<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ಶಿವರಾಜ್ ಕುಮಾರ್ ಕಣ್ಣುಗಳ ಸೀಕ್ರೆಟ್ ಬಿಚ್ಚಿಟ್ಟ ಜಾಹ್ನವಿ ಕಪೂರ್! ನಟಿ ಹೇಳಿದ್ದೇನು?

ಶಿವರಾಜ್ ಕುಮಾರ್ ಕಣ್ಣುಗಳ ಸೀಕ್ರೆಟ್ ಬಿಚ್ಚಿಟ್ಟ ಜಾಹ್ನವಿ ಕಪೂರ್! ನಟಿ ಹೇಳಿದ್ದೇನು?
Summary: Actress Jahnavi Kapoor has praised actor Shivarajkumar's powerful eyes and amazing personality. Jahnavi's words, which say that Shivanna has immense energy and a different charm in his eyes, have now gone viral on social media.

Belagavi news:

ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿರುವ ಬಹು ನಿರೀಕ್ಷಿತ ಪೆದ್ದಿ ಸಿನಿಮಾದ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿನ್ನೆ ಚಿತ್ರ ತಂಡ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿತ್ತು, ಈ ವೇಳೆ ಜಾನ್ವಿ ಕಪೂರ್ ಅವರು ಶಿವಣ್ಣನ ಬಗ್ಗೆ ಹೇಳಿದ ಮಾತುಗಳು ಅಭಿಮಾನಿಗಳ ಗಮನ ಸೆಳೆದಿವೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಜಾನ್ವಿ ಕಪೂರ್, ಶಿವರಾಜಕುಮಾರ್ ಅವರ ವ್ಯಕ್ತಿತ್ವ ಹಾಗೂ ಕಣ್ಣುಗಳಲ್ಲಿರುವ ಅದ್ಭುತ ಎನರ್ಜಿ ಬಗ್ಗೆ ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಿವಣ್ಣನ ಕಣ್ಣುಗಳಲ್ಲಿ ಅಪಾರ ಶಕ್ತಿ ಮತ್ತು ವಿಭಿನ್ನ ಆಕರ್ಷಣೆ ಇದೆ ಎಂದು ಹೇಳಿದವರು, ಅವರ ಜೊತೆ ಕೆಲಸ ಮಾಡಿದ ಅನುಭವ ಅದ್ಭುತವಾಗಿದೆ ಎಂದು ಹೇಳಿದರು.

'ಪೆದ್ದಿ' ಚಿತ್ರದ ಮೇಲೆ ಈಗಾಗಲೇ ಸಿನಿಪ್ರಿಯರಲ್ಲಿ ಭಾರಿ ನಿರೀಕ್ಷೆ ಮುಡಿದ್ದು, ರಾಮ್ ಚರಣ್, ಜಾನ್ವಿ ಕಪೂರ್ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ಸಿನಿಮಾಗೆ ಮತ್ತಷ್ಟು ಹೈಪ್ ತಂದಿದೆ. ಚಿತ್ರತಂಡದ ಬೆಂಗಳೂರು ಭೇಟಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿದೆ.

Sponsored

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಖದರ್ ದಿನದಿಂದ ದಿನಕ್ಕೆ ಹೆಚ್ಚು ತಲೆ ಇದೆ. ಹಲವು ಯುವ ನಟರ ನಟನೆ, ಡ್ಯಾನ್ಸ್ ಹಾಗೂ ಫೈಟ್ಸ್ ನಲ್ಲಿ ಮಿಂಚುತ್ತಿದ್ದರು, ಈ ಮೂರು ವಿಭಾಗಗಳಲ್ಲಿ ಶಿವಣ್ಣನ ಮಟ್ಟರ್ ತಲುಪುವುದು ಸುಲಭವಲ್ಲ ಎಂಬ ಮಾತು ಸಿನಿಪ್ರಿಯರಲ್ಲಿದೆ. ವಿಶೇಷವಾಗಿ ವಯಸ್ಸಾದಂತೆ ಶಿವರಾಜ್ ಕುಮಾರ್ ಅವರ ಪರದೆ ಮೇಲಿನ ಪ್ರಭಾವ ಮತ್ತಷ್ಟು ಹೆಚ್ಚಾಗಿದ್ದು, ಕೇವಲ ಕಣ್ಣುಗಳ ಅಭಿನಯದಲ್ಲೇ ಪ್ರೇಕ್ಷಕರನ್ನು ಸೆಳೆಯುವ ಶಕ್ತಿ ಅವರಿಗಿದೆ.

ಇದೀಗ ಪೆದ್ದಿ ಸಿನಿಮಾದ ಮೂಲಕ ಶಿವಣ್ಣ ಮತ್ತೆ ಗಮನ ಸೆಳೆದಿದ್ದಾರೆ. ಚಿತ್ರದಲ್ಲಿ ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿನ್ನೆ ಪೆದ್ದಿ ಚಿತ್ರ ತಂಡ ಬೆಂಗಳೂರಿಗೆ ಭೇಟಿ ನೀಡಿ ಚಿತ್ರದ ಪ್ರಚಾರ ನಡೆಸಿದ್ದು ಈ ವೇಳೆ ಜಾನ್ವಿ ಕಪೂರ್, ಶಿವರಾಜ್ ಕುಮಾರ್ ಬಗ್ಗೆ ಹೇಳಿದ ಮಾತುಗಳು ಫುಲ್ ವೈರಲ್ ಆಗಿವೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಜಾನ್ವಿ ಕಪೂರ್,"ಶಿವರಾಜ್ ಕುಮಾರ್ ಅವರು ಹಿರಿಯ ನಟ.'ಪೆದ್ದಿ' ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ದುರಾದೃಷ್ಟದ ನನ್ನದು ಅವರೊಟ್ಟಿಗೆ ಕೇವಲ ಒಂದು ಸೀನ್ ಮಾತ್ರ ಇತ್ತು. ಆದರೆ, ಆ ಒಂದು ಸೀನ್ ನಲ್ಲಿ ಅವರು ಎಂತಹ ಅದ್ಭುತ ಕಲಾವಿದ ಎಂಬುದನ್ನು ಅರಿತುಕೊಂಡೆ. ಅವರು ಬಹಳ ಗಾಢವಾಗಿ ತಮ್ಮ ನಟನೆ ನೀಡುತ್ತಾರೆ. ಅವರ ಕಣ್ಣುಗಳು ತುಂಬಾ ಪವರ್ ಫುಲ್ ಆಗಿವೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಾನ್ವಿ ಕಪೂರ್ ಹೇಳಿಕೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶಿವಣ್ಣ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಪೆದ್ದಿ ಸಿನಿಮಾದ ಮೇಲೆ ಈಗಾಗಲೇ ಭಾರಿ ನಿರೀಕ್ಷೆ ಮೂಡಿದ್ದು, ಶಿವರಾಜ್ ಕುಮಾರ್ ಅವರ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಸಿಮಿಪ್ರಿಯರಲ್ಲಿ ಹೆಚ್ಚಾಗಿದೆ.

Sponsored

ಜಾನ್ವಿ ಕಪೂರ್ ನಟಿಸಿರುವ ಬಹುನಿರೀಕ್ಷಿತ ಪೆದ್ದಿ ಸಿನಿಮಾದ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದ್ದು, ನಿನ್ನೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾನ್ವಿ ಕಪೂರ್ ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳ ಗಮನ ಸೆಳೆದರು. ಕನ್ನಡದ ಕೆಲ ಮಾತುಗಳನ್ನು ಅಭ್ಯಾಸ ಮಾಡಿ ಮಾತನಾಡಿದ ನಟಿ ಪ್ರಯತ್ನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಜಾನ್ವಿ ಕಪೂರ್ ,"ಪೆದ್ದಿ ಸಿನಿಮಾದಲ್ಲಿ ಶಿವರಾಜಕುಮಾರ್ ಅವರೊಟ್ಟಿಗೆ ಹೆಚ್ಚು ನಟಿಸಲು ಅವಕಾಶ ಸಿಗಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅವರಂತಹ ಮಹಾನ್ ನಟ ಜೊತೆ ಇನ್ನಷ್ಟು ಕೆಲಸ ಮಾಡುವ ಅವಕಾಶ ಸಿಗಲಿದೆ ಎಂದು ಆಶಿಸುತ್ತೇನೆ" ಎಂದು ಹೇಳಿದರು. ಶಿವರಾಜ್ ಕುಮಾರ್ ಅವರ ಅಭಿನಯ, ವ್ಯಕ್ತಿತ್ವ ಹಾಗೂ ಕಣ್ಣುಗಳಲ್ಲಿರುವ ಶಕ್ತಿಯ ಬಗ್ಗೆ ಕೂಡ ನಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪೆದ್ದಿ ಸಿನಿಮಾದಲ್ಲಿ ರಾಮ್ ಚರಣ್ ನಾಯಕನಾಗಿ ಕಾಣಿಸಿಕೊಂಡಿದ್ದು, ಕ್ರಿಕೆಟಿಗ ಹಾಗೂ ಕುಸ್ತಿಪಟುವಿನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೌಡ ನಾಯ್ಡು ಪಾತ್ರ ನಿರ್ವಹಿಸಿದ್ದು, ರಾಮ್ ಚರಣ್ ಗೆ ಕುಸ್ತಿ ತರಬೇತಿ ನೀಡುವ ಪಾತ್ರದಲ್ಲಿ ಮಿಂಚಲಿದ್ದಾರೆ. ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದು, ಜಗಪತಿ ಬಾಬು ಹಾಗೂ ದಿವ್ಯನ್ನಡು ಸೇರಿದಂತೆ ಹಲವು ಕಲಾವಿದರು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎಆರ್ ರಹಮಾನ್ ಸಂಗೀತ ಸಂಯೋಜನೆ ಮಾಡಿದ್ದು, ನಿರ್ದೇಶನವನ್ನು ಮುಚ್ಚಿ ಬಾಬು ಸನಾ ಮಾಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಮೇಲೆ ಈಗಾಗಲೇ ಸಿನಿಪ್ರಿಯರಲ್ಲಿ ಭಾರಿ ನಿರೀಕ್ಷೆ ಮೂಡಿದೆ.

Sponsored

Also Read:

ಶಾಂತಿ ಮಾತುಕತೆ ನಡುವೆ ಅಮೆರಿಕ - ಇರಾನ್ ಸಂಘರ್ಷ ಮತ್ತೆ ತೀವ್ರ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online