belagavi news :
ದೇಶದ ಬಹುತೇಕ ಭಾಗಗಳು ಈಗ ತೀವ್ರ ಶಾಖದ ಅಲೆಯ ಪ್ರಭಾವಕ್ಕೆ ಒಳಗಾಗಿವೆ. ಹಲೋ ರಾಜ್ಯಗಳಲ್ಲಿ ಉಷ್ಣಾಂಶವು 45 ಡಿಗ್ರಿ ಸೆಲ್ಸಿಯಲ್ಸ್ ವರೆಗೆ ಏರಿಕೆಯಾಗಿದೆ. ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ರಾಜಸ್ಥಾನ್ ಮತ್ತು ಬಿಹಾರ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಉಷ್ಣತೆ ಜನಜೀವನವನ್ನು ಗಂಭೀರವಾಗಿ ಅ ಸ್ತವೆಸ್ತಗೊಳಿಸಿದೆ. ಬಿಸಿಲಿನ ತೀವ್ರತೆ ಮತ್ತು ಬಿರುಗಾಳಿಯ ಪರಿಣಾಮವಾಗಿ ಜನರು ದಿನನಿತ್ಯದ ಕೆಲಸಗಳಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ.
ಇದೇ ವೇಳೆ, ದೆಹಲಿಯಲ್ಲಿ ಭಾನುವಾರವು ತೀವ್ರ ಶಾಖದ ಅಲೆ ಮುಂದುವರೆದಿದ್ದು, ನಾಗರಿಕರು ಭಾರಿ ಅಸೌಕರ್ಯ ಎದುರಿಸಿದರು. ಸ್ಪಷ್ಟವಾದ ಆಕಾಶ ಮತ್ತು ನಿರಂತರವಾಗಿ ಹೊಳೆಯುತ್ತಿದ್ದ ಸೂರ್ಯಕಿರಣಗಳ ನಡುವಲ್ಲಿ ದೆಹಲಿಯಲ್ಲಿ ಗರಿಷ್ಠ ತಾಪಮಾನ 43.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಕನಿಷ್ಠ ತಾಪಮಾನವು 28.7° ಸೆಲ್ಸಿಯಸ್ ಆಗಿತ್ತು. ಈ ತೀವ್ರ ಉಷ್ಣತೆ ಹಿನ್ನೆಲೆಯಲ್ಲಿ ಜನರು ಸಾಧ್ಯವಾದಷ್ಟು ಮಧ್ಯಾಹ್ನದ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ, ನೀರಿನ ಸೇವನೆ ಹೆಚ್ಚುವಂತೆ ಸಲಹೆ ನೀಡಲಾಗುತ್ತಿದೆ.
ಆರ್ದ್ರತೆಯ ಮಟ್ಟವು 50 ಎಡರಿಂದ 16 ಪ್ರತಿಶತದ ವರೆಗೆ ಇತ್ತು. ರಿಡ್ಜ್ ಮತ್ತು ಅಯನಗರ ಪ್ರದೇಶಗಳು ಅತ್ಯಂತ ಬಿಸಿಲಿನಿಂದ ಕೂಡಿದ್ದು, ಗರಿಷ್ಠ ತಾಪಮಾನ 44.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇಂದು ಹವಾಮಾನ ಸ್ಥಿತಿಯ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ದೇವರ ಬಿಸಿಲಿನ ನಡುವೆ ಮುಂದಿನ ಮೂರು ದಿನಗಳವರೆಗೆ ಶಾಕದ ಅಲೆ ಮುಂದುವರೆಯುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಹವಾಮಾನ ಇಲಾಖೆಯು ಮೇ 27ರವರೆಗೆ ಹಳದಿ ಶಾಕದ ಅಲೆಯ ಎಚ್ಚರಿಕೆಯನ್ನು ಪ್ರಕಟಿಸಿದೆ.
ದೆಹಲಿಯಲ್ಲಿ ಸೋಮವಾರ ಸ್ಪಷ್ಟ ಆಕಾಶ ಕಂಡುಬಂದಿದ್ದು, ಮಧ್ಯಾಹ್ನದ ವೇಳೆಗೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ ಎಂದು ಇಲಾಖೆ ತಿಳಿಸಿದೆ. ಕೆಲವು ಪ್ರದೇಶಗಳಲ್ಲಿ ಉಷ್ಣ ಅಲೆಗಳು ಮುಂದುವರೆಯುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಮೇಲ್ಮೈಗಾಳಿಯ ವೇಗ ಗಂಟೆಗೆ 30 ರಿಂದ 40 ಕಿಲೋಮೀಟರ್ ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.
ಗರಿಷ್ಠ ತಾಪಮಾನವು ಸುಮಾರು 44 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನವು 29 ಡಿಗ್ರಿ ಸೆಲ್ಸಿಯಸ್ ಆಗಿರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜನರು ಬಿಸಿಲಿನ ತೀವ್ರತೆಯಿಂದ ಎಚ್ಚರಿಕೆಯಿಂದ ಇರಲು ಮತ್ತು ಅಗತ್ಯ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ಪ್ರಕಾರ, ಸೋಮವಾರ ಬೆಳಗ್ಗೆ 7.30 ರವರೆಗೆ ರಾಜಧಾನಿ ದೆಹಲಿಯಲ್ಲಿ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI)2೦3 ದಾಖಲಾಗಿದೆ.ಇದು 'ಮಧ್ಯಮದಿಂದ ಕಳಪೆ'ವರ್ಗದ ವಾಯು ಗುಣಮಟ್ಟವನ್ನು ಸೂಚಿಸುತ್ತದೆ.
ದೆಹಲಿಯ ಜೊತೆಗೆ ದೆಹಲಿ ಎನ್ ಸಿ ಆರ್ ಪ್ರದೇಶಗಳಲ್ಲಿಯೂ ವಾಯುಮಾಲಿನ್ಯ ಮಟ್ಟ ಗಮನಾರ್ಹ ವಾಗಿತ್ತು.ಫರೀದಾಬಾದ್ ನಲ್ಲಿ AOI 178,ಗುರು ಗ್ರಾಮನಲ್ಲಿ 167,ಗಾಜಿಯಾಬಾದ್ ನಲ್ಲಿ 175,ಗ್ರೇಟರ್ ನೋಯ್ಡಾದಲ್ಲಿ 162 ಮತ್ತು ನೋಯ್ಡಾದಲ್ಲಿ158 ದಾಖಲಾಗಿತ್ತು.
ದೆಹಲಿಯ ಹೆಚ್ಚಿನ ಭಾಗಗಳಲ್ಲಿ ವಾಯುಗು ಗುಣಮಟ್ಟ ಸೂಚ್ಯಂಕ 200 ರಿಂದ 300ರ ನಡುವೆ ಕಂಡುಬಂದಿದ್ದು,ಕೆಲವು ಪ್ರದೇಶಗಳಲ್ಲಿ ಅದು ೧೦೦ ರಿಂದ ೨೦೦ ನಡುವೆ ಇತ್ತು.ಇದರಿಂದ ನಗರದಲ್ಲಿ ಒಟ್ಟಾರೆ ವಾಯುಗುಣ ಮಟ್ಟದಲ್ಲಿ ಅಸ್ಥಿರತೆ ಮುಂದುವರೆದಿದೆ ಎಂದು ಸ್ಪಷ್ಟವಾಗುತ್ತದೆ.
Also Read:
ರಾಜ್ಯದಲ್ಲಿ 2028ಕ್ಕೆ ಕಾಂಗ್ರೆಸ್ ಅಧಿಕಾರ ಖಚಿತ : ಡಿಕೆ ಶಿವಕುಮಾರ್ ಭವಿಷ್ಯ