<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

ಕನ್ನಡ ಕಾವ್ಯ ಸಾಹಿತ್ಯ ಓದಬೇಕು : ಜಯಂತ್ ಕಾಯ್ಕಿಣಿ

ಕನ್ನಡ ಕಾವ್ಯ ಸಾಹಿತ್ಯ ಓದಬೇಕು : ಜಯಂತ್ ಕಾಯ್ಕಿಣಿ
Summary: ಅಂತರಾಷ್ಟ್ರೀಯ ಚಲನಚಿತ್ರೋತ್ಸವ ದಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಗೀತ ರಚನೆಯ ಬಗ್ಗೆ ಮತ್ತು ಕನ್ನಡ ಕಾವ್ಯ ಸಾಹಿತ್ಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
BELAGAVI NEWS:
17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಜಯಂತ್ ಕಾಯ್ಕಿಣಿ ಅವರು ರಚನೆ ಮತ್ತು ಕನ್ನಡ ಕಾವ್ಯ ಸಾಹಿತ್ಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಗೀತ ರಚನೆ ಎನ್ನುವುದು ಕಲಿಯೋದು, ಕಲಿಸುವುದಲ್ಲ. ಕನ್ನಡ ಕಾವ್ಯ ಸಾಹಿತ್ಯ ಓದಬೇಕು.

ಜನಜೀವನ ನೋಡಬೇಕು ಬರವಣಿಗೆ ಎನ್ನುವುದು ನಮ್ಮ ಮನಸ್ಸಿನಿಂದ ಬರುವಂತದ್ದು, ಅದಕ್ಕೆ ಯಾವುದೇ ತರಬೇತಿ ಕಾರ್ಯಗಾರ ಇರುವುದಿಲ್ಲ ಎಂದು ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. 17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಂವಾದದಲ್ಲಿ ಭಾಗಿಯಾಗಿ ಇದರ ಬಗ್ಗೆ ಸ್ಪಷ್ಟವಾಗಿ ವಿವರಣೆಯನ್ನು ನೀಡಿದ್ದಾರೆ.

ಅವರು ಗೀತಾ ರಚನೆಯ ಬಗ್ಗೆ ಕನಸಿನಲ್ಲಿ ಒಮ್ಮೊಮ್ಮೆ ಅಮೂರ್ತವಾಗಿ ಏನೇನು ಅನಿಸುತ್ತದೆಯಲ್ಲ ಅದು ಗೀತ ರಚನೆಯೇ ಹಾಗೆ . ನಿರ್ದೇಶಕನ ನಟನೆಯ ತರಬೇತಿ ತೆಗೆದುಕೊಳ್ಳುವುದಕ್ಕೆ ಆಗುವುದಿಲ ಅವರು ಸಲಹೆಯನ್ನು ನೀಡಿದರು. ಜಿಮ್ನಿಂದ ತರಬೇತಿ ಪಡೆದರೆ ಒಂದೇ ತರದ ದೇಹಗಳ ಹಾಗೆ ಕಾಣುತ್ತದೆ. ಬ್ಯೂಟಿ ಪಾರ್ಲರ್ ನಿಂದ ಬಂದ ವಧುವಿನ ಹಾಗೆ ಎಲ್ಲವೂ ಒಂದೇ ರೀತಿಯಾಗಿ ಕಾಣುತ್ತವೆ ಎಂದು ಅವರು ತಿಳಿಸಿದರು.

ಆರಂಭದಲ್ಲಿ ಸಿನಿಮಾ ಹಾಡುಗಳನ್ನು ಬರೆಯುವಾಗ ಒಂದು ಉಡಾಫೆ ಇತ್ತು ಎಂದವರು ತಿಳಿಸಿದರು. ಸಿನಿಮಾ ಹಾಡುಗಳನ್ನು ಬರೆಯುವುದು ಬಹಳ ಸುಲಭ ಎಂದು ಅವರು ಭಾವಿಸಿದ್ದರು. ಹಾಡುಗಳನ್ನು ಬರೆಯುವುದಕ್ಕೆ ಶುರು ಮಾಡಿದ ಮೇಲೆ ಅದರ ಕಷ್ಟಗಳು ಅವರಿಗೆ ತಿಳಿಯಿತು ಎಂದು ಅವರು ಹಂಚಿಕೊಂಡರು.

ಸಿನಿಮಾದಲ್ಲಿ ಟ್ಯೂನ್ ಹಾಕಿದ ಮೇಲೆ, ಮೀಟರ್ ಗೆ ತಕ್ಕ ಹಾಗೆ ಸಾಹಿತ್ಯವನ್ನು ರಚಿಸಲಾಗುತ್ತದೆ ಅದು ದೊಡ್ಡ ಸವಾಲ್ ಆಗಿತ್ತು. ಮೊದಲಿನಿಂದಲೂ ಸಿನಿಮಾ ಹಾಡುಗಳ ಪ್ರೇಮಿ ಆಗಿದ್ದರು ನಾವೆಲ್ಲ ಹಾಡುಗಳನ್ನು ಗುನುಗಿಸಿ ಬೆಳೆದವರು ಮೇಲು ಎಂದು ನಮ್ಮ ತಂದೆ ಹೇಳುತ್ತಿದ್ದರು ಎಂದವರು ಹೇಳಿದರು.

ಅವರು 52ನೇ ವಯಸ್ಸಿಗೆ ಸಿನಿಮಾದಲ್ಲಿ ಗೀತ ರಚನಾ ರಚನೆಕಾರನಾದೆ ಎಂದು ತಿಳಿಸಿದರು. ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತಿರಬೇಕು ಎಂದು ಅವರು ತಿಳಿಸಿದರು .ಹಳೆಯದೆಲ್ಲ ಚೆನ್ನಾಗಿತ್ತು ಈಗಿನದೆಲ್ಲ ಚೆನ್ನಾಗಿಲ್ಲ ಎನ್ನುವುದು ತಪ್ಪು, ಅಂದರೆ ನಾವು ಸಹ ಮೊದಲ ಹಾಗೆ ಇಲ್ಲ ಎಂದರ್ಥ ಎಂದು ಅವರು ತಿಳಿಸಿದರು. ತಂತ್ರಜ್ಞಾನ ಬೆಳೆಯುತ್ತಿದೆ ನಾವು ಸಹ ಬದಲಾಗುತ್ತಿದ್ದೇವೆ.

ಹಳೆಯದು ಚೆನ್ನಾಗಿತ್ತು ಈಗ ಚೆನ್ನಾಗಿಲ್ಲ ಎನ್ನುವುದು ತಪ್ಪು. ಎನ್ನುವುದು ತಪ್ಪು ಎಂದು ಹೇಳಿದರು ಯೌವ್ವನದ ವಯಸ್ಸಿನಲ್ಲಿ ಅವರು ಗಂಭೀರವಾಗಿ ‘ಕೋಟಿ ತೀರ್ಥ’ ಅಂತ ಬರೆದರು ವಯಸ್ಸಾದ ಮೇಲೆ ಸಿನಿಮಾ ಹಾಡುಗಳನ್ನು ಬರೆಯುವಂತಾಯ್ತು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು. ನಮ್ಮ ಚಿತ್ರರಂಗದಲ್ಲಿ ಕೋಟ್ಯಾಂತರ ಹಾಡುಗಳಿವೆ ಅದರಲ್ಲಿ ಜನರಿಗೆ ಬೇರೆ ಬೇರೆ ವಿಭಿನ್ನ ವಿಭಿನ್ನತರಾದ ಬರವಣಿಗೆಗಳು ಇಷ್ಟವಾಗುತ್ತವೆ. ಅದರಲ್ಲಿ 97 ರಷ್ಟು ಜನ ಪ್ರೇಮಗೀತೆ ಹಾಡುಗಳನ್ನು ಕೇಳುತ್ತಾರೆ.

ಹೊಸ ಎಕ್ಸ್ಪೆರಿಮೆಂಟ್ ಸೂಚಿಸುವುದು ನಿಜಕ್ಕೂ ಸವಾಲಿನ ಕೆಲಸ .ಒಲವು, ನಲಿವು ಚೆಲುವು, ಹಸಿರು ,ಉಸಿರು ಈ ಪದಗಳನ್ನು ಪುನಃ ಬಳಸಬೇಕು ಎಂದು ಅವರು ತಿಳಿಸಿದರು. ಅವರಿಗೆ ಸಿನಿಮಾ ಆಸಕ್ತಿ ಬಾಲ್ಯದಿಂದಲೇ ಹುಟ್ಟಿತ್ತು ಎಂದು ಅವರು ಹೇಳಿದರು. ಅದಕ್ಕೆ ಮೂಲ ಕಾರಣ ತಮ್ಮೂರಿನ ಟೂರಿಂಗ್ ಟಾಕೀಸ್ ಅವರು ಬಾಲ್ಯದಲ್ಲಿದ್ದಾಗ ಕಠಾರಿವೀರ, ಚೂರಿ ಚಿಕ್ಕಣ್ಣ, ಬೀದಿ ಬಸವಣ್ಣ, ಚಂದವಳಿಯ ತೋಟ ಹಲವಾರು ಚಿತ್ರಗಳನ್ನು ನೋಡಿ ಬೆಳೆದಿದ್ದೇನೆ ಎಂದು ಹೇಳಿದರು.

ಜಾವೇದ್ ಅಖ್ತರ್ ಅವರು ಹೇಳಿದಂತೆ ಸಿನಿಮಾನೇ ನಮ್ಮ ಧರ್ಮ ಗಳನ್ನು ಸಿನಿಮಾದಿಂದ ನೋಡಿ ಕಲಿಯುವವರು ನಾವು ಎಂದು ತಿಳಿಸಿದ್ದಾರೆ. ಭಾರತದಲ್ಲಿ ನಾವು ಸಿನಿಮಾದ ಜೊತೆಗೆ ಬೆರೆತು ಹೋಗಿದ್ದೇವೆ ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡರು. ಇತ್ತೀಚಿನ ವರ್ಷದಲ್ಲಿ ʼಪೊನ್ನಿಯನ್ ಸೆಲ್ವನ್ʼ ಸಿನಿಮಾದ ಕನ್ನಡ ಡಬ್ಬಿಂಗ್ ಅವತರಣಿಕೆಗೆ ಸಾಹಿತ್ಯ ರಚಿಸಿದ್ದು ಸವಾಲಿನ ಕೆಲಸವಾಗಿತ್ತು.

ಅವರು ಸಹ ಸನ್ನಿವೇಶ ಕೇಳಿ ಅದಕ್ಕೆ ಪೂರಕವಾಗಿ ಬರೆಯುವುದಕ್ಕೆ ಸಂಪೂರ್ಣ ಸ್ವತಂತ್ರ ಕೊಟ್ಟರು. ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದ ಈ ಸಿನಿಮಾದಲ್ಲಿ ಎರಡು ಭಾಗಗಳಲ್ಲಿ 17 ಹಾಡುಗಳಿವೆ .ನಾನು ಭಾಷಾಂತರ ಮಾಡುವುದಿಲ್ಲ ಸ್ವಂತವಾಗಿ ಬರೆಯುವುದಕ್ಕೆ ಅವಕಾಶಕೊಟ್ಟರೆ ಬರುವುದಾಗಿ ನಿರ್ದೇಶಕ ಮನಿರತ್ನಂ ಅವರಿಗೆ ಹೇಳಿದೆ ಅದಕ್ಕೆ ಅವರು ಸಹ ಒಪ್ಪಿಗೆ ನೀಡಿದರು.

ಹಲೋ ಆದರ್ಶ ಗುಣಗಳನ್ನು ಸಿನಿಮಾ ದಿಂದ ನೋಡಿ ಕಲಿಯುವರು ನಾವು ದಿವಾನ್ ಚಿತ್ರದಲ್ಲಿ ಬರುವ ಮೇರೇ ಪಾಸ್ಮಾ ಎನ್ನುವಂತೆ ನನ್ನ ಹತ್ತಿರ ಏನಿದೆ ಎಂದು ಕೇಳಿದರೆ,ಮೇರ ಪಾಸ್ ಸಿನಿಮಾ ಎನ್ನುತ್ತೇನೆ ಎಂದು ಅವರು ಹೇಳಿದರು. ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ನಾನು ಸಿನಿಮಾ ಗೆ ಹೆಚ್ಚು ಬರೆಯುತ್ತಿರುವ ಬಗ್ಗೆ ಹಿತೈಷಿಗಳು ಬೇಸರ ವ್ಯಕ್ತಪಡಿಸಿದರು ಸಿನಿಮಾ ಹಾಡುಗಳನ್ನು ಬರೆಯುತ್ತಿದ್ದೇನೆ, ಎಂದು ನಾನು ಬೇರೆ ಸಾಹಿತ್ಯವನ್ನು ಕಡಿಗನಿಸಿಲ್ಲ ನನ್ನ ಬೇರೆ ಬರವಣಿಗೆಗಳು ಮುಂದುವರಿಸಿದ್ದೇನೆ ಎಂದು ಅವರು ತಿಳಿಸಿದರು.

ನನ್ನ ಕಥೆ ಕವನ ಸಂಕಲನಗಳನ್ನು ಓದದ ಬಹಳಷ್ಟು ಹೊಸ ತಲೆಮಾರಿನವರು ಹಾಡುಗಳನ್ನು ಕೇಳಿ ಇಷ್ಟಪಟ್ಟು ನನ್ನ ಪುಸ್ತಕವನ್ನು ಕೊಂಡು ಓದಿದ್ದರು ಇದರಿಂದ ನನ್ನ ಪುಸ್ತಕಗಳ ಮರು ಮುದ್ರಣವಾಯಿತ್ತು ಎಂದು ಅವರು ತಮ್ಮ ಕಲೆಯ ಬಗ್ಗೆ ತಮ್ಮ ಅನುಭವದ ಬಗ್ಗೆ 17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಂಚಿಕೊಂಡರು.


ಇನ್ನಷ್ಟು ಓದಿರಿ:
ಅಂಡರ್ 19 ವಿಶ್ವಕಪ್ ಸೆಮಿಫೈನಲ್: ಭಾರತಕ್ಕೆ ಭರ್ಜರಿ ಜಯ : ಫೈನಲ್ ಗೆ ಭಾರತ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online