H16 News
Logo

By Samreen | Published on November 1, 2025

Image Not Found
Food / November 1, 2025

ಆ ಪದಾರ್ಥಗಳಿದ್ದರೆ ನಿಮ್ಮ ಮೆದುಳು, ಕರುಳು ಎರಡೂ ಸೇಫ್ ಆಗಿರುತ್ತೆ

ಕರುಳು ಮತ್ತು ಮೆದುಳಿನ ಕಾರ್ಯಗಳಿಗೆ ಒಂದಕ್ಕೊಂದು ಪರಸ್ಪರ ಸಂಬಂಧವಿದೆ. ಮುಖ್ಯವಾಗಿ ಕರುಳಿನಲ್ಲಿ ಉತ್ಪತ್ತಿಯಾಗುವ ಸಿರೊಟೋನಿನ್, ಮೆದುಳು ಮತ್ತು ಕರುಳಿನ ಕಾರ್ಯವನ್ನು ನಿಯಂತ್ರಿಸುತ್ತದೆ. ಮಾತ್ರವಲ್ಲ ಈ ಹಾರ್ಮೋನ್ ಮಟ್ಟವನ್ನು ಭಾಗಶಃ ನಾವು ಸೇವನೆ ಮಾಡುವ ಆಹಾರಗಳಿಂದ ಅಳೆಯಲಾಗುತ್ತದೆ. ಜೊತೆಗೆ ಅಮೈನೋ ಆಮ್ಲಗಳು, ಟ್ರಿಪ್ಟೊಫಾನ್ ಮತ್ತು ಸಿರೊಟೋನಿನ್ ಸಮೃದ್ಧವಾಗಿರುವ ಆಹಾರಗಳು ಕೂಡ ಮನಸ್ಥಿತಿ ಸುಧಾರಿಸಲು ಸಹಾಯ ಮಾಡುತ್ತದೆ. ಹೀಗೆ ಕರುಳು ಮತ್ತು ಮೆದುಳಿನ ಕಾರ್ಯಗಳು ಒಂದಕ್ಕೊಂದು ಬೆಸೆದಿರುತ್ತದೆ. ಹಾಗಾಗಿ ಮೆದುಳು ಮತ್ತು ಕರುಳು ಆರೋಗ್ಯವಾಗಿರಲು ನಾವು ಸರಿಯಾದ ಆಹಾರಗಳ ಸೇವನೆ ಮಾಡಬೇಕು. ಹಾಗಾದರೆ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಾವು ಸೇವನೆ ಮಾಡುವ ಆಹಾರಕ್ಕೂ, ನಮ್ಮ ಮೆದುಳು ಕಾರ್ಯ ನಿರ್ವಹಿಸುವುದಕ್ಕೂ ಸಂಬಂಧವಿದೆ. ಈ ಬಗ್ಗೆ ಕೆಲವರಿಗೆ ತಿಳಿದಿರಬಹುದು. ಇನ್ನು ಹಲವರು ತಿಳಿದಿದ್ದರೂ ಅದನ್ನು ಕಡೆಗಣಿಸಿರಬಹುದು. ಸಾಮಾನ್ಯವಾಗಿ ನಾವು ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡುತ್ತೇವೆಯೋ ಅದನ್ನು ನಮ್ಮ ಯೋಚನಾಕ್ರಮದ ಮೇಲೆ ಪ್ರಭಾವ ಬೀರಬಹುದು. ಅಂದರೆ ನಮ್ಮ ಕರುಳು (Gut health) ಮತ್ತು ಮೆದುಳಿನ ಕಾರ್ಯಗಳು ಒಂದಕ್ಕೊಂದು ಬೆಸೆದಿರುತ್ತದೆ. ಹಾಗಾಗಿ ರಸ್ಪರ ಪ್ರಭಾವ ಬೀರುತ್ತವೆ. ಕರುಳು ಕೇವಲ ನಮ್ಮ ಜೀರ್ಣಕ್ರಿಯೆಗೆ ಮಾತ್ರವಲ್ಲದೆ, ರೋಗನಿರೋಧಕ ಶಕ್ತಿ, ಮಾನಸಿಕ ಮತ್ತು ಒಟ್ಟಾರೆ ಆರೋಗ್ಯಕ್ಕೂ ಅತ್ಯಗತ್ಯ ಎಂಬುದನ್ನು ನಾವು ತಿಳಿದಿರಬೇಕಾಗುತ್ತದೆ. ಅದರಲ್ಲಿಯೂ ಮುಖ್ಯವಾಗಿ ಕರುಳಿನಲ್ಲಿ ಉತ್ಪತ್ತಿಯಾಗುವ ಸಿರೊಟೋನಿನ್, ಮೆದುಳು (Brain), ಕರುಳನ್ನು ನಿಯಂತ್ರಿಸುತ್ತದೆ. ಇದು ನಿದ್ರೆಯ ಗುಣಮಟ್ಟ, ಮನಸ್ಥಿತಿ ಬದಲಾವಣೆ ಮತ್ತು ಹಸಿವಿನ ಪ್ರಮುಖ ನಿಯಂತ್ರಕವಾಗಿದೆ. ಈ ಹಾರ್ಮೋನ್ ಮಟ್ಟವನ್ನು ವಿಭಿನ್ನ ಆಹಾರಗಳಿಂದ ನಿರ್ಧರಿಸಲಾಗುತ್ತದೆ. ಹಾಗಾದರೆ ಮೆದುಳು, ಆರೋಗ್ಯವಾಗಿರಲು ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ. ಪ್ರಿಬಯಾಟಿಕ್ ಮತ್ತು ಪ್ರೋಬಯಾಟಿಕ್ ಆಹಾರಗಳು: ಇದೆಲ್ಲದರ ಜೊತೆಗೆ ಮೊಸರು ಪ್ರೋಬಯಾಟಿಕ್ಗಳ ಅತ್ಯುತ್ತಮ ಮೂಲವಾಗಿದೆ. ಇದರಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹುರಿದ ಜೀರಿಗೆಯೊಂದಿಗೆ ಮೊಸರನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗುತ್ತದೆ. ಇದು ಮಲಬದ್ಧತೆ ಅಥವಾ ಅಜೀರ್ಣದಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆಹಾರ ತಜ್ಞರು ಕೂಡ ಪ್ರಿಬಯಾಟಿಕ್ ಮತ್ತು ಪ್ರೋಬಯಾಟಿಕ್ ಆಹಾರಗಳು ಜೀರ್ಣಕ್ರಿಯೆಗೆ ಸಹಾಯ ಮಾಡಲು ಅಗತ್ಯವಿರುವ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳ ಮೂಲಗಳಾಗಿವೆ. ಮೊಸರು ಮತ್ತು ಮಜ್ಜಿಗೆ, ಸೇಬು ಮತ್ತು ಇನ್ನಿತರ ಹಣ್ಣುಗಳು, ಗಿಡಮೂಲಿಕೆಗಳು, ಶುಂಠಿ, ಬೆಳ್ಳುಳ್ಳಿ, ಕರಿಮೆಣಸು, ದಾಲ್ಚಿನ್ನಿ ಮತ್ತು ಅರಿಶಿನ, ಡೈರಿ ಉತ್ಪನ್ನಗಳು ಕರುಳಿನ ಆರೋಗ್ಯ ಕಾಪಾಡಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ. ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುವ ಆಹಾರಗಳು: ವಿಟಮಿನ್ ಡಿ, ವಿಟಮಿನ್ ಬಿ ಕಾಂಪ್ಲೆಕ್ಸ್, ವಿಟಮಿನ್ ಕೆ, ಸತು, ಮೆಗ್ನೀಸಿಯಮ್, ಒಮೆಗಾ- 3 ಕೊಬ್ಬಿನಾಮ್ಲಗಳು, ಕೋಲೀನ್, ಆಲ್ಫಾ- ಲಿನೋಲೆನಿಕ್ ಆಮ್ಲ, ಬೀಟಾ- ಕ್ಯಾರೋಟಿನ್, ಲೈಕೋಪೀನ್, ಆಂಥೋಸಯಾನಿನ್ಗಳು, ಪಾಲಿಫಿನಾಲ್ಗಳು, ಕರ್ಕ್ಯುಮಿನ್ ಮತ್ತು ಏಕಾಪರ್ಯಾಪ್ತ ಕೊಬ್ಬುಗಳು/ ಎಣ್ಣೆಗಳಂತಹ ಕೆಲವು ಪೋಷಕಾಂಶಗಳು ಮೆದುಳಿನ ಕಾರ್ಯನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಪೋಷಕಾಂಶಗಳು ಅವುಗಳ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಉರಿಯೂತವನ್ನು ಕಡಿಮೆ ಮಾಡುತ್ತವೆ. ಮಾತ್ರವಲ್ಲ ಕರುಳಿನ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ, ಇದರಿಂದಾಗಿ ಮೆದುಳು ಮತ್ತು ಕರುಳಿನ ಜೀವಕೋಶಗಳೆರಡರ ಕ್ಷೀಣತೆಯನ್ನು ತಡೆಯುತ್ತದೆ. ವಿಟಮಿನ್ ಡಿ, ವಿಟಮಿನ್ ಬಿ ಕಾಂಪ್ಲೆಕ್ಸ್, ವಿಟಮಿನ್ ಕೆ, ಸತು, ಮೆಗ್ನೀಸಿಯಮ್, ಒಮೆಗಾ- 3 ಕೊಬ್ಬಿನಾಮ್ಲಗಳು, ಕೋಲೀನ್, ಆಲ್ಫಾ- ಲಿನೋಲೆನಿಕ್ ಆಮ್ಲ, ಬೀಟಾ- ಕ್ಯಾರೋಟಿನ್, ಲೈಕೋಪೀನ್, ಆಂಥೋಸಯಾನಿನ್ಗಳು, ಪಾಲಿಫಿನಾಲ್ಗಳು, ಕರ್ಕ್ಯುಮಿನ್ ಮತ್ತು ಏಕಾಪರ್ಯಾಪ್ತ ಕೊಬ್ಬುಗಳು/ ಎಣ್ಣೆಗಳಂತಹ ಕೆಲವು ಪೋಷಕಾಂಶಗಳು ಮೆದುಳಿನ ಕಾರ್ಯನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಪೋಷಕಾಂಶಗಳು ಅವುಗಳ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಉರಿಯೂತವನ್ನು ಕಡಿಮೆ ಮಾಡುತ್ತವೆ. ಮಾತ್ರವಲ್ಲ ಕರುಳಿನ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ, ಇದರಿಂದಾಗಿ ಮೆದುಳು ಮತ್ತು ಕರುಳಿನ ಜೀವಕೋಶಗಳೆರಡರ ಕ್ಷೀಣತೆಯನ್ನು ತಡೆಯುತ್ತದೆ ಇನ್ನಷ್ಟು ಓದಿರಿ : ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವಲ್ಲಿ ಸಸ್ಯಾಧಾರಿತ ಆಹಾರ ಕ್ರಮದ ಪಾತ್ರ ಅಪಾರ
Sponsored Ads
image computer academy
image computer academy
image computer academy
image computer academy
LANDSCAPING IN CAD
LANDSCAPING IN CAD
HSRNEWS
HSRNEWS

Related News

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy