Belagavi News :
ಕರ್ನಾಟಕ ಜಲಾಶಯಗಳಿಗೆ ಮಳೆ ಜೀವಕಳೆ: ಆಲಮಟ್ಟಿ ಸೇರಿ ಪ್ರಮುಖ ಡ್ಯಾಂಗಳ ನೀರಿನ ಮಟ್ಟದಲ್ಲಿ ಏರಿಕೆ
ಬೆಂಗಳೂರು: ಜುಲೈ ಆರಂಭದಿಂದ ಮಲೆನಾಡು, ಕರಾವಳಿ ಜಿಲ್ಲೆಗಳು, ಮಹಾರಾಷ್ಟ್ರ ಹಾಗೂ ಕೇರಳ ಭಾಗಗಳಲ್ಲಿ ಸುರಿದ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ಮಳೆಯ ಪರಿಣಾಮವಾಗಿ ಹಲವು ಡ್ಯಾಂಗಳ ನೀರಿನ ಸಂಗ್ರಹದಲ್ಲಿ ಚೇತರಿಕೆ ಕಂಡುಬಂದಿದ್ದು, ಜಲಸಂಪನ್ಮೂಲ ಇಲಾಖೆ ಜುಲೈ 10ರ ಬೆಳಗ್ಗಿನವರೆಗಿನ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ವಿವರವನ್ನು ಬಿಡುಗಡೆ ಮಾಡಿದೆ.
ವಿಜಯಪುರ ಜಿಲ್ಲೆಯ "ಆಲಮಟ್ಟಿ ಜಲಾಶಯ"ಕ್ಕೆ ಕಳೆದ 10 ದಿನಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದೆ. ಜುಲೈ 1 ರಂದು 20.90 ಟಿಎಂಸಿ ಇದ್ದ ನೀರಿನ ಸಂಗ್ರಹ ಇದೀಗ 57.07 ಟಿಎಂಸಿಗೆ ಏರಿಕೆಯಾಗಿದ್ದು, ಜಲಾಶಯದಲ್ಲಿ ಶೇ.46 ರಷ್ಟು ನೀರು ಸಂಗ್ರಹವಾಗಿದೆ. ಸುಮಾರು 36 ಟಿಎಂಸಿ ನೀರು ಅವಧಿಯಲ್ಲಿ ಜಲಾಶಯ ಸೇರಿದೆ. ಕಳೆದ ವರ್ಷ ಇದೇ ದಿನ 88.38 ಟಿಎಂಸಿ ನೀರು ಸಂಗ್ರಹವಾಗಿತ್ತು.
ಶಿವಮೊಗ್ಗ ಜಿಲ್ಲೆಯ "ಲಿಂಗನಮಕ್ಕಿ ಜಲಾಶಯದಲ್ಲಿ" ಪ್ರಸ್ತುತ 29.94 ಟಿಎಂಸಿ (ಶೇ. 20) ನೀರು ಸಂಗ್ರಹವಾಗಿದೆ. ಜೂನ್ 1ರಿಂದ ಈವರೆಗೆ ಸುಮಾರು 14 ಟಿಎಂಸಿ ನೀರು, ಜಲಾಶಯಕ್ಕೆ ಹರಿದು ಬಂದಿದೆ. ಕಳೆದ ವರ್ಷ ಇದೆ ಅವಧಿಯಲ್ಲಿ 88.88 ಟಿಎಂಸಿ ನೀರು ಸಂಗ್ರಹವಾಗಿತ್ತು.
ಉಡುಪಿ ಜಿಲ್ಲೆಯ " ವರಾಹಿ ಜಲಾಶಯದಲ್ಲಿ" 7.74 ಟಿಎಂಸಿ (ಶೇ.25) ನೀರು ಸಂಗ್ರಹವಾಗಿದ್ದು, ಒಂದೇ ದಿನದಲ್ಲಿ ಸುಮಾರು 3 ಟಿಎಂಸಿ ನೀರು ಹರಿದು ಬಂದಿದೆ. ಕಳೆದ ವರ್ಷ ಇದೇ ದಿನ 17.66 ಟಿಎಂಸಿ ನೀರು ಸಂಗ್ರಹವಾಗಿತ್ತು.
ಉತ್ತರ ಕನ್ನಡ ಜಿಲ್ಲೆಯ " ಸೂಪಾ ಜಲಾಶಯದಲ್ಲಿ" ಸದ್ಯ 36.60 ಟಿಎಂಸಿ (ಶೇ.25) ನೀರು ಸಂಗ್ರಹವಾಗಿದೆ. ಹತ್ತು ದಿನಗಳ ಹಿಂದೆ 29.46 ಟಿಎಂಸಿ ಇದ್ದ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಕಳೆದ ವರ್ಷ ಇದೇ ದಿನ 71.83 ಟಿಎಂಸಿ ನೀರು ಸಂಗ್ರಹವಾಗಿತ್ತು.
ಹಾಸನ್ ಜಿಲ್ಲೆಯ "ಹೇಮಾವತಿ ಜಲಾಶಯದಲ್ಲಿ" 21.06 ಟಿಎಂಸಿ (ಶೇ.57) ನೀರು ಸಂಗ್ರಹವಾಗಿದೆ. ಕಳೆದು 10 ದಿನಗಳಲ್ಲಿ ಸುಮಾರು 8 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿದೆ. ಕಳೆದ ವರ್ಷ ಇದೇ ದಿನ 35.08 ಟಿಎಂಸಿ ನೀರು ಸಂಗ್ರಹವಾಗಿತ್ತು.
ರಾಜ್ಯದಲ್ಲಿ ಮುಂದಿನ ದಿನಗಳಲ್ಲೂ ಮಳೆ ಮುಂದುವರಿದರೆ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. "ಕರ್ನಾಟಕ ಡ್ಯಾಂ ನೀರಿನ ಮಟ್ಟ, ಜಲಾಶಯಗಳ ಒಳಹರಿವು, ಮಳೆ ವರದಿ, ಆಲಮಟ್ಟಿ ಡ್ಯಾಂ, ಲಿಂಗನಮಕ್ಕಿ ಹೇಮಾವತಿ ಜಲಾಶಯ" ಕುರಿತು ಮಾಹಿತಿ ಜನರ ಗಮನ ಸೆಳೆಯುತ್ತಿದೆ.
"ಕೆ ಆರ್ ಎಸ್, ಕಬಿನಿ ಸೇರಿ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಏರಿಕೆ,; ಮಳೆಯಿಂದ ಡ್ಯಾಂಗಳಿಗೆ ಜೀವಕಳೆ "
ರಾಜ್ಯದಲ್ಲಿ ಸುರಿದ ಮಳೆಯಿಂದಾಗಿ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಾಗಿದ್ದು, ಕೆಆರ್ ಎಸ್, ಕಬಿನಿ, ಭದ್ರಾ ಹಾಗೂ ಘಟಪ್ರಭಾ ಜಲಾಶಯಗಳ ನೀರಿನ ಮಟ್ಟದಲ್ಲಿ ಚೇತರಿಕೆ ಕಂಡುಬಂದಿದೆ.
ಮಂಡ್ಯ ಜಿಲ್ಲೆಯ " ಕೃಷ್ಣ ರಾಜಸಾಗರ ಜಲಾಶಯ (ಕೆಆರ್ ಎಸ್) ನಲ್ಲಿ ಪ್ರಸ್ತುತ 14.50 ಟಿಎಂಸಿ (ಶೇ.29) ನೀರು ಸಂಗ್ರಹವಾಗಿದೆ. ಕಳೆದ 10 ದಿನಗಳಲ್ಲಿ ಜಲಾಶಯಕ್ಕೆ ಸುಮಾರು 8 ಟಿಎಂಸಿ ನೀರು ಹರಿದು ಬಂದಿದೆ. ಕಳೆದ ವರ್ಷ ಇದೇ ದಿನ ಕೆಆರ್ ಎಸ್ ನಲ್ಲಿ 46.10 ಟಿಎಂಸಿ ನೀರು ಸಂಗ್ರಹವಾಗಿತ್ತು.
ಮೈಸೂರು ಜಿಲ್ಲೆಯ " ಕಬಿನಿ ಜಲಾಶಯದಲ್ಲಿ" ಸದ್ಯ 10.43 ಟಿಎಂಸಿ (ಶೇ.53) ನೀರು ಸಂಗ್ರಹವಿದೆ. ಕಳೆದ 10 ದಿನಗಳ ಅವಧಿಯಲ್ಲಿ ಸುಮಾರು 9 ಟಿಎಂಸಿ ನೀರು ಜಲಾಶಯ ಸೇರಿದೆ. ಕಳೆದ ವರ್ಷ ಇದೇ ದಿನ ಕಬಿನಿಯಲ್ಲಿ 18.10 ಟಿಎಂಸಿ ನೀರು ಸಂಗ್ರಹವಾಗಿತ್ತು.
ಚಿಕ್ಕಮಗಳೂರು ಜಿಲ್ಲೆಯ " ಭದ್ರಾ ಜಲಾಶಯದಲ್ಲಿ" ಪ್ರಸ್ತುತ 31.26 ಟಿಎಂಸಿ (ಶೇ.44) ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ 71.54 ಟಿಎಂಸಿ ಆಗಿದ್ದು, ಕಳೆದ 10 ದಿನಗಳಲ್ಲಿ ಸುಮಾರು 7 ಟಿಎಂಸಿ ನೀರು ಹರಿದು ಬಂದಿದೆ. ಕಳೆದ ವರ್ಷ ಇದೇ ದಿನ ಭದ್ರಾ ಜಲಾಶಯದಲ್ಲಿ 56.79 ಟಿಎಂಸಿ ನೀರು ಸಂಗ್ರಹವಿತ್ತು.
ಬೆಳಗಾವಿ ಜಿಲ್ಲೆಯ " ಘಟಪ್ರಭಾ ಜಲಾಶಯದಲ್ಲಿ" 17.47 ಟಿಎಂಸಿ (ಶೇ.34) ನೀರು ಸಂಗ್ರಹವಾಗಿದೆ. ಕಳೆದ 10 ದಿನಗಳಲ್ಲಿ ಜಲಾಶಯಕ್ಕೆ 10 ಟಿಎಂಸಿ ನೀರು ಹರಿದು ಬಂದಿದೆ. ಕಳೆದ ವರ್ಷ ಇದೇ ದಿನ ಘಟಪ್ರಭಾ ಜಲಾಶಯದಲ್ಲಿ 44.17 ಟಿಎಂಸಿ ನೀರು ಲಭ್ಯವಿತ್ತು.
ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. "ಕೆ ಆರ್ ಎಸ್ ನೀರಿನ ಮಟ್ಟ, ಕಬಿನಿ ಡ್ಯಾಂ, ಭದ್ರಾ ಜಲಾಶಯ, ಘಟಪ್ರಭಾ ಜಲಾಶಯ, ಕರ್ನಾಟಕ ಮಳೆ ವರದಿ" ಕುರಿತು ಮಾಹಿತಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ.