belagavi news:
ಇನ್ಫೋಸಿಸ್ ಈ ದೊಡ್ಡ ಮಟ್ಟದ ಹೈರಿಂಗ್ ಅಭಿಯಾನವು ಯುವ ಪ್ರತಿಭೆಗಳಿಗೆ ಉದ್ಯೋಗವಕಾಶಗಳನ್ನು ಹೆಚ್ಚಿಸುವುದರ ಜೊತೆಗೆ ಐಟಿ ಉದ್ಯಮದ ಬೆಳವಣಿಗೂ ಉತ್ತೇಜನ ನೀಡಲಿದೆ. ಫ್ರೆಶರ್ಸ್ ಗಳಿಗೆ ಇದು ಭವಿಷ್ಯ ನಿರ್ಮಾಣಕ್ಕೆ ಮಹತ್ವದ ಅವಕಾಶವಾಗಿದೆ.
ಇನ್ಫೋಸಿಸ್ 2026-27ರ ಆರ್ಥಿಕ ವರ್ಷದಲ್ಲಿ 20,000 ಹೊಸ ಪದವೀಧರರನ್ನು ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿದೆ. AI ಡಿಜಿಟಲ್ ಸೇವೆಗಳು ಮತ್ತು ಕ್ಲೌಡ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಹೆಚ್ಚಿಸುತ್ತಿರುವುದೇ ಈ ದೊಡ್ಡ ಮಟ್ಟದ ನೇಮಕಾತಿಗೆ ಪ್ರಮುಖ ಕಾರಣವಾಗಿದೆ. ಕಂಪನಿಯ ಇತ್ತೀಚಿನ Q4 ಫಲಿತಾಂಶಗಳ ಪ್ರಕಾರ, ನಿಲ್ವಳ ಲಾಭ ಶೇ. 20.8ರಷ್ಟು ಏರಿಕೆಯಾಗಿದೆ. ಈ ಬೆಳವಣಿಗೆ ಇನ್ಪೋಸಿಸ್ ನ ಆರ್ಥಿಕ ಸ್ಥಿರತೆ ಮತ್ತು ಬಲಿಷ್ಠ ಕಾರ್ಯ ಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ. ಈ ನೇಮಕಾತಿ ಅಭಿಯಾನವು ಉದ್ಯೋಗಕಾಂಕ್ಷಿ ಗಳಿಗೆ ಉತ್ತಮ ಅವಕಾಶಗಳನ್ನು ತೆರೆದಿಡುವುದರ ಜೊತೆಗೆ ಐಟಿ ಕ್ಷೇತ್ರದಲ್ಲಿ ಯುವ ಪ್ರತಿಭೆಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಜೊತೆಗೆ ಭವಿಷ್ಯದಲ್ಲಿ ಕಂಪನಿಯ ಬೆಳವಣಿಗೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಸಹಕಾರಿಯಾಗಲಿದೆ.
ಐಟಿ ದೈತ್ಯ ಇನ್ಫೋಸಿಸ್ ಕಂಪನಿಯು ಉದ್ಯೋಗಾಕಾಂಕ್ಷಿ ಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದು ಮುಂಬರುವ 2026 - 27ರ ಹಣಕಾಸು ವರ್ಷದಲ್ಲಿ ಕನಿಷ್ಠ 20,000 ಹೊಸ ಪದವೀಧರರನ್ನು (Freshers) ನೇಮಿಸಿಕೊಳ್ಳುವುದಾಗಿ ಘೋಷಿಸಿದೆ. 2026ರ ಹಣಕಾಸು ವರ್ಷದ 4ನೇ ತ್ರೈಮಾಸಿಕದ ಫಲಿತಾಂಶಗಳ ಪ್ರಕಟಣೆಯ ನಂತರ ಇನ್ಪೋಸಿಸ್ ಸಿ ಇ ಓ ಸಲೀಲ್ ಪರೇಖ್ ಮತ್ತು ಸಿ ಎಫ್ ಒ ಜಯೇಶ್ ಸಂಘರ್ಷ್ಕಾ ಈ ಮಹತ್ವದ ನಿರ್ಧಾರವನ್ನು ತಿಳಿಸಿದ್ದಾರೆ. ಜಾಗತಿಕ ಆರ್ಥಿಕ ಸವಾಲುಗಳು ವಿಶೇಷವಾಗಿ ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷಗಳಂತಹ ಅನಿಶ್ಚಿತ ಪರಿಸ್ಥಿತಿಗಳ ನಡುವು ಕಂಪನಿಯ ತನ ಬೆಳವಣಿಗೆ ಪಥವನ್ನು ಮುಂದುವರಿಸುತ್ತಿದೆ.
ಕೃತಕ ಬುದ್ಧಿಮತ್ತೆ AI, ಡಿಜಿಟಲ್ ಟ್ರಾನ್ಸ್ ಫರ್ಮೆಶನ್ ಮತ್ತು ಕ್ಲೌಡ್ ಸೇವೆಗಳ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಬೇಡಿಕೆ ಈ ನೇಮಕಾತಿಗೆ ಪ್ರಮುಖ ಚಾಲಕವಾಗಿದೆ. ಈ ಬೃಹತ್ ಹೈರಿಂಗ್ ಅಭಿಯಾನವು ಹೊಸ ಪದವೀಧರರಿಗೆ ಐಟಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದರ ಜೊತೆಗೆ ಇನ್ಪೋಸಿಸ್ ಡಿಜಿಟಲ್ ಕ್ಲೌಡ್ ಮತ್ತು AI ಆಧಾರಿತ ಸೇವೆಗಳ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆ ಇದೆ. ಈ ಮೂಲಕ ಕಂಪನಿಯು ಭವಿಷ್ಯದ ತಂತ್ರಜ್ಞಾನ ಚಾರಿತ ಬೆಳವಣಿಗೆ ದೃಢವಾದ ನೆಲೆ ಬೀಳುವಿಕೆ ಮಾಡುತ್ತಿದೆ.
ಕಂಪನಿಯು ತನ್ನ ಆರ್ಥಿಕ ಸ್ಥಿತಿ ಗತಿಯಲ್ಲೂ ಬಲವಾದ ಬೆಳವಣಿಗೆಯನ್ನು ದಾಖಲಿಸಿದ್ದು 2026ರ 4ನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ ಶೇಕಡ 20.8ರಷ್ಟು ಏರಿಕೆಯಾಗಿ 8,501 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಇದೆ ಅವಧಿಯಲ್ಲಿ ಲಾಭವು 7,033 ಕೋಟಿ ರೂಪಾಯಿಗಳಷ್ಟಿತ್ತು. ಅಲ್ಲದೆ ಕಂಪನಿಯ ಒಟ್ಟು ಆದಾಯವು 13.4 ರಷ್ಟು ಏರಿಕೆಯಾಗಿದ್ದು 46,402 ಕೋಟಿ ರೂಪಾಯಿಗಳನ್ನು ತಲುಪಿದೆ. ಮಾರ್ಚ್ 31.2026ರ ವೇಳೆಗೆ ಒಟ್ಟು 3,28,594 ಉದ್ಯೋಗಿಗಳನ್ನು ಹೊಂದಿರುವ ಇನ್ಫೋಸಿಸ್, ಕ್ಯಾಂಪಸ್ ನೇಮಕಾತಿ ಮತ್ತು ನೇರ ಸಂದರ್ಶನಗಳ ಮೂಲಕ ಹೊಸ ಪ್ರತಿಭೆಗಳನ್ನು ತನ್ನ ತಕ್ಕಂತೆ ಸೇರಿಸಿಕೊಳ್ಳುವ ಸಜ್ಜಾಗಿದೆ.
ಉದ್ಯೋಗಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಂಪನಿಯ ಮಂಡಳಿಯು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಅರ್ಹ ಉದ್ಯೋಗಿಗಳಿಗೆ ಕಾರ್ಯಕ್ಷಮತೆ ಆಧಾರಿತ ಶೇರು ಪೋತ್ಸಾಹ ಧನ (Performance - based Stock Incentives) ಹಾಗೂ ಹಣಕಾಸು ಮತ್ತು ESG ( Environmental, Social & Government) ಮ್ಯಾಟ್ರಿಕ್ ಗಳಿಗೆ ಸಂಬಂಧಿಸಿದ ಇಕ್ವಿಟಿ ಅನುದಾನಗಳನ್ನು ಅನುಮೋದಿಸಲಾಗಿದೆ. ಇದರೊಂದಿಗೆ ಹೂಡಿಕೆದಾರರಿಗೂ ಲಾಭ ಹಂಚಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರತಿಕ್ವಿಟಿ ಶೇರಿಗೆ ₹25 ಅಂತಿಮ ಲಾಭಾಂಶವನ್ನು (Dividend) ಶಿಫಾರಸು ಮಾಡಲಾಗಿದೆ.
ಈ ಲಾಭಾಂಶದ ದಾಖಲೆ ದಿನಾಂಕವನ್ನು ಜೂನ್ 10 ರಂದು ನಿಗದಿಪಡಿಸಲಾಗಿದ್ದು ಜೂನ್ 25ರಂದು ಪಾವತಿ ಮಾಡಲಾಗುವುದು ಎಂದು ತಿಳಿಸಲಾಗಿದೆ. ಕಂಪನಿಯ 45ನೇ ವಾರ್ಷಿಕ ಸಾಮಾನ್ಯ ಸಭೆಯು ಜೂನ್ 23 ರಂದು ನಡೆಯಲಿದ್ದು, ಈ ಸಭೆಯಲ್ಲಿ ಮುಂದಿನ ಕಾರ್ಯತಂತ್ರಗಳು, ವ್ಯವಹಾರ ವಿಸ್ತರಣಿ ಹಾಗೂ ಹೂಡಿಕೆ ಯೋಜನೆಗಳ ಕುರಿತು ಪ್ರಮುಖ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ. ಈ ನಿರ್ಧಾರಗಳು ಉದ್ಯೋಗಿ ಪ್ರೋತ್ಸಾಹ ಹಾಗೂ ಹೂಡಿಕೆದಾರರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವಂತಿದೆ.
Also Read:
ರೀಲ್ಸ್ ಗಾಗಿ ಬಾಂಬ್ ಮಾದರಿ ಸ್ಪೋಟ್: ರಜತ್ ಕಿಶನ್ ವಿರುದ್ಧ ಪೊಲೀಸ್ ಸುಮೋಟೋ ಪ್ರಕರಣ