<?= $pageTitle ?>
Logo
ಮುಖಪುಟ ಓದುವುದು ಕೇಳು
Sports

IPL ಕ್ವಾಲಿಫೈಯರ್ ೧:ಆರ್ಸಿಬಿ ವರ್ಸಸ್ ಜಿಟಿ ನಡುವೆ ಹೋರಾಟ ತೀವ್ರ ಧರ್ಮಶಾಲಾ ಪಿಚ್ ನಲ್ಲಿ ರೋಚಕ ಫೈಟ್

IPL ಕ್ವಾಲಿಫೈಯರ್ ೧:ಆರ್ಸಿಬಿ ವರ್ಸಸ್ ಜಿಟಿ ನಡುವೆ ಹೋರಾಟ ತೀವ್ರ ಧರ್ಮಶಾಲಾ ಪಿಚ್ ನಲ್ಲಿ ರೋಚಕ ಫೈಟ್
Summary: The IPL Qualifier Final 1 will be a high-voltage clash between Royal Challengers Bangalore and Gujarat.

belahgavi news :

ಐಪಿಎಲ್ 26ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಲ್ ತಂಡಗಳು ಮೇ 26ರಂದು ಧರ್ಮ ಶಾಲಾದಲ್ಲಿ ಮುಖಾಮುಖಿಯಾಗಲಿವೆ.ಈ ಹೈ ವೋಲ್ಟೇಜ್ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳಲ್ಲಿ ಬಾರಿ ನಿರೀಕ್ಷೆ ಮೂಡಿದೆ.

ಧರ್ಮಶಾಲಾದ ಸಣ್ಣ ಬೌಂಡರಿಗಳು ಹಾಗೂ ಬ್ಯಾಟಿಂಗ್ ಸ್ನೇಹಿ ಕಾರಣದಿಂದಾಗಿ ಈ ಪಂದ್ಯದಲ್ಲಿ ರನ್ ಹೊಳೆ ಹರಿಯುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ,ವಿಧಿಯ ಇನ್ನಿಂಗ್ಸ್ ನಲ್ಲಿ ಇಬ್ಬನಿ ಪ್ರಭಾವ ಹೆಚ್ಚು ಇರುವುದರಿಂದ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.

ಆರ್ಸಿಬಿಯ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಮತ್ತು ಗುಜರಾತ್ ಟೈಟನ್ಸ್ ನ ಶಿಸ್ತಿನ ಹಾಗೂ ನಿಯಂತ್ರಿತ ಬೌಲಿಂಗ್ ದಾಳಿ ನಡುವೆ ರೋಚಕ ಹೋರಾಟ ನಿರೀಕ್ಷಿಸಲಾಗಿದೆ.ಕ್ವಾಲಿಫೈಯರ್ 1ಪಂದ್ಯವು ಪ್ಲೇ ಆಫ್ ಹಂತದ ಮೊದಲ ದೊಡ್ಡ ಪರೀಕ್ಷೆಯಾಗಿದ್ದು,ಎರಡು ತಿಂಗಳುಗಳಿಗೂ ಫೈನಲ್ ಪ್ರವೇಶದ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಪಂದ್ಯವಾಗಿದೆ.

ಲೀಕ್ ಹಂತದ ಕುತೂಹಲ ಅಂತ್ಯಗೊಂಡಿದ್ದು,ಇದೀಗ ಐಪಿಎಲ್ 2026 ಸೀಸನ್ ನಲ್ಲಿ ಪ್ಲೇ ಆಫ್ ಪರ್ವ ಆರಂಭವಾಗಿದೆ.ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಅಂಕಪಟ್ಟಿಯ ಮೊದಲ ಎರಡು ಸ್ಥಾನಗಳಲ್ಲಿರುವ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಈ ಪಂದ್ಯ ಧರ್ಮಶಾಲಾದ ಬ್ಯಾಟಿಂಗ್ ಸ್ನೇಹಿ ಪಿಚ್ ನಲ್ಲಿ ನಡೆಯಲಿದ್ದು,ಸಾಮಾನ್ಯವಾಗಿ ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಹೆಚ್ ಜಯ ಸಾಧಿಸಿರುವ ಇತಿಹಾಸವಿದೆ.ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದ್ದು,ದ್ವಿತೀಯ ಇನಿಂಗ್ಸ್ ನಲ್ಲಿ ಇಬ್ಬನಿ ಪ್ರಭಾವ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಚೇಸಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಅನುಕೂಲ ಮಾಡಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.

ಪಿಚ್ ಪರಿಸ್ಥಿತಿ,ಟಾಸ್ ನಿರ್ಧಾರ ಮತ್ತು ಇಬ್ಬನಿ ಪರಿಣಾಮ ಈ ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು,ಎರಡು ತಂಡಗಳು ತಮ್ಮ ಶ್ರೇಷ್ಠ ಪ್ರದರ್ಶನ ನೀಡಲು ಸಜ್ಜಾಗಿವೆ.ಹೈ ವೋಲ್ಟೇಜ್ ಕ್ವಾಲಿಫೈಯರ್ ಪಂದ್ಯ ಪ್ಲೇ ಆಫ್ ಹಂತಕ್ಕೆ ರೋಚಕ ಆರಂಭ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಮೇ 26ರ ಮಂಗಳವಾರ ಧರ್ಮಶಾಲಾದ ಎಚ್ ಪಿ ಎಸ್ ಸಿ ಎ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2026 ಕ್ವಾಲಿಫಿಯರ್ ಒಂದು ಪಂದ್ಯದಲ್ಲಿ ಹರಿಯಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.ಈ ಪಂದ್ಯದಲ್ಲಿ ರಾಯಲ್ ಚಾಲೆಂಜ್ ಬೆಂಗಳೂರು ಮತ್ತು ಗುಜರಾತ್ ಟೈಟನ್ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿವೆ.

ಈ ಸೀಸನ್ ನಲ್ಲಿ ಎರಡು ಬಾರಿ ಎದುರು ಬದುರಾಗಿದ್ದು,ಮೊದಲಲ್ಲಿ ಪಂದ್ಯದಲ್ಲಿ ಬೆಂಗಳೂರಿನಲ್ಲಿ ನಡೆದ ಹೋರಾಟದಲ್ಲಿ ರ್ಸಿಬಿ ಐದು ವಿಕೆಟ್ ಗಳಿಂದ ಜಯ ಸಾಧಿಸಿತ್ತು.ನಂತರ ಅಹ್ಮದಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಶುಭಂ ಗಿಲ್ ನೇತೃತ್ವದ ಗುಜರಾತ್ ಟೈಟಲ್ ತಂಡ ಆರ್ಸಿಬಿಯನ್ನು ನಾಲ್ಕು ವಿಕೆಟ್ ಗಳಿಂದ ಸೋಲಿಸಿತು.

ಇದೀಗ ತಟಸ್ಥ ಮೈದಾನದಲ್ಲಿ ನಡೆಯುತ್ತಿರುವ ಈ ಮಹತ್ವದ ಪಂದ್ಯದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದರ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಬಾರಿ ಕುತೂಹಲ ಇದೆ.ಈವರೆಗೂ ಇತ್ತಂಡಗಳು ಒಟ್ಟು ಎಂಟು ಬಾರಿ ಮುಖಾಮುಖಿಯಾಗಿದ್ದು, ಆರ್ ಸಿ ಬಿ ಹಾಗೂ ಗುಜರಾತ್ ಟೀಮ್ ೪ ಬಾರಿ ಜಯ ಸಾಧಿಸಿರುವ ಸಮಬಲ ದಾಖಲೆ ಹೊಂದಿವೆ.

ಸ್ಪರ್ಧಾತ್ಮಕ ದಾಖಲೆಯ ಹಿನ್ನೆಲೆಯಲ್ಲಿ ಕ್ವಾಲಿಫೈಯರ್ ಒಂದು ಪಂದ್ಯ ಇನ್ನಷ್ಟು ರೋಚಕವಾಗುವ ನಿರೀಕ್ಷೆ ಇದೆ.

ಕಳೆದ ಸೀಸನ್ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜ್ ಬೆಂಗಳೂರು ಈ ಬಾರಿಯೂ ಭರ್ಜರಿ ಫಾರಂನಲ್ಲಿ ಕಾಣಿಸಿಕೊಂಡಿದ್ದು,ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಪ್ಲೇ ಆಫ್ ಗೆ ಪ್ರವೇಶಿಸಿದೆ.ಸೀಸನ್ ಉದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವ ತಂಡ ಎದುರಾಳಿಗಳಿಗೆ ದೊಡ್ಡ ಸವಾಲ್ ಆಗಿ ಪರಿಣಮಿಸಿದೆ.

ವಿರಾಟ್ ಕೊಹ್ಲಿ ಅವರ 557 ಅಂಕಗಳ ಅದ್ಬುತ ಪ್ರದರ್ಶನವು ಆರ್ಸಿಬಿ ಬ್ಯಾಟಿಂಗ್ ಗೆ ಸ್ಥಿರತೆ ನೀಡಿದೆ.ರಜತ್ ಪಟಿದಾರ್, ದೇವದತ ಪಡಿಕ್ಕಲ್ ಮತ್ತು ವೆಂಕಟೇಶ್ ಅಯ್ಯರ್ ಅಗ್ರ ಕ್ರಮ ಅಂಕದಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ತೋರಿಸುತ್ತಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಟಿಂ ಡೇವಿಡ್, ಜಿತೇಶ್ ಶರ್ಮಾ ಹಾಗೂ ಕುರ್ನಾಲ್ ಪಾಂಡ್ಯಗಳಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್ ಗಳಿಗೆ ಸಿಂಹ ಸಪ್ನವಾಗಿದೆ.ಈ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ನಿಂದ ಆರ್ಸಿಬಿ ಯಾವುದೇ ಪಂದ್ಯದಲ್ಲೂ ದೊಡ್ಡ ಸ್ಕೋರ್ ನಿರ್ಮಿಸುವ ಸಾಮರ್ಥ್ಯ ಹೊಂದಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಸ್ಪೋಟಕ ಆರಂಭಕಾರ ಫಿಲ್ ಸಾಲ್ಚ್ ಅವರು ತಂಡವನ್ನು ಸೇರಿಕೊಂಡಿದ್ದು ಕಣಕ್ಕಿಳಿಯುತ್ತಾರಾ ಇಲ್ಲವಾ ಎಂಬ ಬಗ್ಗೆ ತಂಡದ ಮ್ಯಾನೇಜ್ಮೆಂಟ್ ಯಾವುದೇ ಫಸ್ಟ್ ಏನೆ ನೀಡಿಲ್ಲ.ಒಂದು ವೇಳೆ ಅವರು ಕಣಕ್ಕಿಳಿದಿದ್ದೇ ಆದರಲ್ಲಿ ಆರ್ ಸಿಬಿಯ ಬ್ಯಾಟಿಂಗ್ ಬಲವನ್ನು ಮತ್ತಷ್ಟು ಹೆಚ್ಚಿಸಲಿದೆ.

ಬೌಲಿಂಗ್ ವಿಭಾಗದಲ್ಲಿ ಪರ್ಪಲ್ ಕ್ಯಾಂಪ್ ಹೋಲ್ಡರ್ ಭುವನೇಶ್ವರ್ ಕುಮಾರ್ ಅವರು ಜೋಶ್ ಹೇಜಲ್ವುಡ್ ತಂಡದ ಬೌಲಿಂಗ್ ಆಧಾರವಾಗಿದೆ.

ಸ್ಥಿರ ಪ್ರದರ್ಶನಕ್ಕೆ ಹೆಸರುವಾಸಿಯಾಗಿರುವ ಗುಜರಾತ್ ಟೈಟನ್ ಈ ಬಾರಿಯೂ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಮತೋಲನ ಸಾಧಿಸಿ ಪ್ಲೇ ಆಫ್ ಗೆ ಪ್ರವೇಶಿಸಿದೆ.ತಂಡದ ಆರಂಭಿಕ ಆಟಗಾರರಾದ ನಾಯಕ ಶುಭಂ ಗಿಲ್ ಮತ್ತು ಸಾಯಿ ಸುದರ್ಶನ್ ನಿರಂತರ ಉತ್ತಮ ಪ್ರದರ್ಶನ ನೀಡುತ್ತಿದ್ದು,ತಂಡಕ್ಕೆ ಸ್ಥಿರ ಆರಂಭವನ್ನು ಒದಗಿಸುತ್ತಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಫಿನಿಶರ್ ಗಳ ಪಾತ್ರವು ಮಹತ್ವಪೂರ್ಣವಾಗಿದ್ದು,ಸಂಕಷ್ಟದ ಸಂದರ್ಭಗಳಲ್ಲಿ ತಂಡಕ್ಕೆ ಹಲವು ಜಯಗಳನ್ನು ತಂದುಕೊಟ್ಟಿದ್ದಾರೆ.ವಿಶೇಷವಾಗಿ ಬೌಲಿಂಗ್ ವಿಭಾಗದಲ್ಲಿ ಗುಜರಾತ್ ಟೈಟಲ್ ಅತ್ಯಂತ ಶಕ್ತಿಶಾಲಿ ಹೊಂದಿದೆ.

ಕಗಿಸೋ ರಬಾಡಾ,ಮೊಹಮ್ಮದ್ ಸಿರಾಜ್,ಪ್ರಸಿದ್ಧ ಕೃಷ್ಣ ಮತ್ತು ರಶೀಲ್ ಖಾನ್ ಅವರ ಶಿಸ್ತಿನ ಹಾಗೂ ವೈವಿಧ್ಯಮಯ ಬೋಲಿಂಗ್ ದಾಳಿ ಎದುರಾಳಿ ಬ್ಯಾಟರಿಗಳಿಗೆ ದೊಡ್ಡ ಸವಾಲಾಗಿದೆ.ಈ ಬಲಿಷ್ಠ ಬಾಲಿಂಗ್ ಸಂಯೋಜನೆಯಿಂದ ಗುಜರಾತ್ ಐಟೆಂಸ್ ಯಾವುದೇ ಪರಿಸ್ಥಿತಿಯಲ್ಲೂ ಪಂದ್ಯವನ್ನು ತಿರುಗಿಸುವ ಸಾಮರ್ಥ್ಯ ಹೊಂದಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.

ಹೇಗಿದೆ ಧರ್ಮ ಶಾಲಾ ಪಿಚ್ಚರ್?

ಸಮುದ್ರಮಟ್ಟದಿಂದ 150 ಮೀಟರ್ ಎತ್ತರದಲ್ಲಿರುವ ಧರ್ಮಸಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದ ಪಿಚ್ ಬ್ಯಾಟರಗಳ ಸ್ವರ್ಗ ಎಂದೇ ಹೇಳಲಾಗುತ್ತಿದೆ.ಬೌಲರ್ಗಳು ಸರಿಯಾದ ಜಾಗದಲ್ಲಿ ಚೆಂಡೆಸೆದರೆ ಫಲಿತಾಂಶ ಸಿಗಬಹುದು.ಅದರ ಹೊರತಾಗಿ ಪಿಚ್ಚಿನಿಂದ ಯಾವುದೇ ರೀತಿಯ ನೆರವು ಸಿಗುವುದಿಲ್ಲ ಎಂದು ಭಾವಿಸಲಾಗಿದೆ.

Also Read:

ಭಾರಿ ಮಳೆಯಿಂದ ಸಿಲಿಕಾನ್ ಸಿಟಿಗೆ ಹೊಸ ಉಸಿರು - ವಾಯುಮಟ್ಟ ಸುಧಾರಣೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online