Belagavi news:
ಭಾರಿ ಮಳೆಯ ಆರ್ಭಟದಿಂದ ರಾಜ್ಯದ ವಾತಾವರಣದಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ವಾಯು ಗುಣಮಟ್ಟದಲ್ಲಿ ವ್ಯಗಮನರ್ಹ ಸುಧಾರಣೆ ದಾಖಲಾಗಿದೆ. ನಿರಂತರ ಮಳೆಯ ಪರಿಣಾಮವಾಗಿ ಗಾಳಿಯಲ್ಲಿ ಹರಡಿದ್ದ ದೂಳು ಹಾಗೂ ಮಾಲಿನ್ಯ ಕಣಗಳು ತೊಳೆಯಲ್ಪಟ್ಟು ನಗರಗಳು ಸ್ವಚ್ಛ ಹಾಗು ತಂಪಾದ ವಾತಾವರಣವನ್ನು ಅನುಭವಿಸುತ್ತಿವೆ.
ಬೆಂಗಳೂರು ನಗರದಲ್ಲಿ ವಾಯುಗುಣ ಮಟ್ಟ ಸೂಚ್ಯಂಕ ಇಳಿಕೆಯಾಗಿದ್ದು, ಬಹುತೇಕ ಪ್ರದೇಶಗಳಲ್ಲಿ ಉತ್ತಮ ಮಟ್ಟದ ಗಾಳಿ ಗುಣಮಟ್ಟ ದಾಖಲಾಗಿರುವುದು ಜನರಿಗೆ ನಿರಾಳತೆ ನೀಡಿದೆ. ವಾಹನ ಸಂಚಾರ, ಕೈಗಾರಿಕಾ ಧೂಮ ಹಾಗೂ ಧೂಳಿನ ಪ್ರಮಾಣ ಮಳೆಯ ಪರಿಣಾಮವಾಗಿ ತಾತ್ಕಾಲಿಕವಾಗಿ ಕಡಿಮೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿದ್ದು, ಮಳೆಯ ವಾತಾವರಣವನ್ನು ಸ್ವಚ್ಛಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಿರಂತರ ಮಳೆಯು ಮುಂದುವರೆದರೆ ವಾಯುಗುಣ ಮಟ್ಟ ಇನ್ನಷ್ಟು ಸುಧಾರಿಸಬಹುದು ಎಂದು ಹವಾಮಾನ ತಜ್ಞರು ಅಂದಾಜು ಮಾಡಿದ್ದಾರೆ.
ಮಳೆ ಆರ್ಭಟದಿಂದ ನಗರ ಜೀವನ ಸ್ವಲ್ಪ ಅರ್ಥವ್ಯಸ್ತಗೊಂಡಿದ್ದರು, ಶುದ್ಧ ಗಾಳಿಯ ಅನುಭವ ಜನರಲ್ಲಿ ಸಂತೋಷ ಮೂಡಿಸಿದೆ. ಮುಂದಿನ ದಿನಗಳಲ್ಲಿ ಹವಾಮಾನ ಪರಿಸ್ಥಿತಿ ಮೇಲೆ ವಾಯುಗುಣ ಮಟ್ಟ ಹೇಗೆ ಬದಲಾಗುತ್ತದೆ ಎಂಬುದರ ಮೇಲೆ ಗಮನ ಕೇಂದ್ರೀಕೃತವಾಗಿದೆ.
ಕಳೆದ ಎರಡು ದಿನಗಳಿಂದ ರಾಜ್ಯದಾದ್ಯಂತ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆ ಮತ್ತು ಬಿರುಗಾಳಿಯ ಪರಿಣಾಮವಾಗಿ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯ ಗಣನೀಯವಾಗಿ ಕುಸಿದಿದೆ. ಇದರೊಂದಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ಸ್ಪಷ್ಟ ಸುಧಾರಣೆ ಕಂಡು ಬಂದಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಬೆಂಗಳೂರು ನಗರದಲ್ಲಿ ವಾಯುಗುಣ ಮಟ್ಟ ಸೂಚ್ಯಂಕ 55 ರಿಂದ 69ರ ನಡುವೆ ದಾಖಲಾಗಿದ್ದು, ಇದು ಸಾಧಾರಣಾ ಮಟ್ಟಕ್ಕೆ ಇಳಿದಿದೆ. ನಿರಂತರ ಮಳೆಯು ವಾತಾವರಣದಲ್ಲಿನ ಧೂಳು ಹಾಗೂ ಹಾನಿಕಾರಕ ಕಣಗಳನ್ನು ತೊಳೆಯುವ ಮೂಲಕ ಗಾಳಿಯನ್ನು ಸ್ವಚ್ಛಗೊಳಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಬೆಂಗಳೂರು, ಉಡುಪಿ ಸೇರಿದಂತೆ ಕರಾವಳಿ ಮತ್ತು ಒಳನಾಡಿನ ಹಲವು ಪ್ರದೇಶಗಳಲ್ಲಿ ಉತ್ತಮ ಮಟ್ಟದ ವಾಯುಗುಣ ಮಟ್ಟ ದಾಖಲಾಗಿರುವುದು ಜನರಿಗೆ ನಿರಾಳತೆ ನೀಡಿದೆ. ಮಳೆಯ ಪರಿಣಾಮದಿಂದ ಉಸಿರಾಟದ ಸಮಸ್ಯೆ ಹೊಂದಿರುವವರು ಹಾಗೂ ಹಿರಿಯ ನಾಗರಿಕರಿಗೆ ಶುದ್ಧ ಗಾಳಿ ದೊರಕಿರುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂದು ಹೇಳಲಾಗುತ್ತದೆ.
ಮಳೆ ಮತ್ತು ಬಿರುಗಾಳಿಯ ಪ್ರಭಾವದಿಂದ ವಾಹನಗಳ ಧೂಳು, ಕೈಗಾರಿಕಾ ಹೊಗೆ ಹಾಗೂ ನಗರ ಮಾಲಿನ್ಯ ತಾತ್ಕಾಲಿಕವಾಗಿ ಕಡಿಮೆಯಾಗಿದ್ದು, ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಕಂಡುಬಂದಿದೆ. ಮುಂದಿನ ದಿನಗಳ ಹವಾಮಾನ ಪರಿಸ್ಥಿತಿಯ ಮೇಲೆ ವಾಯುಗು ಗುಣಮಟ್ಟದಲ್ಲಿ ಮತ್ತಷ್ಟು ಬದಲಾವಣೆಗಳಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರಂತರ ವಾಹನ ಸಂಚಾರದಿಂದ ಸದಾ ಧೂಳಿನಿಂದ ಕೂಡಿರುವ ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ಮಳೆಯ ಪರಿಣಾಮದಿಂದ ತಾತ್ಕಾಲಿಕವಾಗಿ ಶುದ್ಧ ಗಾಳಿಯನ್ನು ಅನುಭವಿಸುತ್ತಿದೆ. ನಗರದ ಸರಾಸರಿ ವಾಯುಗು ಗುಣಮಟ್ಟ ಸೂಚ್ಯಂಕ ಇಂದು 55 ರಿಂದ 69ರ ಆಸುಪಾಸಿನಲ್ಲಿ ದಾಖಲಾಗಿದ್ದು, ಇದನ್ನು ಸಾಧಾರಣ ಮಟ್ಟವೆಂದು ಪರಿಗಣಿಸಲಾಗಿದೆ.
ಮಳೆಯ ಕಾರಣದಿಂದ ವಾತಾವರಣದಲ್ಲಿದ್ದ ಧೂಳಿನ ಕಣಗಳು, ವಿಶೇಷವಾಗಿ PM 2.5 ಮತ್ತು PM 10 ಮೊಟ್ಟೆಗಳು ಗಣನೀಯವಾಗಿ ಕಡಿಮೆಯಾಗಿವೆ ಎಂದು ತಜ್ಞರು ತಿಳಿಸಿದ್ದಾರೆ. ನಗರದ ಹೆಬ್ಬಾಳ ಮತ್ತು ಜಯನಗರ ಪ್ರದೇಶಗಳಲ್ಲಿ ವಾಯುಗುಣ ಮಟ್ಟ ಉತ್ತಮವಾಗಿದ್ದು, ಸಿಲ್ಕ್ ಬೋರ್ಡ್ ನಂತಹ ಹೆಚ್ಚಿನ ಟ್ರಾಫಿಕ್ ಇರುವ ಪ್ರದೇಶಗಳಲ್ಲಿ ಮಾತ್ರ ಸ್ವಲ್ಪ ಮಟ್ಟಿನ ಮಾಲಿನ್ಯ ಮುಂದುವರೆದಿದೆ.
ಇಡೀ ವೇಳೆ ಮಂಗಳೂರು, ಉಡುಪಿ, ಶಿವಮೊಗ್ಗ, ಮತ್ತು ಮಡಿಕೇರಿ ಜಿಲ್ಲೆಗಳಲ್ಲಿ ಇಂದು ವಾಯುಗುಣ ಮಟ್ಟ ಉತ್ತಮ ವಲಯದಲ್ಲಿದೆ. ನಿರಂತರ ಗಾಳಿ ಹಾಗೂ ಮಳೆಯ ಮುನ್ಸೂಚನೆಯಿಂದಾಗಿ ಈ ಪ್ರದೇಶಗಳಲ್ಲಿ ವಾತಾವರಣ ಸಂಪೂರ್ಣವಾಗಿ ತಾಜಾ ಮತ್ತು ಸ್ವಚ್ಛವಾಗಿದೆ. ಉಸಿರಾಟದ ತೊಂದರೆ ಇರುವವರು ಹಾಗೂ ಹಿರಿಯ ನಾಗರಿಕರು ಮುಕ್ತವಾಗಿ ಹೊರಗೆ ಸಂಚರಿಸಲು ಇದು ಅನುಕೂಲಕರ ಪರಿಸ್ಥಿತಿ ಎಂದು ಹೇಳಲಾಗಿದೆ.
ವಾಯುಗುಣ ಮಟ್ಟವನ್ನು ಸಾಮಾನ್ಯವಾಗಿ ಹೀಗಾಗಿ ವರ್ಗಿಕರಿಸಲಾಗುತ್ತದೆ: 0-50 ಉತ್ತಮ, 50-100 ಮಧ್ಯಮ,100-150 ಕಳಪೆ, 150-200 ಅನಾರೋಗ್ಯಕರ, 200-300 ಗಂಭೀರ ಹಾಗೂ 300ಕ್ಕೂ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ.
ಮಳೆಯ ಪರಿಣಾಮದಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ತಾತ್ಕಾಲಿಕ ಸುಧಾರಣೆ ಕಂಡುಬಂದಿದ್ದು, ಮುಂದಿನ ದಿನಗಳ ಹವಾಮಾನ ಪರಿಸ್ಥಿತಿಯ ಮೇಲೆ ಇದು ಹೇಗೆ ಬದಲಾಗುತ್ತದೆ ಎಂಬುದನ್ನು ತಜ್ಞರು ಗಮನಿಸುತ್ತಿದ್ದಾರೆ.
Also Read:
ಕರ್ನಾಟಕ ತೆಲಂಗಾಣ ನಡುವೆ ಜಲ ಒಪ್ಪಂದ ಸಮಲೋಚನೆ : ಸಚಿವರ ಸಭೆಗೆ ಮಹತ್ವ