ಭಾರತದ WTC ಫೈನಲ್ ಹಾದಿ ಕಠಿಣ
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಸೋಲುತ್ತಿದ್ದಂತೆ ಭಾರತದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಹಾದಿ ಕಠಿಣವಾಗಿದೆ. ಉಳಿದ ಪಂದ್ಯಗಳೆಷ್ಟು, ಇದರಲ್ಲಿ ಭಾರತ ಎಷ್ಟು ಗೆದ್ದರೇ ಸೇಫ್ ಎಂಬ ಮಾಹಿತಿ ಇಂತಿದೆ.
ಹೈದರಾಬಾದ್:
ಕೇವಲ ನಾಲ್ಕು ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದೆ. ಇದೀಗ ಭಾರತ 2027ರಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪಬೇಕು ಎಂದರೆ ಮುಂದಿರುವ ಸವಾಲುಗಳೇನು? ಉಳಿದಿರುವ ಸರಣಿಗಳೆಷ್ಟು, ಇನ್ನೂ ಎಷ್ಟು ಪಂದ್ಯಗಳನ್ನು ಗೆದ್ದರೇ ಸೇಫ್ ಎಂಬ ಬಗ್ಗೆ ಇದೀಗ ತಿಳಿಯೋಣ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಸೋಲನ್ನು ಕಂಡಿರುವ ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ ಕಠಿಣವಾಗಿದೆ. 2025-2027ರ WTC ಋತುವಿನಲ್ಲಿ, ಶುಭಮನ್ ಗಿಲ್ ನೇತೃತ್ವದ ತಂಡವು ಈಗಾಗಲೇ ಆಡಿರುವ 8 ಟೆಸ್ಟ್ ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಸೋತಿದ್ದು ಮತ್ತು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.
ಪ್ರಸ್ತುತ, ಟೀಮ್ ಇಂಡಿಯಾ 54 ಶೇಕಡಾವಾರು ಅಂಕಗಳನ್ನು ಹೊಂದಿದೆ. ಅರ್ಹತಾ ಮಿತಿ ಸಾಮಾನ್ಯವಾಗಿ 64 ರಿಂದ 68 ಪ್ರತಿಶತದ ನಡುವೆ ಇರುತ್ತದೆ. ಇದರರ್ಥ ಭಾರತವು ಮೊದಲ ಎರಡು ಸ್ಥಾನಗಳನ್ನು ತಲುಪಲು ಹೆಚ್ಚಿನ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಒಂದು ವೇಳೆ ಎಡವಿದರೇ ಈ ಬಾರಿಯೂ ಹಿನ್ನಡೆ ಎದುರಿಸಬೇಕಾಗುತ್ತದೆ.
ಭಾರತ ಎಷ್ಟು ಪಂದ್ಯ ಗೆದ್ದರೆ ಎಷ್ಟು ಅಂಕ ಸಿಗಲಿದೆ?
5 ಗೆಲುವು: 112 ಅಂಕ, ಶೇಕಡಾವಾರು ಅಂಕ 51.85% ಆಗಿರುತ್ತದೆ.
6 ಗೆಲುವು: 124 ಅಂಕ, ಶೇಕಡಾವಾರು ಅಂಕ 57.41% ಆಗಿರುತ್ತದೆ.
7 ಗೆಲುವುಗಳು: 136 ಅಂಕ, ಶೇಕಡಾವಾರು ಅಂಕ 62.96% ಆಗಿರುತ್ತದೆ.
8 ಗೆಲುವುಗಳು: 148 ಅಂಕ, ಶೇಕಡಾವಾರು ಅಂಕ 68.52% ಆಗಿರುತ್ತದೆ.
9 ಗೆಲುವುಗಳು: 160 ಅಂಕ, ಶೇಕಡಾವಾರು ಅಂಕ 74.07% ಆಗಿರುತ್ತದೆ.
10 ಗೆಲುವುಗಳು: 172 ಅಂಕ, ಶೇಕಡಾವಾರು ಅಂಕ 79.63% ಆಗಿರುತ್ತದೆ.
2025-27 WTC ಋತುವಿನಲ್ಲಿ ಭಾರತದ ಉಳಿದಿರುವ ಪಂದ್ಯಗಳು
ದಕ್ಷಿಣ ಆಫ್ರಿಕಾ ವಿರುದ್ಧದ ತವರು ಸರಣಿ - 1 ಟೆಸ್ಟ್ (ಗುವಾಹಟಿ)
ಶ್ರೀಲಂಕಾ ವಿರುದ್ಧದ ವಿದೇಶ ಸರಣಿ - 2 ಟೆಸ್ಟ್ಗಳು
ನ್ಯೂಜಿಲೆಂಡ್ ವಿರುದ್ಧದ ವಿದೇಶ ಸರಣಿ - 2 ಟೆಸ್ಟ್ಗಳು
ಆಸ್ಟ್ರೇಲಿಯಾ ವಿರುದ್ಧದ ತವರು ಸರಣಿ - 5 ಟೆಸ್ಟ್ಗಳು
ಒಂದು ವೇಳೆ ಭಾರತ ಎಲ್ಲಾ 10 ಟೆಸ್ಟ್ ಪಂದ್ಯಗಳನ್ನು ಗೆದ್ದರೇ ಒಟ್ಟು ಅಂಕಗಳು 120ಕ್ಕೆ ತಲುಪಲಿದೆ. ಜೊತೆಗೆ ಶೇಕಡಾವಾರು ಅಂಕ 79.63% ಆಗಿರಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಇತಿಹಾಸ
ಇದುವರೆಗಿನ ಮೂರು ಆವೃತ್ತಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿವೆ. ಕಳೆದ ಮೂರು
ಫೈನಲ್ಗಳಲ್ಲಿ ಗೆದ್ದ, ರನ್ನರ್ ಅಪ್ ಆದ ತಂಡಗಳ ಪಟ್ಟಿ ಹೀಗಿದೆ.
2019-2021 ವಿಶ್ವ ಟೆಸ್ಟ್ ಚಾಂಪಿಯನ್ಶಿಪ್
ನ್ಯೂಜಿಲೆಂಡ್ (ಚಾಂಪಿಯನ್)
ಭಾರತ (ರನ್ನರ್ ಅಪ್)
2. 2021-2023
ಆಸ್ಟ್ರೇಲಿಯಾ (ಚಾಂಪಿಯನ್)
ಭಾರತ (ರನ್ನರ್ ಅಪ್)
3. 2023-2025
ದಕ್ಷಿಣ ಆಫ್ರಿಕಾ (ಚಾಂಪಿಯನ್)
ಆಸ್ಟ್ರೇಲಿಯಾ (ರನ್ನರ್ಅಪ್)
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಗೆ ನೇರ ಅರ್ಹತೆ ಪಡೆಯಲು ಭಾರತವು ಉಳಿದ 10
ಪಂದ್ಯಗಳಲ್ಲಿ ಕನಿಷ್ಠ 8 ಪಂದ್ಯಗಳನ್ನು ಗೆಲ್ಲಬೇಕು.
WTC ಫೈನಲ್ ಇತಿಹಾಸ: ಇದುವರೆಗಿನ ಮೂರು ಐಸಿಸಿ ಡಬ್ಲ್ಯೂಟಿಸಿ ಫೈನಲ್ ಪಂದ್ಯಗಳಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿವೆ.
ಇನ್ನಷ್ಟು ಓದಿರಿ :
ಟೆಂಬಾ ಬವುಮಾ ನೋಡಿ ಕಲಿತುಕೊಳ್ಳಿ; ಭಾರತೀಯರಿಗೆ ಗವಾಸ್ಕರ್ ಸಲಹೆ