾಜ್ಯ ಸರ್ಕಾರಗಳ ಕಮಿಷನ್