Belagavi news:
ಐಪಿಎಲ್ 2026ರಲ್ಲಿ ಕೆ ಎಲ್ ರಾಹುಲ್ ಭರ್ಜರಿ ಫಾರ್ಮ್ ಮುಂದುವರೆಸಿದ್ದು, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಸ್ಪೋಟಕ ಇನ್ನಿಂಗ್ ಆಡಿದ್ದಾರೆ. 226 ರನ್ ಗಳ ಗುರಿಯನ್ನು ಬೆನ್ನಟ್ಟಿದ ವೇಳೆ ಆರಂಭಿಕನಾಗಿ ಕಣಕ್ಕಿಳಿದ ರಾಹುಲ್ ಕೇವಲ 40 ಎಸೆತಗಳಲ್ಲಿ 75 ರನ್ ಗಳಿಸಿ ತಂಡಕ್ಕೆ ಬಲವಾದ ಆರಂಭ ನೀಡಿದರು.
ಈ ಇನ್ನಿಂಗ್ಸ್ ನಲ್ಲಿ ಆರು ಬೌಂಡರಿನ್ ಮತ್ತು 5 ಸಿಕ್ಸರ್ ಗಳನ್ನು ಬಾರಿಸಿದ ರಾಹುಲ್, ಐಪಿಎಲ್ ನಲ್ಲಿ ಆರಂಭಿಕ ಆಟಗಾರನಾಗಿ 200 ಸಿಕ್ಸರ್ ಗಳ ಮೈಲಿಗಲ್ಲು ದಾಟಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎಂಬ ವಿಶಿಷ್ಟ ಸಾಧನೆಗೂ ಪಾತ್ರರಾದರು. ಈ ಮೂಲಕ ಅವರು ಡೆಲ್ಲಿ ಕ್ಯಾಪಿಟಲ್ ಪರ ತಮ್ಮ ಮಹತ್ವವನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಈ ಗೆಲುವಿನ ಇನ್ನಿಂಗ್ಸ್ ಡೆಲ್ಲಿಗೆ ಭರವಸೆ ನೀಡಿದ್ದು, ರಾಹುಲ್ ಅವರ ಪ್ರಸ್ತುತ ಫಾರ್ಮ್ ತಂಡದ ಬ್ಯಾಟಿಂಗ್ ಲೈನ್ ಅಪ್ ಗೆ ದೊಡ್ಡ ಶಕ್ತಿ ನೀಡುತ್ತಿದೆ. ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಈ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.
ಐಪಿಎಲ್ 2026 ಪಂದ್ಯದಲ್ಲಿ ಕೆಎಲ್ ರಾಹುಲ್ ಭರ್ಜರಿ ಸಾಧನೆ ಮಾಡಿ ಐಪಿಎಲ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಐದು ಸಿಕ್ಸರ್ ಗಳನ್ನು ಬಾರಿಸಿದ ರಾಹುಲ್, ಆರಂಭಿಕ ಆಟಗಾರನಾಗಿ 200 ಸಿಕ್ಸರ್ ಗಳ ಮೈಲಿಗಲ್ಲನ್ನು ದಾಟಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆ ನಿರ್ಮಿಸಿದ್ದಾರೆ.
ಈ ಮೂಲಕ ಅವರು ಐಪಿಎಲ್ ನಲ್ಲಿ ಅಪರೂಪದ ಸಾಧನೆ ಮಾಡಿದ್ದು, ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ರಾಹುಲ್ ಅವರ ಈ ಸಾಧನೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯಲಾಗಿದೆ ಎಂದು ವಿಶ್ಲೇಷಕರು ತಿಳಿಸುತ್ತಿದ್ದಾರೆ.
ಅಂಕಿ ಅಂಶಗಳ ಪ್ರಕಾರ, ಈವರೆಗೆ ಭಾರತದ ಯಾವುದೇ ಆರಂಭಿಕ ಆಟಗಾರ ಈ ಮಟ್ಟದ ಸಿಕ್ಸರ್ ಸಾಧನೆ ಮಾಡಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಾತ್ರ ಕ್ರಿಸ್ ಗೇಲ್ (326 ಸಿಕ್ಸರ್) ಮತ್ತು ಡೇವಿಡ್ ವಾರ್ನರ್ (210 ಸಿಕ್ಸರ್) ಮಾತ್ರ ರಾಹುಲ್ ಗಿಂತ ಮುಂದಿದ್ದಾರೆ.
ಪ್ರಸ್ತುತ 203 ಸಿಕ್ಸರ್ ಗಳೊಂದಿಗೆ ರಾಹುಲ್ ಐಪಿಎಲ್ ಆರಂಭಿಕರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಅವರ ಸ್ಥಿರ ಫಾರ್ಮ್ ಮುಂದುವರೆದರೆ ಇನ್ನಷ್ಟು ದಾಖಲೆಗಳು ಮೂಡುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಸಾಧನೆ ಭಾರತೀಯ ಕ್ರಿಕೆಟ್ ಗೆ ಹೊಸ ಹೆಮ್ಮೆ ತಂದಿದೆ.
ಭಾರತೀಯ ಕ್ರಿಕೆಟ್ ನಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರಾಗಿರುವ ಕೆಎಲ್ ರಾಹುಲ್ ಐಪಿಎಲ್ 2026ರಲ್ಲಿ ಆರಂಭಿಕ ಆಟಗಾರನಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 112 ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಅವರು 50.1 ಸರಾಸರಿಯಲ್ಲಿ 4851 ರನ್ ಗಳಿಸಿದ್ದು, ಆರುಷತಕಗಳು ಮತ್ತು 39 ಅರ್ಧಶತಕಗಳೊಂದಿಗೆ, ಸ್ಥಿರ ಪ್ರದರ್ಶನ ನೀಡಿದ್ದಾರೆ.
ಇತ್ತೀಚಿನ ಫಾರ್ಮ್ ನಲ್ಲಿ ರಾಹುಲ್ ಡೆಲ್ಲಿ ಕ್ಯಾಪಿಟಲ್ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದು, ತಾಯಿ 9 ಇನ್ನಿಂಗ್ಸ್ ಗಳಲ್ಲಿ 185.83 ಸ್ಟ್ರೈಕ್ ರೇಟ್ ನಲ್ಲಿ 433 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಮೂರು ಅರ್ಧಗಳು ಸೇರಿವೆ.
ಸಿಕ್ಸರ್ ದಾಖಲೆಗಳ ವಿಚಾರದಲ್ಲಿ, ಕೆ ಎಲ್ ರಾಹುಲ್ 2 ನೂರಕ್ಕೂ ಹೆಚ್ಚು ಸಿಕ್ಸರ್ ಗಳ ಮೈಲಿಗಲ್ಲು ದಾಟಿ ಗಮನ ಸೆಳೆದಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 192 ಸಿಕ್ಸರ್ ಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ಇನ್ನು ರೋಹಿತ್ ಶರ್ಮ ಟಾಪ್ ಫೈವ್ ಪಟ್ಟಿಯಲ್ಲಿ ಇಲ್ಲದಿರುವುದು ಅಚ್ಚರಿಯ ಸಂಗತಿಯಾಗಿ ಪರಿಣಮಿಸಿದೆ.
ಮೊದಲ ಎರಡು ಪಂದ್ಯಗಳಲ್ಲಿ ಸಪ್ಪೆ ಪ್ರದರ್ಶನ ನೀಡಿದ್ದರು ನಂತರದ ಪಂದ್ಯಗಳಲ್ಲಿ ರಾಹುಲ್ ತಮ್ಮ ಫಾರ್ಮ್ ಪುನಃ ಕಂಡುಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್ ಬ್ಯಾಟಿಂಗ್ ಲೈನ್ ಅಪ್ ಗೆ ಬರವಸೆ ನೀಡುತ್ತಿದ್ದಾರೆ. ಅವರ ನಿರಂತರ ಸ್ಥಿರ ಪ್ರದರ್ಶನ ಈ ಸೀಸನ್ ನಲ್ಲಿ ತಂಡಕ್ಕೆ ದೊಡ್ಡ ಶಕ್ತಿ ಆಗಲಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾತ್ತಾರೆ.
Also Read: