<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Business

"3ನೇ ಅತಿ ದೊಡ್ಡ ಆರ್ಥಿಕತೆಯತ್ತ ಭಾರತ, ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೆನಡಾ ಆಸಕ್ತಿ"

"3ನೇ ಅತಿ ದೊಡ್ಡ ಆರ್ಥಿಕತೆಯತ್ತ ಭಾರತ, ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೆನಡಾ ಆಸಕ್ತಿ"
Summary: India is on track to become the world's third largest economy, and keeping this growth in mind, Canada has expressed interest in reaching a free trade agreement with India.

belagavi news :

ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವಂತ ವೇಗವಾಗಿ ಮುನ್ನಡೆಯುತ್ತಿರುವ ಹಿನ್ನೆಲೆಯಲ್ಲಿ, ಭಾರತದಲ್ಲಿಗೆ ಮುಕ್ತ ವ್ಯಾಪಾರ ಒಪ್ಪಂದ ಸಾಧಿಸಲು ಕೆನಡಾ ಹೆಚ್ಚಿನ ಆಸಕ್ತಿ ತೋರಿದೆ. ಈ ಕುರಿತು ಮಾತನಾಡಿರುವ ಕೆನಡಾದ ವಾಣಿಜ್ಯ ಸಚಿವ ಮಣಿಂದರ್ ಸಿಧು, ಜಾಗತಿಕ ಮಾರುಕಟ್ಟೆಯಲ್ಲಿ ಕೆನಡಾದ ವ್ಯವಹಾರಗಳು ಸ್ಪರ್ಧಾತ್ಮಕವಾಗಿ ಉಳಿಯುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.

"ನಮ್ಮ ವ್ಯವಹಾರಗಳು ಸ್ಪರ್ಧಾತ್ಮಕವಾಗಿರುವುದನ್ನು ನಾವು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ. ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಎಲ್ಲ ವಿಷಯಗಳ ಬಗ್ಗೆ ಅತ್ಯುತ್ತಮ ಮಟ್ಟದ ಮಾತುಕಥೆಗಳು ನಡೆಯುತ್ತಿವೆ" ಎಂದು ಅವರು ತಿಳಿಸಿದ್ದಾರೆ.

ಭಾರತದ ಆರ್ಥಿಕ ಬೆಳವಣಿಗೆಗೆ ಕೆನಡಾದ ರಫ್ತದಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಸಿಧು ಅಭಿಪ್ರಾಯ ಪಟ್ಟಿದ್ದಾರೆ. ಏರೋ ಸ್ಪೇಸ್, ಕೃತಕ ಬುದ್ಧಿಮತ್ತೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಇಂಧನ, ಕೃಷಿ, ಆಹಾರ ಸಂಸ್ಕರಣೆ ಹಾಗೂ ಮುಂದುವರೆದ ಕ್ಷೇತ್ರಗಳಲ್ಲಿ ಉಭಯ ದೇಶಗಳ ಸಹಕಾರ ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಭಾರತವು ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವುದರಿಂದ, ಕೆನಡಾದ ವ್ಯಾಪಾರ ವಲಯಕ್ಕೆ ಭಾರತೀಯ ಮಾರುಕಟ್ಟೆ ಮಹತ್ವದ ಅವಕಾಶ ಗಳನ್ನು ಒದಗಿಸಲಿದೆ ಎಂದು ಸಚಿವರು ಒತ್ತಿ ಹೇಳಿದ್ದಾರೆ.

Sponsored

ಭಾರತ ಮತ್ತು ಕೆನಡಾ ನಡುವಿನ FTA ಮಾತುಕತೆಗಳು ಯಶಸ್ವಿಯಾದರೆ, ಉಭಯ ದೇಶಗಳ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳು ಹೊಸ ಹಂತ ತಲುಪುವ ನಿರೀಕ್ಷೆ ಇದೆ.

ಏಕನ್ಮಧ್ಯೆ 2023ರಲ್ಲಿ ವ್ಯಾಪಾರ ಮಾತುಕತೆಗಳು ಸ್ಥಗಿತಗೊಂಡ ನಂತರ, ಎರಡೂ ದೇಶಗಳ ನಡುವೆ ರೆಜಿನಾದಲ್ಲಿ ವ್ಯಾಪಾರ ಶೃಂಗಸಭೆ ನಡೆಯುತ್ತಿದೆ.ಇಲ್ಲಿ ವ್ಯಾಪಾರ ಒಪ್ಪಂದದ ಕುರಿತು ನಡೆಯುತ್ತಿರುವ ಮಾತುಕತೆಗಳ ಬಗ್ಗೆ ಕೆನಡಾ ಮತ್ತು ಭಾರತೀಯ ಅಧಿಕಾರಿಗಳು ಆಕಾವಾದ ವ್ಯಕ್ತಪಡಿಸಿದ್ದಾರೆ. ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಕೆನಡಾದ ಸಾಸ್ಕಾಚೆವನ್ ಪ್ರಾಂತ್ಯದ ರಾಜಧಾನಿ ರೆ ಜಿನಾದಲ್ಲಿ ನಡೆದ ಪಶ್ಚಿಮ ಕೆನಡಾ-ಭಾರತ ನಾಯಕರ ಸಂಘ ಸಭೆಯಲ್ಲಿ ಸಾಸ್ಕಾಚೆವನ್ ಪ್ರಧಾನ ಮಂತ್ರಿ ಸ್ಕಾಟ ಮೋ, ಭಾರತದಲ್ಲಿನ ಕೆನಡಾದ ಹೈ ಕಮಿಷನರ್ ಕ್ರಿಸ್ ಕೂಟರ್ ಹಾಗೂ ಕೆನಡಾದಲ್ಲಿನ ಭಾರತದ ಹೈ ಕಮಿಷನರ್ ದಿನೇಶ್ ಪಟ್ನಾಯಕ್ ಭಾಗವಹಿಸಿದ್ದರು.

ಶೃಂಗಸಭೆಯ ಸಂದರ್ಭದಲ್ಲಿ ಭಾರತ- ಕೆನಡಾ ನಡುವಿನ ದ್ವಿಪಕ್ತಿಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ನಾಯಕರು ಚರ್ಚೆ ನಡೆಸಿದರು. ವಿಶೇಷವಾಗಿ, ಪ್ರಸ್ತಾವಿತ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA) ಕುರಿತ ಮಾತುಕತೆಗಳು ಪ್ರಮುಖವಾಗಿ ಚರ್ಚೆಗೆ ಬಂದವು. ವ್ಯಾಪಾರ, ಹೂಡಿಕೆ, ಕೃಷಿ ಹಾಗೂ ಇತರ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಸಾಧ್ಯತೆಗಳ ಕುರಿತು ಅಭಿಪ್ರಾಯ ವಿನಿಮಯ ನಡೆಯಿತು.

Sponsored

ಭಾರತ ಮತ್ತು ಕೆನಡಾ ನಡುವಿನ ಆರ್ಥಿಕ ಹಾಗೂ ವಾಣಿಜ್ಯ ಸಂಬಂಧಗಳನ್ನು ಹೊಸ ಹಂತಕ್ಕೆ ಕೊಂಡೊಯ್ಯುವ ಉದ್ದೇಶದಿಂದ CEPA ಒಪ್ಪಂದ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ. ಈ ಒಪ್ಪಂದ ಜಾರಿಯಾದರೆ ಉಭಯ ದೇಶಗಳ ಉದ್ಯಮಗಳು ಮತ್ತು ಹೂಡಿಕೆದಾರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ಶೃಂಗಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಪರಸ್ಪರ ಸಹಕಾರವನ್ನು ವೃದ್ಧಿಸಿ, ವ್ಯಾಪಾರ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಬದ್ಧತೆಯನ್ನು ಪುನರುಚ್ಚರಿಸಿದರು.

ಭಾರತ ಮತ್ತು ಕೆನಡಾ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಮಾತುಕಥೆಗಳು ಸ್ಪರ್ಧಾತ್ಮಕವಾಗಿ ಮುಂದುವರೆದಿದ್ದು, ಈ ವರ್ಷದ ಅಂತ್ಯದೊಳಗೆ ಅಂತಿಮ ಒಪ್ಪಂದಕ್ಕೆ ತಲುಪುವ ವಿಶ್ವಾಸ ವ್ಯಕ್ತವಾಗಿದೆ. ಕೆನಡಾದ ಸಾರ್ವಜನಿಕ ಪ್ರಸಾರ ಸಂಸ್ಥೆ CBC ನ್ಯೂಸ್ ವರದಿ ಪ್ರಕಾರ, ಭಾರತದಲ್ಲಿನ ಕೆನಡಾದ ಹೈ ಕಮಿಷನರ್ ಕ್ರಿಸ್ ಕೂಟರ್ ಅವರು ಮಾತುಕತೆಗಳು ನಿರಂತರವಾಗಿ ನಡೆಯುತ್ತಿದ್ದು, ಈ ವರ್ಷದ ಕೊನೆಯಲ್ಲಿ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇದೇ ವೇಳೆ, ಕೆನಡಾದಲ್ಲಿನ ಭಾರತದ ಹೈ ಕಮಿಷನರ್ ದಿನೇಶ್ ಪಟ್ನಾಯಕ್ ಅವರು ಕೂಡ ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ. "ಮುಕ್ತ ವ್ಯಾಪಾರ ಒಪ್ಪಂದ ಆಗುತ್ತದೆ. ಇದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಮಾತುಕತೆಗಳು ನಡೆಯುತ್ತಿವೆ"ಎಂದೂ ಅವರು ಹೇಳಿರುವುದಾಗಿ CBC ವರದಿ ಮಾಡಿದೆ.

ಈ ಹೇಳಿಕೆಗಳು, ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಎರಡು ದೇಶಗಳು ಈ ವರ್ಷ ದ ಅಂತ್ಯದೊಳಗೆ FTA ಮಾತುಕತೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದ ಕೆಲವೇ ದಿನಗಳ ಬಳಿಕ ಬಂದಿವೆ. ಉಭಯ ದೇಶಗಳು ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆಗಳು ವೇಗಗೊಳಿಸುವುದು ಗಮನಾರ್ಹವಾಗಿದೆ.

Sponsored

ಆದಾಗ್ಯೂ, 2023 ರಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿ ಸಿಖ್ ಪ್ರತ್ಯೇಕತಾವಾದಿ ಹರ್ದಿಪ್ ಸಿಂಗ್ ನಿಜ್ಜರ್ ಹತ್ತಿ ಪ್ರಕರಣದ ಬಳಿಕ ಭಾರತ ಮತ್ತು ಕೆನಡಾ ನಡುವಿನ ರಾಜ್ಯ ತಾಂತ್ರಿಕ ಸಂಬಂಧಗಳು ಹದಗೆಟ್ಟಿದ್ದವು. ಈ ಹಟ್ಟೆಯಲ್ಲಿ ಭಾರತೀಯ ಏಜೆಂಟಾರ್ ಪಾತ್ರವಿದೆ ಎಂದು ಕೆನಡಾ ಆರೋಪಿಸಿತು. ಆದರೆ ಭಾರತ ಈ ಆರೋಪಗಳನ್ನು ತೀವ್ರವಾಗಿ ತಳ್ಳಿ ಹಾಕಿ, ಅವುಗಳನ್ನು ಅಸಂಬದ್ಧ ಮತ್ತು ಆಧಾರ ರಹಿತ ಎಂದು ಹೇಳಿತು.

ಈ ರಾಜ ತಾಂತ್ರಿಕ ಬಿಕ್ಕಟ್ಟಿನ ಪರಿಣಾಮವಾಗಿ 2023ರಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ಮಾತುಕತೆಗಳು ಸ್ಥಗಿತಗೊಂಡಿದ್ದವು. ಇದೀಗ ಮತ್ತೆ ಮಾತುಕತೆಗಳು ಪುನರಾರಂಭಗೊಂಡಿರುವುದು ಭಾರತ-ಕೆನಡಾ ಸಂಬಂಧಗಳಲ್ಲಿ ಹೊಸ ಅಧ್ಯಯಕ್ಕೆ ದಾರಿ ಮಾಡಿ ಕೊಡಬಹುದೆಂಬ ನಿರೀಕ್ಷೆ ಮೂಡಿಸಿದೆ. FTA ಅಂತಿಮಗೊಂಡರೆ ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ಕೃಷಿ ಹಾಗೂ ಉತ್ಪಾದನಾ ಕ್ಷೇತಗಳಲ್ಲಿ ಎರಡು ದೇಶಗಳಿಗೆ ಮಹತ್ವದ ಅವಕಾಶಗಳು ಲಭಿಸುವ ಸಾಧ್ಯತೆ ಇದೆ.

Also Read:

ಹೋಟೆಲ್ ಉದ್ಯಮಕ್ಕೆ LPG ಶಾಕ್ : ಆಹಾರದ ದರ ಏರಿಕೆ ಅನಿವಾರ್ಯವೇ?

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online