<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಇರಾನ್-ಅಮೆರಿಕ ಉದ್ವಿಗ್ನತೆ: ಹಾರ್ಮುಜ್ ಜಲಸಂಧಿಯಲ್ಲಿ ಡ್ರೋನ್ ದಾಳಿಗೆ ಪ್ರತಿಯಾಗಿ ಅಮೆರಿಕದ ಕಾರ್ಯಾಚರಣೆ

ಇರಾನ್-ಅಮೆರಿಕ ಉದ್ವಿಗ್ನತೆ: ಹಾರ್ಮುಜ್ ಜಲಸಂಧಿಯಲ್ಲಿ ಡ್ರೋನ್ ದಾಳಿಗೆ ಪ್ರತಿಯಾಗಿ ಅಮೆರಿಕದ ಕಾರ್ಯಾಚರಣೆ
Summary: The US has claimed that the operation was carried out in response to Iran's drone attack on a ship sailing in the Strait of Hormuz. The incident has increased tensions in the region and intensified discussions about maritime security, according to reports.

Belagavi News:

ವಾಷಿಂಗ್ಟನ್ (ಅಮೆರಿಕ): ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷವನ್ನು ಕೊನೆಗೊಳಿಸಿ, ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ಕುರಿತು ವಾರದ ಹಿಂದೆ ತಾತ್ಕಾಲಿಕ ಒಪ್ಪಂದವೊಂದು ಏರ್ಪಟ್ಟಿದ್ದರೂ, ಇದೀಗ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆ ಹಡಗಿನ ಮೇಲೆ ನಡೆದ ಡ್ರೋನ್ ದಾಳಿಗೆ ಪ್ರತಿಯಾಗಿ ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದೆ.

ಅಮೆರಿಕದ ಈ ಪ್ರತಿದಾಳಿಯಲ್ಲಿ ಇರಾನ್ ನ ಕ್ಷಿಪಣಿ ಮತ್ತು ಡ್ರೋನ್ ನೆಲೆಗಳು ಹಾಗೂ ಕರಾವಳಿ ರೇಡಾನ್ ಸ್ಥಾನಗಳನ್ನು ಗುರಿಯಾಗಿಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ. ಈ ದಾಳಿಯು ಹಡಗಿನ ಮೇಲೆ ನಡೆದ ಡ್ರೋನ್ ದಾಳಿಗೆ ಪ್ರತಿಕ್ರಿಯೆಯಾಗಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿ, ಡ್ರೋನ್ ದಾಳಿಯು ಕದನ ವಿರಾಮದ ಉಲ್ಲಂಘನೆಯಾಗಿದೆ ಎಂದು ಹೇಳಿದ್ದು, " ಈ ದಾಳಿಗೆ ಕಾರಣವನ್ನು ಪತ್ತೆ ಮಾಡಲಾಗುವುದು. ಇರಾನ್ ಮೇಲೆ ದಾಳಿ ನಡೆಸಿರುವುದು ನನಗ ನಿಜಕ್ಕೂ ಇಷ್ಟವಾಗಿಲ್ಲ" ಎಂದು ಹೇಳಿದ್ದಾರೆ. ಆದರೆ ದಾಳಿಯ ಹಿನ್ನೆಲೆಯ ಕುರಿತು ಪ್ರಶ್ನಿಸಿದಾಗ, ಅವರು ಸ್ಪಷ್ಟ ಉತ್ತರ ನೀಡಿದೆ " ಅದು ಸ್ವಲ್ಪ ವಿಭಿನ್ನ ವಿಷಯ" ಎಂದು ಹೇಳುವ ಮೂಲಕ ವಿವರ ನೀಡುವುದನ್ನು ತಪ್ಪಿಸಿದ್ದಾರೆ.

Sponsored

ಇನ್ನು ಟೆಹ್ರಾನ್ ಜೊತೆಗೆ ನಡೆಯುತ್ತಿದ್ದ ರಾಜತಾಂತ್ರಿಕ ಮಾತುಕತೆಗಳ ನಡುವೆಯೇ ಈ ದಾಳಿ ನಡೆದಿರುವುದು ಗಮನಾರ್ಹವಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಆಯೋಗದ ಮುಖ್ಯಸ್ಥ ಇಬ್ರಾಹಿಂ ಅಜೀಜಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದು, " ಹಾರ್ಮುಜ್ ಜಲಸಂಧಿಯ ನಿಯಂತ್ರಣ ಇರಾನ್ ನಲ್ಲಿದೆ. ಆದ್ದರಿಂದ ನಿಯಮಗಳನ್ನು ಗೌರವಿಸಬೇಕು. ಇದನ್ನು ಉಲ್ಬಣ ಎಂದು ತಪ್ಪಾಗಿ ಅರ್ಥೈಸಬಾರದು. ಇದು ಕದನ ವಿರಾಮ ಉಲ್ಲಂಘನೆ ಅಲ್ಲ, ಬದಲಿಗೆ ಕದನ ವಿರಾಮದ ನಿರ್ವಹಣೆ" ಎಂದು ಹೇಳಿದ್ದಾರೆ.

ಈ ಬೆಳವಣಿಗೆಗಳು ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಮತ್ತಷ್ಟು ತೀವ್ರತೆ ಮತ್ತು ಜಾಗತಿಕ ತೈಲ ಸರಬರಾಜು ಮಾರ್ಗಗಳ ಬಗ್ಗೆ ಆತಂಕವನ್ನು ಹೆಚ್ಚಿಸಿವೆ.

ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಇರಾನ್ ಜೊತೆ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯ ಕುರಿತು ಮಾತನಾಡಿದ್ದು, ಕದನ ವಿರಾಮ ಒಪ್ಪಂದದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೆ ದೂರವಾಣಿ ಮೂಲಕ ಮಾತುಕತೆ ನಡೆಸಲು ಸಿದ್ಧತೆ ಇದೆ ಎಂದು ತಿಳಿಸಿದ್ದಾರೆ. ಹಿಂಸಾಚಾರಕ್ಕೆ ಹಿಂಸಾಚಾರವೇ ಉತ್ತರವಾಗಲಿದೆ ಎಂದು ಸಂದೇಶವನ್ನು ಅವರು ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.

Sponsored

ಯುದ್ಧ ಪರಿಸ್ಥಿತಿಯನ್ನು ಶಮನಗೊಳಿಸುವ ಉದ್ದೇಶದಿಂದ ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂವೇದನಾಶೀಲ ಮಾತುಕತೆಗಳ ನಡುವೆಯೇ ಈ ಹೇಳಿಕೆಗಳು ಬಂದಿವೆ. ಕಳೆದ ವಾರವೇ ಅಮೆರಿಕದೊಂದಿಗೆ ತಾತ್ಕಾಲಿಕ ಒಪ್ಪಂದವೊಂದರನ್ನು ಮಾಡಿಕೊಂಡಿದ್ದರು, ಹಾರ್ಮುಜ್ ಜಲಸಂಧಿ ಪ್ರದೇಶದ ನಿಯಂತ್ರಣ ವಿಚಾರದಲ್ಲಿ ಇರಾನ್ ತನ್ನ ನಿಲುವನ್ನು ಕಠಿಣಗೊಳಿಸುತ್ತಿದೆ ಎಂದು ತಿಳಿದುಬಂದಿದೆ.

ಇದೇ ಸಂದರ್ಭದಲ್ಲಿ ಅಮೆರಿಕ ಸೇನೆ ಇರಾನ್ ಸೇನಾ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದ ಬಳಿಕ, ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪ್ರತೀಕಾರದ ದಾಳಿಗಳ ಮೂಲಕ ಉತ್ತರ ನೀಡುವುದಾಗಿ ಎಚ್ಚರಿಕೆ ನೀಡಿದ್ದು, ಪ್ರದೇಶದಲ್ಲಿ ಉದ್ವಿಗ್ನತೆ ಇನ್ನಷ್ಟು ಹೆಚ್ಚಿಸಿದೆ.

Also Read:

ಭಾರತದಲ್ಲಿ ಮೊದಲ ಹೈಡ್ರೋಜನ್ ರೈಲು ಪ್ರಯೋಗ ಯಶಸ್ವಿ : ಸಂಚಾರ ಶೀಘ್ರ ಆರಂಭ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online