<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

ISSF World Cup 2026: ಮ್ಯೂನಿಚ್ ಗೆ ಭಾರತೀಯ ಶೂಟರ್ಸ್ ಪಡೆ ಸಜ್ಜು

ISSF World Cup 2026: ಮ್ಯೂನಿಚ್ ಗೆ ಭಾರತೀಯ ಶೂಟರ್ಸ್ ಪಡೆ ಸಜ್ಜು
Summary: The Indian shooters team is all set for the ISSF World Cup 2026 to be held in Munich. A 22-member strong contingent from India is participating in this prestigious shooter tournament to be held in Munich, Germany. The Indian team, which is spreading with the hope of a medal, is ready to continue its great performance at the international level.

Balagavi News:

National Rifle Association Of India (NRAI): ಆಯ್ಕೆ ಸಮಿತಿಯು ಮ್ಯೂನಿಚ್ ನಲ್ಲಿ ನಡೆಯಲಿರುವ ISSF World Cup 2026ಗಾಗಿ 22 ಸದಸ್ಯರ ಬಲಿಷ್ಠ ಭಾರತೀಯ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಎರಡು ಬಾರಿ ಒಲಂಪಿಕ್ಸ್ ಪದಕ ವಿಜೇತೆ Manu Bhaker ಹಾಗೂ ವಿಶ್ವ ಚಾಂಪಿಯನ್ಶಿಪ್ ಪದಕ ವಿಜೇತೆ Esha Singh ಸ್ಥಾನ ಪಡೆದಿದ್ದಾರೆ.

ಮನು ಭಾಕರ್ ಅವರು ಮಹಿಳಾ ವೈಯಕ್ತಿಕ ಪಿಸ್ತೂಲ್ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದು. ಜೊತೆಗೆ ಮಿಶ್ರ ಪಿಸ್ತಾಲ್ ಇವೆಂಟ್ ನಲ್ಲಿಯೋ ಕಣಕ್ಕಿಳಿಯಲ್ಲಿದ್ದಾರೆ. ಇಶಾ ಸಿಂಗ್ ಕೂಡ ವೈಯಕ್ತಿಕ ಪಿಸ್ತೂಲ್ ವಿಭಾಗಗಳಲ್ಲಿ ಭಾರತ ಪರವಾಗಿ ಸ್ಪರ್ಧಿಸಿದ್ದಾರೆ.

ಮೇ 26 ರಿಂದ 31ರವರೆಗೆ ಜರ್ಮನಿಯ ಮ್ಯೂನಿಚ್ ನಲ್ಲಿ ನಡೆಯುವ ಈ ಪ್ರತಿಷ್ಠಿತ ವಿಶ್ವ ಕಪ್ ನಲ್ಲಿ ಮಹಿಳಾ 25 ಮೀಟರ್ ಸ್ಪರ್ಧೆಯಿಂದ ಆರಂಭವಾಗಿ ಹಲವು ರೈಫಲ್ ಪೊಸಿಷನ್ಸ್ ಎಲಿಮಿನೇಷನ್ ಸುತ್ತುಗಳೂ ಸ್ಪರ್ಧೆಯಲ್ಲಿ ಭಾಗವಾಗಿವೆ.

Sponsored

ಮೊದಲ ದಿನವೇ ಎರಡು ಫೈನಲ್ ಗಳು ನಡೆಯಲಿದ್ದು. ಪುರುಷರ 10 ಮೀಟರ್ ಏರ್ ಪಿಸ್ತೂಲ್ ಮತ್ತು 10 ಮಿಟರ್ ಏರ್ ರೈಫಲ್ ವಿಭಾಗಗಳಲ್ಲಿ ಪದಕ ಹೋರಾಟ ನಡೆಯಲಿದೆ. ಭಾರತದ ಈ ಬಲಿಷ್ಠ ತಂಡದ ಮೇಲೆ ಪದಕ ನಿರೀಕ್ಷೆಗಳು ಹೆಚ್ಚಾಗಿವೆ.

ISSF World Cup 2026: ಈ ಬಾರಿಅತ್ಯಂತ ದೊಡ್ಡ ಮತ್ತು ಸ್ಪರ್ಧಾತ್ಮಕ ಶೂಟಿಂಗ್ ಟೂರ್ನಿಯಾಗಿ ಗಮನ ಸೆಳೆಯುತ್ತಿದೆ. ಮ್ಯೂನಿಚ್ ನಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ವಿಶ್ವ ಕಪ್ ನಲ್ಲಿ 80 ದೇಶಗಳಿಂದ ಒಟ್ಟು 696 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಒಲಂಪಿಕ್ ಪದಕ ವಿಜೇತರು ಮತ್ತು ವಿಶ್ವ ಚಾಂಪಿಯನ್ ಗಳು ಕೊಡ ಈ ಸ್ಪರ್ಧೆಯಲ್ಲಿ ಕಣಕ್ಕಿಳಿಯುತ್ತಿರುವುದರಿಂದ ಹೋರಾಟ ಇನ್ನಷ್ಟು ಕಠಿಣವಾಗಲಿದೆ.

ಈ ವರ್ಷ ನಡೆಯುತ್ತಿರುವ ಎರಡನೇ ರೈಫಲ್/ಪಿಸ್ತೂಲ್ ವಿಶ್ವ ಕಪ್ ಇದಾಗಿದ್ದು. ಜಾಗತಿಕ ಮಟ್ಟದ ಶುಟರಗಳು ತಮ್ಮ ಶ್ರೇಷ್ಠ ಕೌಶಲ್ಯವನ್ನು ಪರೀಕ್ಷಿಸಲು ಸಜ್ಜಾಗಿದ್ದಾರೆ. ಈ ಸ್ಪರ್ಧೆ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಪ್ರಮುಖ ಬಹು-ಕ್ರೀಡಾಕೂಟಗಳು ಹಾಗೂ ವಿಶ್ವ ಚಾಂಪಿಯನ್ಶಿಪ್ ಗಳಿಗೆ ಮುಂಚಿತವಾಗಿ ಬಹಳ ಮಹತ್ವ ಪಡೆದಿದೆ.

ಇದಕ್ಕೂ ಮುನ್ನ ಎಪ್ರಿಲ್ ನಲ್ಲಿ ನಡೆದ ಗ್ರೆನಡಾ ವಿಶ್ವ ಕಪ್ ನಲ್ಲಿ ಭಾರತ ಚಿನ್ನದ ಪದಕ ಗೆದ್ದು ಗಮನ ಸೆಳೆದಿತ್ತು. ಆ ಟೂರ್ನಿಯಲ್ಲಿ ದೇಶಿಯ ಶ್ರೇಯಾಂಕದಲ್ಲಿ 3ರಿಂದ 6ರವರಗಿನ ಆಟಗಾರರು ಭಾಗವಹಿಸಿದ್ದರು. ಆದರೆ ಮ್ಯೂನಿಚ್ ನಲ್ಲಿ ಭಾರತದ ಅಗ್ರ ಶ್ರೇಯಾಕಿಂತ ರೈಫಲ್ ಮತ್ತು ಪಿಸ್ತೂಲ್ ಶೂಟರ್ ಗಳು ಭಾಗವಹಿಸುತ್ತಾರೆ. ಇದು ಈ ವರ್ಷ ಮೊದಲ ಬಾರಿಗೆ ಪ್ರಮುಖ ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತ ಟಾಪ್ ಶೂಟರ್ ಗಳು ಕಣಕ್ಕಿಳಿಯುವ ಅವಕಾಶವಾಗಿದೆ.

Sponsored

ಭಾರತೀಯ ತಂಡವು ಅನುಭವಿ ಹಾಗೂ ಯುವ ಆಟಗಾರರ ಸಮನ್ವಯದೊಂದಿಗೆ ಕಣಕ್ಕಿಳಿಯುತ್ತಿದ್ದು. ವಿಶ್ವದ ಅನುಭವಿ ಶೂಟರ್ ಗಳ ಎದುರು ಕಠಿಣ ಸವಾಲನ್ನು ಎದುರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮ್ಯೂನಿಚ್ ವಿಶ್ವ ಭಾರತದ ಕ್ರೀಡಾ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿದೆ.

Also Read:

ಉತ್ತರ ಭಾರತ ಬಿಸಿ ಗಾಳಿಗೆ ಕಂಗಾಲು: ಮೇ 27ರವರೆಗೆ ಎಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online