<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

International nurses day : ರೋಗಿಗಳ ಹಾರೈಕೆಯ ನಿಜವಾದ ಹೀರೋಗಳು

International nurses day : ರೋಗಿಗಳ ಹಾರೈಕೆಯ ನಿಜವಾದ ಹೀರೋಗಳು
Summary: International Nurses Day 2026 is being celebrated across the world to pay tribute to the invaluable service of nurses who work day and night to care for patients. They are the backbone of the healthcare sector and make a great contribution to society with their dedication and humanitarian service.

Belagavi News:

ಅಂತರಾಷ್ಟ್ರೀಯ ದಾದಿಯರ ದಿನ (international nurses day 2026) ಅನ್ನು ಪ್ರತಿ ವರ್ಷ ಮೇ 12ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ರೋಗಿಗಳ ಆರೈಕೆ, ಚಿಕಿತ್ಸೆ ಸಹಾಯ ಹಾಗೂ ಮಾನಸಿಕ ಬೆಂಬಲ ನೀಡುವ ಮೂಲಕ ಜೀವಗಳನ್ನು ಉಳಿಸುವಲ್ಲಿ ನರ್ಸ್ ಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ. ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿರುವ ದಾದಿಯರ ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.

ರೋಗಿಗಳ ಚೇತರಿಕೆಯಲ್ಲಿ ವೈದ್ಯರ ಚಿಕಿತ್ಸೆಯಷ್ಟೇ ಸರಿಯಾದ ಆರೈಕೆಯು ಅತಿ ಮುಖ್ಯ. ಈ ಆರೈಕೆ ಮತ್ತು ನಿರಂತರ ಸೇವೆಯನ್ನು ನಿಷ್ಠೆಯಿಂದ ನಿರ್ವಹಿಸುವವರು ದಾದಿಯರು. ಅವರು ಹಗಲು ರಾತ್ರಿ ಎನ್ನದೆ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡುತ್ತಿದ್ದಾರೆ.

ಅಂತರಾಷ್ಟ್ರೀಯ ದಾದಿಯರ ದಿನ 2026ರ ಸಂದರ್ಭದಲ್ಲಿ ನರ್ಸ್ ಗಳ ಪರಿಶ್ರಮ, ಸೇವಾ ಮನೋಭಾವ ಮತ್ತು ಮಾನವೀಯತೆಯನ್ನು ಸ್ಮರಿಸಲಾಗುತ್ತಿದೆ. ಫ್ಲೋರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ನೆನಪಿನಲ್ಲಿ ಆರಂಭವಾದ ಈ ಆಚರಣೆ, ಇಂದು ಜಾಗತಿಕವಾಗಿ ಆರೋಗ್ಯ ಕ್ಷೇತ್ರದ ಪ್ರಮುಖ ದಿನವಾಗಿ ಗುರುತಿಸಿಕೊಂಡಿದೆ.

Sponsored

ಈ ದಿನದ ಮೂಲಕ ದಾದಿಯರ ಸೇವೆಗೆ ಕೃತಜ್ಞತೆ ಸಲ್ಲಿಸಲಾಗುತ್ತಿದ್ದು, ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಅವರ ಪಾತ್ರ ಎಷ್ಟು ಅವಶ್ಯಕತೆಂಬದನ್ನು ಮತ್ತೊಮ್ಮೆ ನೆನಪಿಸಲಾಗುತ್ತಿದೆ.

ಈ ದಿನದ ವಿಶೇಷತೆಯನ್ನು ತಿಳಿಯೋಣ ಬನ್ನಿ...: ಅಂತರಾಷ್ಟ್ರೀಯ ದಾದಿಯರ ದಿನ ಅನ್ನು ಪ್ರತಿ ವರ್ಷ ಮೇ 12ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನವನ್ನು ಆಧುನಿಕ ನರ್ಸಿಂಗ್ ನ ಸಂಸ್ಥಾಪಕ ಫ್ಲೋರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ.

1820 ಮೇ 12 ರಂದು ಜನಿಸಿದ ಫ್ಲೋರೆನ್ಸ್ ನೈಟಿಂಗೇಲ್ ಅವರು ಕ್ರಿಮಿಯನ್ ಯುದ್ಧದ ಸಮಯದಲ್ಲಿ ರೋಗಿಗಳ ಆರೈಕೆ ಮತ್ತು ಆಸ್ಪತ್ರ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದವರು. ಅವರ ಸೇವೆ ಮತ್ತು ನಿಷ್ಠೆ ಆಧುನಿಕ ನರ್ಸಿಂಗ್ ವೃತ್ತಿಗೆ ಭದ್ರಾ ಅಡಿಪಾಯ ಹಾಕಿತು.

ಅಮೇರಿಕಾದ ಆರೋಗ್ಯ ಶಿಕ್ಷಣ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿ ಡೋರೋಥಿ ಸದರ್ಲ್ಯಾಂಡ್ ಅವರು ದಾದಿಯರ ಗೌರವಕ್ಕಾಗಿ ವಿಶೇಷ ದಿನವನ್ನು ಆಚರಿಸುವ ಕಲ್ಪನೆಯನ್ನು ಮೊದಲಿಗೆ ಪ್ರಸ್ತಾಪಿಸಿದರು. ನಂತರ 1974ರಲ್ಲಿ ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ನರ್ಸಿಸ್ ಈ ಪ್ರಸ್ತಾವನೆಯನ್ನು ಅಂಗೀಕರಿಸಿ ಅಧಿಕೃತವಾಗಿ ಅಂತರಾಷ್ಟ್ರೀಯ ದಾದಿಯರ ದಿನವನ್ನು ಆರಂಭಿಸಿತು. ಅಂದಿನಿಂದ ಪ್ರತಿ ವರ್ಷ ಮೇ 12ರಂದು ಈ ದಿನವನ್ನು ಆಚರಿಸಲಾಗುತ್ತಿದೆ.

Sponsored

ಈ ದಿನದ ಮೂಲಕ ಆರೋಗ್ಯ ಸೇವೆಯಲ್ಲಿ ದಾದಿಯರ ಅಪಾರ ಕೊಡುಗೆ, ಹೇಮಾ ಮನೋಭಾವ ಮತ್ತು ಮಾನವೀಯತೆಯನ್ನು ಗೌರವಿಸಲಾಗುತ್ತದೆ. ದಾದಿಯರ ವೃತ್ತಿಯನ್ನು ಉತ್ತೇಜಿಸುವುದು ಹಾಗೂ ಅವರ ಪಾತ್ರದ ಮಹತ್ವವನ್ನು ಜಾಗತಿಕವಾಗಿ ಒತ್ತಿ ಹೇಳುವುದು ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ.

ಅಂತರಾಷ್ಟ್ರೀಯ ದಾದಿಯರ ದಿನವೂ ಸಮಾಜದಲ್ಲಿ ದಾದಿಯರ ಅಮೂಲ್ಯ ಪಾತ್ರವನ್ನು ಸ್ಮರಿಸುವ ಹಾಗೂ ಗೌರವಿಸುವ ಮಹತ್ವದ ದಿನವಾಗಿದೆ. ರೋಗಿಗಳ ಜೀವನದಲ್ಲಿ ಆರೈಕೆ ಕಹಾನುಭೂತಿ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸುವ ಮೂಲಕ ದಾರಿಯರು ಆರೋಗ್ಯ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತರುತ್ತಾರೆ.

ಈ ದಿನದ ಮುಖ್ಯ ಉದ್ದೇಶ ದಾದಿಯರ ಪರಿಶ್ರಮ, ಸೇವೆ ಮತ್ತು ಸಮರ್ಪಣೆಯನ್ನು ಗುರುತಿಸಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿದೆ. ವೈದ್ಯಕೀಯ ಚಿಕಿತ್ಸೆ ಜೊತೆಗೆ ಮಾನಸಿಕ ಹಾಗೂ ಭಾವನಾತ್ಮಕ ಬೆಂಬಲ ನೀಡುವ ಮೂಲಕ ರೋಗಿಗಳ ಚೇತರಿಕೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಅಂತರಾಷ್ಟ್ರೀಯ ದಾದಿಯರ ದಿನವೂ ದಾದಿಯರ ವೃತ್ತಿಯ ಮಹತ್ವವನ್ನು ಉತ್ತೇಜಿಸುವ ವೇದಿಕೆಯು ಆಗಿದೆ. ಅವರ ಸೇವಾ ಮನೋಭಾವ ಮತ್ತು ನಿಸ್ವಾರ್ಥ ಕಾರ್ಯಕ್ಕೆ ಗೌರವ ನೀಡುವ ಮೂಲಕ ಈ ವೃತ್ತಿಯ ಗೌರವವನ್ನು ಹೆಚ್ಚಿಸಲಾಗುತ್ತದೆ.

Sponsored

ವಿಶೇಷ ದಿನದ ಸಂದರ್ಭದಲ್ಲಿ ದೇಶದಾದ್ಯಂತ ಆಸ್ಪತ್ರೆಗಳು, ಆರೋಗ್ಯ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ದಾದಿಯರನ್ನು ಗೌರವಿಸಲು ಸನ್ಮಾನ ಕಾರ್ಯಕ್ರಮಗಳು, ಸೆಮಿನಾರ್ ಗಳು ಮತ್ತು ಜಾಗತಿಕ ಅಭಿಯಾನಗಳನ್ನು ಆಯೋಜಿಸುತ್ತೇವೆ. ಇದರಿಂದ ಆರೋಗ್ಯ ಕ್ಷೇತ್ರದಲ್ಲಿ ದಾದಿಯರ ಪಾತ್ರದ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಅರಿವು ಮೂಡುತ್ತದೆ.

Also Read:

ಫೈವ್ ಕಿಲ್ಲೆಡ್ ಇನ್ ಹಾರ್ರಿಫಿಕ್ ಬೈಕ್ ರೇಸ್ ಆಕ್ಸಿಡೆಂಟ್

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online