<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಮಳೆ ಕೈ ಕೊಟ್ಟ ಪರಿಣಾಮ : ಭರಚುಕ್ಕಿ ನೀರಿಲ್ಲದೆ ಭಣ ಭಣ, ಹೊಗೆನಕಲ್ ನಲ್ಲಿ ಕಾವೇರಿ ಶಾಂತ !

ಮಳೆ ಕೈ ಕೊಟ್ಟ ಪರಿಣಾಮ : ಭರಚುಕ್ಕಿ ನೀರಿಲ್ಲದೆ ಭಣ ಭಣ, ಹೊಗೆನಕಲ್ ನಲ್ಲಿ ಕಾವೇರಿ ಶಾಂತ !
Summary: Many districts of the state have experienced severe rainfall shortages, and reservoirs and famous waterfalls have lost their beauty. The flow of water in the Bharachukki and Hogenakal waterfalls has decreased, and instead of the Rudra dance, only rocks are showing. Tourists who came to witness the splendor of nature are returning disappointed.

belagavi news :

ಚಾಮರಾಜನಗರ : ರಾಜ್ಯದ ಹಲವಡೆ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಇದರ ನೇರ ಪರಿಣಾಮ ಪ್ರಸಿದ್ಧ ಜಲಪಾತಗಳ ಮೇಲು ಬಿದ್ದಿದ್ದು, ಈ ವೇಳೆಗೆ ಭೋರ್ಗರೆದು ದುಮ್ಮಿಕ್ಕಬೇಕಿದ್ದ ಜಲಪಾತಗಳು ಈಗ ನೀರಿಲ್ಲದೆ ಸೊಬಗು ಕಳೆದುಕೊಂಡಿವೆ. ನೀರಿನ ಹರಿವಿನ ಬದಲಿಗೆ ಬೃಹತ್ ಬಂಡೆಗಳೇ ಪ್ರವಾಸಿಗರಿಗೆ ದರ್ಶನ ನೀಡುತ್ತಿವೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಶಿವನಸಮುದ್ರದ ಭರಚುಕ್ಕಿ ಜಲಪಾತ ಹಾಗೂ ಹನೂರು ತಾಲೂಕಿನ ಹೊಗೆನಕಲ್ ಜಲಪಾತ ಮಳೆ ಪ್ರಭಾವದ ಹೊಡೆತಕ್ಕೆ ಮಂಕಾಗಿವೆ. ಸಾಮಾನ್ಯವಾಗಿ ಈ ಸಮಯದಲ್ಲಿ ಕಾವೇರಿ ರುದ್ರನರ್ತನ ಮಾಡುತ್ತಾ ಪ್ರವಾಸಿಗರನ್ನು ಕಂಚೆಡೆಯುವ ಮನಮೋಹಕ ದೃಶ್ಯ ಕಂಡು ಬರುತ್ತದೆ. ಆದರೆ ಈ ಬಾರಿ ನೀರಿನ ಹರಿವು ಗಣನೀಯವಾಗಿ ಕುಸಿದಿರುವುದರಿಂದ ಈ ವೈಭವ ಕಣ್ಮರೆಯಾಗಿದೆ.

ಜಲಪಾತಗಳ ರೌದ್ರ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ದೂರ ದೂರನೂರಿನಿಂದ ಆಗಮಿಸುತ್ತಿರುವ ಪ್ರವಾಸಿಗರಿಗೆ ನಿರಾಸೆಯೇ ಎದುರಾಗುತ್ತಿದೆ. ಮಳೆ ಕೊರತೆಯಿಂದ ಕಾವೇರಿಯ ವೈಭವ ಮಂಕಾಗಿದ್ದು, ಜಲಪಾತಗಳಲ್ಲಿ ನೀರಿಗಿಂತ ಬಂಡೆಗಳೆ ಹೆಚ್ಚು ಗೋಚರಿಸುತ್ತಿರುವ ದೃಶ್ಯ ಪರಿಸ್ಥಿತಿಯ ಗಂಭೀರತೆಯನ್ನು ಬಿಂಬಿಸುತ್ತಿದೆ.

ಬಂಡೆಕಲ್ಲುಗಳೇ ದರ್ಶನ : ನಿರಾಶೆಯಲ್ಲಿ ಪ್ರವಾಸಿಗರು

ಮುಂಗಾರು ಮಳೆ ನಿರೀಕ್ಷೆಯಂತೆ ಸುರಿದಿದ್ದರೆ, ಚಾಮರಾಜನಗರ ಜಿಲ್ಲೆಯ ಶಿವನಸಮುದ್ರದ ಭರಚುಕ್ಕಿ ಹಾಗೂ ಹೊಗೆನಕಲ್ ಜಲಪಾತಗಳು ಈ ವೇಳೆಗೆ ಮೈದುಂಬಿ ಹರಿಯುತ್ತಾ ಮನಮೋಹಕ ದೃಶ್ಯವನ್ನು ಸೃಷ್ಟಿಸಬೇಕಿತು. ಪ್ರತಿ ವರ್ಷ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಕಾವೇರಿ ರುದ್ರನರ್ತನವನ್ನು ಕಂತುಂಬಿಕೊಳ್ಳಲು ರಾಜ್ಯ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ಹಾಗೂ ಭಕ್ತರು ಆಗಮಿಸುತ್ತಿದ್ದಾರೆ. ಆದರೆ ಈ ಬಾರಿ ಮಳೆಯ ಅಬಾಬಾ ದಿಂದ ಜಲಪಾತಗಳಲ್ಲಿ ನೀರಿನ ಅರಿವು ಕ್ಷೀಣಿಸಿದ್ದು, ಪ್ರವಾಸಿಗರಿಗೆ ಜಲಧಾರೆಗಳ ಬದಲು ಬಂಡೆಗಲ್ಲುಗಳೆ ದರ್ಶನ್ ನೀಡುತ್ತಿವೆ. ಅಪಾರ ನಿರೀಕ್ಷೆಯೊಂದಿಗೆ ಆಗಮಿಸುವ ಪ್ರವಾಸಿಗರು ನಿರಾಶೆಯಿಂದ ಹಿಂದಿರುಗುವಂತಾಗಿದೆ.

ಭರಚುಕ್ಕಿ ಭಣಭಣ: ಕಾವೇರಿಯಲ್ಲಿ ಕ್ಷೀಣಿಸಿದ ಹರಿವು

ಸಾಮಾನ್ಯವಾಗಿ ಕಬಿನಿ ಹಾಗೂ ಕೆ ಆರ್ ಎಸ್ ಜಲಾಶಯಗಳು ಭರ್ತಿಯಾದಾಗ, ಹೆಚ್ಚುವರಿ ನೀರು ಕಾವೇರಿ ಮೂಲಕ ಹರಿದು ಭರಚುಕ್ಕಿ ಜಲಪಾತ ಮೈದುಂಬಿ ಧುಕುತ್ತದೆ. ಆದರೆ ಈ ಬಾರಿ ಸಮರ್ಪಕ ಮಳೆಯ ಕೊರತೆಯಿಂದ ಎರಡು ಜಲಾಶಯಗಳು ನಿರೀಕ್ಷಿತ ಮಟ್ಟಕ್ಕೆ ತುಂಬಿಲ್ಲ. ಪರಿಣಾಮವಾಗಿ ಕಾವೇರಿ ನದಿಯ ಹರಿವು ಗನನೀಯವಾಗಿ ಕಡಿಮೆಯಾಗಿದ್ದು, ಭರಚುಕ್ಕಿ ಜಲಪಾತದಲ್ಲಿ ನೀರಿನ

ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಒಮ್ಮೆ ರುದ್ರ ರಮನೀಯ ದೃಶ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತಿದ್ದ ಭರಚುಕ್ಕಿ, ಇದೀಗ ಬರಿದಾದ ಬಂಡೆಗಳ ನಡುವೆ ಬಣಬಣ ಎನ್ನುತ್ತಿರುವ ದೃಶ್ಯ ನೋಡುಗರಲಿ ಬೇಸರ ಮೂಡಿಸುತ್ತಿದೆ.

ಪ್ರವಾಸಿಗರಿಲ್ಲದೆ ಮಂಕಾದ ಭರಚುಕ್ಕಿ, ವ್ಯಾಪಾರಕ್ಕೂ ಹೊಡೆತ

ಮಳೆಗಾಲದಲ್ಲಿ ಮೈದುಂಬಿ ಹರಿಯುವ ಭರಚುಕ್ಕಿ ಜಲಪಾತದ ಅದ್ಭುತ ಸೊಬಗನ್ನು ಕಣ್ತುಂಬಿಕೊಳ್ಳಲು ಪ್ರತಿವರ್ಷ ಸಾವಿರಾರು ಪ್ರವಾಸಿಗರು ಶಿವನಸಮುದ್ರಕ್ಕೆ ಭೇಟಿ ನೀಡುತ್ತಿದ್ದರು. ಸಾಮಾನ್ಯವಾಗಿ ಮೇ ತಿಂಗಳ ಕೊನೆಯ ವಾರದಿಂದಲೇ ಪ್ರವಾಸಿಗರ ಆಗಮನ ಆರಂಭವಾಗಿ, ಜೂನ್ ಮತ್ತು ಜುಲೈ ತಿಂಗಳಲ್ಲಿ ಜಲಪಾತ ವೀಕ್ಷಣೆಗೆ ಬಾರಿ ಜನಸಂದಣಿ ನೆರೆದಿರುತ್ತಿತ್ತು. ಆದರೆ ಈ ಬಾರಿ ಸಮರ್ಪಕ ಮಳೆಯ ಕೊರತೆಯಿಂದ ಜಲಪಾತದಲ್ಲಿ ನೀರಿನ ಹರಿವು ಗಣನೀಯವಾಗಿ ಕುಸಿದಿದ್ದು, ಪ್ರವಾಸಿಗರ ಸಂಖ್ಯೆಯು ಇಳಿಕೆಯಾಗಿದೆ. ಇದರ ಪರಿಣಾಮ ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ಸ್ಥಳೀಯ ವ್ಯಾಪಾರಿಗಳು, ಹೋಟೆಲ್ ಗಳು ಹಾಗೂ ಸಣ್ಣ ವ್ಯಾಪಾರಸ್ಥರು ಆದಾಯವಿಲ್ಲದೆ ಸಂಕಷ್ಟ ಎದುರಿಸುವಂತಾಗಿದೆ.

ಹೊಗೆನಕಲ್ ಜಲಪಾತವು ಬರಿದಾದ ದೃಶ್ಯ

ಕಾವೇರಿಯ ವಿಶಾಲ ಹರಿವು ಮತ್ತು ಭೋರ್ಗರೆತದ ರುದ್ರರಮಣೀಯ ವೃಷಕ್ಕೆ ಹೆಸರಾಗಿರುವ ಹನೂರು ತಾಲೂಕಿನ ಹೊಗೆನಕಲ್ ಜಲಪಾತವು ಈ ಬಾರಿ ಮಳೆ ಅಭಾವದ ಹೊಡೆತಕ್ಕೆ ಸೊಬಗು ಕಳೆದುಕೊಂಡಿದೆ. ಸಾಮಾನ್ಯವಾಗಿ ದುಮ್ಮಿಕ್ಕುವ ಜಲಧಾರೆಗಳಿಂದ ಕಂಗೊಳಿಸುವ ಈ ಜಲಪಾತದಲ್ಲಿ ಈಗ ನೀರಿನ ಹರಿವು ಕ್ಷೀಣಿಸಿದ್ದು, ಜಲಧಾರಿಗಳ ಬದಲಿಗೆ ಬೃಹತ್ ಬಂಡೆಗಳೇ ಗೋಚರಿಸುತ್ತಿವೆ. ಮಳೆಗಾಲದಲ್ಲಿಯೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಪ್ರವಾಸಿಗರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಕಾವೇರಿ ಕೊಳ್ಳದ ನೀರಿನ ಕೊರತೆಯ ಗಂಭೀರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ಈ ಬಾರಿ ನಿಶ್ಯಬ್ದಗೊಂಡ ಕಾವೇರಿ: ಪ್ರವಾಸೋದ್ಯಮಕ್ಕೂ ಬಾರಿ ಹೊಡೆತ

ಸಾಮಾನ್ಯವಾಗಿ ಮುಂಗಾರು ಚುರುಕುಗೊಂಡರೆ ಸಾಕು, ಕಾವೇರಿ ಮೈದುಂಬಿ ಹರಿದು ಭರಚುಕ್ಕಿ ಹಾಗೂ ಹೊಗೆನಕಲ್ ಜಲಪಾತಗಳಲ್ಲಿ ರುದ್ರ ನರ್ತನದ ದೃಶ್ಯ ಸೃಷ್ಟಿಸುತ್ತದೆ. ಆದರೆ ಈ ಬಾರಿ ಮಳೆ ಕೈಕೊಟ್ಟ ಪರಿಣಾಮ ಕಾವೇರಿ ನದಿಯ ಹರಿವು ತೀವ್ರವಾಗಿ ಕುಸಿದಿದ್ದು, ಬೋರ್ಗೆರೆತದ ಬದಲು ಜುಳು ಜುಳು ನೀರಿನ ಶಬ್ದವು ಕೇಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಲಪಾತಗಳು ಸೊಗಬು ಕಳೆದುಕೊಂಡಿರುವುದರಿಂದ ಪ್ರವಾಸಿಗರ ಸಂಖ್ಯೆಯು ಗಣನೀಯವಾಗಿ ಇಳಿಕೆಯಾಗಿದ್ದು, ನೂರಾರು ಬೋಟ್ ಚಾಲಕರು, ಸಣ್ಣ ವ್ಯಾಪಾರಿಗಳು ಹಾಗೂ ಪ್ರವಾಸೋದ್ಯಮವನ್ನು ಅವಲಂಬಿಸಿರುವ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.

ಒಂದೆಡೆ ಮಳೆ ಕೊರತೆಯಿಂದ ರೈತರ ಬೆಳೆಗಳು ಒಣಗುತ್ತಿದ್ದರೆ, ಮತ್ತೊಂದೆಡೆ ಕಾವೇರಿಯ ನೀರಿನ ಅರಿವು ಕ್ಷೀಣಿಸಿರುವ ಪರಿಣಾಮ ಜಲಪಾತಗಳ ವೈಭವವು ಮಂಕಾಗಿದೆ. ಇದರ ನೇರ ಪರಿಣಾಮ ಪ್ರವಾಸೋದ್ಯಮದ ಮೇಲೂ ಬಿದ್ದಿದ್ದು, ಸ್ಥಳೀಯರ ಜೀವನೋಪಾಯಕ್ಕೂ ದೊಡ್ಡ ಹೊಡೆತ ನೀಡಿದೆ ಎಂದು ವ್ಯಾಪಾರಸ್ಥರು ಹಾಗೂ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

"ಪ್ರವಾಸಿಗರೇ ಇಲ್ಲ, ಬದುಕೇ ಸಂಕಷ್ಟ"

"ನಾನು ಕಳೆದ 20 ವರ್ಷಗಳಿಂದ ಭರಚುಕ್ಕಿ ಜಲಪಾತದ ಬಳಿ ಚುರುಮುರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಪ್ರತಿ ವರ್ಷ ಈ ಸಮಯದಲ್ಲಿ ಸಾವಿರಾರು ಪ್ರವಾಸಿಗರು ಬರುತ್ತಿದ್ದರು. ಆದರೆ ಈ ಬಾರಿ ಜಲಪಾತದಲ್ಲಿ ನೀರಿಲ್ಲದ ಕಾರಣ ಪ್ರವಾಸಿಗರೇ ಬರುತ್ತಿಲ್ಲ. ಪ್ರವಾಸಿಗರನ್ನೇ ನಂಬಿ ನನ್ನಂತೆ ಏನು ನೂರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಈಗ ಎಲ್ಲರೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ" ಎಂದು ಚುರುಮುರಿ ವ್ಯಾಪಾರಿ ವಸಂತ್ ಕುಮಾರ್ ತಮ್ಮ ಅಳಲು ಹಂಚಿಕೊಂಡರು.

ಇದೇ ನೋವನ್ನು ವ್ಯಕ್ತಪಡಿಸಿದ ಐಸ್ ಕ್ರೀಮ್ ವ್ಯಾಪಾರಿ ನಟರಾಜು, "ವಾರಾಂತ್ಯದಲ್ಲಿ ಆಗಮಿಸುವ ಪ್ರವಾಸಿಗಳಿಂದ ಸಿಗುವ ವ್ಯಾಪಾರವೇ ವಾರವಿಡೀ ನಮ್ಮ ಜೀವನ ಸಾಗಿಸುತ್ತಿತ್ತು. ಆದರೆ ಈ ಬಾರಿ ಪ್ರವಾಸಿಗರಿಲ್ಲದ ಕಾರಣ ವ್ಯಾಪಾರ ಸಂಪರ್ಕ ಕುಸಿದಿದೆ. ಮಳೆ ಕೊರತೆ ನಮ್ಮ ಬದುಕಿನ ಮೇಲೆ ದೊಡ್ಡ ಪರಿಣಾಮ ಬೀರಿದೆ" ಎಂದು ಬೇಸರ ವ್ಯಕ್ತಪಡಿಸಿದರು.

Also Read:

ಬಳ್ಳಾರಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ; ಮದುವೆಯಾದ ದಿನವೇ ವರನ ಹತ್ಯೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online