<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ಜನ ನಾಯಗನ್ ಚಿತ್ರ ಬಿಡುಗಡೆ ತಡೆ : ನಿರ್ಮಾಪಕ ನೀಡಿದ ಹೊಸ ಮಾಹಿತಿ ಏನು?

ಜನ ನಾಯಗನ್ ಚಿತ್ರ ಬಿಡುಗಡೆ ತಡೆ : ನಿರ್ಮಾಪಕ ನೀಡಿದ ಹೊಸ ಮಾಹಿತಿ ಏನು?
Summary: Important information has come out from the producer about who is responsible for the delay in the release of Jana Nayagan. So let's see what that information is...

Belagavi news:

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರ ಬಹು ನಿರೀಕ್ಷಿತ ಸಿನಿಮಾ 'ಜನ ನಾಯಗನ್ ' ಬಿಡುಗಡೆ ಸಂಬಂಧಿಸಿದಂತೆ ಹೊಸ ವಿವಾದಾತ್ಮಕ ಮಾಹಿತಿ ಹೊರ ಬಂದಿದೆ. ಈ ಚಿತ್ರವನ್ನು ರಾಜಕೀಯ ಪ್ರಭಾವ ಬಳಸಿ ತಡೆಯಲಾಗಿತ್ತು ಎಂದು ನಿರ್ಮಾಪಕರು ಈಗ ಬಹಿರಂಗಪಡಿಸಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ನ ನಿರ್ಮಾಪಕ ವೆಂಕಟೇಶ್ ಕೆ ನಾರಾಯಣ್, 'ಜನ ನಾಯಗನ್ ' ಸಿನಿಮಾದ ಬಿಡುಗಡೆ ಅನೇಕ ಕಾರಣಗಳಿಂದ ನಿಲ್ಲಿಸಲಾಯಿತು ಎಂದು ತಿಳಿಸಿದ್ದಾರೆ. ತಮ್ಮ ಹೇಳಿಕೆಯಲ್ಲಿ ಅವರು, ಚಿತ್ರದ ಬಿಡುಗಡೆ ಹಿಂದೆ ರಾಜಕೀಯ ಒತ್ತಡಗಳು ಮತ್ತು ಪ್ರಭಾವ ಕೆಲಸ ಮಾಡಿದವು ಎಂಬ ಸೂಚನೆ ನೀಡಿದ್ದಾರೆ.

ದಳಪತಿ ವಿಜಯ್ ಅವರು ತಮ್ಮ ಕೊನೆಯ ಸಿನಿಮಾ ಎಂದು ಹೇಳಿದ್ದ 'ಜನ ನಾಯಗನ್' ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿತ್ತು. ಅದರ ಅನಿರೀಕ್ಷಿತವಾಗಿ ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದ್ದು, ಇದಕ್ಕೆ ರಾಜಕೀಯ ಹಿನ್ನಲೆ ಇರುವುದಾಗಿ ಈಗ ನಿರ್ಮಾಪಕರು ಹೇಳಿಕೆಯಿಂದ ಮತ್ತಷ್ಟು ಚರ್ಚೆಗೆ ಆರಂಭವಾಗಿದೆ.

Sponsored

ವಿಜಯ್ ಅವರ ರಾಜಕೀಯ ಪ್ರವೇಶಕ್ಕೂ ಮುನ್ನ ಅವರ ಮೇಲೆ ಹಲವು ರೀತಿಯ ಒತ್ತಡಗಳು, ಟೀಕೆಗಳು ಮತ್ತು ಚಾರಿತ್ರ್ಯ ವಧೆಯ ಪ್ರಯತ್ನಗಳು ನಡೆದಿದ್ದವು ಎಂದು ಚಿತ್ರೋದ್ಯಮದ ವಲಯದಲ್ಲಿ ಚರ್ಚೆ ಯಾಗುತ್ತಿದೆ. ಈ ಹಿನ್ನೆಲೆಯಲ್ಲಿ 'ಜನ ನಾಯಗನ್ ' ಸಿನಿಮಾ ಬಿಡುಗಡೆ ತಡೆದಿರುವ ವಿಚಾರ ಮತ್ತಷ್ಟು ಗಮನ ಸೆಳೆಯುತ್ತಿದೆ.

ಈಗ ನಿರ್ಮಾಪಕರು ಹೇಳಿಕೆ ತಮಿಳು ಚಿತ್ರರಂಗ ಹಾಗೂ ರಾಜಕೀಯ ವಲಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಪಷ್ಟತೆ ಹೊರಬರುವ ನಿರೀಕ್ಷೆಯಿದೆ.

ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ಅವರ ಬಹು ನಿರೀಕ್ಷಿತ 'ಜನ ನಾಯಗನ್' ಸಿನಿಮಾ ಬಿಡುಗಡೆ ವಿಳಂಬದ ಬಗ್ಗೆ ನಿರ್ಮಾಪಕ ವೆಂಕಟೇಶ್ ಕೆ ನಾರಾಯಣ್ ಹೊಸ ಮಾಹಿತಿ ನೀಡಿದ್ದಾರೆ. ಇಂಗ್ಲಿಷ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಸಿನಿಮಾದ ಸೆನ್ಸಾರ್ ಮತ್ತು ರಿವಿಷನ್ ಪ್ರಕ್ರಿಯೆಯಲ್ಲಿನ ಅಡಚಣೆಗಳನ್ನು ವಿವರಿಸಿದ್ದಾರೆ.

ಕೆವಿಎನ್ ಹೇಳುವಂತೆ , 2025 ತಮ್ಮ ಸಿನಿಮಾವನ್ನು ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್ ಗೆ ಸಲ್ಲಿಸಲಾಗಿತ್ತು. ಸಮಿತಿಯು ಸಿನಿಮಾವನ್ನು ವೀಕ್ಷಿಸಿ ಯು/ಎ ಪ್ರಮಾಣ ಪತ್ರ ನೀಡಿತ್ತು. ಆದರೆ ನಂತರ ವ್ಯಕ್ತಿಯೊಬ್ಬರ ದೂರಿನ ಆಧಾರದ ಮೇಲೆ ಸಿನಿಮಾವನ್ನು ರಿವಿಷನ ಕಮಿಟಿಗೆ ಕಳುಹಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಅವರು ತಿಳಿಸಿದ್ದಾರೆ.

Sponsored

ಖಾಸಗಿ ವ್ಯಕ್ತಿಗಳ ದೂರುಗಳನ್ನು ಸೆನ್ಸಾರ್ ಮಂಡಳಿ ಪರಿಗಣಿಸುವುದು ಸರಿಯಲ್ಲ ಹಾಗೂ ಬಿಡುಗಡೆಗೆ ಮುಂಚಿನ ದೂರುಗಳನ್ನು ಸಾಮಾನ್ಯವಾಗಿ ಮಾನ್ಯ ಮಾಡಬಾರದು ಎಂಬುದಾಗಿ ಕೆವಿಎನ್ ಹೇಳಿದ್ದಾರೆ. ಈ ಕುರಿತು ಈಗಾಗಲೇ ಹಲವು ನ್ಯಾಯಾಂಗ ಉದಾಹರಣೆಗಳಿವೆ ಎಂದು ಕೂಡ ಅವರು ತಿಳಿಸಿದ್ದಾರೆ.

ಈ ಕ್ರಮವನ್ನು ಪ್ರಶ್ನಿಸಿ ತಾವು ನ್ಯಾಯಾಲಯದ ಮೊರೆ ಹೋಗಿದ್ದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಆದರೆ ಬಳಿಕ ತಿಳಿದಿದ್ದು, ದೂರು ನೀಡಿರುವ ವ್ಯಕ್ತಿಯೇ ಸಿಬಿಎಫ್‍ಸಿ ಸದಸ್ಯರಲ್ಲೊಬ್ಬರು ಎಂದು ಅವರು ಬಹಿರಂಗಪಡಿಸಿದ್ದಾರೆ. ಮೊದಲಿಗೆ ಯು/ಎ ಪ್ರಮಾಣ ಪತ್ರ ನೀಡಿದ ತಂಡದಲ್ಲಿದ್ದವರೇ ನಂತರ ಸಿನಿಮಾದ ವಿರುದ್ಧ ದೂರು ಸಲ್ಲಿಸಿರುವುದು ಆಶ್ಚರ್ಯಕರವಾಗಿದೆ ಎಂದು ಅವರು ಹೇಳಿದ್ದಾರೆ.

ನಂತರ ರಿವಿಷನ್ ಕಮಿಟಿಗೆ ಸಿನಿಮಾ ಕಳುಹಿಸಲು ಒಪ್ಪಿಗೆ ನೀಡಿದರು, ಅಲ್ಲಿಂದಲೇ ಪ್ರಕ್ರಿಯೆ ಮುಂದುವರೆದಿದ್ದು, ಸಿನಿಮಾ ಇನ್ನು ಅಲ್ಲಿ ಸಿಲುಕಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ. ಎಲ್ಲಾ ಫಾರ್ಮಾಲಿಟಿಗಳು ಪೂರ್ಣಗೊಂಡ ಬಳಿಕವೇ ಸಿನಿಮಾ ಬಿಡುಗಡೆ ಸಾಧ್ಯವಾಗಲಿದೆ ಎಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ.

ಈ ಬೆಳವಣಿಗೆಯಿಂದ 'ಜನ ನಾಯಗನ್' ಸಿನಿಮಾ ಬಿಡುಗಡೆ ಸುತ್ತಲಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

Sponsored

ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ 'ಜನ ನಾಯಗನ್' ಸಿನಿಮಾ ಬಿಡುಗಡೆ ಹುತ್ತಲಿನ ವಿವಾದ ಮತ್ತು ವಿಳಂಬದ ನಡುವೆ ನಿರ್ಮಾಪಕ ವೆಂಕಟೇಶ್ ಕೆ ನಾರಾಯಣ್ ಮತ್ತಷ್ಟು ಸ್ಪಷ್ಟನೆ ನೀಡಿದ್ದಾರೆ. ಸಿನಿಮಾ ಆರಂಭಿಸಿದಾಗ ಇಂತಹ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ ಎಂದು ಊಹಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಇಂಗ್ಲಿಷ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿ ವೆಂಕಟೇಶ್, "ನಾವು ಸಿನಿಮಾ ಶುರು ಮಾಡಿದಾಗ ಇಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ತಿಳಿದಿರಲಿಲ್ಲ. ಈಗ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಿರುವುದು ನಿಜವಾಗಿಯೂ ಸಂತೋಷದ ವಿಚಾರ. ಅವರು ಜನನಾಯಕರಾಗಿರುವುದು ಹೆಮ್ಮೆಯ ಸಂಗತಿ"ಎಂದು ಹೇಳಿದ್ದಾರೆ.

ಅವರು ಮುಂದುವರೆದು,"ಬಹುಶಃ ವಿಜಯ್ ಅವರು ಮುಖ್ಯಮಂತ್ರಿ ಆದ ನಂತರವೇ ಈ ಸಿನಿಮಾ ಬಿಡುಗಡೆಯಾಗಬೇಕೆಂಬುದು ವಿಧಿ ಆಗಿರಬಹುದು"ಎಂದು ಹೇಳಿದ್ದು, ಶೀಘ್ರದಲ್ಲೇ ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆ ಇದೆ ಎಂಬ ಸೂಚನೆಯನ್ನು ನೀಡಿದ್ದಾರೆ.

"ಜನ ನಾಯಗನ್" ಸಿನಿಮಾವನ್ನು ನಿರ್ದೇಶಕ ಎಚ್. ವಿನೋದ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ದಳಪತಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ ಮತ್ತು ಮಮಿತಾ ಬಿಜು ಪ್ರಮುಖ ಪಾತ್ರಗಳಲ್ಲಿ ನಡೆಸಿದ್ದಾರೆ. ಈ ಸಿನಿಮಾ ಮೊದಲಿಗೆ ಜನವರಿ 9ರಂದು ಬಿಡುಗಡೆ ಆಗಬೇಕಿತ್ತು, ಆದರೆ ಹಲವು ಕಾರಣಗಳಿಂದ ಬಿಡುಗಡೆ ನಿರಂತರವಾಗಿ ಮುಂದೂಡಲ್ಪಡುತ್ತಿದೆ.

Sponsored

ಇತ್ತೀಚಿಗಷ್ಟೇ 'ಜನ ನಾಯಗನ್ ' ಸಿನಿಮಾ ಆನ್ಲೈನ್ ನಲ್ಲಿ ಸಂಪೂರ್ಣವಾಗಿ ಲೀಕ್ ಆಗಿರುವ ಘಟನೆ ಕೂಡ ವರದಿಯಾಗಿದ್ದು, ಚಿತ್ರತಂಡಕ್ಕೆ ಮತ್ತೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿನಿಮಾ ಬಿಡುಗಡೆ ಕುರಿತು ಅಭಿಮಾನಿಗಳ ನಿರೀಕ್ಷೆ ಇನ್ನೂ ಹೆಚ್ಚಾಗಿದೆ.

Also Read:

ಹಿಜಾಬ್ ವಿವಾದಕ್ಕೆ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online