<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಅಯೋಧ್ಯೆ ರಾಮ ಮಂದಿರ CEO ಹುದ್ದೆಗೆ ಭರ್ಜರಿ ಪ್ರತಿಕ್ರಿಯೆ : ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ

ಅಯೋಧ್ಯೆ ರಾಮ ಮಂದಿರ CEO ಹುದ್ದೆಗೆ ಭರ್ಜರಿ ಪ್ರತಿಕ್ರಿಯೆ : ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ
Summary: The process of appointing a new CEO for the Ayodhya Ram Mandir administration has begun. More than 1000 people from different parts of the country have applied for this important post, and the final selection will be made on July 22 after the scrutiny of the candidates. Here is the complete information about the specialty of the Ram Mandir CEO post and the recruitment process.

belagavi news :

ರಾಮ ಮಂದಿರಕ್ಕೆ ಹೊಸ CEO ನೇಮಕ: 1000 ಕ್ಕೂ ಹೆಚ್ಚು ಅರ್ಜಿ, ಜುಲೈ 22ಕ್ಕೆ ಅಂತಿಮ ಆಯ್ಕೆ

ಅಯೋಧ್ಯೆಯ ರಾಮ ಮಂದಿರದ ಪಾರದರ್ಶಕ ಮತ್ತು ಸುಗಮ ನಿರ್ವಹಣೆಗಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹತ್ವದ ಹೆಜ್ಜೆ ಇಟ್ಟಿದೆ. ಮಂದಿರದ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಇದೇ ಮೊದಲ ಬಾರಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯನ್ನು ಸೃಷ್ಟಿಸಲಾಗಿದೆ.

ಈ ಹುದ್ದೆಗೆ ಕೇವಲ ಐದು ದಿನಗಳಲ್ಲಿ 1000 ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದು, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು, ಮಾಜಿ ಸೇನಾಧಿಕಾರಿಗಳು ಹಾಗೂ ಕಾರ್ಪೊರೇಟ್ ವಲಯದ ತಜ್ಞರು ಸೇರಿದಂತೆ ಹಲವು ಕ್ಷೇತ್ರಗಳ ಅನುಭವಿಗಳು ಸ್ಪರ್ಧೆಯಲ್ಲಿದ್ದಾರೆ.

ಅಭ್ಯರ್ಥಿಗಳಿಗೆ 'ರಾಮಭಕ್ತ' ಮನೋಭಾವದ ಜೊತೆಗೆ ಕನಿಷ್ಠ 20 ವರ್ಷಗಳ ಆಡಳಿತಾತ್ಮಕ ಅಥವಾ ನಿರ್ವಹಣಾ ಅನುಭವವನ್ನು ಕಡ್ಡಾಯಗೊಳಿಸಲಾಗಿದೆ. ಜುಲೈ 22ರಂದು ಅಂತಿಮ ಆಯ್ಕೆ ನಡೆಯಲಿದ್ದು, ಆಯ್ಕೆಯಾಗುವ CEO ಮಂದಿರದ ಆಡಳಿತ, ಹಣಕಾಸು ನಿರ್ವಹಣೆ ಮತ್ತು ದೈನಂದಿನ ವ್ಯವಸ್ಥೆಯನ್ನು ಸುಧಾರಿಸುವ ಜವಾಬ್ದಾರಿ ಹೊರುವ ನಿರೀಕ್ಷೆ ಇದೆ.

ತಿರುಪತಿ ದೇವಸ್ಥಾನದ ಮಾದರಿಯಲ್ಲಿ ರಾಮಮಂದಿರದ ಕಾರ್ಯನಿರ್ವಹಣೆಯನ್ನು ಇನ್ನಷ್ಟು ವ್ಯವಸ್ಥಿತಗೊಳಿಸುವುದು ಈ ನೇಮಕಾತಿಯ ಪ್ರಮುಖ ಉದ್ದೇಶವಾಗಿದೆ. ಭಕ್ತರ ಸೇವೆ, ಪಾರದರ್ಶಕ ಆಡಳಿತ ಮತ್ತು ಮಂದಿರದ ದೀರ್ಘಕಾಲಿನ ನಿರ್ವಹಣೆಗೆ ಈ ಹುದ್ದೆ ಮಹತ್ವದ ಪಾತ್ರ ವಹಿಸಲಿದೆ.

ರಾಮ ಮಂದಿರ CEO ಹುದ್ದೆ : ಅರ್ಜಿ ಪ್ರಕ್ರಿಯೆ, ಆಯ್ಕೆ ದಿನಾಂಕ ಮತ್ತು ಅರ್ಹತೆಗಳ ಪೂರ್ಣ ಮಾಹಿತಿ

ಅಯೋಧ್ಯೆಯ ರಾಮ ಮಂದಿರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಹುದ್ದೆಗೆ ಅರ್ಜಿ ಪ್ರಕ್ರಿಯೆ ನಡೆಯುತ್ತಿದ್ದು, ಟ್ರಸ್ಟ್ ಆಯ್ಕೆ ಪ್ರಕ್ರಿಯೆಗೆ ನಿಗದಿತ ವೇಳಾಪಟ್ಟಿಯನ್ನು ಪ್ರಕಟಿಸಿದೆ

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಜುಲೈ 18, 2026

ಅರ್ಜಿಗಳ ಪರಿಶೀಲನೆ ಆರಂಭ : ಜುಲೈ 19, 2026

ಅಂತಿಮ ಆಯ್ಕೆ ಪ್ರಕಟಣೆ : ಜುಲೈ 22,2026 (ಟ್ರಸ್ಟ್ ನ ಮಹತ್ವದ ಸಭೆಯಲ್ಲಿ ನಿರ್ಧಾರ)

ರಾಮ ಮಂದಿರದ CEO ಹುದ್ದೆಗೆ ಅರ್ಹತೆಯನ್ನು ಕಠಿಣವಾಗಿ ನಿಗದಿಪಡಿಸಲಾಗಿದೆ. ಅಭ್ಯರ್ಥಿಯು ಆಡಳಿತಾತ್ಮಕ ಸಾಮರ್ಥ್ಯ ಹೊಂದಿರುವುದರ ಜೊತೆಗೆ ಧಾರ್ಮಿಕ ಬದ್ಧತೆಯನ್ನು ಹೊಂದಿರಬೇಕು.

CEO ಹುದ್ದೆಯ ಪ್ರಮುಖ ಅರ್ಹತೆಗಳು:

ವಯಸ್ಸು ಮತ್ತು ಅನುಭವ : ಅಭ್ಯರ್ಥಿಯ ವಯಸ್ಸು 50 ರಿಂದ 70 ವರ್ಷಗಳ ನಡುವೆ ಇರಬೇಕು. ದೊಡ್ಡ ಸರ್ಕಾರಿ ಇಲಾಖೆ, ಸಂಸ್ಥೆ ಅಥವಾ ಕಂಪನಿಯಲ್ಲಿ ಕನಿಷ್ಠ 20 ವರ್ಷಗಳ ಉನ್ನತ ಮಟ್ಟದ ನಿರ್ವಹಣಾ ಅನುಭವ ಹೊಂದಿರಬೇಕು.

ಧಾರ್ಮಿಕ ಹಿನ್ನೆಲೆ : ಅಭ್ಯರ್ಥಿಯು ಹಿಂದೂ ಧರ್ಮವನ್ನು ಪಾಲಿಸುವವರಾಗಿರಬೇಕು ಮತ್ತು ಶ್ರೀರಾಮನ ಬಗ್ಗೆ ಭಕ್ತಿ ಹೊಂದಿರಬೇಕು. ವೈಷ್ಣವ ಸಂಪ್ರದಾಯದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ಭಾಷಾಜ್ಞಾನ : ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.

ರಾಮಮಂದಿರದ ಆಡಳಿತವನ್ನು ಮತ್ತಷ್ಟು ವ್ಯವಸ್ಥಿತಗೊಳಿಸುವ ಉದ್ದೇಶದಿಂದ ಈ CEO ಹುದ್ದೆಯನ್ನು ರಚಿಸಲಾಗಿದ್ದು, ಆಯ್ಕೆಯಾಗುವ ಅಧಿಕಾರಿ ಮಂದಿರದ ದೈನಂದಿನ ಕಾರ್ಯನಿರ್ವಹಣೆ, ಆಡಳಿತ ವ್ಯವಸ್ಥೆ ಮತ್ತು ಭಕ್ತರ ಸೇವೆಗಳ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಅಯೋಧ್ಯೆ ರಾಮ ಮಂದಿರದ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರನ್ನು ಆರಂಭಿಕವಾಗಿ ಮೂರು ವರ್ಷಗಳ ಒಪ್ಪಂದದ ಅವಧಿಗೆ ನೇಮಕ ಮಾಡಲಾಗುತ್ತದೆ. ಅವರ ಕಾರ್ಯಕ್ಷಮತೆ ಮತ್ತು ನಿರ್ವಹಣಾ ಸಾಮರ್ಥ್ಯದ ಆಧಾರದ ಮೇಲೆ ಒಪ್ಪಂದವನ್ನು ವಿಸ್ತರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ.

ಆಯ್ಕೆಯಾಗುವ CEO ಅವರ ಕಚೇರಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲೇ ಇರಲಿದ್ದು, ವೇತನ ಮತ್ತು ಇತರ ಸೌಲಭ್ಯಗಳನ್ನು ಚರ್ಚೆಯ ಮೂಲಕ ಅಂತಿಮಗೊಳಿಸಲಾಗುತ್ತದೆ.

CE0 ಆಯ್ಕೆ ಮಾಡುವ ಸಮಿತಿ ಯಾರು?

ಸಾವಿರಾರು ಅರ್ಜಿಗಳಲ್ಲಿ ಅತ್ಯಂತ ಸಮರ್ಥ, ಪ್ರಾಮಾಣಿಕ ಮತ್ತು ಅನುಭವ ಹೊಂದಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮೂರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.

ಆಯ್ಕೆ ಸಮಿತಿಯ ಸದಸ್ಯರು:

ನ್ಯಾ.ಪ್ರಮೋದ್ ಕೊಹ್ಲಿ

ಲೆಫ್ಟಿನೆಟ್ ಜನರಲ್ ವಿಷ್ಣುಕಾಂತ್ ಚತುರ್ವೇದಿ ( ನಿವೃತ್ತ ಸೇನಾಧಿಕಾರಿ)

ಸುರೇಶ್ ಹವಾರೆ (ಖ್ಯಾತ ಟ್ರಸ್ಟಿ)

ತಿರುಪತಿ ಮಾದರಿಯಲ್ಲಿ ಅಯೋಧ್ಯೆ ನಿರ್ವಹಣೆ

ರಾಮಮಂದಿರಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದು, ಕೋಟ್ಯಾಂತರ ರೂಪಾಯಿ ದೇಣಿಗೆ ಹರಿದು ಬರುತ್ತಿದೆ. ಇಂತಹ ಬೃಹತ್ ವ್ಯವಸ್ಥೆಯನ್ನು ಕೇವಲ ಅರ್ಚಕರು ಅಥವಾ ಟ್ರಸ್ಟಿಗಳ ಮೂಲಕ ನಿರ್ವಹಿಸುವುದು ಸವಾಲಿನ ಕೆಲಸವಾಗಿರುವ ಹಿನ್ನೆಲೆಯಲ್ಲಿ, ವೃತ್ತಿಪರ ಆಡಳಿತ ವ್ಯವಸ್ಥೆಯನ್ನು ರೂಪಿಸಲು CEO ಹುದ್ದೆ ಸೃಷ್ಟಿಸಲಾಗಿದೆ.

ತಿರುಪತಿ ದೇವಸ್ಥಾನದ ಮಾದರಿಯಲ್ಲಿ ರಾಮ ಮಂದಿರದ ಆಡಳಿತ, ಹಣಕಾಸು ನಿರ್ವಹಣೆ, ಭಕ್ತರ ಸೌಲಭ್ಯಗಳು ಮತ್ತು ದೈನಂದಿನ ಕಾರ್ಯಾಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವುದು ಈ ನೇಮಕಾತಿಯ ಪ್ರಮುಖ ಉದ್ದೇಶವಾಗಿದೆ.

ರಾಮ ಮಂದಿರ ನಿರ್ವಹಣೆಗೆ ತಿರುಪತಿ ಮಾದರಿ : ಹೊಸ CEO ಕೈಗೆ ಆಡಳಿತದ ಹೊಣೆ

ಅಯೋಧ್ಯೆಯ ರಾಮಮಂದಿರದ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ತಿರುಪತಿ ತಿರುಮಲ ದೇವಸ್ಥಾನ (TTD) ಮಾದರಿಯ ವೃತ್ತಿ ಪರ ನಿರ್ವಹಣಾ ವ್ಯವಸ್ಥೆ ಜಾರಿಗೆ ತರಲು ಯೋಜಿಸಲಾಗಿದೆ. ಆಡಳಿತ, ಹಣಕಾಸು ಮತ್ತು ದೈನಂದಿನ ಕಾರ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹೊಸ CEO ಪ್ರಮುಖ ಪಾತ್ರ ವಹಿಸಲಿದ್ದಾರೆ.

ತಿರುಪತಿ ದೇವಸ್ಥಾನವನ್ನು ವ್ಯವಸ್ಥಿತ ಆಡಳಿತ ಮಾದರಿಯಲ್ಲಿ ನಿರ್ವಹಿಸಲಾಗುತ್ತಿದ್ದು, ಅದೇ ರೀತಿಯ ವೃತ್ತಿಪರ ವಿಧಾನವನ್ನು ಅಯೋದ್ಯೆಯಲ್ಲೂ ಅಳವಡಿಸುವ ಉದ್ದೇಶವಿದೆ. ಹೊಸ ಸಿಇಓ ಅವರ ಉಸ್ತುವಾರಿಯಲ್ಲಿ ಆಡಳಿತ, ಹಣಕಾಸು, ಭದ್ರತೆ, ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗಗಳ ಕಾರ್ಯನಿರ್ವಹಣೆ ನಡೆಸಲಿದೆ.

ಪಾರದರ್ಶಕತೆಗೆ ಹೆಚ್ಚಿನ ಆದ್ಯತೆ

ರಾಮ ಮಂದಿರದ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವುದು CEO ನೇಮಕದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಹಣಕಾಸು ನಿರ್ವಹಣೆ, ದೇಣಿಗೆಗಳ ಲೆಕ್ಕ ಪತ್ರ ಮತ್ತು ಭಕ್ತರಿಗೆ ಸಂಬಂಧಿಸಿದ ಸೇವೆಗಳನ್ನು ಇನ್ನಷ್ಟು ವ್ಯವಸ್ಥಿತಗೊಳಿಸುವ ಗುರಿ ಹೊಂದಲಾಗಿದೆ.

ಲಕ್ಷಾಂತರ ಭಕ್ತರು ಭೇಟಿ ನೀಡುವ ಮತ್ತು ದೊಡ್ಡ ಪ್ರಮಾಣದಲ್ಲಿ ದೇಣಿಗೆಗಳು ಹರಿದು ಬರುವ ದೇಶದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ರಾಮ ಮಂದಿರದ ನಿರ್ವಹಣೆಗೆ ಈ ಹೊಸ ಆಡಳಿತ ವ್ಯವಸ್ಥೆ ಮಹತ್ವದ ಹೆಜ್ಜೆಯಾಗಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online